ಬೆಂಗಳೂರು(ಸೆ.28): ಭಾರತದಲ್ಲಿ ಹೊಸ ಜಾಗ್ವಾರ್ ಐ-ಪೇಸ್‍ಗಾಗಿ ಬುಕಿಂಗ್ಸ್ ಆರಂಭಗೊಂಡಿದೆ. ಅಧಿಕೃತ ಬುಕಿಂಗ್ ಕುರಿತು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಘೋಷಿಸಿಸಿದೆ. ಜಾಗ್ವಾರ್ ಐ-ಪೇಸ್ ಜಾಗತಿಕ ಪ್ರಸಿದ್ಧಿ ಸಾಧಿಸಿದ್ದು ತನ್ನ ಅದ್ವಿತೀಯ ವಿನ್ಯಾಸಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಈಗ ಸರ್ವ ವಿದ್ಯುತ್ ಕಾರ್ಯಕ್ಷಮತೆಯುಳ್ಳ SUV ಕಾರಾದ ಐ-ಪೇಸ್ ಬ್ಲ್ಯಾಕ್‍ನಿಂದ ಆಕರ್ಷಕ ಲುಕ್ ಡಬಲ್ ಆಗಿದೆ.
470 ಕಿ.ಮೀ ಮೈಲೇಜ್; ಭಾರತದಲ್ಲಿ ಜಾಗ್ವಾರ್ I-PACE ಎಲೆಕ್ಟ್ರಿಕ್ ಕಾರು ಬಿಡುಗಡೆ!
undefined
ಐ-ಪೇಸ್ ಶ್ರೇಣಿಗೆ ಮಾಡಲಾಗಿರುವ ಈ ವಿಶೇಷ ಹೊಸ ಸೇರ್ಪಡೆಯು, ಬ್ಲ್ಯಾಕ್‍ಪ್ಯಾಕ್ ಮತ್ತು ಪೆನೋರಮಿಕ್ ರೂಫ್ ಒಳಗೊಂಡಂತೆ ಅನೇಕ ಹೆಚ್ಚುವರಿ ಅಂಶಗಳನ್ನು ಸಾಮಾನ್ಯವಾಗಿರಿಸಿದ ವರ್ಧಿತ ವಿನಿರ್ದೇಶನಗಳನ್ನು ಸೇರಿಸಿದೆ. ಶುದ್ಧವಾದ, ತತ್ಕಾಲೀನ ನೋಟವು 48.26 ಸೆಂ.ಮೀ.(19) ಡೈಮಂಡ್ ಟರ್ನ್ ಗ್ಲಾಸ್ ಡಾರ್ಕ್ ಗ್ರೇ ಕಾಂಟ್ರಾಸ್ಟ್ ವ್ಹೀಲ್‍ಗಳಿಂದಾಗಿ ಇನ್ನಷ್ಟು ಮನೋಹರವಾಗಿದೆ. ಐ-ಪೇಸ್ ಬ್ಲ್ಯಾಕ್, ಅರೂಬಾ ಮತ್ತು ಫರಲ್ಲಾನ್ ಪರ್ಲ್ ಬ್ಲ್ಯಾಕ್ ಪ್ರೀಮಿಯಮ್ ಮೆಟಾಲಿಕ್ ಪೈಂಟುಗಳು ಒಳಗೊಂಡಂತೆ ಕೌತುಕಮಯವಾದ ವರ್ಣಗಳ ಸಂಪೂರ್ಣ ಶ್ರೇಣಿಯಲ್ಲಿ ಲಭ್ಯವಿದೆ.
ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ, “ಐ-ಪೇಸ್ ಬ್ಲ್ಯಾಕ್, ಈ ಬಹು ಪ್ರಶಸ್ತಿ ವಿಜೇತ ಬ್ಯಾಟರಿ ವಿದ್ಯುತ್ ವಾಹನದ ನೋಟವನ್ನು ವರ್ಧಿಸಿ ಅದನ್ನು ಇನ್ನೂ ಹೆಚ್ಚು ವಿಶಿಷ್ಟವಾಗಿ ಮತ್ತು ಇಷ್ಟಪಡುವಂತೆ ಮಾಡಿದೆ.” ಎಂದರು.
ಭಾರತದಲ್ಲಿ ಹೊಚ್ಚ ಹೊಸ ಜಾಗ್ವಾರ್ F-PACE ಬಿಡುಗಡೆ!
ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಮತ್ತು ಅತ್ಯುತ್ತಮವಾದ ವಿದ್ಯುತ್ ವಾಹನವನ್ನು ಒದಗಿಸುವುದಕ್ಕೆ ಜಾಗ್ವಾರ್ ನಿಯಮಪುಸ್ತಕಗಳಲ್ಲಿ ತಲೆಹುದುಗಿಸಿ ಐ-ಪೇಸ್‍ಅನ್ನು ಸೃಷ್ಟಿಸಿತು. ವಿಶ್ವದೆಲ್ಲೆಡೆ ಇರುವ ಗ್ರಾಹಕರಿಗೆ ಅದು ಆಲ್-ವ್ಹೀಲ್ ಡ್ರೈವ್ ಕಾರ್ಯಕ್ಷಮತೆ, ಸೂಕ್ಷ್ಮತೆ, ಐಶಾರಾಮ, ಮತ್ತು ವೇಗದ ಸರಿಸಾಟಿಯಿಲ್ಲದ ಸಮತೋಲನದ ಜೊತೆಗೆ ಅದ್ವಿತೀಯವಾದ ವಿಶ್ವಶ್ರೇಣಿಯ ಮತ್ತು ದಿನನಿತ್ಯದ ಬಳಕೆಯ ಸಾಧ್ಯತೆಯನ್ನು ಒದಗಿಸುತ್ತದೆ.
ಈ ಕಾರಿನೊಳಗೆ ಬ್ಯಾಕ್ಟೀರಿಯಾ, ವೈರಸ್ ಸುಳಿಯುವುದಿಲ್ಲ, ಪರೀಕ್ಷೆಯಿಂದ ದೃಢ!
ಜಾಗತಿಕವಾಗಿ ಇಂದು ಯಶಸ್ವಿಯಾಗಿರುವ ಮತ್ತು 2019 ವರ್ಷದ ಕಾರು, ವರ್ಷದ ವಿಶ್ವ ಕಾರ್ ವಿನ್ಯಾಸ ಮತ್ತು ವಿಶ್ವದ ಹಸಿರು ಕಾರು ಪ್ರಶಸ್ತಿಗಳ ತ್ರಿವಳಿ ಪ್ರಶಸ್ತಿಗಳನ್ನು ಒಳಗೊಂಡಂತೆ 88 ಜಾಗತಿಕ ಆಟೋಮೋಟಿವ್ ಪ್ರಶಸ್ತಿಗಳನ್ನು ಪಡೆದಿರುವ ಐ-ಪೇಸ್, ನಾಳಿನ ಸರ್ವ-ವಿದ್ಯುತ್ ಜಾಗ್ವಾರ್‍ಗಳ ಪಿತಾಮಹನಾಗಿದೆ. 2025ನಿಂದ ಜಾಗ್ವಾರ್ ಅನ್ನು, ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ವಿನ್ಯಾಸ ಮತ್ತು ಅಗ್ರಮಾನ್ಯ ಮುಂದಿನ ಪೀಳಿಗೆ ತಂತ್ರಜ್ಞಾನಗಳ ಅತ್ಯಂತ ಸುಂದರವಾದ ಪೋರ್ಟ್ ಪೋಲಿಯೋ ಇರುವ ಪರಿಶುದ್ಧವಾದ ವಿದ್ಯುತ್ ಐಶಾರಾಮೀ ಬ್ರ್ಯಾಂಡ್ ಆಗಿ ಮರುಕಲ್ಪಿಸಿಕೊಳ್ಳಲಾಗುತ್ತದೆ.
ಭಾರತದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ರೀಟೇಲರ್ ಕಾರ್ಯಜಾಲ
ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳು, ಅಹಮದಾಬಾದ್, ಔರಂಗಾಬಾದ್, ಬೆಂಗಳೂರು(3), ಭುವನೇಶ್ವರ, ಚಂಡೀಗಢ, ಚೆನ್ನೈ(2), ಕೊಯಮತ್ತೂರು, ದೆಹಲಿ, ಗುರುಗ್ರಾಮ, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಕೊಚ್ಚಿನ್, ಕರ್ನಲ್, ಲಕ್ನೌ, ಲುಧಿಯಾನಾ, ಮಂಗಳೂರು, ಮುಂಬೈ(2), ನೋಯ್ದಾ, ಪ್ಯಣೆ, ರಾಯ್ಪುರ, ಸೂರತ್ ಹಾಗೂ ವಿಜಯವಾಡಗಳಲ್ಲಿರುವ 28 ಅಧಿಕೃತ ಮಳಿಗೆಗಳ ಮೂಲಕ ಭಾರತದಲ್ಲಿ 24 ನಗರಗಳಲ್ಲಿ ಲಭ್ಯವಿದೆ.