ರಸ್ತೆಗಿಳಿದ ಥಾರ್ ಪ್ರತಿಸ್ಪರ್ಧಿ ಹೊಸ ಫೋರ್ಸ್ ಗೂರ್ಖಾ: ಬೆಲೆ ಎಷ್ಟು? ಏನೆಲ್ಲ ವಿಶೇಷತೆಗಳು?

By Suvarna News  |  First Published Sep 29, 2021, 2:45 PM IST

ಬಹುದಿನಗಳ ನಿರೀಕ್ಷೆಯಂತೆ ಫೋರ್ಸ್ ಗೂರ್ಖಾ(Force Gurkha) ಆಫ್‌ರೋಡ್ ಎಸ್‌ಯುವಿ(SUV) ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿದೆ. ಈ ಫೋರ್ಸ್ ಗೂರ್ಖಾ ವಾಹನವು ಮಹೀಂದ್ರಾ ಕಂಪನಿಯ ಥಾರ್‌(Thar)ಗೆ ತೀವ್ರ ಪೈಪೋಟಿ ನೀಡಲಾಗಿದೆ. ಗೂರ್ಖಾ  ಬೆಲೆಯ 13.59  ಲಕ್ಷ ರೂ.ನಿಂದ ಆರಂಭವಾಗುತ್ತಿದೆ. ಕಂಪನಿಯು ಬುಕ್ಕಿಂಗ್ ಆರಂಭಿಸಿದೆ.


ಆಫ್‌ರೋಡ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮಹಿಂದ್ರಾ ಕಂಪನಿಯ ಥಾರ್(Thar) ಜಬರ್ದಸ್ತ್ ಮಾರುಕಟ್ಟೆ ಪಾಲು ಹೊಂದಿದೆ. ಈ ಥಾರ್‌ಗೆ ಸೆಡ್ಡು ಹೊಡೆಯಲು ಫೋರ್ಸ್ ಗೂರ್ಖಾ(Force Gurkha) ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಬಹಳ ದಿನಗಳಿಂದಲೂ ಫೋರ್ಸ್ ಗೂರ್ಖಾ(Force Gurkha) ಬಿಡುಗಡೆಯ ಬಗ್ಗೆ ಸುದ್ದಿಗಳಿದ್ದವು. ದಸರಾ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಅಂತಿಮವಾಗಿ ಹಬ್ಬದ ಸೀಸನ್‌ಗೆ ಕಂಪನಿಯು ಫೋರ್ಸ್ ಗೂರ್ಖಾ (Force Gurkha) ಆಫ್‌ರೋಡ್ ಎಸ್‌ಯುವಿ(SUV)ಯನ್ನು ರಸ್ತೆಗಿಳಿಸಿದೆ. ಈ ಎಸ್‌ಯುವಿ ಬೆಲೆ 13.59 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಈ ಬೆಲೆ ದಿಲ್ಲಿ(Delhi) ಎಕ್ಸ್ ಶೋರೂಮ್ ಬೆಲೆಯಾಗಿದ್ದು, ಬೇರೆ ಬೇರೆ ರಾಜ್ಯಗಲ್ಲಿ ವ್ಯತ್ಯಾಸವಾಗಬಹುದು. ಕಂಪನಿಯು ಈಗಾಗಲೇ ಫ್ರೀ ಬುಕ್ಕಿಂಗ್ ಕೂಡ ಆರಂಭಿಸಿದ್ದು, ಗ್ರಾಹಕರು 25,000 ರೂ. ನೀಡಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು. 

Tap to resize

Latest Videos

undefined

ದಸರಾ ಮುನ್ನ ಟಿವಿಎಸ್‌ನಿಂದ ಮತ್ತೊಂದು ಹೊಸ ಸ್ಕೂಟರ್: ಅದು Jupiter 125 ನಾ?

ಈಗ ಮಾರುಕಟ್ಟೆಗೆ ಲಾಂಚ್ ಮಾಡಲಾಗಿರುವ ಹೊಸ ಫೋರ್ಸ್ ಗೂರ್ಖಾ ಎಸ್‌ವಿ(Force Gurkha SUV)ಯನ್ನು ಕಂಪನಿಯು ಈ ಹಿಂದೆ 2020 ಆಟೋ ಎಕ್ಸ್‌ಪೋ(Auto Expo)ದಲ್ಲಿ ಪ್ರದರ್ಶನ ಮಾಡಿತ್ತು. ಆಗಲೇ ಈ ಬಗ್ಗೆ ಗ್ರಾಹಕರು ಮತ್ತು ವಿಶ್ಲೇಷಕರಲ್ಲಿ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಕಂಪನಿಯು ಎಸ್‌ಯುವಿಯನ್ನು ಲಾಂಚ್ ಮಾಡಿದ್ದರೂ ದಸರಾ ಮುಗಿದು ವಾರದ ಬಳಿಕ ವಾಹನಗಳನ್ನು ಡೆಲಿವರಿ ಮಾಡಲಿದೆ ಎನ್ನಲಾಗುತ್ತಿದೆ. ಗ್ರೌಂಡ್-ಅಪ್ ಮಾಡ್ಯುಲರ್ ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿರುವ 2021 ಫೋರ್ಸ್ ಗೂರ್ಖಾ ಸಂಪೂರ್ಣವಾಗಿ ಹೊಸ ವಾಹನವಾಗಿದ್ದು, ಹಿಂದಿನ ತಲೆಮಾರಿನಿಂದ ಮುಂದುವರಿದ ಜಿ-ವ್ಯಾಗನ್(G-Wagen) ಸ್ಫೂರ್ತಿ ಸಿಲೂಯೆಟ್ ಹೊಂದಿದೆ.

ಈ ಹೊಸ ಆಫ್‌ರೋಡ್ ಎಸ್‌ಯುವಿ ಸಾಕಷ್ಟು ಗಮನಾರ್ಹ ಸಂಗತಿಗಳನ್ನು ಒಳಗೊಂಡಿದೆ. ಫೋರ್ಸ್ ಗೂರ್ಖಾ ಉದ್ದವಾಗಿದ್ದು, ಅಗಲವೂ ಆಗಿದೆ ಮತ್ತು ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಪೇಸ್ ಕೂಡ ಇದೆ. ಲೆಗ್ ರೂಂ(Legroom), ಹೆಡ್ ರೂಂ(Headroom), ಎಲ್ಬೋ ರೂಂ(Elbowroom)  ಸಾಕಷ್ಟು ಚೆನ್ನಾಗಿದೆ. ಜೊತೆಗೆ ನಿಮಗೆ 500 ಲೀ.ವರೆಗೆ ಬೂಟ್ ಸ್ಪೇಸ್ ಕೂಡ ಇದೆ. ಈ ಎಸ್‌ಯುವಿಗೆ ವಿಶಾಲವಾದ ವಿಂಡೋ ಗ್ಲಾಸ್ ಅಳವಡಿಸಲಾಗಿದೆ. ಪರಿಣಾಮ ಚಾಲಕರಿಗೆ ಪರಿಪೂರ್ಣವಾಗಿ ವ್ಯೂ ದೊರೆಯುತ್ತಿದೆ. ಹಾಗಾಗಿ, ಚಾಲನೆಯುವ ವಿಶಿಷ್ಟ ಅನುಭವ ನೀಡಲಿದೆ ಎಂದು ಹೇಳಬಹುದು.

ಕ್ರೆಟಾಗೆ ಪೈಪೋಟಿ ನೀಡಲು ಬಂತು ‘ವೋಕ್ಸ್‌‌ವ್ಯಾಗನ್ ಟೈಗುನ್’

ಈ ಫೋರ್ಸ್ ಗೂರ್ಖಾ ಆಫ್‌ರೋಡ್ ಎಸ್‌ಯುವಿ(Force Gurkha SUV) ನಿಮಗೆ ಐದು ಬಣ್ಣಗಲ್ಲಿ ದೊರೆಯಲಿದೆ. ಅಲಾಯ್ ವ್ಹೀಲ್‌ಗಳೊಂದಿಗೆ ಗೂರ್ಖಾ ಕೆಂಪು(Red), ಹಸಿರು(Green), ಬಿಳಿ(White), ಆರೇಂಜ್(Orange) ಮತ್ತು ಗ್ರೇ(Grey) ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. 

ಹೊಸ ಎಲ್ಇಡಿ(LED) ಹೆಡ್‌ಲ್ಯಾಂಪುಗಳು, ಸಂಯೋಜಿತ ಡಿಆರ್‌ಎಲ್‌ಗಳು(DRLs), ಹೊಸ ಸಿಂಗಲ್ ಸ್ಲಾಟ್ ಗ್ರಿಲ್, ಪರಿಷ್ಕೃತ ಬಂಪರ್, ಒಆರ್‌ವಿಎಂ(ORVM)ಗಳು ಹೊಸ ಫೋರ್ಸ್ ಗೂರ್ಖಾಗೆ ಹೊಸ ಲುಕ್ ನೀಡಿವೆ. ಜೊತೆಗೆ ಮರುವಿನ್ಯಾಸಗೊಂಡ ಎಲ್‌ಇಡಿ ಟೇಲ್ ಲ್ಯಾಂಪ್ಸ್ ಅಂದವನ್ನು ಹೆಚ್ಚಿಸಿವೆ. ಸ್ಪೇರ್ ವ್ಹೀಲ್ ಅನ್ನು ಹಿಂದಿನ ಬಾಗಿಲ ಮೇಲೆ ಫಿಕ್ಸ್ ಮಾಡಲಾಗಿದೆ. 
 

ಹೊಸ ಎಸ್‌ಯುವಿ ಗೂರ್ಖಾದಲ್ಲಿ ನೀವು ಮರ್ಸಿಡೆಸ್-ಬೆಂಜ್‌ನಿಂದ ಪಡೆಯಲಾದ 2.6 ಲೀ. ಎಂಜಿನ್ ನೋಡಬಹುದು. 91 ಬಿಎಚ್‌ಪಿ ಕಾಮನ್ ರೇಲ್, ಡೈರೆಕ್ಟ್ ಇಂಜೆಕ್ಷನ್, ಟರ್ಬೋಚಾರ್ಜ್ಡ್ 260 ಎನ್ಎಂ ಪೀಕ್ ಟಾರ್ಕ್ ಹೊಂದಿರುವ ಡಿಸೇಲ್ ಎಂಜಿನ್ ಇದೆ. 5 ಸ್ಪೀಡ್ ಗೇರ್ ಇದ್ದು ಅವದು ನಾಲ್ಕೂ ವ್ಹೀಲ್‌ಗಳಿಗೆ ಶಕ್ತಿಯನ್ನು ಸಮಾನಾಗಿ ಹಂಚುತ್ತದೆ. ಫೋರ್ಸ್ ಗೂರ್ಖಾದಲ್ಲಿರುವ ಎಂಜಿನ್ ಅತ್ಯಂತ ಶಕ್ತಿಶಾಲಿಯಾಗಿದ್ದು, ಆಫ್‌ರೋಡ್ ಸಾಹಸಗಳಿಗೆ ಹೇಳಿ ಮಾಡಿದ ಹಾಗಿದೆ. 

ಯಮಹಾ ಏರಾಕ್ಸ್ 155: ಬಿಡುಗಡೆಯಾದ ಪವರ್‌ಫುಲ್ ಸ್ಕೂಟರ್!

ಫೋರ್ಸ್ ಗೂರ್ಖಾ(Force Gurkha) ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯ ಥಾರ್‌(Thar)ಗೆ ನೇರವಾಗಿ ಪೈಪೋಟಿ ನೀಡಲಿದೆ. ಹಾಗಾಗಿ, ಆಫ್‌ರೋಡ್ ಎಸ್‌ಯುವಿಗಳಲ್ಲಿ ಬಳಕೆದಾರರಿಗೆ ಮತ್ತೊಂದು ಪವರ್‌ಫುಲ್ ಆಯ್ಕೆಯೊಂದು ಫೋರ್ಸ್ ಗೂರ್ಖಾ ಬಿಡುಗಡೆಯೊಂದಿಗೆ ದೊರೆತಿದೆ.

click me!