Ertiga, XL6 ಪೈಪೋಟಿ ನೀಡಲು ಬರಲಿದೆ ಕಿಯಾದ ಹೊಸ MPV

By Suvarna News  |  First Published Nov 16, 2021, 5:43 PM IST

ಸೆಲ್ತೋಸ್ (Seltos) ಮತ್ತು ಸೊನೆಟ್ (Sonet) ಕಾರುಗಳ ಮೂಲಕ ಭಾರತದಲ್ಲಿ ತನ್ನದೇ ಆದ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿರುವ ಕಿಯಾ ಇಂಡಿಯಾ (Kia India), ಮುಂದಿನ ವರ್ಷ ಮತ್ತೊಂದು ಕಾರನ್ನು ಬಿಡುಗಡೆ ಮಾಡಲಿದೆ. ಈ ಎಂಪಿವಿ, ಮಾರುತಿಯ ಎರ್ಟಿಗಾ ಮತ್ತು ಎಕ್ಸ್‌ಎಲ್6ಗೆ ಸ್ಪರ್ಧೆ ನೀಡಲಿದೆ.


ಸೆಲ್ತೋಸ್ (Seltos) ಮತ್ತು ಸೊನೆಟ್ (Sonet), ಕಾರ್ನಿವಾಲ್ ಲಕ್ಸುರಿ ಎಂಪಿವಿ (Carnival Luxury) ಬ್ರ್ಯಾಂಡುಗಳ ಮೂಲಕ  ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿರುವ ದಕ್ಷಿಣ ಕೊರಿಯಾದ ಕಾರ್ ತಯಾರಿಕಾ ಕಂಪನಿ ಕಿಯಾ (Kia India), ಮುಂದಿನ ವರ್ಷ ಹೊಸ ಕಾರುಗಳು ಬಿಡುಗಡೆಗೆ ಯೋಜನೆ ರೂಪಿಸಿಕೊಂಡಂತಿದೆ.

ಪ್ರಸಕ್ತ ಸಾಲಿನಲ್ಲಿ ಕಿಯಾ ಇಂಡಿಯಾ (Kia India) ಕಂಪನಿ ಅಷ್ಟೇನೂ ಸದ್ದು ಮಾಡಿಲ್ಲ. ಅಂದರೆ, ಹೊಸ ಮಾದರಿಯ ಯಾವುದೇ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ  ಮಾಡಿಲ್ಲ. ಆದರೆ ಇದೇ ಮಾತನ್ನು ನೀವು ಮುಂದಿನ ವರ್ಷಕ್ಕೆ ಹೇಳುವಂತಿಲ್ಲ. ಯಾಕೆಂದರೆ, ಕಂಪನಿ ಮುಂದಿನ ವರ್ಷದ ಯೋಜನೆಗಳನ್ನು ಹಾಕಿಕೊಂಡಿದೆ.

Tap to resize

Latest Videos

undefined

ಹುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೆ Tata Motors ಲಗ್ಗೆ?

ಕಿಯಾ ಇಂಡಿಯಾ (Kia India) ಮುಂದಿನ ವರ್ಷ ಅಂದರೆ 2022ರಲ್ಲಿ ಮಲ್ಟಿ ಪರ್ಪೋಸ್ ವೆಹಿಕಲ್ (Multi-Purpose Vehicle-MPV) ಲಾಂಚ್ ಮಾಡುವ ಸಾಧ್ಯತೆಯಿದೆ. ಕಂಪನಿಯು ಈಗಾಗಲೇ ವಾಹನಕ್ಕೆ KY ಎಂಬ ಕೋಡ್‌ನೇಮ್ ಇಟ್ಟಿದ್ದು, ಈ ಕಾರು ಭಾರತದಲ್ಲಿ ಕಂಪನಿಯು ಮಾರಾಟದಲ್ಲಿ ವೇಗವನ್ನು ತಂದುಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಈಗ ದೊಡ್ಡ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಹಾಗಾಗಿಯೇ ಬಹುತೇಕ ಕಂಪನಿಗಳು, ಸಬ್ ಕಾಂಪಾಕ್ಟ್ ಕಾರ್, ಎಂಪಿವಿ, ಎಸ್‌ಯುವಿಗಳನ್ನು ಲಾಂಚ್ ಮಾಡುತ್ತಿವೆ. ಈ ಹಿನ್ನೆಲೆಯಲ್ಲೇ ಕಿಯಾ ಇಂಡಿಯಾ ಕೂಡ, ಇದೇ ಸೆಗ್ಮೆಂಟ್‌ನಲ್ಲಿ ಮತ್ತೊಂದು ಪರೀಕ್ಷೆಗೆ ಮುಂದಾಗಿದೆ. 

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಇಂಡಿಯಾ ಈಗಾಗಲೇ ಎಂಪಿವಿ (MPV) ಸೆಗ್ಮೆಂಟ್‌ನಲ್ಲಿ ಕಾರ್ನಿವಾಲ್ (Carnival) ಎಂಬ ಹೆಸರಿನ ಕಾರನ್ನು ಮಾರಾಟ ಮಾಡುತ್ತಿದೆ. ಹಾಗಿದ್ದೂ, ಮತ್ತೊಂದು ಎಂಪಿವಿ ಬಿಡುಗಡೆಗೆ ಎದುರು ನೋಡುತ್ತಿದೆ. "ಭಾರತವು ಜಾಗತಿಕವಾಗಿ ಕಿಯಾಗೆ ಬಹಳ ಮುಖ್ಯವಾದ ಮಾರುಕಟ್ಟೆಯಾಗಿದೆ, ಮಾರಾಟದ ಪರಿಮಾಣದ ಪ್ರಕಾರ ಮಾತ್ರವಲ್ಲ, ಇದು ಉತ್ಪಾದನೆ ಮತ್ತು ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಕಿಯಾ ಇಂಡಿಯಾ (Kia India)ದ ಎಂಡಿ (MD) ಮತ್ತು ಸಿಇಒ (CEO) ಟೇ-ಜಿನ್ ಪಾರ್ಕ್ (Teae-Jin Park) ಹೇಳಿದರು.

Hariyana: ಸೋನಿಪತ್‌ ಜಿಲ್ಲೆಯಲ್ಲಿ ಮಾರುತಿಯ ಮತ್ತೊಂದು ಹೊಸ ಫ್ಯಾಕ್ಟರಿ 

ಕಿಯಾ ಇಂಡಿಯಾ (Kia India) ತನ್ನ ಹೊಸ ಉತ್ಪನ್ನ KY ಅನ್ನು 2022ರ ಮೊದಲನೇ ತ್ರೈಮಾಸಿಕದಲ್ಲಿ ಪರಿಚಯಿಸುತ್ತದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. KYಯೊಂದಿಗೆ, ನಮ್ಮ ವ್ಯಾಪಾರ ಮತ್ತು ಕಾರ್ಯಾಚರಣೆಗಳನ್ನು ಕ್ರೋಢೀಕರಿಸಲು ನಾವು ನಮ್ಮ ಮುಂದಿನ ಭಾರತದ ಬೆಳವಣಿಗೆಯ ಹಂತವನ್ನು ಪ್ರಾರಂಭಿಸುತ್ತೇವೆ ಎಂದು ಪಾರ್ಕ್ ಹೇಳಿದ್ದಾರೆ. 

ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿರುವ ಕೆವೈ ಕೋಡ್‌ನೇಮ್ ಹೊಂದಿರುವ ಈ MPV ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಂಡಿಯಾ (Maruti Suzuki) ಕಂಪನಿಯ ಎಂಪಿವಿಗಳಾದ ಎರ್ಟಿಗಾ (Ertiga) ಮತ್ತು ಎಕ್ಸ್‌ಎಲ್6 (XL6) ವಾಹನಗಳಿಗೆ ತೀವ್ರ ಸ್ಪರ್ಧೆಯನ್ನು ಒಡ್ಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿನ ಬದಲಾವಣೆಯನ್ನು ಗುರುತಿಸಿರು ಕಿಯಾ ಇಂಡಿಯಾ ಅದಕ್ಕಾಗಿಯೇ ಎಂಪಿವಿ ವಿಭಾಗದಲ್ಲಿ ಮತ್ತೊಂದು ವಾಹನವನ್ನು ಬಿಡುಗಡೆ ಮಾಡಲು ಮುಂದಾಗುತ್ತಿದೆ. ಈಗಾಗಲೇ, ಹುಂಡೈ ಕೂಡಾ ಇದೇ ವಿಭಾಗದಲ್ಲಿ ಅಲ್ಕಾಚಾರ್ ಎಸ್‌ವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿರುವುದನ್ನು ಗಮನಿಸಹುದು. ಹುಂಡೈ ಕಂಪನಿಯು ಕಿಯಾ ಪೇರೆಂಟಲ್ ಕಂಪನಿಯಾಗಿದೆ.  ಕಿಯಾ ಯಾವ ರೀತಿಯಲ್ಲಿ ಎಂಪಿವಿ ವಿಭಾಗದಲ್ಲಿ ಹೊಸ ಕಾರಿನೊಂದಿಗೆ ಪ್ರದರ್ಶನ ತೋರಲಿದೆ ಎಂಬುದನ್ನು ಕಾದು ನೋಡಬೇಕಿದೆ.

GIIASನಲ್ಲಿ ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಲಾಂಚ್

click me!