GIIASನಲ್ಲಿ ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಲಾಂಚ್

By Suvarna News  |  First Published Nov 14, 2021, 3:43 PM IST

ಹುಂಡೈನ (Hyundai) ಜನಪ್ರಿಯ ಎಸ್‌ಯುವಿ ಕ್ರೆಟಾ (Creta) ಫೇಸ್‌ಲಿಫ್ಟ್‌ನೊಂದಿಗೆ ಇಂಡೋನೇಷ್ಯಾದ GIIAS ಆಟೋ ಪ್ರರ್ಶನದಲ್ಲಿ ಅನಾವರಣಗೊಂಡಿದೆ. ಸಾಕಷ್ಟು ಹೊಸ ಫೀಚರ್‌ಗಳು, ಸುರಕ್ಷತೆಯ ಸಾಧನಗಳೊಂದಿಗೆ ಅತ್ಯಾಕರ್ಷಕ ನೋಟವನ್ನುಹೊಂದಿರುವ ಈ ಕ್ರೆಟಾ ಹೆಚ್ಚು ಗಮನ ಸೆಳೆಯುತ್ತಿದೆ. ಇಂಡೋನೇಷ್ಯಾದಲ್ಲಿ ಉತ್ಪಾದಿಸಲಾಗಿರುವ ಈ ಎಸ್‌ಯುವಿ ಭಾರತದ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿದೆ ಎಂಬ ಮಾಹಿತಿ ಇಲ್ಲ.


ಕಾಂಪಾಕ್ಟ್ ಎಸ್‌ಯುವಿ ಕಾರುಗಳ ಪೈಕಿ ಗಮನಾರ್ಹ ಸಾಧನೆಯನ್ನು ಮಾಡಿರುವ ಹುಂಡೈ (Hyndai) ನ ಕ್ರೆಟಾ (Creta) ಇದೀಗ ಹೊಸ ಅವತಾರದಲ್ಲಿ ಬಳಕೆದಾರರ ಮುಂದೆ ಬಂದಿದೆ. ಗಾಯ್ಕಿಂಡೊ ಇಂಡೋನೇಷ್ಯಾ ಇಂಟರ್‌ನ್ಯಾಷನಲ್ ಆಟೋ ಶೋ (Gaikindo Indonesia International Auto Show-GIIAS)ದಲ್ಲಿ 2022 ಹುಂಡೈ ಕ್ರೆಟಾ ಫೇಸ್‌ಲಿಪ್ಟ್  (Hyndai Creta Facelift) ಎಸ್‌ಯುವಿ ಅನಾವರಣಗೊಂಡಿದೆ.

ಈ ಹೊಸ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಕಾರ್, ಆಕ್ಟಿವ್ (Active), ಟ್ರೆಂಡ್ (Trend), ಸ್ಟೈಲ್ (Style) ಮತ್ತು ಪ್ರೈಮ್ (Prime) ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಬಳಕೆದಾರರಿಗೆ ಸಿಗಲಿದೆ. ತೆರಿಗೆಗಳನ್ನು ಹೊರತುಪಡಿಸಿ ಬೆಲೆ ಅಂದಾಜು 14.56 ಲಕ್ಷ ರೂ.20.82 ಲಕ್ಷ ರೂ.ವರೆಗೂ ಇರಲಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ಕ್ರೆಟಾ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್ ತಂತ್ರಜ್ಞಾನದೊಂದಿಗೆ ಬರುತ್ತಿದೆ. ಹೊರ ಮತ್ತು ಒಳ ವಿನ್ಯಾಸಗಳಿಂದ ಗಮನ ಸೆಳೆಯುತ್ತಿರುವ ಈ ಕ್ರೆಟಾ, ಸುರಕ್ಷತೆಯ ದೃಷ್ಟಿಯಿಂದಲೂ ಸಾಕಷ್ಟು ಅಪ್‌ಗ್ರೆಡ್ ಹೊಂದಿದೆ.

Tap to resize

Latest Videos

undefined

Toyota ಸಬ್ ಕಾಂಪಾಕ್ಟ್ ಕಾರ್ Aygo X ಅನಾವರಣ, ಪಂಚ್‌ಗೆ ಠಕ್ಕರ್

17 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ ಹೊರತುಪಡಿಸಿ ಈ ಹೊಸ ಕ್ರೆಟಾ ಒಟ್ಟಾರೆ ಚಿತ್ರಣದಲ್ಲಿ ಅಂಥ ಬದಲಾವಣೆಗಳೇನೂ ಇಲ್ಲ. ಹಾಗೆಯೇ, ಹಿಂಭಾಗದಲ್ಲಿ ಒಂದಿಷ್ಟು ಅಗ್ರೇಷನ್ ವಿನ್ಯಾಸವನ್ನು ಕಾಣಬಹುದು. ಎಲ್ಇಡಿ (LED) ಟೇಲ್ ಲೈಟ್ಸ್, ಹೊಸ ಬಂಪರ್‌ಗಳು ಗಮನ ಸೆಳೆಯುತ್ತವೆ. ಜೊತೆಗೆ, ಬ್ಲ್ಯಾಕ್ ರೂಫ್‌ನೊಂದಿಗೆ ಟು ಟೋನ್ ಬಾಡಿ ಕಲರ್ ಹೊಂದಿರಲಿದೆ. ಹೊರಮೈ ಹೊಸ ವಿನ್ಯಾಸದಿಂದಾಗಿ ಫೇಸ್‌ಲಿಫ್ಟ್ ಕ್ರೆಟಾ ಹೆಚ್ಚು ಆಕರ್ಷಕವೂ ಆಗಿದೆ.

ಇನ್ನೂ ಕ್ರೆಟಾ (Creta) ಕ್ಯಾಬಿನ್ ಒಳಗೊ ಸಾಕಷ್ಟು ಬದಲಾವಣೆಗಳನ್ನು, ಅಪ್‌ಗ್ರೇಡ್ ಆಗಿರುವುದನ್ನು ಗುರುತಿಸಬಹುದು. ಅತಿದೊಡ್ಡ ಬದಲಾವಣೆ ಎಂದರೆ, ಕಾರಿನೊಳಗೇ ಕಂಪನಿಯು 10.25 ಇಂಚ್ ಡಿಜಟಲ್ ಇನ್ಸುಟ್ರುಮೆಂಟ್ ಕ್ಲಸ್ಟರ್ (Digital Instrumental Cluster)  ಅಳವಡಿಸಿದೆ. ಈ ಕ್ಲಸ್ಟರ್ ಅಲ್ಕಾಝಾರ್ (Alcazar) ಕಾರಿನಲ್ಲಿರುವಂತೆಯೇ ಇದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅಳವಡಿಸಿರುವ ವಿನ್ಯಾಸವನ್ನೂ ಬದಲಿಸಲಾಗಿದೆ. 8 ಇಂಚ್ ಸ್ಕ್ರೀನ್ ಡಿಸ್‌ಪ್ಲೇ ಇದೆ. ಕಂಪನಿಯ BlueLink ಸಂಪರ್ಕಿತ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ  ಬೆಂಬಲ ನೀಡುತ್ತದೆ. 

ASEAN NCAP ಕ್ರ್ಯಾಶ್ ಟೆಸ್ಟ್: 2021 ಹೋಂಡಾ ಸಿವಿಕ್‌ಗೆ 5 ಸ್ಟಾರ್!

ಇನ್ನು ಟೆಲೆಸ್ಕಾಪಿಕ್ ಸ್ಟೀರಿಂಗ್ ವ್ಹೀಲ್, ಎಕ್ಯೂಐನೊಂದಿಗೆ ಏರ್ ಫ್ಯೂರಿಪೈರ್, ವೆಂಟಿಲೇಟೆಡ್ ಸೀಟ್ಸ್, ಕೋಲ್ಡ್ ಗ್ಲೋವ್‌ಬಾಕ್ಸ್, ಫುಶ್ ಬಟನ್ ಸ್ಟಾರ್ಟ್, ವೈರ್‌ಲೆಸ್ ಚಾರ್ಜರ್‌ ಸೇರಿ ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ. ಇವುಗಳ ಜತೆಗೆ, ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲ್, ಮ್ಯೂಸಿಕ್ ಸಿಸ್ಟಮ್, ರಿಯರ್ ಯುಎಸ್‌ಬಿ ಚಾರ್ಜರ್ (USB Charger), ಸನ್‌ರೂಫ್‌ (Sun Roof) ಸೌಲಭ್ಯಗಳನ್ನು ಕಾಣಬಹುದು. 

ಅತ್ಯಾಧುನಿಕ ತಂತ್ರಜ್ಞಾನಾಧರಿತ ಸುರಕ್ಷತೆಯ ಫೀಚರ್‌ಗಳನ್ನು ಈ ಹೊಸ ಕ್ರೆಟಾದಲ್ಲಿ ಅಳವಡಿಸಲಾಗಿದೆ. ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್‌ ಅಳವಡಿಸಲಾಗಿದೆ.  ಫಾರ್ವರ್ಡ್ ಕೊಲ್ಲಿಸಿನ್ ಅವಾಯಿಡನ್ಸ್ ಅಸಿಸ್ಟ್, ಲೇನ್ ಫಾಲೋವಿಂಗ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಹಿಂಬದಿಯ ಕ್ಯಾಮೆರಾದೊಂದಿಗೆ ಕ್ರಾಸ್ ಟ್ರಾಫಿಕ್ ಅಲರ್ಟ್, 6 ಏರ್ ಬ್ಯಾಗ್ಸ್, ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಬಹಳಷ್ಟು ಫೀಚರ್‌ಗಳನ್ನು ಕಂಪನಿಯು ನೀಡಿದೆ.

ಹುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೆ Tata Motors ಲಗ್ಗೆ?

ಈ ಹೊಸ ಕ್ರೆಟಾ (Creta) 1.5 ಲೀಟರ್ ಎಂಪಿಐ ನ್ಯಾಚುರಲೀ ಅಸ್ಪೈರೆಟೆಡ್ ಪೆಟ್ರೋಲ್ ಎಂಜಿನೊಂದಿಗೆ ಬರುತ್ತದೆ. 1497 ಸಿಸಿ ನಾಲ್ಕು ಸಿಲಿಂಡರ್‌ಗಳ ಈ ಎಂಜಿನ್, ಗರಿಷ್ಠ 113 ಬಿಎಚ್‌ಪಿ ಪವರ್ ಹಾಗೂ ಗರಿಷ್ಠ 144 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಮ್ಯಾನುವಲ್ ಗಿಯರ್ ಬಾಕ್ಸ್ ಹಾಗೂ ಆಟೋಮೆಟಿಕ್ ಎಂಜಿನ್ ಇರಲಿದೆ. ಆದರೆ, ಈ ಫೇಸ್‌ಲಿಫ್ಟ್ ಹೊಸ ಕ್ರೆಟಾ ಭಾರತ (India)ದ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಖಚಿತವಿಲ್ಲ.

click me!