ನವದೆಹಲಿ(ಡಿ.03): ಭಾರತದಲ್ಲಿ ಟಾಟಾ ಮೋಟಾರ್ಸ್(Tata Motors) ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ನವೆಂಬರ್ ತಿಂಗಳ ಮಾರಾಟದಲ್ಲೂ ಟಾಟಾ ಗಣನೀಯ ಏರಿಕೆ ಕಂಡಿದೆ. ಇದೀಗ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಭರ್ಜರಿ ಆಫರ್(Offers) ಘೋಷಿಸಿದೆ. ಇದು ಡಿಸೆಂಬರ್ ತಿಂಗಳ ಆಫರ್. ಈ ತಿಂಗಳಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್(Discounts Offers) ಘೋಷಿಸಿದೆ. ಟಾಟಾ ಹ್ಯಾರಿಯರ್, ಸಫಾರಿ, ಟಿಯಾಗೋ, ಟಿಗೋರ್, ನೆಕ್ಸಾನ್, ನೆಕ್ಸಾನ್ ಇವಿ ಸೇರಿದಂತೆ ಕೆಲ ಆಯ್ದ ಕಾರುಗಳ(Selected cars) ಮೇಲೆ ರಿಯಾಯಿತಿ ನೀಡಲಾಗಿದೆ
ಟಾಟಾ ಹ್ಯಾರಿ ಹಾಗೂ ಸಫಾರಿ ಕಾರಿನ ಮೇಲೆ ಗರಿಷ್ಠ 40,000 ರೂಪಾಯಿ ವರೆಗೆ ಡಿಸ್ಕೌಂಟ್ ನೀಡಲಾಗಿದೆ. ಟಾಟಾ ಪಂಚ್ ಹಾಗೂ ಅಲ್ಟ್ರೋಜ್ ಕಾರುಗಳನ್ನು ಹೊರತು ಪಡಿಸಿ ಉಳಿದ ಕಾರುಗಳ ಮೇಲೆ ಟಾಟಾ ರಿಯಾಯಿತಿ ಆಫರ್ ನೀಡಿದೆ. ಟಾಟಾ ಟಿಯಾಗೋ ಹಾಗೂ ಟಿಗೋರ್ ಕಾರಿಗೆ ಮಾತ್ರ ಕ್ಯಾಶ್ ಡಿಸ್ಕೌಂಟ್ ಆಫರ್ ನೀಡಿದೆ. ಇನ್ನುಳಿದ ಕಾರುಗಳಿಗೆ ಎಕ್ಸ್‌ಚೇಂಜ್, ಬೋನಸ್ ಸೇರಿದಂತೆ ಇತರ ಆಫರ್ ಘೋಷಿಸಿದೆ. ಈ ಆಫರ್ 2021 ಡಿಸೆಂಬರ್(December) ತಿಂಗಳಿಗೆ ಮಾತ್ರ ಅನ್ವಯವಾಗಲಿದೆ.
undefined
Auto Sales Report: ಹಿಂದೆ ಬಿದ್ದ ಮಾರುತಿ, ಹುಂಡೈ, ಮುಂದೆ ಹೋದ ಟಾಟಾ
ಟಾಟಾ ಟಿಯಾಗೋ ಕಾರಿನ ಮೇಲೆ 10,000 ರೂಪಾಯಿ ನಗದು ರಿಯಾಯಿತಿ, ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ ನೀಡಲಾಗಿದೆ. ಟಿಯಾಗೋ ಕಾರಿನ ಎಕ್ಸ್ ಶೋ ರೂಂ ಬೆಲೆ 4.99 ಲಕ್ಷ ರೂಪಾಯಿಂದ to 7.07ಲಕ್ಷ ರೂಪಾಯಿ. ಇನ್ನು ಟಿಗೋರ್ ಕಾರಿನ ಮೇಲೆ 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15, 000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ. ಟಿಗೋರ್ ಕಾರಿನ ಎಕ್ಸ್ ಶೋ ರೂಂ ಬೆಲೆ 5.67 ಲಕ್ಷ ರೂಪಾಯಿಯಿಂದ 7.84 ಲಕ್ಷ ರೂಪಾಯಿ.
ಟಾಟಾ ನೆಕ್ಸಾನ್ ಡೀಸೆಲ್ ಕಾರಿನ ಮೇಲೆ 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ. ಆದರೆ ಈ ಆಫರ್ ನೆಕ್ಸಾನ್ ಡಾರ್ಕ್ ಎಡಿಶನ್ ಕಾರಿಗೆ ಅನ್ವಯವಾಗುವುದಿಲ್ಲ. ನೆಕ್ಸಾನ್ ಕಾರಿನ ಎಕ್ಸ್ ಶೋ ರೂಂ ಬೆಲೆ 9.59 ರಿಂದ 13.16 ಲಕ್ಷ ರೂಪಾಯಿ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಮೇಲೆ 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ. ನೆಕ್ಸಾನ್ ಇವಿ ಎಕ್ಸ್ ಶೋ ರೂಂ ಬೆಲೆ 14.24 ದಿಂದ 16.65 ಲಕ್ಷ ರೂಪಾಯಿ.
ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!
ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಮೇಲೆ ಗರಿಷ್ಠ ಡಿಸ್ಕೌಂಟ್ ನೀಡಲಾಗಿದೆ. ಟಾಟಾ ಹ್ಯಾರಿಯರ್ ಮೇಲೆ 40,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ. ಆದರೆ ಡಾರ್ಕ್ ಎಡಿಶನ್ ಹ್ಯಾರಿಯರ್ ಮೇಲಿನ ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿಗೆ ಇಳಿಸಲಾಗಿದೆ. ಹ್ಯಾರಿಯರ್ ಕಾರಿನ ಎಕ್ಸ್ ಶೋ ರೂಂ ಬೆಲೆ 14.39 ರಿಂದ 21.19 ಲಕ್ಷ ರೂಪಾಯಿ. ಟಾಟಾ ಸಫಾರಿ ಕಾರಿನ ಮೇಲೆ 40,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗಿದೆ. ಆದರೆ ಸಫಾರಿ ಗೋಲ್ಡ್ ಎಡಿಶನ್ ಕಾರಿಗೆ ಅನ್ವಯವಾಗುವುದಿಲ್ಲ. ಸಫಾರಿ ಕಾರಿನ ಎಕ್ಸ್ ಶೋ ರೂಂ ಬೆಲೆ 14.99 ರಿಂದ 22.15 ಲಕ್ಷ ರೂಪಾಯಿ.
ಸೂಚನೆ: ಕಾರಿನ ಆಫರ್ ಕುರಿತು ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಬಳಿ ಸಂಪರ್ಕಿಸಿ. ಕೆಲ ಶೋ ರೂಂಗಳಲ್ಲಿ ಮಾತ್ರ ವಿಶೇಷ ಆಫರ್ ಲಭ್ಯವಿದೆ. ಡಿಸ್ಕೌಂಟ್ ಸೇರಿಂತೆ ಇತರ ಆಫರ್‌ಗಳು ರಾಜ್ಯ, ನಗರಗಳಲ್ಲಿ ವ್ಯತ್ಯಾಸವಾಗಲಿದೆ
ನವೆಂಬರ್ ತಿಂಗಳಲ್ಲಿ ಟಾಟಾ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿದೆ. ಎಲೆಕ್ಟ್ರಾನಿಕ್ ಕಾರುಗಳ ಬೇಡಿಕೆಯೂ ಹೆಚ್ಚಾಗಿದೆ. ನವೆಂಬರ್ ತಿಂಗಳಲ್ಲಿ 1,751 ಟಾಟಾ ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 413 ಟಾಟಾ ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿತ್ತು. ಹ್ಯಾರಿಯರ್, ನೆಕ್ಸಾನ್, ಅಲ್ಟ್ರೋಜ್ ಸೇರಿದಂತೆ ಟಾಟಾ ಇಂಧನ ಕಾರುಗಳ ಮಾರಾಟವೂ ಹೆಚ್ಚಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 21,641 ಟಾಟಾ ಕಾರುಗಳು ಮಾರಾಟವಾಗಿತ್ತು. ಇದೀಗ ನವೆಂಬರ್ ತಿಂಗಳಲ್ಲಿ 29,778 ಕಾರುಗಳು ಮಾರಾಟವಾಗಿದೆ.