ಫ್ರಾನ್ಸ್ ಮೂಲದ ಸಿಟ್ರೊಯೆನ್ SUV ಕಾರು ಭಾರತದಲ್ಲಿ ಬಿಡುಗಡೆ!

By Suvarna NewsFirst Published Apr 9, 2021, 3:04 PM IST
Highlights

ಫ್ರಾನ್ಸ್ ಮೂಲದ ಸಿಟ್ರೊಯೆನ್ ಕಂಪನಿ ಇದೀಗ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಒಳಗೊಂಡ ಸಿ5 ಏರ್‌ಕ್ರಾಸ್ SUV ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. 

ಬೆಂಗಳೂರು(ಏ.09) ಬಹುನಿರೀಕ್ಷಿತ ಸಿಟ್ರೊಯೆನ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ.  ಸಿಟ್ರೊಯನ್  ಸಿ5 ಏರ್‌ಕ್ರಾಸ್ SUV ಇದೀಗ ಭಾರತದ ಕಾರು ಮಾರುಕಟ್ಟೆಯಲ್ಲಿ ಲಭ್ಯವಿದೆ.  29,90,000 (ಎಕ್ಸ್-ಷೋರೂಂ ದೆಹಲಿ) ರೂಪಾಯಿ ಬೆಲೆಯಲ್ಲಿ ನೂತನ ಕಾರಿನ ಬೆಲೆ ಆರಂಭಗೊಳ್ಳುತ್ತಿದೆ.   

ಫ್ರೆಂಚ್ ಕಾರು ಈಗ ಬೆಂಗಳೂರಿನಲ್ಲಿ; ಮಿಲ್ಲರ್ಸ್ ರಸ್ತೆಯಲ್ಲಿ ಸಿಟ್ರೊಯನ್ ಶೋ ರೂಂ ಆರಂಭ

ಸಿಟ್ರೊಯನ್  ಸಿ5 ಏರ್‌ಕ್ರಾಸ್ SUV- ಆರಂಭಿಕ ಬೆಲೆಗಳು (ಎಕ್ಸ್‌ಶೋರೂಂ ದೆಹಲಿ)
ಫೀಲ್ (ಮೊನೊ – ಟೋನ್)  = 29,90,000 ರೂಪಾಯಿ
ಫೀಲ್ (ಬಿ-ಟೋನ್)   = 30,40,000 ರೂಪಾಯಿ
ಶೈನ್ (ಮೊನೊ–ಟೋನ್ / ಬಿ-ಟೋನ್)  = 31,90,000 ರೂಪಾಯಿ

ಸಿಟ್ರೊಯನ್  360 ಡಿಗ್ರಿ ಆರಾಮದಾಯಕ ಕಾರ್ಯತಂತ್ರ
ಸಿಟ್ರೊಯನ್  ಮಾಲೀಕತ್ವವು ಸಂಪೂರ್ಣವಾಗಿ ಆರಾಮದಾಯಕವಾಗಿರುವುದಕ್ಕೆ ಕಂಪನಿಯು, ಭಾರತದ ಗ್ರಾಹಕರಿಗಾಗಿ ‘ಸಿಟ್ರೊಯನ್  ಫ್ಯೂಚರ್ ಸ್ಯೂರ್’ ಆರಂಭಿಸಿದೆ.  ಈ ಸಮಗ್ರ ಸ್ವರೂಪದ ಕೊಡುಗೆಯು, ಗ್ರಾಹಕರು ಮಾಸಿಕ ರೂ 49,999ರಂತೆ ಕಂತು ಪಾವತಿಸುವ ಸುಲಭ ವಿಧಾನದಲ್ಲಿ ಸಿಟ್ರೊಯನ್  ಖರೀದಿಸುವ ಅವಕಾಶ ಕಲ್ಪಿಸಿಕೊಡಲಿದೆ.  ಜತೆಗೆ ‘ಸಿ5 ಏರ್‌ಕ್ರಾಸ್ ಎಸ್‍ಯುವಿ’ ಅಶೂರ್ಡ್ ಫ್ಯೂಚರ್ ವ್ಯಾಲ್ಯು ಒಳಗೊಂಡಿರಲಿದೆ. ಈ ಕೊಡುಗೆಯಡಿ ನಿಯಮಿತ ನಿರ್ವಹಣೆ, ವಿಸ್ತರಿಸಿದ ವಾರಂಟಿ, ರಸ್ತೆ ಬದಿ ಸಹಾಯ ಮತ್ತು 5 ವರ್ಷಗಳವರೆಗೆ ಆನ್-ರೋಡ್ ಹಣಕಾಸು ನೆರವು ಒಳಗೊಂಡಿರಲಿದೆ.

ಭಾರತದಲ್ಲಿ ಮೊದಲಬಾರಿಗೆ ಪರಿಚಯಿಸಿರುವ ಸಿಟ್ರೊಯನ್‍ದ ಇನ್ನೊಂದು ತಾಜಾ ನಿದರ್ಶನ ಏನೆಂದರೆ, ಬೆಂಗಳೂರು, ದೆಹಲಿ, ಗುರುಗ್ರಾಂ, ಮುಂಬೈ, ಪುಣೆ, ಅಹ್ಮದಾಬಾದ್, ಕೋಲ್ಕತ್ತ, ಹೈದರಾಬಾದ್, ಕೊಚ್ಚಿ, ಚೆನ್ನೈ ಸೇರಿದಂತೆ ದೇಶದ 10 ಮಹಾನಗರಗಳಲ್ಲಿ ಲಾ ಮಿಸಾನ್ ಸಿಟ್ರೊಯನ್  ಫಿಜಿಟಲ್ ಡೀಲರ್‍ಶಿಪ್‍ಗಳನ್ನು ಹೊಂದಿದೆ. ಈ ಷೋರೂಂಗಳಲ್ಲಿ ಗ್ರಾಹಕರು ಯಾವುದೇ ಸಮಯ, ಎಲ್ಲಿದ್ದರೂ, ಯಾವುದೇ ವಾಹನ ಚಾಲನೆ, ಯಾವುದೇ ಮಾಹಿತಿ ಪಡೆದುಕೊಳ್ಳಬಹುದು. 

ಸಂಪೂರ್ಣ ಡಿಜಿಟಲ್‍ಮಯವಾಗಿರುವ ಇಲ್ಲಿನ ಪರಿಸರವು ಗ್ರಾಹಕರಿಗೆ ಅಪರಿಮಿತ ಡಿಜಿಟಲ್ ಅನುಭವದ ಜತೆ ಸಂಪರ್ಕ ಕಲ್ಪಿಸಿಕೊಡಲಿದೆ.  ಸಿ5ಏರ್‌ಕ್ರಾಸ್ ಎಸ್‍ಯುವಿಯನ್ನು ಖರೀದಿಸಲು ಪೂರ್ಣ ಪ್ರಮಾಣದ (ಶೇ 100ರಷ್ಟು) ಆನ್‍ಲೈನ್  ಸೌಲಭ್ಯವನ್ನು ಸಿಟ್ರೊಯನ್  ಆರಂಭಿಸಿದೆ. ಭಾರತದಲ್ಲಿನ 50ಕ್ಕೂ ಹೆಚ್ಚು ನಗರಗಳಲ್ಲಿನ ಗ್ರಾಹಕರಿಗೆ (ಆನ್‍ಲೈನ್ ನೆಟ್‍ವರ್ಕ್ ನಗರಗಳ ಪಟ್ಟಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ) ಡೀಲರ್‍ಗಳ ನೆಟ್‍ವರ್ಕ್ ಹೊರಗೆ ಈ ಆನ್‍ಲೈನ್‍ನಲ್ಲಿ ಖರೀದಿ ಸೌಲಭ್ಯವನ್ನು ಒದಗಿಸಲಾಗಿದೆ. ಗ್ರಾಹಕರು ಕಾರ್ಖಾನೆಯಿಂದಲೇ ನೇರವಾಗಿ ವಾಹನ ಖರೀದಿಸಬಹುದು. ಈ ಉದ್ದೇಶಕ್ಕೆ ಪ್ರತ್ಯೇಕ ಇ-ಕಾಮರ್ಸ್ ಅಂತರ್ಜಾಲ ತಾಣವನ್ನು ರೂಪಿಸಲಾಗಿದೆ.  ಹಣಕಾಸು, ವಿಮೆ, ವಾರ್ಷಿಕ ನಿರ್ವಹಣೆಯ ಕೊಡುಗೆ, ವಿಸ್ತರಿಸಿರುವ ವಾರಂಟಿ ಜತೆಗೆ, ಹಳೆಯ ಕಾರು ವಿನಿಮಯ   (ಟ್ರೇಡ್ – ಇನ್) ಸೌಲಭ್ಯವೂ ದೊರೆಯಲಿದೆ. ಗ್ರಾಹಕರಿಗೆ ಪರೀಕ್ಷಾರ್ಥ ಚಾಲನಾ ಸಿಬ್ಬಂದಿ, ಇ-ಮಾರಾಟ ಸಲಹೆಗಾರ, ವರ್ಚುವಲ್ ರೂಪದಲ್ಲಿ ವಾಹನದ ಪ್ರದರ್ಶನ ಮತ್ತು ಮನೆ ಬಾಗಿಲಿಗೆ ವಿತರಣೆ ಸೌಲಭ್ಯವು ಇಲ್ಲಿ ಇರಲಿದೆ.

  • ಸಮಗ್ರ ವಾರಂಟಿ ಮತ್ತು ಶೇ 100ರಷ್ಟು ಬಿಡಿಭಾಗಗಳ ಲಭ್ಯತೆಯು ಗ್ರಾಹಕರಿಗೆ ಒತ್ತಡ ಮುಕ್ತ ಮಾಲೀಕತ್ವ ಅನುಭವದ ಭರವಸೆ ನೀಡಲಿದೆ.
  • ಸಂಚಾರಿ ದುರಸ್ತಿ ವಾಹನವು, ಸಾಮಾನ್ಯವಾಗಿ ಕಂಡು ಬರುವ ಬಹುತೇಕ ದೋಷಗಳನ್ನು ಗ್ರಾಹಕರ ಮನೆ ಬಾಗಿಲಲ್ಲಿಯೇ ದುರಸ್ತಿ ಮಾಡಲಿದೆ.   
  • ಈ ಸೇವೆಗಳಿಗೆ ದೇಶದಾದ್ಯಂತ ಲಭ್ಯ ಇರುವ ರಸ್ತೆ ಬದಿ ನೆರವಿನ ಸೇವೆಯು ಬೆಂಬಲವಾಗಿ ಇರಲಿದೆ. ದೇಶದಾದ್ಯಂತ ಪ್ರಮುಖ ಸ್ಥಳಗಳಲ್ಲಿ 3 ಗಂಟೆ ಒಳಗೆ ಗ್ರಾಹಕರನ್ನು ತಲುಪಲಿದೆ.

 ಇವೆಲ್ಲವು ಸಿಟ್ರೊಯನ್  ಸರ್ವಿಸ್ ಭರವಸೆಯನ್ನು ಪ್ರತಿನಿಧಿಸಲಿದ್ದು, ಗ್ರಾಹಕರ ಪಾಲಿಗೆ ‘ನಿಮ್ಮ ಬೆರಳತುದಿಯಲ್ಲಿ ಎಲ್ಲವೂ ಸುಲಭ’ ಭಾವನೆ ಮೂಡಿಸುತ್ತದೆ.

ಭಾರತದಲ್ಲಿ  ಹೊಸ ಸಿಟ್ರೊಯನ್  ಸಿ5 ಏರ್‍ಕ್ರಾಸ್ ಎಸ್‍ಯುವಿ ಪರಿಚಯಿಸುತ್ತಿರುವುದು ಸಿಟ್ರಾಯನ್‍ನಲ್ಲಿ ಇರುವ ನಮ್ಮೆಲ್ಲರ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.  ಸಿಟ್ರೊಯನ್  ಸಿ5 ಏರ್‍ಕ್ರಾಸ್ ಎಸ್‍ಯುವಿ, ಖಂಡಿತವಾಗಿಯೂ ಮಾರುಕಟ್ಟೆಯ ನಿರೀಕ್ಷೆಗಳನ್ನು ಮೀರಿ ಬೆಳೆಯಲಿದೆ. ವಿನ್ಯಾಸ, ಆರಾಮ, ಸ್ಥಳಾವಕಾಶ, ಪರಿಕರ ಮತ್ತು ಪವರ್‍ಟ್ರೇನ್‍ಗೆ ಸಂಬಂಧಿಸಿದಂತೆ ಎಲ್ಲ ಅಗತ್ಯಗಳನ್ನು ಇದು ಈಡೇರಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಇದರ ಯಶಸ್ಸು ಮತ್ತು ಆಧುನಿಕ ತಂತ್ರಜ್ಞಾನವು  ಜಾಗತಿಕ ದರ್ಜೆಯ ಉತ್ಪನ್ನಕ್ಕಿಂತ ಯಾವುದೇ ದೃಷ್ಟಿಕೋನದಿಂದಲೂ ಕಡಿಮೆ ಇರದ  ವಾಹನ ಖರೀದಿಸಲು ಸಂಪೂರ್ಣ ಅರ್ಹರಾಗಿರುವ ಭಾರತದ ಗ್ರಾಹಕರನ್ನು ಖಂಡಿತವಾಗಿಯೂ  ಸಂತೃಪ್ತಪಡಿಸಲಿದೆ. ಸಿಟ್ರೊಯನ್  ಸಿ5 ಏರ್‍ಕ್ರಾಸ್ ಎಸ್‍ಯುವಿ-  ಭಾರತದಲ್ಲಿ ನಮ್ಮ ಬ್ರ್ಯಾಂಡ್‍ಗೆ ನೆಲೆ ಕಲ್ಪಿಸಿಕೊಡಲಿದೆ. ಜತೆಗೆ ಸಿಟ್ರೊಯನ್  ಹೊಂದಿರುವ ಸಾಮಥ್ರ್ಯವನ್ನೆಲ್ಲವನ್ನು ಪ್ರದರ್ಶಿಸಲಿದೆ. ಮಾರುಕಟ್ಟೆಗೆ ಈ ಎಸ್‍ಯುವಿ ಪರಿಚಯಿಸುವುದರೊಂದಿಗೆ ಭಾರತದಲ್ಲಿ ಸಿಟ್ರೊಯನ್  ಹೊಸ ಅಧ್ಯಾಯ ಆರಂಭಿಸಲಿದೆ. ನಮ್ಮ ಹೊಸ ಬಿ-ವಲಯದ ಕಾರ್‍ಗಳಲ್ಲಿನ ಮೊದಲ ವಾಹನದಿಂದ  ಮುಂಬರುವ ತಿಂಗಳುಗಳಲ್ಲಿ ನೀವು ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುವಿರಿ’ ಎಂದು ಸಿಟ್ರೊಯನ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನ್ಸೆಂಟ್ ಕೋಬೀ ಹೇಳಿದ್ದಾರೆ.

ಹೊಸ ಸಿಟ್ರೊಯನ್  ಸಿ5 ಏರ್‍ಕ್ರಾಸ್ ಎಸ್‍ಯುವಿ
ಸಿಟ್ರಾಯನ್‍ನ ಜನಪ್ರಿಯ ಎಸ್‍ಯುವಿಯನ್ನು ಚೆನ್ನೈ ಘಟಕದಲ್ಲಿ ಜೋಡಿಸಲಾಗುತ್ತಿದೆ.  ಈ ‘ಕಂಫರ್ಟ್ ಕ್ಲಾಸ್ ಎಸ್‍ಯುವಿ’ ವಿಶಿಷ್ಟ ಬಗೆಯ ಚೈತನ್ಯದಾಯಕ ವಿನ್ಯಾಸ ಹೊಂದಿದ್ದು, ನಾಲ್ಕು ಬಣ್ಣಗಳಲ್ಲಿ ಮತ್ತು ವೈಯಕ್ತಿಕ ನೋಟಕ್ಕಾಗಿ ಕಪ್ಪು ಚಾವಣಿಯ ಆಯ್ಕೆಯಲ್ಲಿ ದೊರೆಯಲಿದೆ. ವಿಶ್ವದಾದ್ಯಂತ ಬ್ರ್ಯಾಂಡ್‍ನ ನಾಯಕತ್ವವನ್ನು  ಅದರ ‘ಅನನ್ಯ ಆರಾಮ’ ಸೌಲಭ್ಯಗಳು ವಿವರಿಸುತ್ತವೆ. ಸಿಟ್ರೊಯನ್  ಅಡ್ವಾನ್ಸಡ್ ಕಂಫರ್ಟ್ ಪ್ರೊಗ್ರಾಂನ ಐದು ಪ್ರಮುಖ ಗುರಿಗಳೊಂದಿಗೆ ಇದು ಮಿಳಿತಗೊಂಡಿವೆ.

1.    ಫ್ಲಾಯಿಂಗ್ ಕಾರ್ಪೆಟ್ ಎಫೆಕ್ಟ್: ರಸ್ತೆಯಲ್ಲಿನ ತಗ್ಗು ದಿಣ್ಣೆಗಳಿಂದ ಆಗುವ ಆಯಾಸ ದೂರ ಮಾಡಲು ಸಿಟ್ರೊಯನ್  ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಸಸ್ಪೆನ್ಶನ್ ಸಿಸ್ಟಮ್ ಒಳಗೊಂಡಿರುವ ಪ್ರೊಗ್ರೆಸ್ಸಿವ್ ಹೈಡ್ರಾಲಿಕ್ ಕುಷನ್ಸ್ ನೆರವಾಗಲಿದೆ.

2.   ಒತ್ತಡ ಮುಕ್ತ ಪ್ರಯಾಣ ಅನುಭವ.  ಕೂಕೂನ್ಡ್ ಇನ್ ಕಂಫರ್ಟ್- ಅಕೌಸ್ಟಿಕ್ ಫ್ರಂಟ್ ವಿಂಡ್‍ಸ್ಕ್ರೀನ್ ಮತ್ತು ಫ್ರಂಟ್ ವಿಂಡೊ ಗ್ಲಾಸ್‍ಗಳು, ಸುಧಾರಿತ ಆರಾಮದಾಯಕ ಸೀಟುಗಳು ಮತ್ತು 3 ಸ್ಲಿಡಿಂಗ್, ರಿಕ್ಲೈನಿಂಗ್ ಮತ್ತು ಮೊಡುಲರ್ ಹಿಂಬದಿ ಸೀಟುಗಳನ್ನು ಮಡಚಬಹುದಾಗಿದೆ.  ಇದರಿಂದ ಹೆಚ್ಚು ಸ್ಥಳಾವಕಾಶ ದೊರೆಯಲಿದೆ.

3.     ಪ್ಯಾನಾರೋಮಿಕ್ ಲೈಫ್- ಪ್ರಖರ ಮತ್ತು ಸಾಕಷ್ಟು ಗಾಳಿಯಾಡುವ ಕ್ಯಾಬಿನ್,  ಹೊರಗಿನ ದೃಶ್ಯಗಳನ್ನು ಅದರಲ್ಲೂ ವಿಶೇಷವಾಗಿ ವಿಹಂಗಮ ನೋಟಕ್ಕೆ ನೆರವಾಗುವ ಪ್ಯಾನಾರೊಮಿಕ್ ಸನ್‍ರೂಫ್ (ಶೈನ್ ಮಾದರಿಯಲ್ಲಿ)

4.   ವೈವಿಧ್ಯಮಯ ತಂತ್ರಜ್ಞಾನ- ವಿವಿಧ ಬಗೆಯ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ನೆರವಾಗುವ ತಂತ್ರಜ್ಞಾನಗಳಾದ ಗ್ರಿಪ್ ಕಂಟ್ರೋಲ್ ಸಿಸ್ಟಮ್, ಕಾರ್ ಅನ್ನು ಪಾರ್ಕಿಂಗ್ ಮಾಡುವಾಗ ಪಾರ್ಕ್ ಅಸಿಸ್ಟ್ ಸೌಲಭ್ಯವು ಕೇವಲ ಬ್ರೇಕ್ ಮತ್ತು ಆ್ಯಕ್ಸಿಲೇಟರ್  ನಿಯಂತ್ರಣದ ಮೂಲಕ ಪಾರ್ಕ್ ಮಾಡಲು ನೆರವಾಗಲಿದೆ. ಈ ಸಂದರ್ಭದಲ್ಲಿ ಕಾರ್ ತನ್ನಷ್ಟಕ್ಕೆ ತಿರುಗಲಿದೆ. ಫೂಟ್ ಆಪರೇಟೆಡ್ ಹ್ಯಾಂಡ್ಸ್ ಫ್ರೀ ಎಲೆಕ್ಟ್ರಿಕ್ ಟೇಲ್‍ಗೇಟ್ (ಶೈನ್ ಮಾದರಿಯಲ್ಲಿ), ಎಂಜಿನ್ ಸ್ಥಗಿತ ಮತ್ತು ಚಾಲನೆ ನೀಡುವುದು, 31.24 ಸೆಂಟಿಮೀಟರ್‍ನ ಡಿಜಿಟಲ್ ಡ್ರೈವರ್ ಡಿಸ್‍ಪ್ಲೇ, ಆ್ಯಪಲ್ ಕಾರ್ ಪ್ಲೇ ಜತೆಗಿನ 20.32 ಸೆಂಟಿಮೀಟರ್‍ನ ಇನ್ಫೊಟೇನ್‍ಮೆಂಟ್ ಟಚ್‍ಸ್ಕ್ರೀನ್, ಆಂಡ್ರಾಯ್ಡ್ ಆಟೊ ಮುಂತಾದವು ತಂತ್ರಜ್ಞಾನ ಸೌಲಭ್ಯಗಳಲ್ಲಿ ಸೇರ್ಪಡೆಯಾಗಿವೆ.

5.      ಶಕ್ತಿಯುತ 2.0 ಲೀಟರ್ ಡೀಸೆಲ್ ಎಂಜಿನ್ ಮತ್ತು 8 ಸ್ಪೀಡ್‍ಗಳ ‘ಎಫಿಷಿಯಂಟ್ ಆಟೊಮೇಟಿಕ್ ಟ್ರಾನ್ಸ್‍ಮಿಷನ್’- ಸಿ5 ಏರ್‍ಕ್ರಾಸ್ ಎಸ್‍ಯುವಿ, ಪ್ರತಿಲೀಟರ್‍ಗೆ 18.6 ಕಿಲೊ ಮೀಟರ್ ದೂರ ಕ್ರಮಿಸುವ ಇಂಧನ ದಕ್ಷತೆ (ಎಆರ್‍ಎಐ ಪ್ರಮಾಣಿತ)

6.     10 ಕೀ ಡ್ರೈವಿಂಗ್ ಮತ್ತು ಸೇಫ್ಟಿ ಏಡ್ಸ್ -ನೆರವಿನಿಂದ ಗ್ರಾಹಕರು ವಾಹನ ಚಾಲನೆ ಜತೆ ಮಾನಸಿಕವಾಗಿಯೂ ಆರಾಮವಾಗಿರುವಂತಹ ಅನುಭವ ಪಡೆಯಬಹುದು.

click me!