Affordable Electric car ಟಾಟಾಗೆ ಪೈಪೋಟಿ, ಕೈಗೆಟುಕುವ ದರದಲ್ಲಿ ಬರುತ್ತಿದೆ ಹ್ಯುಂಡೈ, MG ಎಲೆಕ್ಟ್ರಿಕ್ ಕಾರು!

Suvarna News   | Asianet News
Published : Dec 11, 2021, 07:47 PM IST
Affordable Electric car ಟಾಟಾಗೆ ಪೈಪೋಟಿ, ಕೈಗೆಟುಕುವ ದರದಲ್ಲಿ ಬರುತ್ತಿದೆ ಹ್ಯುಂಡೈ, MG ಎಲೆಕ್ಟ್ರಿಕ್ ಕಾರು!

ಸಾರಾಂಶ

- ಶೀಘ್ರದಲ್ಲೇ ಕೈಗೆಟಕುವ ದರದ ಇವಿ ಕಾರುಗಳ ಬಿಡುಗಡೆಗೆ  ಹ್ಯುಂಡೈ ಹಾಗೂ ಎಂ.ಜಿ.ಮೋಟಾರ್ಸ್ ಸಜ್ಜು - ಭಾರತೀಯ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾಮೋಟಾರ್ಸ್ಗೆ ಸ್ಪರ್ಧೆ ನೀಡಲು - ಮುಂದಿನ ವರ್ಷದಲ್ಲಿ ಇವಿ ಕಾರುಗಳ ವಲಯದಲ್ಲಿ ಹೊಸ ಕ್ರಾಂತಿಯ ನಿರೀಕ್ಷೆ

ನವದೆಹಲಿ(ಡಿ.11): ಭಾರತೀಯ ಎಲೆಕ್ಟ್ರಿಕ್ ಕಾರುಗಳ ವಲಯದಲ್ಲಿ ಈಗ ಟಾಟಾ ಮೋಟಾರ್ಸ್‌ನದ್ದೇ (Tata Motors)  ಸಿಂಹಪಾಲು. ಆದರೆ, ಇದಕ್ಕೆ ಪೈಪೋಟಿ ನೀಡಲು ಹ್ಯುಂಡೈ (Hyundai) ಹಾಗೂ ಎಂಜಿ ಮೋಟಾರ್ಸ್ (MG motars) ಮುಂದಾಗಿವೆ. ಶೀಘ್ರದಲ್ಲೇ ಈ ಕಾರು ತಯಾರಕ ಕಂಪನಿಗಳು ಬ್ಯಾಟರಿ-ಚಾಲಿತ ಕಾರಿನ ಮಾದರಿಗಳನ್ನು ವಿಸ್ತರಿಸಲಿವೆ. ಕಳೆದ ವಾರವಷ್ಟೇ ದೇಶದಲ್ಲಿ ಎರಡು ಪ್ರಮುಖ ಕಾರು ಉತ್ಪಾದಕರು  ಭಾರತದಲ್ಲಿ ತಮ್ಮ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯನ್ನು ಘೋಷಿಸಿದೆ. ಹ್ಯುಂಡೈ ಈಗಾಗಲೇ ಕೋನಾ ಇವಿ (Kona  EV) ಬಿಡುಗಡೆಗೊಳಿಸಿದ್ದರೆ, ಎಂಜಿ ಮೋಟಾರ್ನ ಝೆಡ್ಎಸ್ (ZS) ಇವಿ ಈಗಾಗಲೇ ರಸ್ತೆಗಿಳಿದಿವೆ. ಇದೀಗ ಹ್ಯುಂಡೈ ಹಾಗೂ ಎಂಜಿ ಮೋಟಾರ್ಸ್ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. 

ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಏಕೆಂದರೆ, ಹ್ಯೂಂಡೈ ಹಾಗೂ ಎಂಜಿ ಮೋಟಾರ್ನ ಎಲೆಕ್ಟ್ರಿಕ್ ಕಾರುಗಳ ದರ 20 ಲಕ್ಷ ರೂ.ಗಳ ಮೇಲಿನದ್ದಾಗಿವೆ. ಆದರೆ, ಟಾಟಾ ನೆಕ್ಸಾನ್ ಇವಿ ಹಾಗೂ ಟಿಗೋರ್ ಇವಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಿವೆ. ನೆಕ್ಸಾನ್ (Nexon) 13 ಲಕ್ಷ ರೂ. ಹಾಗೂ ಟಿಗೋರ್ (Tigor) 12 ಲಕ್ಷ ರೂ. ಶೋರೂಂ ದರದಲ್ಲಿ ಲಭ್ಯವಿವೆ. 
ವಿದ್ಯುತ್  ಚಾಲಿತ ವಾಹನಗಳ ದರಗಳು ಅತಿ ಹೆಚ್ಚಿರುವುದು ಕೂಡ ಗ್ರಾಹಕರು ಅದರತ್ತ ಶೀಘ್ರ ಆಕರ್ಷಿತರಾಗದಿರಲು ಒಂದು ಕಾರಣ ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿದೆ.ಆದರೆ, ಟಾಟಾ ಕಾರುಗಳು ಲಭ್ಯವಿರುವ ದರದಲ್ಲಿ ಇತರ ಕಂಪನಿಗಳ ಕಾರುಗಳು ಲಭ್ಯವಿಲ್ಲ. ಆದ್ದರಿಂದ ಮಾರುಕಟ್ಟೆಯ ಬಹುಪಾಲು ಪಾತ್ರ ಟಾಟಾ ಮೋಟಾರ್ಸ್‌ನದ್ದಾಗಿದೆ.

2024ರಲ್ಲಿ ಭಾರತದಲ್ಲಿ ಓಡಲಿದೆ ಒಪ್ಪೋ ಎಲೆಕ್ಟ್ರಿಕ್ ಕಾರ್?!

ಅದರೆ, ಈಗ ಇತರ ವಾಹನ ತಯಾರಕರು ಟಾಟಾ ಮೋಟಾರ್ಗೆ ಸ್ಪರ್ಧೆ ನೀಡಲು ಮುಂದಾಗಿವೆ. ಎಂಜಿ ಮೋಟಾರ್ಸ್, ಇತ್ತೀಚೆಗಷ್ಟೇ 10ರಿಂದ 15 ಲಕ್ಷ ರೂ. ನಡುವಿನ ಮೌಲ್ಯದ  ಬ್ಯಾಟರಿ-ಚಾಲಿತ ಕಾರು ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದೆ. ಎಂ.ಜಿ ಮೋಟರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ, ಸಂದರ್ಶನವೊಂದರಲ್ಲಿ “ವೈಯಕ್ತಿಕ ಸಂಚಾರ ವಾಹನಗಳಲ್ಲಿ ದೊಡ್ಡ ಸಮುದಾಯಗಳನ್ನು ಗುರಿಯಾಗಿರಿಸಿಕೊಂಡು ಇವಿಯನ್ನು ತಯಾರಿಸಲಾಗುತ್ತಿದೆ. ಜನರಿಗೆ ಕೈಗೆಟಕುವ ದರದಲ್ಲಿ (10-15 ಲಕ್ಷ ರೂ.) ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಸಾಧ್ಯವಾಗಿರುವುದು ಒಂದು ಸಂತಸದ ವಿಷಯ ”ಎಂದಿದ್ದಾರೆ.

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

ಎಂ.ಜಿ.ಮೋಟರ್ನ ಎರಡನೇ ಎಲೆಕ್ಟ್ರಿಕ್ ಕಾರು ಕ್ರಾಸ್ಓವರ್ (Cross over) ಆಗಿರಲಿದ್ದು, ಜಾಗತಿಕ ವೇದಿಕೆಗಳಲ್ಲಿ ಬಿಡುಗಡೆಯಾಗಲಿದೆ. ಈ ಕಾರುಗಳನ್ನು ಪ್ರಸ್ತುತ ಮಾರುಕಟ್ಟೆಗಾಗಿ ತಯಾರಿಸಲಾಗುತ್ತಿದ್ದು, ಮುಂದಿನ ಹಣಕಾಸು ವರ್ಷಗಳಲ್ಲಿ ಬಿಡುಗಡೆಯಾಗಲಿದೆ.  ಆದರೆ, ಭಾರತೀಯ ಮಾರುಕಟ್ಟೆಯ ಅಗ್ಗದ ಕಾರುಗಳ ವಲಯದಲ್ಲಿ ಜನಪ್ರಿಯವಾಗಿರುವ ಹ್ಯುಂಡೈ ಕೂಡ 2028ರ ವೇಳೆಗೆ ಭಾರತದಲ್ಲಿ ಆರು ಎಲೆಕ್ಟ್ರಿಕ್ ಕಾರುಗಳನ್ನು ತರಲು ಮುಂದಾಗಿದೆ. ಮಾರುತಿ ಸುಜುಕಿ ನಂತರ, ಹ್ಯುಂಡೈ ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ.  ಆದರೆ, ಕೊರಿಯನ್ ಮೂಲದ ಈ ಕಂಪನಿ, ಈ ಕಾರುಗಳ ಕುರಿತು ಯಾವುದೇ ದೃಢೀಕರಣ ನೀಡಿಲ್ಲವಾದರೂ, ಇದರ ಐಯಾನಿಕ್ 5 ಉತ್ತಮ ಸ್ಪರ್ಧೆ ನೀಡುವ ನಿರೀಕ್ಷೆಯಿದೆ.

ಕೇಂದ್ರದಿಂದ ತಾರಮತ್ಯ ಬೇಡ; ಟೆಸ್ಲಾ ಆಮದು ಸುಂಕ ಕಡಿತ ಮನವಿಗೆ ಟಾಟಾ ಮೋಟಾರ್ಸ್ ತಿರುಗೇಟು!

ಐಯಾನಿಕ್ (Ioniq 5) 5 ಇವಿ ಅಮೆರಿಕದ ಇಪಿಎ ಏಜೆನ್ಸಿಯ ಪರೀಕ್ಷೆ ಎದುರಿಸಿದೆ. ಈ ಕಾರು ಒಂದು ಸಂಪೂರ್ಣ ಚಾರ್ಜ್ಗೆ 480 ಕಿಮೀ ಮೈಲೇಜ್ ನೀಡಲಿದೆ ಎನ್ನಲಾಗುತ್ತಿದೆ. ಇದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ವೋಕ್ಸ್ವ್ಯಾಗನ್ ಐಡಿ.ಎ ಪ್ರೋ, ಆಡಿ ಆರ್ಎಸ್ ಇ-ಟ್ರಾನ್, ಫೋರ್ಡ್ ಮಸ್ತಾಂಗ್ ಮ್ಯಾಕ್ ಇ ಮತ್ತಿತರರ ಕಾರುಗಳಿಂತ ಅತಿ ಹೆಚ್ಚು ಮೈಲೇಜ್ ನೀಡುವ ಕಾರಾಗಲಿದೆ. ಐಯಾನಿಕ್ 5 ಇವಿ ಈಗಾಗಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಅನಾವರಣಗೊಂಡಿದ್ದು, ವರ್ಷಾಂತ್ಯದಲ್ಲಿ ದಕ್ಷಿಣ ಕೊರಿಯಾ ಸೇರಿ ಕೆಲ ದೇಶಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಗುರುಗ್ರಾಮದಲ್ಲಿ ನಡೆದ ಆಟೊ ಎಕ್ಸ್ಪೋದಲ್ಲಿ ಈ ಕಾರನ್ನು ಅನಾವರಣಗೊಳಿಸಲಾಗಿತ್ತು.
 

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್