ಅನಂತಪುರಂ(ಜ.04): ಸೌತ್ ಕೊರಿಯಾದ ಕಿಯಾ ಮೋಟಾರ್ಸ್(Kia Motors) ಭಾರತದಲ್ಲಿ ಅದ್ವಿತೀಯ ಯಶಸ್ಸು ಸಾಧಿಸಿದೆ. ಕಿಯಾ ಸೆಲ್ಟೋಸ್(Kia Seltos) ಕಾರಿನ ಮೂಲಕ ಆರಂಭವಾದ ಪಯಣ ಇದೀಗ ಕಿಯಾ ಕರೆನ್ಸ್(Kia Carens) ಕಾರಿನ ಬಿಡುಗಡೆ ಸಜ್ಜಾಗಿದೆ. ನೂತನ ಕಾರು ಜನವರಿ 14 ರಿಂದ ಬುಕಿಂಗ್(Booking) ಆರಂಭಗೊಳ್ಳಲಿದೆ. ಇದೀಗ ಕಾರು ಬಿಡುಗಡೆಗೂ ಮುನ್ನ ಕಾರಿನ ಫೀಚರ್ಸ್, ವೇರಿಯೆಂಟ್ ಸೇರಿದಂತೆ ಹಲವು ಮಾಹಿತಿಗಳು(Specifications And Engine Options) ಬಹಿರಂವಾಗಿದೆ. ವಿಶೇಷ ಅಂದರೆ 5 ಟ್ರಿಮ್ ವೇರಿಯೆಂಟ್‌ಗಳಲ್ಲಿ ಕಿಯಾ ಕರೆನ್ಸ್ ಕಾರು ಬಿಡುಗಡೆಯಾಗಲಿದೆ.
ಕಿಯಾ ಕರೆನ್ಸ್ ಕಾರು 6 ಸೀಟರ್ ಹಾಗೂ ಸೀಟರ್ ಆಯ್ಕೆ ಲಭ್ಯವಿದೆ. ಪ್ರಿಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಸುರಿ ಹಾಗೂ ಲಕ್ಸುರಿ ಪ್ಲಸ್ ಅನ್ನೋ 5 ವೇರಿಯೆಂಟ್ ಲಭ್ಯವಿದೆ. ಟೈಗರ್ ಫೇಸ್ ಕ್ರೋನ್ ಜ್ವೆಲ್ LED ಹೈಡ್‌ಲ್ಯಾಂಪ್ಸ್ ಹಾಗೂ ಸ್ಟಾರ್ ಮ್ಯಾಪ್ LED DRL ಡಿಸೈನ್ ಹೊಂದಿದೆ. ಇದರ ಜೊತೆಗೆ ಟೈಲ್‌ಲೈಟ್ಸ್‌ನಲ್ಲೂ ಸ್ಟಾರ್ ಮ್ಯಾಪ್ ಡಿಸೈನ್ ಬಳಸಲಾಗಿದೆ. 16 ಇಂಚಿನಿ ಡ್ಯುಯೆಲ್ ಟೆನ್ ಅಲೋಯ್ ವ್ಹೀಲ್, ಕ್ರೋಮ್ ರೇರ್ ಬಂಪರ್ ಹೊಂದಿದೆ. 8 ಬಣ್ಣಗಳಲ್ಲಿ ಕಿಯಾ ಕರೆನ್ಸ್ MPV ಕಾರು ಲಭ್ಯವಿದೆ.
undefined
Upcoming Car ಜ.14ರಿಂದ ಕಿಯಾ ಕರೆನ್ಸ್ ಬುಕಿಂಗ್ ಆರಂಭ, ಕೈಗೆಟುಕವ ಬೆಲೆಯಲ್ಲಿ MPV ಕಾರು ಲಭ್ಯ!
ನೂತನ ಕಿಯಾ ಕರೆನ್ಸ್ ಕಾರಿನಲ್ಲಿ ಹಲವು ಲೋಡೆಡ್ ಫೀಚರ್ಸ್ ಇದೆ. ವಿಶೇಷ ಅಂದರೆ ಹಲವು ಹೊಸ ಫೀಚರ್ಸ್ ಈ ಕಾರಿನಲ್ಲಿ ಪರಿಚಯಿಸಲಾಗುತ್ತಿದೆ. 10.25 ಇಂಚಿನ HD ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ ಜೊತೆಗೆ ನ್ಯಾವಿಗೇಶನ್ ಫೀಚರ್ಸ್ ಕೂಡ ಇದರಲ್ಲಿದೆ. ಇದರಲ್ಲಿ 66 ಕನೆಕ್ಟೆಡ್ ಕಾರ್ ಫೀಚರ್ಸ್ ನೀಡಲಾಗಿದೆ. BOSE ಸೌಂಡ್ ಸಿಸ್ಟಮ್, 8 ಸ್ಪೀಕರ್, 64 ಆ್ಯಂಬಿಯೆಂಟ್ ಲೈಟಿಂಗ್, ವೈರಸ್ ಹಾಗೂ ಬ್ಯಾಕ್ಟೀರಿಯಾದಿಂದ ರಕ್ಷಣೆ ನೀಡುವಂತ ಸ್ಮಾರ್ಟ್ ಪ್ಯೂರ್ ಏರ್‌ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಮಲ್ಟಿ ಡ್ರೈವ್ ಮೂಡ್, ಸನ್‌ರೂಫ್, ಪೆಡಲ್ ಶಿಫ್ಟರ್ಸ್, ವೈಯರ್‌ಲೆಸ್ ಚಾರ್ಜಿಂಗ್ ಹೊಂದಿದೆ. ಸುರಕ್ಷತಾ ಫೀಚರ್ಸ್ ಕೂಡ ಈ ಕಾರಿನಲ್ಲಿ 6 ಏರ್‌ಬ್ಯಾಗ್, ESC, VSM, HAC, DBC, ABS, BAS ಹಾಗೂ ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ರೇರ್ ಪಾರ್ಕಿಂಗ್ ಸೆನ್ಸಾರ್ ಫೀಚರ್ಸ್ ನೂತನ ಕಿಯಾ ಕರೆನ್ಸ್ ಕಾರಿಲ್ಲಿದೆ.
Upcoming Car ಮತ್ತಷ್ಟು ಆಕರ್ಷಕ, ಕೈಗೆಟುಕುವ ದರದಲ್ಲಿ ಮಹೀಂದ್ರ ಬೊಲೆರೋ SUV ಶೀಘ್ರದಲ್ಲೇ ಬಿಡುಗಡೆ!
ಕಾರು 3 ಮಾದರಿ ಎಂಜಿನ್‌ನಲ್ಲಿ ಲಭ್ಯವಿದೆ. ಸ್ಮಾರ್ಟ್‌ಸ್ಟ್ರೀಮ್ G 1.5 ಪೆಟ್ರೋಲ್, ಸ್ಮಾರ್ಟ್‌ಸ್ಟ್ರೀಮ್ G1.4 T-GDi ಪೆಟ್ರೋಲ್ ಹಾಗೂ 1.5L CRDi VGT ಡೀಸೆಲ್ ಎಂಜಿನ್‌ನಲ್ಲಿ ಕಿಯಾ ಕರೆನ್ಸ್ ಕಾರು ಲಭ್ಯವಿದೆ. ಸ್ಮಾರ್ಟ್‌ಸ್ಟ್ರೀಮ್ G 1.5 ಪೆಟ್ರೋಲ್ ಎಂಜಿನ್ ಕಾರು 113 bhp ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಬಲ್ಲ ಸಾಮರ್ಥ್ ಹೊಂದಿದೆ. ಈ ಎಂಜಿನ್ ವೆರಿಯೆಂಟ್‌ನಲ್ಲಿ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಮಾತ್ರ ಲಭ್ಯವಿದೆ. ಇನ್ನು ಸ್ಮಾರ್ಟ್‌ಸ್ಟ್ರೀಮ್ G1.4 T-GDi ಪೆಟ್ರೋಲ್ ಎಂಜಿನ್ ಕಾರು 138 bhp ಪವರ್ ಹಾಗೂ 242 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ವೇರಿಯೆಂಟ್ ಎಂಜಿನ್‌ನಲ್ಲಿ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 7DCT ಟ್ರಾನ್ಸ್‌ಮಿಶನ್ ಲಭ್ಯವಿದೆ. ಇನ್ನು 1.5L CRDi VGT ಡೀಸೆಲ್ ಎಂಜಿನ್ 113 bhp ಪವರ್ ಹಾೂ 250 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಈ ವೇರಿಯೆಂಟ್ ಎಂಜಿನ್‌ನಲ್ಲಿ 6AT ಟ್ರಾನ್ಸ್‌ಮಿಶನ್ ಲಭ್ಯವಿದೆ.
Defective Number Plates ಬೆಂಗಳೂರಲ್ಲಿ HSRP ನಂಬರ್ ಪ್ಲೇಟ್ ಇಲ್ಲ ಎಂದು ದಂಡ, ನಿಯಮ ಹೇಳುವುದೇನು?
ಕಿಯಾ ಕರೆನ್ಸ್ ಕಾರು 4,540 mm ಉದ್ದ, 1,800 mm ಅಗಲ, 1,708 mm ಎತ್ತರವಿದೆ. ಈ MPV ಕಾರು 2,780 mm ವ್ಹೀಲ್‌ಬೇಸ್ ಹೊಂದಿದೆ. ನೂತನ ಕಾರಿನ ಬೆಲೆ 15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಜನವರಿ 14 ರಿಂದ ಬುಕಿಂಗ್ ಆರಂಭಗೊಳ್ಳುತ್ತಿದ್ದು, ಶೀಘ್ರದಲ್ಲೇ ಕಾರು ಬಿಡುಗಡೆಯಾಗಲಿದೆ. ಕಿಯಾ ಕರೆನ್ಸ್ ಟಾಟಾ ಸಫಾರಿ, ಮಾರುತಿ ಸುಜುಕಿ XL6, ಟೋಯೋಟಾ ಇನೋವಾ ಕ್ರೈಸ್ಟಾ, ಹ್ಯುಂಡೈ ಅಲ್ಕೈಜರ್, ಮಹೀಂದ್ರ ಮೊರೆಜಾ ಸೇರಿದಂತೆ MPV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಕಿಯಾ ಮೋಟಾರ್ಸ್ ಭಾರತದಲ್ಲಿ ಈಗಾಗಲೇ 3 ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಕಿಯಾ ಕರೆನ್ಸ್ 4ನೇ ಕಾರಾಗಿದೆ. ಕಿಯಾ ಸೆಲ್ಟೋಸ್, ಕಿಯಾ ಕಾರ್ನಿವಲ್, ಕಿಯಾ ಸೊನೆಟ್ ಕಾರಿನ ಬಳಿಕ ಇದೀಗ ಕಿಯಾ ಕರೆನ್ಸ್ ಬಿಡುಗಡೆಯಾಗುತ್ತಿದೆ.