ದೇಶದ ಬಹುದೊಡ್ಡ ಕಾರ್ ಉತ್ಪಾದಕ ಕಂಪನಿ ಮಾರುತಿ ಹರಿಯಾಣದ ಸೋನಿಪತ್ ಜಿಲ್ಲೆಯ ಖರ್ಖೋಡಾ ಎಂಬಲ್ಲಿ ಹೊಸ ಫ್ಯಾಕ್ಟರಿ ಆರಂಭಿಸಲಿದೆ. 900 ಎಕರೆಯಲ್ಲಿ ತಲೆ ಎತ್ತಲಿರುವ ಘಟಕಕ್ಕೆ ಹರಿಯಾಣ ಸರಕಾರ ಒಪ್ಪಿಗೆ ನೀಡಿದೆ. ಕಂಪನಿಯು ಸುಮಾರು 1800 ಕೋಟಿ ರೂಪಾಯಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಲ್ಕಾರು ದಿನದ ಹಿಂದೆಯಷ್ಟೇ ದೇಶದ ಅತಿ ಹೆಚ್ಚು ಇಂಧನ ದಕ್ಷತೆಯ, ಹೊಸ ತಲೆಮಾರಿನ ಸೆಲೆರಿಯೊ (Celerio) ಕಾರ್ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಇಂಡಿಯಾ (Maruti Suzuki India), ಹೊಸ ಕಾರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಒಪ್ಪಿಗೆಯನ್ನು ಪಡೆದುಕೊಂಡಿದೆ. ದೇಶದ ಬಹುದೊಡ್ಡ ಕಾರ್ ಉತ್ಪಾದಕಾ ಕಂಪನಿ ಎನಿಸಿಕೊಂಡಿರುವ ಮಾರುತಿ, ಹರಿಯಾಣ (Haryana)ದ ಸೋನಿಪತ್ (Sonipat) ಜಿಲ್ಲೆಯ ಖರ್ಖೋಡಾ (Kharkhoda) ಎಂಬಲ್ಲಿ 900 ಎಕರೆ ಪ್ರದೇಶದಲ್ಲಿ ತನ್ನ ನಿರ್ಮಾಣ ಘಟಕವನ್ನು ಆರಂಭಿಸಲಿದೆ. ಈ ವಿಷಯವನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರು ಖಚಿತಪಡಿಸಿದ್ದಾರೆ. ಹರಿಯಾಣ ಎಂಟರ್‌ಪ್ರೈಸರ್ ಪ್ರಮೋಷನ್ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಅವರು ಘೋಷಣೆಯನ್ನು ಮಾಡಿದರು. ಸೋನಿಪತ್ ಜಿಲ್ಲೆಯ ಖರ್ಖೋಡಾ ಎಂಬಲ್ಲಿ 900 ಎಕರೆ ಜಾಗದಲ್ಲಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಹೊಸ ಘಟಕ ಆರಂಭಿಸಲು ಕ್ಲಿಯರೆನ್ಸ್ ನೀಡಲಾಗಿದೆ ಎಂದು ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹರಿಯಾಣದ ಈ ಖರ್ಖೋಡಾ ಹೊಸ ಘಟಕ ನಿರ್ಮಾಣದೊಂದಿಗೆ ಮಾರುತಿ ಸುಜುಕಿ ಇಂಡಿಯಾ ತನ್ನ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ನವದೆಹಲಿ (New Delhi) ಯಲ್ಲಿ ಕೇಂದ್ರ ಕಚೇರಿಯನ್ನು ಮಾರುತಿ ಕಂಪನಿಯು ಈಗಾಗಲೇ ಹರಿಯಾಣದ ಗುರುಗ್ರಾಮ್ ಮತ್ತು ಮಾಣೇಸರ್ ಮತ್ತು ಗುಜರಾತ್(Gujarat))ನಲ್ಲಿ ಈಗಾಗಲೇ ನಿರ್ಮಾಣ ಘಟಕಗಳನ್ನು ಹೊಂದಿದೆ. ಖರ್ಖೋಡಾ ಘಟಕದ ಮೇಲೆ ಕಂಪನಿಯು ಸುಮಾರು 1800 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎನ್ನಲಾಗಿದೆ.ಈ ಹೊಸ ಘಟಕವು ಆಟೋಮೊಬೈಲ್ ವಲಯವನ್ನು ಉತ್ತೇಜಿಸುವ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಗೆ ಸಹಾಯ ಮಾಡುತ್ತದೆ ಎಂದು ಖಟ್ಟರ್ ತಿಳಿಸಿದರು. ಇದರೊಂದಿಗೆ, ವಾಹನ ತಯಾರಕರಿಗೆ ಸರ್ಕಾರವು 15 ವರ್ಷಗಳವರೆಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (SGST) ಮರುಪಾವತಿಯನ್ನು ನೀಡಿದೆ. ಮತ್ತೊಂದು ಕಾರ್ಖಾನೆಯನ್ನು ನಿರ್ಮಿಸುವುದು ಲಾಭದಾಯಕ ನಿರೀಕ್ಷೆಯಂತೆ ತೋರುತ್ತದೆ, ಅದು ತನ್ನ ಉತ್ಪಾದನೆಯನ್ನು ಅದರ ಅಪೇಕ್ಷಿತ ಗುರಿಗಳಿಗೆ ತಳ್ಳಲು ವಾಹನ ತಯಾರಕರಿಗೆ ಸಹಾಯ ಮಾಡುತ್ತದೆ.ದೇಶದ ಬಹುದೊಡ್ಡ ಕಾರ್ ಉತ್ಪಾದಕ ಹಾಗೂ ಮಾರಾಟ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ ಪ್ರಕಾರ, ಹರಿಯಾಣ ಮತ್ತು ಗುಜರಾತ್‌ನಲ್ಲಿರುವ ತನ್ನ ಎರಡು ಘಟಕಗಳ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿತ್ತು. ಸೆಮಿಕಂಡಕ್ಟರ್ ಕೊರತೆಯಿಂದಾಗಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಕೊರತೆಯು ಇದಕ್ಕೆ ಕಾರಣವಾಗಿದೆ ಎಂದು ಕಂಪನಿ ಹೇಳಿಕೊಂಡಿತ್ತು.
undefined
ಹುಂಡೈ ಹಿಂದಿಕ್ಕಿ 2ನೇ ಸ್ಥಾನಕ್ಕೆ Tata Motors ಲಗ್ಗೆ?
ಹೊಸ ತಲೆಮಾರಿನ ಸೆಲೆರಿಯೋ ಬಿಡುಗಡೆ
ಭಾರತದಲ್ಲಿ ಹೊಚ್ಚ ಹೊಸ, ನ್ಯೂ ಜನರೇಶನ್ ಮಾರುತಿ ಸುಜುಕಿ ಸೆಲೆರಿಯೋ(Maruti Suzuki Celerio) ಹ್ಯಾಚ್‌ಬ್ಯಾಕ್ ಕಾರು(Car) ಬಿಡುಗಡೆಯಾಗಿದೆ. ಹಾರ್ಟ್‌ಟೆಕ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣಗೊಂಡಿರುವ ನೂತನ ಸುಜುಕಿ ಸೆರಿಯೋ ಕಾರು ಅತ್ಯಾಕರ್ಷ ಲುಕ್ ಹೊಂದಿದೆ. ವಿಶೇಷ ಅಂದರೆ ಅತೀ ಕಡಿಮೆ ಬೆಲೆಗೆ ಗರಿಷ್ಠ ಮೈಲೇಜ್(Mileage) ನೀಡಬಲ್ಲ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಸೆಲೆರಿಯೋ ಕಾರಿನ ಬೆಲೆ 4.99 ಲಕ್ಷ ರೂಪಾಯಿ ಬೆಲೆ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ಮಾರುತಿ ಸುಜುಕಿ ಕಾರು ಭಾರತದ ಗರಿಷ್ಠ ಮೈಲೇಜ್ ನೀಡಬಲ್ಲ ಕಾರು ಅನ್ನೋ ದಾಖಲೆ ಬರೆದಿದೆ. ARAI ಸರ್ಟಿಫಿಕೇಶನ್ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್‌ಗೆ 26.68 ಕಿ.ಮೀ ಮೈಲೇಜ್ ನೀಡಲಿದೆ. ಇತರ ಎಲ್ಲಾ ಕಾರುಗಳಿಗೆ ಹೋಲಿಸಿದರೆ ಇದು ಗರಿಷ್ಠ ಮೈಲೇಜ್ ಆಗಿದೆ. ಇದಕ್ಕೆ ಕಾರಣ 1.0 ಲೀಟರ್ ಡ್ಯುಯೆಲ್ ಜೆಟ್, ಡ್ಯುಯೆಲ್ VVT K10C ಎಂಜಿನ್. ಇದು ಅತ್ಯಂತ ಕಡಿಮೆ ಇಂಧನದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಗರಿಷ್ಠ ಮೈಲೇಜ್ ನೀಡುತ್ತಿದೆ.
ಮಾರುತಿ ಸುಜುಕಿ ಸೆಲೆರಿಯೋ ಕಾರಿನ ಮುಂಭಾಗ ಲುಕ್ ಸಂಪೂರ್ಣ ಬದಲಾಗಿದೆ. ಹೊಸ ವಿನ್ಯಾಸ ಗ್ರಿಲ್ ಅಳವಡಿಸಲಾಗಿದೆ. ಇದರಲ್ಲಿ ಸಿಂಗ್ ಕ್ರೋಮ್ ಬಳಸಲಾಗಿದೆ. ಹೆಡ್‌ಲ್ಯಾಪ್ಸ್, ಫಾಗ್ ಲ್ಯಾಂಪ್ಸ್ ಹಾಗೂ ಬಂಪರ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. ಫಾಗ್‌ಲ್ಯಾಂಪ್ಸ್ ಮೇಲ್ಬಾಗದಲ್ಲಿ ಬ್ಲಾಕ್ ಕ್ಲಾಡಿಂಗ್ ಬಳಸಲಾಗಿದೆ. ಒಟ್ಟಾರೆ ಮುಂಭಾಗದಲ್ಲಿ ಅಗ್ರೆಸ್ಸೀವ್ ಹಾಗೂ ಸ್ಪೋರ್ಟಿ ಲುಕ್ ನೂತನ ಸೆಲೆರಿಯಾ ಕಾರಿನ ಅಂದ ಹೆಚ್ಚಿಸಿದೆ. ಈ ಕಾರನ್ನು ಸುಜುಕಿ 3D ಆರ್ಗಾನಿಕ್ ಸ್ಕಲ್ಪ್‌ಟೆಡ್ ಡಿಸೈನ್ ಎಂದು ಕರೆದಿದೆ. ಹಿಂಭಾಗದಲ್ಲಿ ಡ್ರಾಪ್‌ಲೈಟ್ ಟೈಲ್ಸ್ ಲೈಟ್ಸ್ ಹೊಂದಿದೆ.
GIIASನಲ್ಲಿ ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಲಾಂಚ್
LXI ಕಾರಿನ ಬೆಲೆ 4.99 ಲಕ್ಷ ರೂಪಾಯಿ. ಇನ್ನು VXI ಮ್ಯಾನ್ಯುಯೆಲ್ ಕಾರಿನ ಬೆಲೆ 5.63 ಲಕ್ಷ ರೂಪಾಯಿ ಆಗಿದ್ದರೆ ಆಟೋ ಗೇರ್ ಶಿಫ್ಟ್ 6.13 ಲಕ್ಷ ರೂಪಾಯಿ, ZXI ಮಾನ್ಯುಯೆಲ್ ಕಾರಿನ ಬೆಲೆ 5.94 ಲಕ್ಷ ರೂಪಾಯಿ ಆಗಿದ್ದರೆ, ಆಟೋಮ್ಯಾಟಿಕ್ ಕಾರಿನ ಬೆಲೆ 6.44 ಲಕ್ಷ ರೂಪಾಯಿ. ಇನ್ನು ZXI+ ಮ್ಯಾನ್ಯುಯೆಲ್ ಕಾರಿನ ಬೆಲೆ 6.44 ಲಕ್ಷ ರೂಪಾಯಿ ಆಗಿದ್ದರೆ, ಆಟೋಮ್ಯಾಟಿಕ್ ಕಾರಿನ ಬೆಲೆ 6.94 ಲಕ್ಷ ರೂಪಾಯಿ. ಈ ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಬೆಲೆಯಾಗಿದೆ.