ಭಾರತದಲ್ಲಿ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪ್ರತಿ ಆಟೋಮೊಬೈಲ್ ಕಂಪನಿಗಳು ಆಕರ್ಷಕ ಬೆಲೆಯಲ್ಲಿ SUV ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಸ್ಕೋಡಾ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಎ.06) ಭಾರತ SUV ಕಾರು ಮಾರುಕಟ್ಟೆಗೆ ಮತ್ತೊಂದು ಸೇರ್ಪಡೆಯಾಗುತ್ತಿದೆ. ಇಷ್ಟೇ ಅಲ್ಲ ಪೈಪೋಟಿ ಕೂಡ ಹೆಚ್ಚಾಗುತ್ತಿದೆ. ಭಾರತ 2.0 ಯೋಜನೆ ಮೂಲಕ ತಯಾರಾದ ಸ್ಕೋಡಾದ ಮೊದಲ SUV ಸ್ಕೋಡಾ ಕುಶಾಕ್ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿದೆ.
ಪೈಪೋಟಿ ಹೆಚ್ಚಿಸಿದ ಸ್ಕೋಡಾ; ಭಾರತದಲ್ಲಿ ಕುಶಾಕ್ SUV ಕಾರು ಅನಾವರಣ!.
undefined
ಹ್ಯುಂಡೈ ಕ್ರೇಟಾ ಹಾಗೂ ಕಿಯಾ ಸೆಲ್ಟೋಸ್ ಭಾರಿ ಬೇಡಿಕೆ ಪಡೆಯುತ್ತಿರುವ ಬೆನ್ನಲ್ಲೇ ಇದೀಗ ಈ ಕಾರುಗಳಿಗೆ ಸೆಡ್ಡು ಹೊಡೆಯಲು ಸ್ಕೋಡಾ ಕುಶಾಕ್ ಕಾರು ಭಾರತದ ರಸ್ತೆಗಿಳಿಯುತ್ತಿದೆ. ಜೂನ್‌ನಿಂದ ಈ ಕಾರ್‌ನ ಬುಕ್ಕಿಂಗ್ ಶುರುವಾದರೆ, ಜುಲೈನಲ್ಲಿ ಕುಶಾಕ್ ಗ್ರಾಹಕರ ಕೈ ಸೇರಲಿದೆ.
ಸ್ಕೋಡಾ ಕುಶಾಕ್‌ನದು 4,221 mm ಉದ್ದ, 1,760 mm ಅಗಲ ಮತ್ತು 1,61 mm ಎತ್ತರ. ವ್ಹೀಲ್‌ಬೇಸ್ 2,651 mmm ಇದೆ. 188 mmನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. 2 ಇನ್ಫೋಟೆಕ್ ಸಿಸ್ಟಮ್, ಉತ್ತಮ ಸೌಂಡ್ ಸಿಸ್ಟಮ್, ಸಬ್‌ವೂರ್‌ಗಳಿವೆ. ಸುರಕ್ಷತೆಗೆ 6 ಏರ್‌ಬ್ಯಾಗ್‌ಗಳಿರುತ್ತವೆ. 115 PS ಹಾಗೂ 150 PS ಎರಡು ಪೆಟ್ರೋಲ್ ಎಂಜಿನ್‌ಗಳಿವೆ. 6 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗಳ ಮೂಲಕ ವೇಗ ಮೈಂಟೇನ್ ಮಾಡಬಹುದು.
ಸ್ಕೋಡಾ ಕುಶಾಕ್ ಕಾರಿನ ಬೆಲೆ 10 ಲಕ್ಷ ರೂಪಾಯಿಂದ 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.