ನವೆಂಬರ್ ತಿಂಗಳಲ್ಲಿ ಯಾವ ಕಂಪನಿಯ ಎಷ್ಟು ವಾಹನಗಳು ಮಾರಾಟವಾಗಿವೆ ಎಂಬ ಮಾಹಿತಿಯನ್ನು ಒಳಗೊಂಡ ರಿಪೋರ್ಟ್ ಹೊರಬಿದ್ದಿದೆ. ಅದರ ಪ್ರಕಾರ, ಟಾಟಾ ಮೋಟಾರ್ಸ್ (TATA Motors) ಅದ್ಭುತ ಬೆಳವಣಿಗೆಯನ್ನು ದಾಖಲಿಸಿದ್ದು, ಹ್ಯುಂಡೈ ಹಿಂದಿಕ್ಕುವ ಪ್ರಯತ್ನದಲ್ಲಿದೆ. ಇನ್ನು ಮಾರುತಿ ಸುಜುಕಿ ಕೂಡ ನವೆಂಬರ್ ತಿಂಗಳಲ್ಲಿ ಋಣಾತ್ಮಾಕ ಮಾರಾಟ ದರವನ್ನು ದಾಖಲಿಸಿದೆ. ಮಹೇಂದ್ರ (Mahindra), ನಿಸ್ಸಾನ್ (Nissan) ಗಮನಾರ್ಹ ಮಾರಾಟವನ್ನು ಕಂಡಿವೆ.
ಚಿಪ್ ಕೊರತೆಯನ್ನು ಎದುರಿಸುತ್ತಿರುವ ಭಾರತೀಯ ವಾಹನ ಉದ್ಯಮದ 2021ರ ನವೆಂಬರ್ ತಿಂಗಳ ವರದಿ ಹೊರ ಬಿದ್ದಿದೆ. ಭಾರತೀಯ ಕಾರು ತಯಾರಕರ ಪೈಕಿ ದೇಶೀ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ (Tata Motors), ದಕ್ಷಿಣ ಕೊರಿಯಾದ ವಾಹನ ತಯಾರಕ ಹ್ಯುಂಡೈ(Hyundai)ಗೆ ಹೇಗೆ ಪ್ರಮುಖ ಸವಾಲನ್ನು ಒಡ್ಡುತ್ತಿದೆ ಎಂಬುದು ಈ ವರದಿಯಿಂದ ಬಹಿರಂಗಗೊಂಡಿದೆ. ಮಾರಾಟದ ಅಂಕಿಅಂಶಗಳ ಪ್ರಕಾರ, ಟಾಟಾ ಮೋಟಾರ್ಸ್ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿದ್ದರಿಂದ ಹ್ಯುಂಡೈ ಮಾರಾಟವು ಪಾಲು ತೀವ್ರ ಕುಸಿತಕ್ಕೊಳಗಾಗಿದೆ. 2021ರ ನವೆಂಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ಶೇ.38 ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು ನವೆಂಬರ್‌ನಲ್ಲಿ 28,027 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷ ಇದೇ ತಿಂಗಳಿನಲ್ಲಿ 21,228 ವಾಹನ ಮಾರಾಟ ಮಾಡಿತ್ತು. ಹೀಗಾಗಿ, ಟಾಟಾ ಮೋಟಾರ್ಸ್‌ನ ಮಾರಾಟವು ವಾರ್ಷಿಕ ಶೇ 32 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಟಾಟಾ ಕಂಪನಿಯ EV ವಾಹನಗಳ ಮಾರಾಟವು ಶೇ.324 ರಷ್ಟು ಏರಿಕೆಯಾಗಿದ್ದು, ಕಳೆದ ತಿಂಗಳು 1,751 EV ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ ಕೇವಲ 413 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಷ್ಟೇ ಶಕ್ಯವಾಗಿತ್ತು.
ಟಾಟಾ ಮೋಟಾರ್ಸ್‌ನ ದೇಶೀಯ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.21 ರಷ್ಟು ಏರಿಕೆಯಾಗಿದೆ, ಇದು ಪ್ರಯಾಣಿಕ ವಾಹನ ವಿಭಾಗದಲ್ಲಿ ಮಾತ್ರವಲ್ಲದೆ ವಾಣಿಜ್ಯ (Commercial) ಮತ್ತು ಪ್ರಯಾಣಿಕ (Passanger) ವಾಹನಗಳಲ್ಲಿಯೂ ಹೆಚ್ಚಳವಾಗಿರುವುದನ್ನು ಗಮನಿಸಬೇಕು. ಟಾಟಾದ ವಾಣಿಜ್ಯ ವಿಭಾಗವು ವರ್ಷಕ್ಕೆ 15 ಪ್ರತಿಶತದಷ್ಟು ಬೆಳೆಯುತ್ತಿದೆ. ಕಂಪನಿಯು ನವೆಂಬರ್‌ನಲ್ಲಿ 32,254 ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 27,982 ಯುನಿಟ್‌ಗಳಿಗೆ ಏರಿಕೆಯಾಗಿದೆ.
undefined
Winter care tips: ಚಳಿಗಾಲದಲ್ಲಿ ಕಾರ್, ಬೈಕ್ ಬಗ್ಗೆ ಕೇರ್ ತೆಗೆದುಕೊಳ್ಳುವುದು ಹೇಗೆ?
ಏತನ್ಮಧ್ಯೆ, ಹ್ಯುಂಡೈ ಮೋಟಾರ್ (Hyundai Motor), ವರ್ಷದಿಂದ ವರ್ಷಕ್ಕೆ 24.18 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಂಪನಿಯು ನವೆಂಬರ್ 2021 ರಲ್ಲಿ 37,001 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 48,800 ವಾಹನಗಳನ್ನು ಮಾರಾಟ ಮಾಡಿತ್ತು. ಆದರೆ, ಹ್ಯುಂಡೈ ಅಕ್ಟೋಬರ್‌ನಲ್ಲಿ 37,021 ವಾಹನಗಳನ್ನು ಮಾತ್ರ ಮಾರಾಟ ಮಾಡಿದೆ.
ಇದೇ ವೇಳೆ, ಹುಂಡೈ ರಫ್ತು ಕೂಡ ಕುಸಿದಿದೆ. ಹುಂಡೈ ರಫ್ತು ಶೇ.4.72ರಷ್ಟು ಋಣಾತ್ಮಕ ಬೆಳವಣಿಗೆ ಕಂಡಿದೆ. ಕಂಪನಿಯು ನವೆಂಬರ್ 2021 ರಲ್ಲಿ 9,909 ವಾಹನಗಳನ್ನು ರಫ್ತು ಮಾಡಿದ್ದರೆ, 2020 ರಲ್ಲಿ ಅದೇ ತಿಂಗಳಲ್ಲಿ 10,400 ವಾಹನಗಳನ್ನು ಹೊರದೇಶಗಳಿಗೆ ರಫ್ತು ಮಾಡಿತ್ತು. ಅಂದರೆ ಈ ವರ್ಷದ ನವೆಂಬರ್‌ನಲ್ಲಿ ರಫ್ತು ಸಾಕಷ್ಟು ಕುಸಿದಿದೆ. ಸೆಮಿಕಂಡಕ್ಟರ್ ಚಿಪ್‌ಗಳ ಜಾಗತಿಕ ಕೊರತೆಯು ನವೆಂಬರ್‌ನಲ್ಲಿ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಹುಂಡೈ ಹೇಳಿಕೊಂಡಿದೆ.
ಕುತೂಹಲಕಾರಿಯಾಗಿ, ಹುಂಡೈ ಮತ್ತು ಟಾಟಾ ಮೋಟಾರ್ಸ್ ನಡುವಿನ ಮಾರಾಟದ ಅಂತರವು ಕೇವಲ 8,000 ಯುನಿಟ್‌ಗಳಿಗಿಂತ ಕಡಿಮೆಯಾಗಿದೆ. ಟಾಟಾ ಮೋಟಾರ್ಸ್ ಪಂಚ್ (PUNCH), ಹ್ಯಾರಿಯರ್ (Harrier), ಸಫಾರಿ (Safari), ಅಲ್ಟ್ರೋಸ್ (Altros), ನೆಕ್ಸನ್ (Nexon) ಮತ್ತು ಟಿಯಾಗೋ (Tiago) ಸೇರಿದಂತೆ ತನ್ನ ಹೊಸ ಶ್ರೇಣಿಯ ಕಾರುಗಳು ಯಶಸ್ವಿಯಾಗಿರುವುದನ್ನು ಘೋಷಿಸಿದೆ. ತಿಂಗಳಿಗೆ 5000ಕ್ಕೂ ಹೆಚ್ಚು ಟಾಟಾ ಕಂಪನಿಯ ಕಾರುಗಳು ಮಾರಾಟವಾಗಿವೆ. ಟಾಟಾ ಕಂಪನಿಯ ಕಾರುಗಳ ಪೈಕಿ ಟಾಟಾ ನೆಕ್ಸಾನ್ ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ.
Maruti Swift Micro SUV:ಟಾಟಾ ಪಂಚ್ ಪ್ರತಿಸ್ಪರ್ಧಿಯಾಗಿ ಸುಜುಕಿ ಸ್ವಿಫ್ಟ್ ಕ್ರಾಸ್!?
ಏತನ್ಮಧ್ಯೆ, ಹ್ಯುಂಡೈ ಹೊರತುಪಡಿಸಿ ಹೆಚ್ಚಿನ ವಾಹನ ತಯಾರಕರು ಸೆಮಿಕಂಡಕ್ಟರ್ ಚಿಪ್‌ಗಳ ಜಾಗತಿಕ ಕೊರತೆಯಿಂದಾಗಿ ಋಣಾತ್ಮಕ ಮಾರಾಟವನ್ನು ದಾಖಲಿಸಿವೆ. ಭಾರತದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ (Maruti Suzuki India) ಕೂಡ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ. ಆದಾಗ್ಯೂ, ಟಾಟಾ ಮೋಟಾರ್ಸ್ ಜೊತೆಗೆ ನಿಸ್ಸಾನ್ (Nissan) ಮತ್ತು ಮಹೀಂದ್ರಾ (Mahindra) ಕಳೆದ ತಿಂಗಳು ಉತ್ತಮ ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ.