ಹೊಸ ವರ್ಷವನ್ನು ಎಲ್ಲರೂ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಆಟೋಮೊಬೈಲ್ ಕಂಪನಿಗಳು ಹೊಸ ವರ್ಷದಲ್ಲಿ ಗ್ರಾಹಕರಿಗೆ ಮತ್ತಷ್ಟು ಹೊಸ ಹೊಸ ಕಾರು ಪರಿಚಯಿಸಲು ಸಜ್ಜಾಗಿದೆ. 2023ರ ಮೊದಲ ಭಾಗದಲ್ಲಿ 9 ಹೆಚ್ಚು 7ಸೀಟರ್ ಕಾರು ಬಿಡುಗಡೆಯಾಗುತ್ತಿದೆ. ಕೈಗೆಟುಕುವ ದರದ ಕಾರಿನಿಂದ ಹಿಡಿದು ಐಷಾರಾಮಿ ದುಬಾರಿ ಕಾರು ಒಂದರ ಹಿಂದೊರಂತೆ ಬಿಡುಗಡೆಯಾಗಲಿದೆ.
ಬೆಂಗಳೂರು(ಜ.02): ಹೊಸ ವರ್ಷದಲ್ಲಿ ಆಟೋಮೊಬೈಲ್ ಕ್ಷೇತ್ರ ಹಲವು ಮಹತ್ತರ ಬದಲಾವಣೆಗಳನ್ನು ಕಾಣುತ್ತಿದೆ. ಒಂದೆಡೆ ವಾಹನಗಳ ಬೆಲೆ ಏರಿಕೆಯಾಗುತ್ತಿದ್ದರೆ, ಮತ್ತೊಂಡೆದೆ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಹಕರಿಗೆ ಕೈಗೆಟುಕವ ದರದಲ್ಲಿ ವಾಹನ ನೀಡಲು ಹಲವು ಕಂಪನಿಗಳು ಮುಂದಾಗಿದೆ. ವಿಶೇಷ ಅಂದರೆ ಮತ್ತಷ್ಟು ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಇದೇ ವರ್ಷ ಬಿಡುಗಡೆಯಾಗಲಿದೆ. 2023ರ ಮೊದಲ ಭಾಗದಲ್ಲಿ 7 ಸೀಟರ್ ವಿಭಾಗದಲ್ಲಿ ಬರೋಬ್ಬರಿ 9 ಕಾರುಗಳು ಬಿಡುಗಡೆಯಾಗಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಟೋಯೋಟಾ ಇನೋವಾ ಗರಿಷ್ಠ ಬೇಡಿಕೆಯ 7 ಸೀಟರ್ ಕಾರಾಗಿದೆ. ಗಾತ್ರದಲ್ಲಿ ಇನೋವಾ ಕಾರಿಗಿಂತ ಕಡಿಮೆ ಇರುವ ಮಾರುತಿ ಎರ್ಟಿಗಾ, ಮಾರುತಿ XL6 ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇನ್ನು ಕಿಯಾ ಕರೆನ್ಸ್,, ರೆನಾಲ್ಟ್ ಟ್ರೈಬರ್ ಸೇರಿದಂತೆ ಕೆಲ ಕಾರುಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಇದೀಗ ಈ ಕಾರುಗಳಿಗೆ ಮತ್ತಷ್ಟು ಪೈಪೋಟಿ ಎದುರಾಗಲಿದೆ.
undefined
ಮರ್ಸಿಡೀಸ್ ಮೇಬ್ಯಾಕ್ ಎಸ್ –ಕ್ಲಾಸ್ 680 ಖರೀದಿಸಿದ 33 ವರ್ಷದ ಯುವಕ!
ಹೊಸ ವರ್ಶನ್, ಹೊಸ ಅಪ್‌ಡೇಟ್‌ನೊಂದಿಗೆ ಕಿಯಾ ಕಾರ್ನಿವಲ್ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಜೂನ್ ತಿಂಗಳಲ್ಲಿ ಮರ್ಸಿಡೀಸ್ ಬೆಂಜ್ EQS SUV ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಇನ್ನು ಚೀನಾ ಮೂಲಕ ಹವಲ್ ಮೋಟಾರ್ಸ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಕಾರು ಬಿಡುಗಡೆ ಮಾಡುತ್ತಿದೆ. ಹವಲ್ F7 ಕಾರಿನ ಮೂಲಕ ಭಾರತದ ಮಾರುಕಟ್ಟೆಗೆ ಮಾರ್ಕ್ಯೂ ಮೋಟಾರ್ಸ್(ಹವಲ್) ಕಾಲಿಡುತ್ತಿದೆ. ಹವಲ್ F7 ಕಾರಿನ ಬಿಡುಗಡೆ ದಿನಾಂಕ ಇನ್ನೂ ಬಹಿರಂಗೊಂಡಿಲ್ಲ. ಇದರ ಬೆನ್ನಲ್ಲೇ ಹವಲ್ H9 ಕಾರು ಬಿಡುಗಡೆಯಾಗುತ್ತಿದೆ.
ಜೀಪ್ ಹೊಸ ಅತಾರದಲ್ಲಿ ಬಿಡುಗಡೆಯಾಗುತ್ತಿದೆ. ಜೀಪ್ ಗ್ರ್ಯಾಂಡ್ ಚೀರೋಕಿ L 2023ರ ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. 7 ಸೀಟರ್ ಲಕ್ಸುರಿ ಕಾರು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ಇನ್ನು ಟೋಯೋಟಾ ಲ್ಯಾಂಡ್ ಕ್ರೂಸರ್ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಕ್ರ್ಯೂಸರ್ ಅಂದಾಜು ಬೆಲೆ 1.50 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).
ಸ್ಟಾಕ್ ಕ್ಲೀಯರೆನ್ಸ್ ಆಫರ್, ಭರ್ಜರಿ ರಿಯಾಯಿತಿ ಘೋಷಿಸಿದ ಮಾರುತಿ ಸುಜುಕಿ!
ಹ್ಯುಂಡೈ ಪ್ಯಾಲಿಸೈಡ್ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. 40 ಲಕ್ಷ ರೂಪಾಯಿ ಅಂದಾಜು ಬೆಲೆಯಲ್ಲಿ ಪ್ಯಾಲಿಸೈಡ್ ಬಿಡುಗಡೆಯಾಗುತ್ತಿದೆ. ಮಾರುತಿ ಜೊತೆಗಿನ ಕ್ರಾಸ್ ಬ್ಯಾಡ್ಜಿಂಗ್ ಮುಂದುವರಿಸಿರುವ ಟೋಯೋಟಾ ಮತ್ತೊಂದು ಕಾರು ಬಿಡುಗಡೆ ಮಾಡುತ್ತಿದೆ. ಮಾರುತಿ ಬಲೆನೋ, ಮಾರುತಿ ಬ್ರೆಜಾ ಬಳಿಕ ಇದೀಗ ಎರ್ಟಿಗಾ ಕಾರು ಟೊಯೋಟಾ ಬ್ರ್ಯಾಂಡ್‌ನಲ್ಲಿ ರೊಮಿಯಾನ್ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಅಂದಾಜು ಬೆಲೆ 8.77 ಲಕ್ಷ ರೂಪಾಯಿ ರೂಪಾಯಿ(ಎಕ್ಸ್ ಶೋ ರೂಂ). ವೋಕ್ಸ್‍ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಅಂದಾಜು ಬೆಲೆ 35 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).