ಥಾರ್ ರಂಗೋಲಿ ಬಿಡಿಸಿ ಇಂಡಿಯಾ ಬುಕ್ ರೆಕಾರ್ಡ್ ಸೇರಿದ ಮಂಡ್ಯ ಕಲಾವಿದ

By Suvarna NewsFirst Published Apr 6, 2021, 3:51 PM IST
Highlights

ಕಳೆದ ವರ್ಷವಷ್ಟೇ ಮಹೀಂದ್ರಾ ಕಂಪನಿ ತನ್ನ ಎರಡನೇ ತಲೆಮಾರಿನ ಥಾರ್ ಎಸ್‌ಯುವಿ ಬಿಡುಗಡೆ ಮಾಡಿತ್ತು. ತನ್ನ ಅದ್ಭುತ ಚಾಲನಾ ಶಕ್ತಿಯಿಂದ ಚಾಲಕರಿಗೆ ಪ್ರೇರಣೆ ನೀಡುವ ಥಾರ್, ಕಲಾವಿದರಿಗೂ ಮೋಡಿ ಮಾಡಿದೆ. ಮಂಡ್ಯದ ಕಲಾವಿದರೊಬ್ಬರು 20 ಅಡಿ ಥಾರ್ ರಂಗೋಲಿ ಬಿಡಿಸಿ ಇಂಡಿಯಾ ಬುಕ್ ರೆಕಾರ್ಡ್ ಸೇರಿದ್ದಾರೆ.

ಮಹೀಂದ್ರಾ ಕಂಪನಿಯ ಥಾರ್ ಆಫ್‌ ರೋಡ್ ಎಸ್‌ಯುವಿ ಸೃಷ್ಟಿಸಿದ ಕ್ರೇಜ್‌ ಅಷ್ಟಿಷ್ಟಲ್ಲ. ಈ ಎಸ್‌ಯುವಿಯನ್ನು ತಿಂಗಳಾನುಗಟ್ಟಲೇ ಕಾಯ್ದು ಖರೀದಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಭಾರತೀಯ ಗ್ರಾಹಕರ ಮೇಲೆ ಥಾರ್ ತನ್ನ ಪ್ರಭಾವವನ್ನು ಬೀರಿದೆ.

ಪೆಟ್ರೋಲ್, ಡೀಸೆಲ್ ವಾಹನ ಯುಗ ಮುಕ್ತಾಯ? ಎಲೆಕ್ಟ್ರಿಕ್ ವಾಹನಗಳ ಭರಾಟೆ ಶುರು

ಹಾಗೆಯೇ ರಂಗೋಲಿ ಕಲಾವಿದರ ಮೇಲೂ ಈ ಥಾರ್ ಪ್ರಭಾವ ಬೀರಿದೆ ಎಂದರೆ ನಂಬುತ್ತೀರಾ? ಹೌದು, ಎಂಬುವವರು ಮಹಿಂದ್ರಾ ಕಂಪನಿಯ ಬಿಡಿಸಿ ಇಂಡಿಯಾ ಬುಕ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.

ಈ ಕೈಟ್ ಪುನೀತ್ ಗೌಡ ಅವರು ಯಾವಾಗ ಥಾರ್ ಆಫ್‌ರೋಡ್ ಎಸ್‌ಯುವಿ ರಂಗೋಲಿ ಬಿಡಿಸಿದ್ದಾರೆಂಬುದು ಗೊತ್ತಿಲ್ಲವಾದರೂ ಅವರು ಇಂಡಿಯಾ ಬುಕ್ ರೆಕಾರ್ಡ್ಸ್ ದಾಖಲೆ ಮತ್ತು ಥಾರ್ ರಂಗೋಲಿ ಬಿಡಿಸಿದ ಚಿತ್ರಗಳನ್ನು ಮಾರ್ಚ್ 3ರಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆ ಟ್ವೀಟ್ ಅನ್ನು ಅವರು ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ರ ಮಹೀಂದ್ರಾ ಅವರಿಗೂ ಟ್ಯಾಗ್ ಮಾಡಿದ್ದಾರೆ.

ಏಪ್ರಿಲ್ 4ರಂದು ಮಾಡಿರುವ ವಿಡಿಯೋ ಟ್ವೀಟ್‌ನಲ್ಲಿ ಕೈಟ್ ಪುನೀತ್ ಗೌಡ ಅವರು, ಎಲೆಯಲ್ಲಿ ಮಹೀಂದ್ರಾ ಅವರ ಚಿತ್ರವನ್ನು ಬಿಡಿಸಿರುವುದನ್ನು ಕೂಡ ನೀವು ಕಾಣಬಹುದು. ಈ ಟ್ವೀಟ್‌ಗಳನ್ನು ನೋಡಿದರೆ ಅವರು ಮಹೀಂದ್ರಾ ಅಭಿಮಾನಿಯಂತೆ ಕಾಣುತ್ತದೆ. ಅದೇನೇ ಇರಲಿ, ಪುನೀತ್ ಗೌಡ, ಮಹೀಂದ್ರಾ ಥಾರ್ ಆಫ್‌ ರೋಡ್ ಎಸ್‌ಯುವಿಯ ಫ್ರಂಟ್ ಭಾಗವನ್ನು 20 ಅಡಿ ಮತ್ತು 18 ಅಡಿ ಅಗಲ ವ್ಯಾಪ್ತಿಯಲ್ಲಿ ರಂಗೋಲಿ ಬಿಡಿಸಿದ್ದಾರೆ. ಈ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ನೀಡಿದೆ. ಅದರ ಸರ್ಟಿಫಿಕೇಟ್ ಅನ್ನು ಟ್ವಿಟರ್‌ನಲ್ಲಿ ಷೇರ್ ಮಾಡಿಕೊಂಡಿರುವ ಕೈಟ್ ಪುನೀತ್ ಗೌಡ ಅವರು ತಮ್ಮ ಈ ಸಾಧನೆಯನ್ನು ಮಹೀಂದ್ರಾ ಗ್ರೂಪ್ ಚೇರ್ಮನ್ ಮಹೀಂದ್ರಾ ಆನಂದ್ ಅವರಿಗೆ ಸಮರ್ಪಿಸಿದ್ದಾರೆ.

ಕೈಟ್ ಪುನೀತ್ ಗೌಡ ಅವರ ಟ್ವಿಟರ್ ಹ್ಯಾಂಡಲ್ ಮಾಹಿತಿಯನ್ನು ಗಮನಿಸಿದಾಗ ಅವರು ಲಿಮ್ಕಾ ಬುಕ್ ರೆಕಾರ್ಡ್ಸ್, ಇಂಡಿಯಾಸ್ ವರ್ಲ್ಡ್ ರೆಕಾರ್ಡ್ಸ್ ಹೋಲ್ಡರ್, ಬ್ರಿಟಿಷ್ ವರ್ಲ್ಡ್ ರೆಕಾರ್ಡ್ ಹೋಲ್ಡರ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹೋಲ್ಡರ್ ಎಂಬುದು ತಿಳಿಯುತ್ತದೆ.

ಬರಲಿದೆ ಜಗತ್ತಿನ ಮೊದಲ ಸೋಲಾರ್ ಆಧರಿತ SUV, ಇದಕ್ಕೆ ಬಿಸಿಲು ಇದ್ದರೆ ಸಾಕಷ್ಟೇ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ಕೈಟ್ ಪುನೀತ್ ಗೌಡ ಅವರು, ಎಲೆಗಳಲ್ಲಿ ಹಲವು ಗಣ್ಯರ ಚಿತ್ರಗಳನ್ನು ಬಿಡಿಸಿರುವ ವಿಡಿಯೋಗಳನ್ನು ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಗಾಂಧಿ ಜಯಂತಿಗೆ ಅಂದರೆ, 2020 ಅಕ್ಟೋಬರ್ 2ರಂದು ಮಾರುಕಟ್ಟೆಗೆ ಬಿಡುಗಡೆಯಾದ ಎರಡನೇ ತಲೆಮಾರಿನ ಮಹಿಂದ್ರಾ ಥಾರ್ ಅತ್ಯಂತ ಜನಪ್ರಿಯ ಎಸ್‌ಯುವಿಯಾಗಿದೆ.

ಮಹೀಂದ್ರಾ ಥಾರ್ ಆಫ್‌ರೋಡ್ ಎಸ್‌ಯುವಿ ಸೇಫ್ಟಿ ವಿಷಯದಲ್ಲಿ ಗಮನ ಸೆಳೆಯುತ್ತದೆ. ಭಾರತದ ಆಫ್‌ರೋಡ್ ವಿಭಾಗದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಈ ಥಾರ್ ಎಸ್‌ಯುವಿ ಸೇಫ್ಟಿ ಕ್ರ್ಯಾಶ್‌ನಲ್ಲಿ ನಾಲ್ಕು ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಬಾಡಿ ಆನ್ ಫ್ರೇಮ್ ಎಸ್‌ಯುವಿ ವಿಭಾಗದಲ್ಲಿ ಮಹೀಂದ್ರಾ ಥಾರ್ ಗರಿಷ್ಠ ಸ್ಟಾರ್ ಪಡೆದ ಭಾರತದ ಆಫ್‌ರೋಡ್ ಎಸ್‌ಯುವಿಯಾಗಿದೆ.

ಗ್ಲೋಬಲ್ ಎನ್‌ಸಿಎಪಿ ನಡೆಸಿದ ಚೈಲ್ಡ್ ಸೇಫ್ಟಿಯಲ್ಲೂ ಮಹೀಂದ್ರಾ ಥಾರ್ ಅತಿ ಹೆಚ್ಚು ಶ್ರೇಯಾಂಕವನ್ನು ಹೊಂದಿದೆ. ದೇಶೀಯವಾಗಿ ವಿನ್ಯಾಸಗೊಂಡಿರುವ ಥಾರ್ ಆಫ್‌ರೋಡ್ ಡ್ರೈಮಿಂಗ್ ಸಾಮರ್ಥ್ಯಕ್ಕೆ ಬೇರೆ ಯಾವುದೇ ಸಾಟಿ ಇಲ್ಲ ಎಂಬುದನ್ನು  ಈ ಪರೀಕ್ಷೆ ಒತ್ತಿ ಹೇಳುತ್ತದೆ. ಈ ಕಾರಿನ ಅದ್ಭುತ  ಚಾಲನಾಶಕ್ತಿಯ ಹೊರತಾಗಿಯೂ ವಿಶಿಷ್ಟವಾದ ವಿನ್ಯಾಸ, ಹೊಸ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ ಥಾರ್. ಸುರಕ್ಷತೆಯ ವಿಷಯದಲ್ಲಿ ಥಾರ್ ಈ ಸೆಗ್ಮೆಂಟ್‌ನಲ್ಲಿ ಇತರ ಯಾವುದೇ ವೆಹಿಕಲ್‌ಗಳಿಂತಲೂ ಮುಂದಿದೆ ಎಂದು ಹೇಳಬಹುದು. ಹಾಗಾಗಿಯೇ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಈ ಥಾರ್ ಯಶಸ್ವಿಯಾಗಿದೆ.

ಕ್ರೆಟಾ, ಸೆಲ್ತೋಸ್‌ಗೆ ಟಕ್ಕರ್ ಕೊಡಲು ಬರ್ತಿದೆ ವೋಕ್ಸ್‌ವಾಗನ್‌ ‘ಟಿಗ್ವಾನ್’ ಎಸ್‌ಯುವಿ

click me!