ಹಬ್ಬದ ಟೈಂನಲ್ಲೂ ಹೊಸ ಕಾರಿಗಿಂತ ಹಳೆಯ ಕಾರಿಗೆ ಫುಲ್ ಡಿಮ್ಯಾಂಡ್

By Suvarna News  |  First Published Nov 1, 2020, 3:08 PM IST

ದಸರೆ ಮತ್ತು ದೀಪಾವಳಿ ಬಂತೆಂದರೆ ಸಾಕು ಹೊಸ ವಾಹನಗಳ ಖರೀದಿಯ ಭರಾಟೆಯನ್ನು ನಾವು ಎಲ್ಲ ಕಡೆ ಕಾಣುತ್ತೇವೆ. ಈ ಬಾರಿ ಮಾತ್ರ ಹೊಸ ಕಾರುಗಳಿಗಿಂತ ಹಳೆಯ ಕಾರುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂಬುದು ಅಧ್ಯಯನ ವರದಿಯೊಂದು ತಿಳಿಸಿದೆ.


ಸಾಮಾನ್ಯವಾಗಿ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭಲ್ಲಿ ಭಾರತೀಯರ ಹೊಸ ಹೊಸ ವಸ್ತುಗಳು, ವಾಹನಗಳು, ಆಸ್ತಿ ಖರೀದಿಸುತ್ತಾರೆ. ಖರೀದಿಗೆ ಈ ಸಮಯ ಉತ್ತಮ ಎಂದು ಭಾವನೆ. ಹಾಗಾಗಿ, ದಸರಾ ಸಂದರ್ಭದಲ್ಲಿ ಹೊಸ ಕಾರು, ಬೈಕುಗಳ ಖರೀದಿಯೂ ಜೋರಾಗಿಯೇ ಇರುತ್ತದೆ. ಆದರೆ, ಈ ಬಾರಿಯ ಟ್ರೆಂಡ್‌ನಲ್ಲಿ ಕೊಂಚ ಬದಲಾವಣೆಯಾಗಿದ್ದು, ಹೊಸ ಕಾರುಗಳಿಗಿಂತ ಸೆಕೆಂಡ್ ಹ್ಯಾಂಡ್(ಬಳಸಿದ ಕಾರುಗಳು) ಕಾರುಗಳನ್ನು ಕೊಳ್ಳುವಲ್ಲಿಯೇ ಹೆಚ್ಚಿನ ಜನರು ಆಸಕ್ತಿ ತೋರಿಸಿದ್ದಾರಂತೆ!

ಆನ್‌ಲೈನ್ ಮಾರ್ಕೆಟ್‌ಪ್ಲೇಸ್ ಎನಿಸಿಕೊಂಡಿರುವ ಒಎಲ್ಎಕ್ಸ್(OLX) ಕೈಗೊಂಡ ಅಧ್ಯಯನವೊಂದರಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಶೇ.61ರಷ್ಟು ಜನರು ಬಳಸಿದ ಕಾರುಗಳನ್ನು ಖರೀದಿಸುವಲ್ಲಿ ಆಸಕ್ತಿ ತೋರಿಸಿದ್ದು, ಈ ಪೈಕಿ ಶೇ.56ರಷ್ಟು ಜನರು ಹ್ಯಾಚ್‌ಬ್ಯಾಕ್ ಕಾರುಗಳಿಗೆ ತಮ್ಮ ಆದ್ಯತೆ ಎಂದು ಹೇಳಿದ್ದಾರೆ. ಕಾರು ಖರೀದಿದಾರರು ತಮ್ಮ ಬಜೆಟ್‌ನಲ್ಲಿ ಹಿನ್ನಡೆ ಅನುಭವಿಸುತ್ತಿರುವುದರಿಂದ ಪ್ರೀಮಿಯಮ್ ಕಾರುಗಳಿಗಿಂತ ಹ್ಯಾಚ್‌ಬ್ಯಾಕ್ ಕಾರುಗಳತ್ತ ಗಮನ ಹರಿಸುತ್ತಿದ್ದಾರೆಂಬುದು ಒಎಲ್‌ಎಕ್ಸ್ ಆಟೋಸ್ ಅಧ್ಯಯನ ವರದಿಯ ಸಾರಾಂಶವಾಗಿದೆ. 

Tap to resize

Latest Videos

undefined

ಪ್ರತಿ 3 ನಿಮಿಷಕ್ಕೊಂದು ಮಾರುತಿ ಸುಜುಕಿ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಮಾರಾಟ!

2020ರ ಆಗಸ್ಟ್‌ರಿಂದ ಅಕ್ಟೋಬರ್‌ ನಡುವಿನ ಅವಧಿಯಲ್ಲಿ 5800 ಕಾರು ಖರೀದಿದಾರರು ಮತ್ತು ಮಾರಾಟಗಾರರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.  ಈ ಪೈಕಿ ಮುಂದಿನ ಮೂರಿಂದ ಆರು ತಿಂಗಳಲ್ಲಿ ಶೇ.61ರಷ್ಟು ಜನರು ಕಾರು ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ, ಶೇ.15ರಷ್ಟು ಜನರು ತಮ್ಮ ಕಾರುಗಳನ್ನು ಮಾರಾಟ ಮಾಡುವುದಾಗಿ ಹೇಳಿದ್ದಾರೆ ಎಂದು ವರದಿ ಹೇಳುತ್ತಿದೆ. ಕಾರು ಖರೀದಿಯ ಉತ್ಸಾಹ ತೋರುತ್ತಿರುವ ಪೈಕಿ ಶೇ.51ರಷ್ಟು ಜನರು ಸಂಬಳದಾರರು ಇದ್ದರೆ, ಶೇ.40ರಷ್ಟು ಜನರು ಸ್ವಉದ್ಯೋಗ ಇಲ್ಲವೇ ತಮ್ಮದೇ ವ್ಯಾಪಾರ ವಹಿವಾಟನ್ನು ಹೊಂದಿದವರಾಗಿದ್ದಾರೆ. 

ಮುಂದಿನ ಮೂರರಿಂದ ಆರು ತಿಂಗಳಲ್ಲಿ ಕಾರು ಖರೀದಿಸುವ ಆಸಕ್ತಿಯನ್ನು ತೋರಿಸಿರುವವರಪೈಕಿ ಶೇ.62 ಜನರು 25ರಿಂದ 35 ವಯೋಮಾನದವರಾಗಿದ್ದಾರೆ.

ಶೇ.67ರಷ್ಟು ಜನರು ಸಾಂಕ್ರಾಮಿಕದ ಕಾರಣದಿಂದಾಗಿ ಕಾರು ಖರೀದಿಸುವುದಾಗಿ ಹೇಳಿದ್ದಾರೆ. ಅಂದರೆ, ಸಾಂಕ್ರಾಮಿಕ ಹಿನ್ನೆಲೆಯಲ್ಲಿ ತಮ್ಮ ಕುಟುಂಬಸ್ಥರ ಪ್ರಯಾಣದ ಅನುಕೂಲಕ್ಕಾಗಿ ಖರೀದಿಗೆ ಮುಂದಾಗಿದ್ದಾರೆ. ಅಧ್ಯಯನದಲ್ಲಿ ಪಾಲ್ಗೊಂಡವರ ಪೈಕಿ ಶೇ.22ರಷ್ಟು ಜನರು ನಿತ್ಯದ ಬಳಕೆಗೆ ಬಳಸಿದ ಕಾರುಗಳ ಖರೀದಿಗೆ ಹೆಚ್ಚು ಮನಸ್ಸು ಮಾಡಿದ್ದಾರೆ.

ಮುಂದಿನ ವರ್ಷ ಭಾರತಕ್ಕೆ ಎಂಟ್ರಿ ಕೊಡುತ್ತೆ ಸೆಲ್ಫ್‌ ಡ್ರೈವ್ ಟೆಸ್ಲಾ ಕಾರ್

ಅಧ್ಯಯನ ವರದಿಯ ಪ್ರಕಾರ, ಶೇ.44ರಷ್ಟು ಜನರು ದೊಡ್ಡ ಕಾರನ್ನು ಕೊಳ್ಳುವುದಾಗಿ ಹೇಳಿದ್ದಾರೆ. ಶೇ.17ರಷ್ಟು ಜನರು ಸೆಡಾನ್ ಕಾರುಗಳ ಬಗ್ಗೆ ಒಲವು ತೋರಿಸಿದ್ದಾರೆ. ಎಕ್ಸೆಂಟ್, ಡಿಜೈರ್, ಇಟಿಯೊಸ್, ಸಿಟಿ, ವೆರ್ನಾ, ಕೊರೊಲ್ಲಾ ಸೆಡಾನ್ ಕಾರುಗಳ ಬಗ್ಗೆ ಹೆಚ್ಚು ಆಸಕ್ತಿ ಇದೆ ಖರೀದಿದಾರರಿಗೆ. ಇಕೋಸ್ಪೋರ್ಟ್, ಕೆಯುವಿ, ಇನ್ನೋವಾ, ಡಸ್ಟರ್, ಕ್ರೆಟ್ಟಾ ಮತ್ತಿತರ ಎಸ್‌ಯುವಿ ಖರೀದಿಸುವ ಆಸಕ್ತಿಯನ್ನು ಶೇ.11ರಷ್ಟು ಜನರು ತೋರಿಸಿದ್ದಾರೆ.

ಸರ್ವೇಯಲ್ಲಿ ಪಾಲ್ಗೊಂಡ ಒಟ್ಟು ಜನರ ಪೈಕಿ ಶೇ.63ರಷ್ಟು ಕಾರು ಖರೀದಾದರರ ಬಜೆಟ್ ಸಾಮರ್ಥ್ಯ ಕೇವಲ 3 ಲಕ್ಷ ರೂಪಾಯಿವರೆಗೆ ಮಾತ್ರ. ಇದೇ ವೇಳೆ, ಶೇ.30ರಷ್ಟು ಜನರು ಮಾತ್ರ ತಮ್ಮ ಅಗತ್ಯಗಳಿಗೆ ತಕ್ಕ ಕಾರು ಖರೀದಿಸಲು 3 ಲಕ್ಷ ರೂಪಾಯಿಗಿಂತಲೂ ಹೆಚ್ಚು ವ್ಯಯಿಸಲು ಸಿದ್ಧರಾಗಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

Suzuki Celerio: ಸೂಪರ್ ಲೇಔಟ್ ಇರೋ ಕಾರು ಮಾರುಕಟ್ಟೆಗೆ ಯಾವಾಗ..? ಇಲ್ಲಿದೆ ಡೀಟೆಲ್ಸ್

ಕೋವಿಡ್ ಸೋಂಕು, ಲಾಕ್‌ಡಾನ್ ಹೇರಿಕೆ ಪರಿಣಾಮ ವ್ಯಾಪಾರ, ವಹಿವಾಟು ಕುಸಿತವಾಗಿತ್ತು. ಆರ್ಥಿಕ ಚಟುವಟಿಕೆಗಳು ಮಂದವಾಗಿದ್ದವು. ಹಲವರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದು, ಉಳಿದವರ ಸಂಬಳದಲ್ಲೂ ಕಡಿತವಾಗುತ್ತಿದೆ. ಹಾಗಾಗಿ, ಬಹಳಷ್ಟು ಜನರು ಹೊಸ ವಾಹನ ಖರೀದಿಗಿಂತ ಬಳಸಿದ ಕಾರುಗಳತ್ತ ಹೆಚ್ಚು ಲಕ್ಷ್ಯ ವಹಿಸುತ್ತಿರಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಇದೀಗ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದ್ದು, ಹೊಸ ವಾಹನಗಳ ಖರೀದಿಗೂ ಬೇಡಿಕೆ ಉಂಟಾಗಬಹುದು.

click me!