ಐಷಾರಾಮಿ, ಆರಾಮದಾಯ, ಶಕ್ತಿಶಾಲಿ; ಜಾಗ್ವಾರ್ ಐಪೇಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ!

By Suvarna News  |  First Published Apr 6, 2021, 2:18 PM IST

ಸದ್ಯ ಟಾಟಾ ಮೋಟಾರ್ಸ್, ಹ್ಯುಂಡೈ ಹಾಗೂ ಎಂಜಿ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಕಿ್ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಈ ಎಲ್ಲಾ ಕಾರುಗಳಿಗೆ ಸೆಡ್ಡು ಹೊಡೆಯಲು ಟಾಟಾ ಮಾಲೀಕತ್ವದ ಜಾಗ್ವಾರ್ ಅತ್ಯಾಧುನಿಕ ತಂತ್ರಜ್ಞಾನದ ಐಪೇಸ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ.


ನವದೆಹಲಿ(ಎ.06) ಲ್ಯಾಂಡ್ ರೋವರ್‌ನ ಮೊದಲ ಎಲೆಕ್ಟ್ರಿಕ್ ಮಾದರಿಯ SUV ಜಾಗ್ವಾರ್  ಐಪೇಸ್ ಭಾರತದಲ್ಲಿ  ಬಿಡುಗಡೆಯಾಗಿದೆ. ಐಷಾರಾಮದ ಜೊತೆಗೆ ಡ್ರೈವಿಂಗ್‌ನಲ್ಲೂ ಸಖತ್ ಮಸ್ತ್ ಅನುಭವ ನೀಡಲಿರುವ ಈ ಕಾರು ಕೇವಲ 4.8 ಸೆಕೆಂಡ್‌ಗಳಲ್ಲಿ ಶೂನ್ಯದಿಂದ ನೂರಕ್ಕೆ ವೇಗ ಹೆಚ್ಚಿಸಿಕೊಳ್ಳಬಲ್ಲದು. 

ಜಾಗ್ವಾರ್‌ನ ಮೊತ್ತ ಮೊದಲ ಎಲೆಕ್ಟ್ರಿಕ್ SUV ಕಾರಿನ ಬುಕಿಂಗ್ ಆರಂಭ!..

Latest Videos

undefined

ಹೊಸ ವಿ ಪ್ರೋ ಇನ್ಫೋಟೈನ್‌ಮೆಂಟ್ ವ್ಯವಸ್ಥೆ ಈ ಕಾರ್‌ನಲ್ಲಿದೆ. ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಮೂಲಕ ಈ ಕಾರ್‌ಅನ್ನು ವಿನ್ಯಾಸ ಮಾಡಲಾಗಿದೆ. 5 ವರ್ಷಗಳ ಸರ್ವೀಸ್ ಪ್ಯಾಕೇಜ್, ರೋಡ್ ಅಸಿಸ್ಟೆಂಟ್ ಜೊತೆಗೆ 7.4 ವಾಟ್ ವಾಲ್ ಮೌಂಟೆಡ್ ಚಾರ್ಜರ್ ಇರುತ್ತದೆ. 8 ವರ್ಷಗಳ ಬ್ಯಾಟರಿ ವಾರೆಂಟಿ ಇದೆ.

ನೂತನ ಐಪೇಸ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 470 ಕಿ.ಮೀ ಮೈಲೇಜ್ ನೀಡಲಿದೆ. ಟ್ವಿನ್ ಮೋಟಾರ್ ತಂತ್ರಜ್ಞಾನ ಒಳಗೊಂಡಿರುವ ಈ ಕಾರು 90kWh ಬ್ಯಾಟರಿ ಹೊಂದಿದೆ. ನೂತನ ಕಾರಿನ ಬೆಲೆ 1,05,90,000 ರೂಪಾಯಿ(ಎಕ್ಸ್ ಶೋ ರೂಂ)

click me!