ಇಂಡಿಯನ್ ಜುಗಾಡ್ ಪದೇ ಪದೇ ವೈರಲ್ ಆಗುತ್ತಿರುತ್ತದೆ. ಕಡಿಮೆ ವೆಚ್ಚ, ಯಾರೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಪರಿಹಾರ ಭಾರತದಲ್ಲಿ ಬಿಟ್ಟರೆ ಇನ್ನೆಲ್ಲು ಸಿಗುವುದಿಲ್ಲ. ಇದೀಗ ಮಾಲೀಕನ ಐಡಿಯಾಗೆ ಟಾಟಾ ಮೋಟಾರ್ಸ್ ಕಂಪನಿಯೆ ದಂಗಾಗಿದೆ.
ಭಾರತದಲ್ಲಿ ಅತೀ ಕಡಿಮೆ ಖರ್ಚಿನಲ್ಲಿ ಸಮಸ್ಯೆಗೆ ಪರಿಹಾರ ಹುಡುಕಿ ಜಗತ್ತನ್ನೇ ಅಚ್ಚರಿಗೊಳಿಸಿದ ಹಲವು ಘಟನಗಳಿವೆ. ಇದೇ ಕಾರಣಕ್ಕ ಜುಗಾಡ್ ಅನ್ನೋ ಪದ ಭಾರತದಲ್ಲಿ ಸದಾ ಕಾಲ ಚಾಲ್ತಿಯಲ್ಲಿರುತ್ತದೆ. ಯಾರೂ ಊಹೆ ಮಾಡದ ರೀತಿಯಲ್ಲಿ ಯೋಚನೆ ಮಾಡಿ ಸ್ಥಳೀಯ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಈ ಜುಗಾಡ್ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಕಾರಣ ಮಾಲೀಕನೊಬ್ಬ ತನ್ನ ಕಾರಿನ ಮುರಿದ ರೇರ್ ಮೀರರ್ ಸರಿಪಡಿಸಲು ಇದೇ ಜುಗಾಡ್ ಐಡಿಯಾ ಉಪಯೋಗಿಸಿದ್ದಾನೆ. ಟಾಟಾ ನೆಕ್ಸಾನ್ ಇವಿ ಕಾರಿನ ಬಲಭಾಗದ ಮೀರರ್ ಮುರಿದು ಹೋಗಿದೆ. ಹೊಸದು ಹಾಕಿದರೆ ದುಬಾರಿ, ಇದಕ್ಕಾಗಿ 20 ರೂಪಾಯಿ ನೀಡಿ ಕನ್ನಡಿ ಖರೀದಿಸಿ ಮೀರರ್ ಒಳಗೆ ಕಟ್ಟಿದ್ದಾನೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಮಹಾರಾಷ್ಟ್ರ ರಿಜಿಸ್ಟ್ರೇಶನ್ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಈ ಜುಗಾಡ್ ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಟ್ರಾಫಿಕ್ ಸಿಗ್ನಲ್ ವೇಳೆ ಹಿಂಬದಿ ವಾಹನ ಸವಾರರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಜೂಮ್ ಮಾಡಿದಾಗ ಮಾಲೀಕನ ಜುಗಾಡ್ ಐಡಿಯಾ ಬೆಚ್ಚಿ ಬೀಳಿಸಿದೆ. ಕಾರಣ ಈ ಕಾರಿನ ಬೆಲೆ 15 ರಿಂದ 20 ಲಕ್ಷ ರೂಪಾಯಿ. ಆದರೆ ಯಾವುದೋ ಕಾರಣಕ್ಕೆ ಕಾರಿನ ಬಲಭಾಗದ ಮಿರರ್ ತುಂಡಾಗಿದೆ.
undefined
ಭಾರತದಲ್ಲಿ ಮಂಚದ ಗಾಡಿ ಸಂಚಲನ, ಕ್ರಿಯಾತ್ಮಕ ಐಡಿಯಾಗೆ ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್!
ಮುರಿದ ಮಿರರ್ ಸರಿಪಡಿಸಲು ಕನಿಷ್ಠ 5000 ರೂಪಾಯಿ ಬೇಕು. ಇಷ್ಟು ದುಡ್ಡು ನೀಡಿ ಮಿರರ್ ಸರಿಪಡಿಸುವುದು ಹೇಗೆ? ಹಾಗಂತ ಮಿರರ್ ಇಲ್ಲದೆ ನಗರ ಪ್ರದೇಶದಲ್ಲಿ ಡ್ರೈವಿಂಗ್ ಮಾಡುವುದು ಹೇಗೆ? ಇಂತಹ ಸಂದರ್ಭದಲ್ಲಿ ಹೆಚ್ಚಿನ ಖರ್ಚಿಲ್ಲ, ಸಮಸ್ಯೆಗೆ ಪರಿಹಾರ ಹುಡಕುವುದೇ ಜುಗಾಡ್. ಹೀಗೆ ಮಾಲೀಕ ತನ್ನ ಮಿರರ್ ಸರಿಪಡಿಸುವ ಬದಲು 20 ರೂಪಾಯಿಗೆ ಬೀದಿ ಬದಿಯಲ್ಲಿ ಸಿಗುವ ಕನ್ನಡಿ ಖರೀದಿಸಿದ್ದಾನೆ.
ಈತನಿಗೆ ನೆಕ್ಸಾನ್ ನೀಲಿ ಬಣ್ಣದ ಮಿರರ್ ಸಿಗಲಿಲ್ಲ. ಕೊನೆಗೆ ಪಿಂಕ್ ಬಣ್ಣದ ಕನ್ನಡಿಯನ್ನು ಕಾರಿನ ಮಿರರ್‌ಗೆ ಕಟ್ಟಿದ್ದಾನೆ. ಈ ಕನ್ನಡಿ ಕೂಡ ಅದೇ ಕೆಲಸ ಮಾಡಲಿದೆ. ಆದರೆ ಜಡ್ಜ್‌ಮೆಂಟ್ ಕೊಂಚ ವ್ಯತ್ಯಾಸವಾಗಲಿದೆ. ಈ ಕನ್ನಡಿ ಮೂಲಕ ನೋಡಿದರೆ ಹಿಂಬದಿಯ ಎಲ್ಲಾ ಕಾರುಗಳು ಪಕ್ಕದಲ್ಲೇ ಇರುವಂತೆ ಬಾಸವಾಗುತ್ತದೆ. ಆದರೂ ಸಮಸ್ಯೆಗೆ 20 ರೂಪಾಯಿಯಲ್ಲಿ ಪರಿಹಾರ ನೀಡಲಾಗಿದೆ.
10 ರೂಗೆ 150 ಕಿ.ಮೀ ಮೈಲೇಜ್, 6 ಜನರ ಪ್ರಯಾಣಸಿಬಲ್ಲ ಎಲೆಕ್ಟ್ರಿಕ್ ಬೈಕ್‌ಗೆ ಮನಸೋತ ಮಹೀಂದ್ರ!
ಈ ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ಮಾಲೀಕನನ್ನು ನಾನು ಅಭಿನಂದಿಸುತ್ತೇನೆ ಎಂದು ಹಲವರು ಹೇಳಿದ್ದಾರೆ. ಕಾರಣ ಈತ ಕನಿಷ್ಠ ಮಿರರ್ ಅವಶ್ಯಕತೆಯನ್ನು ಮನಗಂಡಿದ್ದಾನೆ. ದುಬಾರಿ ಮಿರರ್ ಬದಲು ಕನ್ನಡಿ ಹಾಕಿದ್ದಾನೆ. ಈ ಮೂಲಕ ಸುರಕ್ಷತೆ ಕಡೆಗೆ ಹೆಚ್ಚಿನ ಗಮನಹರಿಸಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಟಾಟಾ ಮೋಟಾರ್ಸ್ ನೋಡಿದರೆ ಮಿರರ್ ಉತ್ಪಾದನೆ ಮಾಡುವುದೇ ಬಿಟ್ಟುಬಿಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.