Hyundai Venue ಭಾರತದ ಮೊದಲ ಸ್ಪೋರ್ಟೀವ್ ಕಾಂಪಾಕ್ಟ್ SUV ಹ್ಯುಂಡೈ ವೆನ್ಯೂ L ಲೈನ್ ಬಿಡುಗಡೆ!

Published : Sep 09, 2022, 05:43 PM ISTUpdated : Sep 09, 2022, 05:44 PM IST
Hyundai Venue ಭಾರತದ ಮೊದಲ ಸ್ಪೋರ್ಟೀವ್ ಕಾಂಪಾಕ್ಟ್ SUV ಹ್ಯುಂಡೈ ವೆನ್ಯೂ L ಲೈನ್ ಬಿಡುಗಡೆ!

ಸಾರಾಂಶ

ಹ್ಯುಂಡೈ ವೆನ್ಯೂ ಎನ್ ಲೈನ್ ಭಾರತೀಯ ಮಾರುಕಟ್ಟೆಗೆ ಈ ವರ್ಗದ ಪ್ರಥಮವಾಗಿ ಪರಿಚಯಿಸಲಾಗಿದ್ದು ಗ್ರಾಹಕರಿಗೆ ಶೋಧಿಸದ ಕ್ರೀಡಾ ಮತ್ತು ವಿನೋದಮಯ ಚಾಲನೆಯ ಅನುಭವ ನೀಡುತ್ತದೆ. ನೂತನ ಕಾರಿನ ಬೆಲೆ ಹಾಗೂ ಇತರ ವಿಶೇಷತೆ ಇಲ್ಲಿದೆ. 

ಬೆಂಗಳೂರು(ಸೆ.09): ಭಾರತದ SUV ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಆಟೋಮೊಬೈಲ್ ಕಂಪನಿಗಳು ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಭಾರಿ ಬೇಡಿಕೆ ಪಡೆದುಕೊಂಡಿರುವ ಹ್ಯುಂಡೈ ವೆನ್ಯೂ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಹ್ಯುಂಡೈ ವೆನ್ಯೂ ಎನ್ ಲೈನ್ ಕಾರು ಬಿಡುಗಡೆ ಮಾಡಲಾಗಿದೆ. ಸ್ಪೋರ್ಟೀವ್ ಡ್ರೈವಿಂಗ್ ಅನುಭವ ನೀಡಲಿರುವ ನೂತನ ವೆನ್ಯೂ ಎನ್ ಲೈನ್ ಕಾರು ಅಸಾಧಾರಣ ಕಾರ್ಯಕ್ಷಮತೆ, ಕ್ರೀಡಾ ಸ್ಟೀರಿಂಗ್ ಮತ್ತು ಸಸ್ಪೆನ್ಷನ್ ಟ್ಯೂನಿಂಗ್, ಎಕ್ಸಾಸ್ಟ್ ಸೌಂಡ್ ಟ್ಯೂನಿಂಗ್ ಮತ್ತು ಎಲ್ಲ 4 ಡಿಸ್ಕ್ ಬ್ರೇಕ್‍ಗಳನ್ನು ಹೊಂದಿದೆ. ಹ್ಯುಂಡೈ ವೆನ್ಯೂ ಎನ್ ಲೈನ್ ಭಾರತದಲ್ಲಿ ಏಕೈಕ ಸ್ಪೋರ್ಟಿ ಕಾಂಪ್ಯಾಕ್ಟ್ ಎಸ್‍ಯುವಿ ಆಗಿ ತನ್ನದೇ ಆದ ಸ್ಥಾನ ರೂಪಿಸಿಕೊಂಡಿದೆ.  ನೂತನ ಕಾರಿನ ಬೆಲೆ 12,16,000 ರೂಪಾಯಿ(ಎಕ್ಸ್ ಶೋರೂಂ) ಬೆಲೆಯಿಂದ ಆರಂಭಗೊಳ್ಳುತ್ತಿದೆ. ಹ್ಯುಂಡೈ ವೆನ್ಯೂ ಎನ್ ಲೈನ್ ಗ್ರಾಹಕರಿಗೆ ಉತ್ಸಾಹ ಹೆಚ್ಚಿಸಲಿದೆ ಮತ್ತು ಕಾಂಪ್ಯಾಕ್ಟ್ ಎಸ್‍ಯುವಿ ಚಾಲನೆ ಮಾಡಲು ಬಯಸುವ ಗ್ರಾಹಕರಿಗೆ ಸಾಹಸದ ಅನುಭವ ಪಡೆದುಕೊಳ್ಳಲು ನೆರವಾಗುತ್ತದೆ.
 
ಗ್ರಾಹಕರ ಅನುಭವಗಳನ್ನು ಮೊಬಿಲಿಟಿ ಆಚೆಗೂ ಎತ್ತರಿಸುವ ನಮ್ಮ ಪ್ರಯತ್ನಗಳು ಮತ್ತು ಭಾರತದಲ್ಲಿ ಮೊಬಿಲಿಟಿಯನ್ನು ಪರಿವರ್ತಿಸುವ ನಮ್ಮ ಬದ್ಧತೆ ಸದೃಢವಾಗಿದೆ. ಹ್ಯುಂಡೈ ವೆನ್ಯೂ ಎನ್ ಲೈನ್(Hyundai Venue N Line) ಭಾರತದಲ್ಲಿ ಗ್ರಾಹಕರಿಗೆ ಮೊಬಿಲಿಟಿ ಅನುಭವಗಳನ್ನು ಮರು ವ್ಯಾಖ್ಯಾನಿಸುವ ಉದ್ದೇಶದ ಭಾಗವಾಗಿ ಪರಿಚಯಿಸಲಾಗಿದೆ ಮತ್ತು ಈ ಹೊಸ ಬಿಡುಗಡೆಯಿಂದ ನಾವು ಈಗ 2 ಎನ್ ಲೈನ್ ಮಾದರಿಗಳು ಕೇವಲ 2 ವರ್ಷಗಳ ಅಲ್ಪ ಅವಧಿಯಲ್ಲಿ ನೀಡಲು ಸಾಧ್ಯವಾಗಿದೆ, ಹ್ಯುಂಡೈ ವೆನ್ಯೂ ಎನ್ ಲೈನ್ ಭಾರತೀಯ ಗ್ರಾಹಕರಿಗೆ ನಮ್ಮ ಮೊದಲ ಕಾಂಪ್ಯಾಕ್ಟ್ ಎಸ್‍ಯುವಿ (SUV)ಎನ್ ಲೈನ್ ಮಾಡೆಲ್ ಆಗಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ(Hyundai Motor Ltd) ಲಿಮಿಟೆಡ್‍ನ ಎಂ.ಡಿ.  ಉನ್ಸೂ ಕಿಮ್ ಹೇಳಿದ್ದಾರೆ. 

ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಸೇಫ್ಟಿ, ಹೊಚ್ಚ ಹೊಸ ಹ್ಯುಂಡೈ ಟಕ್ಸನ್ ಅನಾವರಣ!

ಬಳಕೆದಾರರಿಗೆ(Customers) ಮೆಟಾವರ್ಸ್‍ನಲ್ಲಿ ಅಭೂತಪೂರ್ವ ಅನುಭವ ನೀಡಲು ಇಂಡಿಯಾ(India Zone) ಜೋನ್, ಟೆಸ್ಟ್ ಡ್ರೈವ್ ಟ್ರ್ಯಾಕ್, ವೆನ್ಯೂ ಎನ್ ಲೈನ್ ಜೋನ್ ಶೋರೂಂ, ಸರ್ವೀಸ್ ಸೆಂಟರ್, ಮಿನಿ ಗೇಮ್, ಫೋಟೋ ಬೂತ್, ಟ್ರೆಷರ್ ಹಂಟ್ ಮತ್ತು ಎನ್ ಲೈನ್ ಮರ್ಕೆಂಡೈಸ್ ಒಳಗೊಂಡು ಹಲವು ಆವಿಷ್ಕಾರಕ ಆಕ್ಟಿವಿಟಿ ಜೋನ್‌ಗಳಿವೆ. ಇವುಗಳಲ್ಲಿ ಪ್ರತಿಯೊಂದೂ ತಲ್ಲೀನಗೊಳಿಸುವ ಚಟುವಟಿಕೆಗಳನ್ನು ಒಳಗೊಂಡಿದ್ದು ಬಳಕೆದಾರರಿಗೆ ಅನನ್ಯ ಮತ್ತು ವಿನೂತನ ಬಗೆಯ ಅನುಭವ ನೀಡುತ್ತದೆ. ಬಳಕೆದಾರರಿಗೆ ಹ್ಯುಂಡೈ ವೆನ್ಯೂ ಎನ್ ಲೈನ್ ಅನ್ನು ಓವಲ್ ರೋಡ್ ಟ್ರ್ಯಾಕ್‍ನಲ್ಲಿ ಟೆಸ್ಟ್ ಡ್ರೈವ್ ಮಾಡುವ, ಕಾರ್(Car) ಅನ್ನು ಅವರ ಇಷ್ಟಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡುವ ಮತ್ತು ಕಾರು ಕೊಳ್ಳುವ ಮತ್ತು ಮಾರಾಟ ಮಾಡುವ ಅವಕಾಶವೂ ಇರುತ್ತದೆ. ಹೆಚ್ಚುವರಿಯಾಗಿ ಮೆಟಾವರ್ಸ್ ಫಾರ್ ಹ್ಯುಂಡೈ ವೆನ್ಯೂ ಎನ್ ಲೈನ್ ಎಕ್ಸ್‍ಪೀರಿಯೆನ್ಸ್‍ನಲ್ಲಿ ಹಲವು ತಾಣಗಳಿದ್ದು ಅವುಗಳಲ್ಲಿ ಬಳಕೆದಾರರು ಸಕ್ರಿಯವಾಗಬಹುದು.

ಬಳಕೆದಾರರು ಹ್ಯುಂಡೈ ಮೊಬಿಲಿಟಿ ಅಡ್ವೆಂಚರ್ ಅನ್ನು ರೊಬ್ಲಾಕ್ಸ್‍ನಿಂದ ತಲುಪಬಹುದು ಅಲ್ಲಿಂದ ಅವರು ಈವೆಂಟ್ ಸ್ಕ್ವಯರ್‍ನಲ್ಲಿ ಬಿಡಲಾಗುತ್ತದೆ. ಅವರಿಗೆ ಈವೆಂಟ್ ಟ್ಯಾಬ್ ಲಭ್ಯತೆ ಇರುತ್ತದೆ ಮತ್ತು ಅದರ ಭಾಗವಾಗಬಹುದು. ಹ್ಯುಂಡೈ ವೆನ್ಯೂ ಎನ್ ಲೈನ್ ಮರಾಠಿ. ಗುಜರಾತಿ, ಬಂಗಾಳಿ, ಪಂಜಾಬಿ, ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು, ಒರಿಯಾ 10 ಪ್ರಾದೇಶಿಕ ಭಾಷೆಗಳನ್ನು ಒಳಗೊಂಡು 12 ಭಾಷೆಗಳ ಆದ್ಯತೆಗಳನ್ನು ಹೊಂದಿದೆ.

 

ಭಾರತದಲ್ಲಿ 13.51 ಲಕ್ಷ ರೂ. ಮೌಲ್ಯದ ಹೊಸ ಕ್ರೇಟಾ ನೈಟ್ ಎಡಿಷನ್ ಬಿಡುಗಡೆ

• ಹ್ಯುಂಡೈ ವೆನ್ಯೂ ಎನ್ ಲೈನ್ ಅನ್ನು ಎನ್6 ಮತ್ತು ಎನ್8 ಟ್ರಿಮ್‍ಗಳಲ್ಲಿ ಪರಿಚಯಿಸಲಾಗಿದ್ದು 1.01 ಟರ್ಬೊ ಜಿಡಿಐ ಪೆಟ್ರೋಲ್ ಎಂಜಿನ್ 7ಡಿಸಿಟಿಯೊಂದಿಗೆ ಹೊಂದಿದೆ
• ಹ್ಯುಂಡೈ ವೆನ್ಯೂ ಎನ್ ಲೈನ್ 30 ವಿಶಿಷ್ಟ ಮತ್ತು ವಿಶೇಷ ಫೇಸೆಟ್‍ಗಳನ್ನು ಹೊಂದಿದ್ದು ರೋಮಾಂಚಕಾರಿ ಮೊಬಿಲಿಟಿ ಅನುಭವ ನೀಡುತ್ತದೆ
• ಹ್ಯುಂಡೈ ವೆನ್ಯೂ ಎನ್ ಲೈನ್ ಗ್ರಾಹಕರಿಗೆ 7 ವರ್ಷಗಳ ವಿಸ್ತರಿಸಿದ ವಾರೆಂಟಿ ಆಯ್ಕೆಯೊಂದಿಗೆ ಸಂಪೂರ್ಣ ಮನಶ್ಯಾಂತಿ ನೀಡುತ್ತದೆ, 3 ವರ್ಷ ಉಚಿತ ರೋಡ್-ಸೈಡ್ ಅಸಿಸ್ಟೆನ್ಸ್, 3 ವರ್ಷ ಬ್ಲೂ-ಲಿಂಕ್ ಸಬ್‍ಸ್ಕ್ರಿಪ್ಷನ್ ಮತ್ತು 5 ವರ್ಷಗಳು ಹ್ಯುಂಡೈ ಶೀಲ್ಡ್ ಆಫ್ ಟ್ರಸ್ಟ್, ಕೇರ್ ಮತ್ತು ಮೇಂಟೆನೆನ್ಸ್ ಪ್ಯಾಕೇಜ್‍ಗಳನ್ನು ನೀಡುತ್ತದೆ
• ಕ್ರೀಡಾ ಮತ್ತು ಉತ್ಸಾಹಕರ ಎಸ್‍ಯುವಿಯನ್ನು ಈಗ ರೂ.12,16,000(ಎಕ್ಸ್-ಶೋರೂಂ ಒನ್ ಇಂಡಿಯಾ ಒನ್ ಪ್ರೈಸ್) ಪ್ರಾರಂಭಿಸಿ ಪಡೆಯಬಹುದು
 

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ