ಮರ್ಸಿಡೀಸ್ ಮೇಬ್ಯಾಕ್ ಎಸ್ –ಕ್ಲಾಸ್ 680 ಖರೀದಿಸಿದ 33 ವರ್ಷದ ಯುವಕ!

By Suvarna News  |  First Published Dec 18, 2022, 12:40 PM IST

ಭಾರತದ 33 ವರ್ಷದ ವ್ಯಕ್ತಿ ಈ ಕಾರನ್ನು ಖರೀದಿಸಿದ್ದು, ಮರ್ಸಿಡೀಸ್ ಮೇಬ್ಯಾಕ್ ಎಸ್ ಕ್ಲಾಸ್ ಹೊಂದಿರುವ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಭಾರತದಲ್ಲಿ ಲಭ್ಯವಿರುವ ಐಷಾರಾಮಿ, ದುಬಾರಿ ಕಾರುಗಳ ಪೈಕಿ ಒಂದಾಗಿರುವ ಮರ್ಸಿಡೀಸ್ ಮೇಬ್ಯಾಕ್ ಎಸ್-ಕ್ಲಾಸ್ (Mercedes Mayback S Class) ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ಇದರ ದುಬಾರಿ ಬೆಲೆಯ ಕಾರಣದಿಂದ ಅದು ಸಾಮಾನ್ಯ ಜನರಿಗೆ ಕೈಗೆಟುಕದ ವಾಹನವಾಗಿದೆ. ಆದರೆ, ಭಾರತದ 33 ವರ್ಷದ ವ್ಯಕ್ತಿ ಈ ಕಾರನ್ನು ಖರೀದಿಸಿದ್ದು, ಮರ್ಸಿಡೀಸ್ ಮೇಬ್ಯಾಕ್ ಎಸ್ ಕ್ಲಾಸ್ ಹೊಂದಿರುವ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಅಭಿಷೇಕ್ ಮೋಂಟಿ ಅಗರ್ವಾಲ್ ಎಂಬ 33 ವರ್ಷದ ವ್ಯಕ್ತಿ ಮರ್ಸಿಡೀಸ್ ಮೇಬ್ಯಾಕ್ ಎಸ್ 680(Mercedes Mayback S Class) ಅನ್ನು ಖರೀದಿಸಿದ್ದಾರೆ. ಇವರು ದೇಶದ ಅತಿ ದೊಡ್ಡ ಫ್ಯಾಷನ್ ಹೌಸ್ ಪರ್ಪಲ್ ಸ್ಟೈಲ್ ಲ್ಯಾಬ್ಸ್ ನ  (Purple style labs) ಸಂಸ್ಥಾಪಕರಾಗಿದ್ದಾರೆ. ಅಭಿಷೇಕ್ ಮೇಬ್ಯಾಕ್ ಕಾರಿನ ಡೆಲಿವರಿ ಪಡೆದುಕೊಳ್ಳುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅಭಿಷೇಕ್ ಅಗರ್ವಾಲ್‌ಗೆ ವಿತರಿಸಲಾದ ಕಾರು  ಭಾರತ್ ನೋಂದಣಿ ಪ್ಲೇಟ್‌ (Bharat registered plate).  ಹೊಂದಿದೆ. ಇದು ನೋಂದಣಿ ಫಲಕವನ್ನು ಬದಲಾಯಿಸುವ ಅಗತ್ಯವಿಲ್ಲದೆ ಕಾರನ್ನು ಭಾರತದ ಎಲ್ಲಾ ರಾಜ್ಯಗಳ ಮೂಲಕ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಆಧರಿಸಿ, ಮೇಬ್ಯಾಕ್ ಎಸ್-ಕ್ಲಾಸ್ 180 ಎಂಎಂ ಉದ್ದದ ವೀಲ್‌ಬೇಸ್ ಹೊಂದಿದೆ. ಕಾರು ಸುಮಾರು 5.5 ಮೀಟರ್ ಉದ್ದವಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಉದ್ದದ ಕಾರುಗಳಲ್ಲಿ ಒಂದಾಗಿದೆ.

ಸಿಂಗಲ್ ಚಾರ್ಜ್‌ಗೆ 1,000 ಕಿ.ಮೀ ಮೈಲೇಜ್, ಬೆಂಗಳೂರಿನಲ್ಲಿ ಬೆಂಜ್ EQXX ಇವಿ ಅನಾವರಣ!

Tap to resize

Latest Videos

undefined

ಮರ್ಸಿಡಿಸ್-ಮೇಬ್ಯಾಕ್ ಕೆಲವು ಅತ್ಯಾಧುನಿಕ ಮತ್ತು ವಿಶಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿನ "ಡೋರ್‌ಮೆನ್" ವೈಶಿಷ್ಟ್ಯ ಹಿಂಬದಿಯ ಪ್ರಯಾಣಿಕರಿಗೆ ಕೈ ಸನ್ನೆ ಮಾಡಲು ಮತ್ತು ಸ್ವಯಂಚಾಲಿತವಾಗಿ ಬಾಗಿಲನ್ನು ಮುಚ್ಚಲು ಅನುವು ಮಾಡಿಕೊಡುತ್ತದೆ. ಕಾರಿನ ಚಾಲಕರು  ಸಹ ಹಿಂದಿನ ಬಾಗಿಲುಗಳನ್ನು ನಿರ್ವಹಿಸುವ  ಬಟನ್ ಪಡೆಯುತ್ತಾರೆ..

ಮರ್ಸಿಡಿಸ್-ಮೇಬ್ಯಾಚ್ ಹಿಂದಿನ ಸೀಟುಗಳು ಹಲವು  ವೈಶಿಷ್ಟ್ಯಗಳನ್ನು ಒಳಗೊಂಡಿದ್ದು,  ಹಿಂಬದಿಯ ಸೀಟ್,  19 ಮತ್ತು 44 ಡಿಗ್ರಿ ರಿಕ್ಲೈನ್ ನಡುವೆ ಸರಿಹೊಂದಿಸಬಹುದಾದ ಹಿಂಬದಿಯ ಸೀಟುಗಳನ್ನು ಹೊಂದಿದೆ. Mercedes-Maybach S 680 ಮೇಬ್ಯಾಕ್ S-ಕ್ಲಾಸ್‌ನ ಹೆಚ್ಚು ಪ್ರೀಮಿಯಂ ಆವೃತ್ತಿಯಾಗಿದೆ, ಇದು ಭಾರತದಲ್ಲಿ ಮರ್ಸಿಡಿಸ್ ಬೆಂಜ್ ಶ್ರೇಣಿಗಿಂತಲೂ ದುಬಾರಿಯಾಗಿದೆ. Mercedes-Maybach S 680 6.0-ಲೀಟರ್ ಟರ್ಬೋಚಾರ್ಜ್ಡ್ V12 ಎಂಜಿನ್ ಹೊಂದಿದ್ದು, ಇದು ಪ್ರಸ್ತುತ ಭಾರತದಲ್ಲಿ ಮರ್ಸಿಡೀಸ್ ಬೆನ್ಜ್ (Mercedes-Benz) ನೀಡುವ ಅತಿದೊಡ್ಡ ಎಂಜಿನ್ ಆಗಿದೆ. ಇದು  9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಮತ್ತು  610 PS ನ ಗರಿಷ್ಠ ವಿದ್ಯುತ್ ಉತ್ಪಾದನೆ ಮತ್ತು 900 Nm ಗರಿಷ್ಠ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ.

ಮರ್ಸಿಡಿಸ್‌ ಬೆಂಜ್ ಕಾರನ್ನು ನಾನು ಸಹ ತೆಗೆದುಕೊಳ್ಳಲು ಆಗಲ್ಲ: Nitin Gadkari

ಪ್ರಸ್ತುತ, Mercedes-Maybach S-ಕ್ಲಾಸ್ ಅನ್ನು ಭಾರತದಲ್ಲಿ ಮರ್ಸಿಡಿಸ್-ಬೆನ್ಜ್‌ನಿಂದ ಪ್ರಮುಖ ಸೆಡಾನ್ ಆಗಿ ಗುರುತಿಸಲಾಗುತ್ತದೆ ಮತ್ತು ಇದು ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಮತ್ತು ರೋಲ್ಸ್ ರಾಯ್ಸ್ ಘೋಸ್ಟ್‌ನಂತಹ ದುಬಾರಿ ಪೂರ್ಣ-ಗಾತ್ರದ ಐಷಾರಾಮಿ ಸೆಡಾನ್‌ಗಳಿಗೆ ಸ್ಪರ್ಧೆ ನೀಡುತ್ತದೆ. Mercedes-Maybach S-ಕ್ಲಾಸ್‌ನ ಬೆಲೆಗಳು 3.80 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತವೆ.

ಮರ್ಸಿಡೀಸ್ ದೇಶದಲ್ಲಿ ಲಭ್ಯವಿರುವ ಐಷಾರಾಮಿ ಕಾರಾಗಿದ್ದರೂ ಹಲವು ಬಾರಿ ತೊಂದರೆಗಳಿಗೂ ಒಳಗಾಗಿರುವುದು ಸುದ್ದಿಯಾಗುತ್ತದೆ. ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ಕಿರು ಈ ವೀಡಿಯೊದಲ್ಲಿ, ಕೆಂಪು ಬಣ್ಣದ Mercedes-Benz CLA ಐಷಾರಾಮಿ ಸೆಡಾನ್ ಅನ್ನು ಆಟೋರಿಕ್ಷಾದಿಂದ ತಳ್ಳುವ ದೃಶ್ಯಗಳನ್ನು ಕಾಣಬಹುದು. ಪುಣೆಯ ಜನನಿಬಿಡ ರಸ್ತೆಗಳಲ್ಲಿ ಆಟೋ ಚಾಲಕರು ಹಾಳಾಗಿರುವ ಕಾರನ್ನು ಕಾಲಿನಿಂದ ತಳ್ಳುತ್ತಿರುವ ದೃಶ್ಯ ವೈರಲ್ ಆಗಿದೆ

click me!