ಮೇಡ್ ಇನ್ ಇಂಡಿಯಾ ನ್ಯೂ BMW 6 ಸೀರೀಸ್ ಕಾರು ಬಿಡುಗಡೆ!

By Suvarna News  |  First Published Apr 8, 2021, 8:30 PM IST

ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣವಾದ ಹೊಚ್ಚ ಹೊಸ ನ್ಯೂ BMW 6 ಸೀರಿಸ್ ಕಾರು ಬಿಡುಗಡೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ ಒಟ್ಟು 3 ವೇರಿಯೆಂಟ್‌ಗಳಲ್ಲಿ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ ಹಾಗೂ ಫೀಚರ್ಸ್ ಮಾಹಿತಿ ಇಲ್ಲಿದೆ.


ನವದೆಹಲಿ(ಏ.08): ನ್ಯೂ BMW 6 ಸೀರೀಸ್ ಭಾರತದಲ್ಲಿ ಬಿಡುಗಡೆಯಾಗಿದೆ.ಸ್ಥಳೀಯವಾಗಿ BMW ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದನೆಯಾದ ಈ ಕಾರು ಒಂದು ಪೆಟ್ರೋಲ್  ಹಾಗೂ ಎರಡು ಡೀಸೆಲ್ ವಿರಿಯೆಂಟ್‌ನಲ್ಲಿ ಲಭ್ಯವಿದೆ. ಪೆಟ್ರೋಲ್ ಕಾರು BMW 630iM ಸ್ಪೋರ್ಟ್ ಹಾಗೂ ಡೀಸೆಲ್ ವಿರಿಯೆಂಟ್‌ಗಳಾದ BMW 630d M ಸ್ಪೋರ್ಟ್ ಮತ್ತು BMW 620D ಲಕ್ಷುರಿ ಲೈನ್ ಕಾರು ಬಿಡುಗಡೆಯಾಗಿದೆ.

ಮೇಡ್ ಇನ್ ಇಂಡಿಯಾ BMW M340i xಡ್ರೈವ್ ಕಾರು ಬಿಡುಗಡೆ!

Tap to resize

Latest Videos

undefined

ಎಕ್ಸಿಕ್ಯೂಟಿವ್ ಸೆಡಾನ್ ಸೆಗ್ಮೆಂಟ್‍ನಲ್ಲಿ ತನ್ನದೇ ಮಾನದಂಡ ರೂಪಿಸಿದ ನಂತರ ನ್ಯೂ BMW 6 ಸೀರೀಸ್ ಈ ಸರ್ವೋಚ್ಛ ಗುಣವನ್ನು ಈಗ ಹೊಸ ಎತ್ತರಗಳಿಗೆ ಕೊಂಡೊಯ್ಯುತ್ತಿದೆ.ಅನನ್ಯ ವಿನ್ಯಾಸ, ಕಣ್ಸೆಳೆಯುವ ಉಪಸ್ಥಿತಿ ಮತ್ತು ಹೊರಗಡೆಯ BMW ಸ್ಪೋರ್ಟಿನೆಸ್ ಈ ವರ್ಗದ ಅತ್ಯುತ್ತಮ ಲಕ್ಷುರಿ ಮತ್ತು ಟ್ರಾವೆಲ್ ಅನುಭವ ತನ್ನ ಸ್ಥಾನವನ್ನು ಹಲವು ಪಟ್ಟು ಹೆಚ್ಚಿಸಿದೆ.ಎಂಜಿನ್‍ಗಳ ಹರವು ಮತ್ತು ಅತ್ಯಾಧುನಿಕ ಆವಿಷ್ಕಾರಗಳ ಅಭಿವೃದ್ಧಿಯಿಂದ ಚಾಲನೆ ಮತ್ತು ದಕ್ಷತೆಯನ್ನು ಹೆಚ್ಚಿಸಲಾಗಿದೆ.

ಈ ಕಾರು ಆಕರ್ಷಕ ಪ್ರಾರಂಭಿಕ ಬೆಲೆಯಲ್ಲಿ(ಎಕ್ಸ್-ಶೋರೂಂ) ಈ ಕೆಳಕಂಡಂತೆ ಲಭ್ಯವಿವೆ: 
BMW 630iM ಸ್ಪೋರ್ಟ್ ; 67,90,000
BMW 630d ಲಕ್ಷುರಿ ಲೈನ್ ; 68,90,000
BMW 630d M ಸ್ಪೋರ್ಟ್ ;77,90,000

ನ್ಯೂBMW 6 ಸೀರೀಸ್ ಐಷಾರಾಮವನ್ನು ಮರು ರೂಪಿಸುತ್ತದೆ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ವಿಭಾಗಕ್ಕೆ ನಿಜಕ್ಕೂ ವಿಶಿಷ್ಟ ಆಯಾಮ ಸೇರ್ಪಡೆ ಮಾಡುತ್ತದೆ.ಇದಕ್ಕೆ ಕ್ರಾಸ್‍ಓವರ್ ಮಾಡುವ ಪ್ರಾಯೋಗಿಕತೆ ಇದ್ದು ಇದು ಸ್ಪೋಟ್ರ್ಸ್‍ಕಾರಿನ ಡೈನಮಿಕ್ಸ್ ಮತ್ತು ಫಾಸ್ಟ್‍ಬ್ಯಾಕ್ ಮತ್ತು ಸೆಡಾನ್‍ನ ಲಕ್ಷುರಿಯ ಫಾಸ್ಟ್‍ಬ್ಯಾಕ್‍ನ ಸಿಲ್ಹೌಟ್ ಇದೆ. BMW 6 ಸೀರೀಸ್‍ನ ವ್ಯಕ್ತಿತ್ವ ಗುಂಪಿನಿಂದ ಪ್ರತ್ಯೇಕವಾಗಿ ಇರಿಸುತ್ತದೆ ಮತ್ತು ಅದರ ದೀರ್ಘಾವಧಿ ಯಶಸ್ಸಿಗೆ ಅದೇ ಕಾರಣವಾಗಿದೆ.ಇದು ಲಕ್ಷುರಿ ಶ್ರೇಷ್ಠತೆಯನ್ನು ನಿರೀಕ್ಷಿಸುವ ಆಧುನಿಕ ನಾಯಕರಿಗೆ ಆಯ್ಕೆಯ ವಾಹನವಾಗಿದೆ ಮತ್ತು ಅವರು ಹಿಂಬದಿಯಲ್ಲಿರುವಾಗಲೂ ಅನುಕೂಲಕರವಾಗಿರುತ್ತದೆ.ಅವರು ಚಾಲನೆಯಲ್ಲಿರುವಾಗ “ಶೀರ್ ಡ್ರೈವಿಂಗ್ ಪ್ಲೆಷರ್”ಗೆ ಏನೂ ಕಡಿಮೆ ಇರುವುದಿಲ್ಲ. ಇದು ಸ್ಟೈಲ್‍ನ ಅಭಿವ್ಯಕ್ತಿಯಾಗಿದೆ ಮತ್ತು ಶ್ರೇಷ್ಠತೆ ಹೊರತಾಗಿ ಯಾವುದನ್ನೂ ಒಪ್ಪಿಕೊಳ್ಳದೇ ಇರುವವರಿಗೆ ಸೂಕ್ತವಾಗಿದೆ ಎಂದು BMW ಇಂಡಿಯಾ ಅಧ್ಯಕ್ಷ ವಿಕ್ರಮ್ ಪಾವಾಹ್ ಹೇಳಿದ್ದಾರೆ.

ಮೇಡ್ ಇನ್ ಇಂಡಿಯಾ BMW X3 xDrive30i SportX ಕಾರು ಬಿಡುಗಡೆ!

30 ಏಪ್ರಿಲ್ 2021 ರವರೆಗೆ ಆನ್‍ಲೈನ್ ಬುಕಿಂಗ್ಸ್ ಮಾಡುವವರು ಆಕರ್ಷಕ ಕೊಡುಗೆ ಸೀಮಿತ ಯೂನಿಟ್‍ಗಳ ಮೇಲೆ ಪಡೆಯುತ್ತಾರೆ. ಈ ಕಾರುಗಳು   1.5 ಲಕ್ಷ ರೂಪಾಯಿ ಮೌಲ್ಯದ ಉಚಿತ ಒರಿಜಿನಲ್ ಅಕ್ಸೆಸರೀಸ್ ಮತ್ತು ಲೈಫ್‍ಸ್ಟೈಲ್ ಕಲೆಕ್ಷನ್ ಉತ್ಪನ್ನಗಳೊಂದಿಗೆ ಬರುತ್ತವೆ.  

ನ್ಯೂ BMW 6 ಸೀರೀಸ್ ಲೇಸ್ ಲೈಟ್:
ಎಕ್ಸ್‌ಟೀರಿಯರ್  ಡಿಸೈನ್ ಮೃದುವಾಗಿ ಮುಂಬದಿಯ ಹೆಡ್‍ಲೈಟ್ಸ್ ಮೇಲೆ ಹರಿಯುತ್ತದೆ.   ಗ್ರಿಲ್ ಮತ್ತು ಹೆಡ್‍ಲೈಟ್ಸ್ ಎರಡೂ ಬದಿಯಲ್ಲಿ ಎದ್ದು ಕಾಣುವ ಪ್ರಭಾವ ಮೂಡಿಸುತ್ತದೆ. ಸ್ಟಾಂಡರ್ಡ್ ಎಕ್ವಿಪ್‍ಮೆಂಟ್‍ನಲ್ಲಿ  ಅಡಾಪ್ಟಿವ್ ಹೆಡ್‍ಲೈಟ್ಸ್ ಒಳಗೊಂಡಿದೆ. ಹೊಸದಾಗಿ ಸೇರ್ಪಡೆ ಮಾಡಲಾದ BMW ಲೇಸರ್ ಲೈಟ್ ಈ ವೆಹಿಕಲ್ ಸೆಗ್ಮೆಂಟ್‍ನಲ್ಲಿ ವಿಶಿಷ್ಟವಾಗಿದ್ದು ಬೆಳಕನ್ನು ಪರಿಪೂರ್ಣವಾಗಿ 650 ಮೀಟರ್ಸ್ ವಿತರಿಸುತ್ತದೆ.  

click me!