ಬೆಂಗಳೂರು(ಜ.27): ಕಾರು ಖರೀದಿ ಎಲ್ಲರಿಗೂ ಹಿತವೆನಿಸುವ ವಿಚಾರ. ಮೊದಲ ಬಾರಿಗೆ ಕಾರು ಖರೀದಿಸಿದ್ದರೆ(Car) ಅದರ ಮಜಾನೇ ಬೇರೆ. ಕಾರು ಖರೀದಿಸಿದ ಬಳಿಕ ಅದರ ನಿರ್ವಹಣೆ(maintenance) ಕೂಡ ಅತೀ ಅಗತ್ಯ ಆದರೆ ಮೊದಲ ಬಾರಿಗೆ ಕಾರು ಖರೀದಿಸುವ ಹಲವರಿಗೆ ನಿರ್ವಹಣೆ ಕುರಿತ ಮಾಹಿತಿಗಳು ತಿಳಿದಿರಬೇಕು ಎಂದಿಲ್ಲ. ಕಾರಿನಲ್ಲಿ ಎದುರಾಗ ಸಾಮಾನ್ಯ ಸಮಸ್ಯೆಗಳಿವೆ. ಇದಕ್ಕೆ ಅಷ್ಟೇ ಸರಳ(Tips) ಪರಿಹಾರಗಳಿವೆ.
ವಾಹನ ತಪಾಸಣೆ ಅತೀ ಅಗತ್ಯ
ಕಾರು ಪ್ರಯಾಣಕ್ಕೂ ಮುನ್ನ ಕಾರಿನ ಪರಿಶೀಲನೆ ಅತೀ ಅಗತ್ಯ. ಕಾರು ಸ್ಟಾರ್ಟ್ ಮಾಡಿ ಕೆಲ ಅಗತ್ಯ ಪರಿಶೀಲನೆ ಮಾಡಲೇಬೇಕು. ಇದಕ್ಕೆ ತಾಂತ್ರಿಕವಾಗಿ ಅಥವಾ ಎಂಜಿನ್ ಮಾಹಿತಿ ತಿಳಿದಿರಬೇಕು ಎಂದಿಲ್ಲ. ಇಗ್ನಿಶನ್ ಆನ್ ಮಾಡಿದ ಬಳಿಕ ಡಿಸ್‌ಪ್ಲೇನಲ್ಲಿ ಎಂಜಿನ್, ಆಯಿಲ್ ಅಥವಾ ಇತರ ಯಾವುದೇ ಸಿಗ್ನಲ್ ಗೋಚರಿಸುತ್ತದೆಯಾ ಎಂದು ಪರಿಶೀಲಿಸಬೇಕು. ಇದರ ಜೊತೆಗೆ ಕಾರಿನ ಟೈಯರ್ ಪ್ರೇಶರ್, ಹೆಡ್‌ಲೈಟ್, ವಿಂಡೋ, ಲಾಕ್, ಎಸಿ, ಇಂಧನ ಸೇರಿದಂತೆ ಕಾರಿನ ಒಳ ಹಾಗೂ ಹೊರಭಾಗ ಪರಿಶೀಲಿಸಿಕೊಳ್ಳುವುದು(Vehicle Inspect) ಉತ್ತಮ.
ನಿಮ್ಮ ಕಾರ್ ನಿರ್ವಹಣೆ ದುಬಾರಿಯಾಗಬಾರದು ಎಂದಿದ್ದರೆ ಈ ಟಿಪ್ಸ್ ಪಾಲಿಸಿ
ಏರ್‌ಫೀಲ್ಟರ್ ಪರಿಶೀಲನೆ:
ಕಾರಿನ ಏರ್‌ಫಿಲ್ಟರ್(air filter) ಸಮಸ್ಯೆ ಕಾರಿನ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸಹಜವಾಗಿ ಏರ್‌ಫಿಲ್ಟರ್‌ನಲ್ಲಿ ಧೂಳು ಸೇರಿದಂತೆ ಇತರ ಕಣಗಳಿಂದ ತುಂಬುವ ಸಾಧ್ಯತೆಗಳು ಹೆಚ್ಚು. ಹೀಗೆ ಏರ್‌ಫಿಲ್ಟರ್ ಧೂಳಿನಿಂದ ತುಂಬಿದ್ದರೆ, ಎಂಜಿನ್‌ಗೆ ಸರಿಯಾದ ಪ್ರಮಾಣದಲ್ಲಿ ಗಾಳಿ ಸಿಗುವುದಿಲ್ಲ. ಇದರಿಂದ ಕಾರಿನ ಪರ್ಫಾಮೆನ್ಸ್ ಕುಗ್ಗಲಿದೆ. ಕಾರಿನ ಮೈಲೇಜ್ ಕಡಿಮೆಯಾಗಲಿದೆ.
ಕಾರಿನ ಎಂಜಿನ್ ಹೊರಭಾಗ ಶುಚಿಯಾಗಿಡಿ
ಕಾರು ಪ್ರಯಾಣದ ಬಳಿಕ ಕಾರಿನ ಅಡಿ ಭಾಗ, ಎಂಜಿನ್ ಭಾಗದಲ್ಲಿ ಕೆಸರು, ಮಣ್ಣು ಸೇರಿದಂತೆ ಇತರ ವಸ್ತುಗಳು ಅಂಟಿಕೊಂಡಿದ್ದರೆ ಎಂಜಿನ್ ಹಾಗೂ ಅಡಿ ಭಾಗ ಬಹುಬೇಗನೆ ತುಕ್ಕು ಹಿಡಿಯಲಿದೆ. ಇದೇ ವೇಳೆ ಬ್ರೇಕ್ ಫ್ಲೂಯಿಡ್ ಲೆವೆಲ್ ಚೆಕ್ ಮಾಡುವುದು ಅಗತ್ಯ.
ಲಾಕ್‌ಡೌನ್ ಕಾರಣ ಕಾರು ತೆಗೆಯುವಂತಿಲ್ಲ; ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನ ನಿರ್ವಹಣೆಗೆ 7 ಟಿಪ್ಸ್!
ಬ್ಯಾಟರಿ ಚೆಕ್:
ಕಾರಿನಲ್ಲಿ ಬ್ಯಾಟರಿ ಅತೀ ಅವಶ್ಯಕ. ಹೀಗಾಗಿ ಬ್ಯಾಟರಿ ಪರಿಶೀಲನೆ ಕೂಡ ಅಷ್ಟೇ ಅಗತ್ಯ. ಬ್ಯಾಟರಿ ಸಮಸ್ಯೆ ಇದ್ದರೆ ಕಾರು ಸ್ಟಾರ್ಟ್ ಆಗುವುದಿಲ್ಲ. ಇನ್ನು ಹಳೆ ಕಾರಿನಂತೆ ಹೊಸ ಕಾರಿಗೆ ಜರ್ಕ್ ಸ್ಟಾರ್ಟ್ ಉತ್ತಮ ವಿಧಾನವಲ್ಲ.
ಲೈಟ್ ಇಂಡಿಕೇಟರ್ ಹಾಗೂ ವಾರ್ನಿಂಗ್ ಗಮನಿಸಿ
ಹೊಸ ಕಾರುಗಳು ಸೆನ್ಸಾರ್ ಸಿಸ್ಟಮ್ ಹೊಂದಿದೆ. ಇದರಿಂದ ಕೆಲ ಸಮಸ್ಯೆಗಳ ಕುರಿತು ಸೆನ್ಸಾರ್ ಸೂಚನೆ ನೀಡಲಿದೆ. ಡಿಜಿಟಲ್ ಇಂಡಿಕೇಟರ್ ಮೂಲಕ ಯಾವುದಾದರೂ ಸಿಗ್ನಲ್ ಫ್ಲಾಶ್ ಆಗುತ್ತಿದ್ದರೆ ಗಮನಿಸಬೇಕು. ಎಂಜಿನ್ ಆಯಿಲ್, ಇಂಧನ ಟ್ಯಾಕ್ ಸೇರಿದಂತೆ ಕೆಲ ಸೂಚನೆಗಳನ್ನು ಕಾರಿನ ಸೆನ್ಸಾರ್ ನೀಡಲಿದೆ.
ಸ್ಪಾರ್ಕ್ ಪ್ಲಗ್ ಬದಲಿಸಿ
ಏರ್ ಮಿಕ್ಸರ್‌ಗೆ ನೆರವಾಗುವ ಸ್ಪಾರ್ಕ್ ಪ್ಲಗ್ ಸಮಸ್ಯೆ ಇದ್ದರೆ ಎಂಜಿನ್ ಮೇಲೆ ಪರಿಣಾಮ ಬೀರಲಿದೆ. ಇನ್ನು ಸ್ಪಾರ್ಕ್ ಪ್ಲಗ್ ಸಮಸ್ಯೆ ಇದ್ದರೆ ಹೆಚ್ಚಿನ ಸಂದರ್ಭದಲ್ಲಿ ಕಾರು ಸ್ಟಾರ್ಟ್ ಆಗುವುದಿಲ್ಲ. ಕಾರು ಪ್ರಯಾಣದ ನಡುವೆ ನಿಂತು ಹೋಗಲಿದೆ.
ದುಬಾರಿ ದುನಿಯಾ! ಕಾರ್ ಸರ್ವೀಸ್‌ಗೆ ಬೀಳುತ್ತೆ ಹೆಚ್ಚುವರಿ ಹಣ
ಬ್ರೇಕ್ ಡಸ್ಟ್ ಶುಚಿಗೊಳಿಸಿ
ಬ್ರೇಕ್ ಪರಿಶೀಲನೆ ಅತೀ ಅಗತ್ಯ. ಕೆಸರು ಸೇರಿದಂತೆ ಇತರ ಧೂಳಿನಿಂದ ಬ್ರೇಕ್ ಸರಿಯಾಗಿ ಪ್ರವರ್ತಿಸುವುದಿಲ್ಲ. ಹೀಗಾಗಿ ವ್ಹೀಲ್ ಹಾಗೂ ಬ್ರೇಕ್ ಶುಚಿಯಾಗಿಡುವುದು ಅಗತ್ಯ.
ಆಯಿಲ್ ಲೆವೆಲ್ ಚೆಕ್ ಮಾಡಿ:
ಆಯಿಲ್ ಚೆಕ್ ಸಾಮಾನ್ಯ ಪರಿಶೀಲನೆಯಾಗಿದೆ. ಪ್ರತಿ ಬಾರಿ ಆಯಿಲ್ ಚೆಕ್ ಮಾಡುವುದು ಅತೀ ಅಗತ್ಯವಾಗಿದೆ. ಆಯಿಲ್ ಸಮಯ ಮೀರಿದ್ದರೆ, ಅಥವಾ ಹೆಚ್ಚಿನ ಪ್ರಯಾಣದಿಂದ ಆಯಿಲ್ ಕಳಪೆಯಾಗಿದ್ದರೆ ಬದಲಿಸುವುದು ಉತ್ತಮ.