ಕೊಡಗಿನ ಮೋಡ, ಮುನ್ನಾರ್ ಮಂಜಿನ ಬಣ್ಣದಲ್ಲಿ ಹೊಸ ಟಾಟಾ ನೆಕ್ಸಾನ್ ಕ್ಯಾಮೋ ಕಾರು ಬಿಡುಗಡೆ

Published : Aug 06, 2026, 05:40 PM IST
Tata Nexon Camo Edition Debuts with Stunning Coorg Shades

ಸಾರಾಂಶ

ಟಾಟಾ ಮೋಟಾರ್ ಕಾರುಗಳಲ್ಲಿ ಅತ್ಯಂತ ಜನಪ್ರಿಯ ಕಾರು ನೆಕ್ಸಾನ್ ಇದೀಗ ಮತ್ತೊಂದು ಎಡಿಶನ್ ಕಾರು ಲಾಂಚ್ ಮಾಡಿದೆ. ನೆಕ್ಸಾನ್ ಕ್ಯಾಮೋ ಎಡಿಶನ್ ಪೆಟ್ರೋಲ್,ಡೀಸೆಲ್, ಸಿಎನ್‌ಜಿ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಇದರ ಬೆಲೆ ಎಷ್ಟು?

ನವದೆಹಲಿ (ಆ.06) ಟಾಟಾ ಮೋಟಾರ್ಸ್ ಕಾರುಗಳ ಪೈಕಿ ಅತೀ ಹೆಚ್ಚು ಜನಪ್ರಿಯ ಹಾಗೂ ಮಾರಾಟದಲ್ಲೂ ದಾಖಲೆ ಬರೆದಿರುವ ನೆಕ್ಸಾನ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಟಾಟಾ ನೆಕ್ಸಾನ್ ಕ್ಯಾಮೋ ಎಡಿಶನ್ ಕಾರು ಬಿಡುಗಡೆಯಾಗಿದೆ. ವಿಶೇಷ ಅಂದರೆ ಕೂರ್ಗ್ ಕ್ಲೌಡ್, ಮುನ್ನಾರ್ ಮಿಸ್ಟ್ ಬಣ್ಣದಲ್ಲಿ ಹೊಸ ಕ್ಯಾಮೋ ಎಡಿಶನ್ ಕಾರು ಬಿಡುಗಡೆಯಾಗಿದೆ. ಹೊಸ ಕ್ಯಾಮೋ ಎಡಿಶನ್ ಕಾರು ಕರ್ನಾಟಕದ ಕಾಶ್ಮೀರ ಎಂದೇ ಗುರುತಿಸಿಕೊಂಡಿರುವ ಕೊಡುಗು ಜಿಲ್ಲೆಯನ್ನು ಬೆಸೆದುಕೊಂಡಿದೆ.

ಹೊಸ ಕಾರಿನ ಬೆಲೆ ಎಷ್ಟು?

ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ನೆಕ್ಸಾನ್ ಕ್ಯಾಮೋ ಕಾರಿನ ಬೆಲೆ 9.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಟಾಪ್ ಮಾಡೆಲ್ ಬೆಲೆ 15.79 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಹೊಸ ಕಾರಿನಲ್ಲಿ ಕೆಲ ಹೊಸತನ, ಹೆಚ್ಚುವರಿ ಫೀಚರ್, ಅಡೀಶನಲ್ ಈಕ್ವಿಪ್‌ಮೆಂಟ್ ಸೇರಿಸಲಾಗಿದೆ. ಬಣ್ಣ ಹಾಗೂ ಇತರ ಕೆಲ ಬದಲಾವಣೆಗಳಿಂದ ಟಾಟಾ ನೆಕ್ಸಾನ್ ಕ್ಯಾಮೋ ಎಡಿಶನ್ ನಾರ್ಮಲ್ ನೆಕ್ಸಾನ್ ಕಾರಿಗಿಂತ ಭಿನ್ನವಾಗಿದೆ.

ಮಿಲಿಟರಿ ಶೈಲಿಯ ಗ್ರೀನ್ ಕಲರ್ ಬಣ್ಣದ ಜೊತೆಗೆ ಡ್ಯುಯೆಲ್ ಟೋನ್ ಸನ್‌ರೂಫ್ ಆಯ್ಕೆ ಈ ಕಾರಿನಲ್ಲಿದೆ. ಇನ್ನು ಕಾರಿನಲ್ಲಿ ಕ್ಯಾಮೋ ಬ್ಯಾಡ್ಜ್ ನೀಡಲಾಗಿದೆ. ಅಲಾಯ್ ವ್ಹೀಲ್, 16 ಇಂಚಿನ ಟೈಯರ್ ಬಳಸಲಾಗಿದೆ. ಕಾರಿನ ಮುಂಭಾಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಗ್ರಿಲ್ , ಹೆಡ್‌ಲೈಟ್, ಡಾರ್ಕ್ ಎಲಿಮೆಂಟ್ ಬಳಸಲಾಗಿದೆ.

ಡ್ಯಾಶ್‌ಬೋರ್ಡ್, ಡೋರ್ ಪ್ಯಾನಲ್ ಸೇರಿ ಮಿಲಿಟರಿ ಗ್ರೀನ್ ಶೇಡ್ ಆ್ಯಕ್ಸಸರಿ ನೀಡಲಾಗಿದೆ. ಇದರಿಂದ ಕಾರಿನ ಲುಕ್ ಮತ್ತಷ್ಟು ಹೆಚ್ಚಾಗಿದೆ. ಕ್ಯಾಮೋ ಎಂಬ್ರಾಯ್ಡರಿ ಇರುವ ಪ್ರೀಮಿಯಂ ಗ್ರೀನ್ ಸ್ಟಿಚಿಂಗ್ ಸೀಟ್, 10.25 ಇಂಚಿನ ಟಚ್‌ಸ್ಕ್ರೀನ್, ಇನ್ಫೊಟೈನ್ಮೆಂಟ್ ಸಿಸ್ಟಮ್, ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಕಾರ್ ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೆ, ವೈಯರ್‌ಲೆಸ್ ಚಾರ್ಜಿಂಗ್, ವಾಯ್ಸ್ ಆಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.

ಟಾಟಾ ನೆಕ್ಸಾನ್ ಕ್ಯಾಮೋ ಎಡಿಶನ್ ಕಾರು ಮೂರು ವೇರಿಯೆಂಟ್‌ನಲ್ಲಿ ಲಭ್ಯವಿದೆ. 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ 120 ಪಿಎಸ್ ಪವರ್ ಹಾಗೂ 170 ಎನ್ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. 1.5 ಲೀಟರ್ ಟರ್ಬೋ ಡೀಸೆಲ್ ಎಂಜಿನ್ 1.5 ಲೀಟರ್ ಟರ್ಬೋ ಡೀಸೆಲ್ ಎಂಜಿನ್ 115 ಪಿಎಸ್ ಪವರ್ ಹಾಗೂ 260 ಎನ್ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. ಎರಡೂ ಎಂಜಿನ್ ವೇರಿಯೆಂಟ್ 6 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

PREV
Read more Articles on
click me!

Recommended Stories

3.80 ಲಕ್ಷ ಮಾರಾಟ ಕಂಡ ಮಹೀಂದ್ರ ಸ್ಕಾರ್ಪಿಯೋ ಎನ್‌ಗೆ ಭರ್ಜರಿ ಫೀಚರ್, ಕಾರು ಪ್ರಿಯರಿಗೆ ಬಂಪರ್
Tata Nexon: ಎಸ್‌ಯುವಿ ತಗೊಳ್ಳೋ ಪ್ಲಾನ್ ಇದೆಯಾ? ಆಗಸ್ಟ್‌ನಲ್ಲಿ ನೆಕ್ಸಾನ್ ಮೇಲೆ ₹75,000 ವರೆಗೆ ಭರ್ಜರಿ ಡಿಸ್ಕೌಂಟ್!