Hyundai Bayon: ಅದ್ಭುತ ನೋಟ - ಹೈಟೆಕ್ ವೈಶಿಷ್ಟ್ಯ ! ಹುಂಡೈನ ಹೊಸ ಎಸ್‌ಯುವಿ ಬುಕ್ಕಿಂಗ್ ಶುರು

Published : Oct 13, 2026, 12:00 PM IST
Hyundai Bayon

ಸಾರಾಂಶ

ಕಾರ್‌ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಹಬ್ಬದ ಸೀಸನ್‌ ನಲ್ಲಿ ಕಾರ್ ಖರೀದಿ ಮಾಡುವ ಪ್ಲಾನ್‌ ನಲ್ಲಿದ್ರೆ ಎಸ್‌ ಯುವಿ ಹೊಸ ಕಾರನ್ನು ಪರಿಚಯಿಸ್ತಿದೆ. ಯಾವ್ದು ಕಾರು, ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ.

ಬ್ಬದ ಸೀಸನ್ನಲ್ಲಿ ಹೊಸ ಕಾರು ಖರೀದಿಸಲು ಪ್ಲ್ಯಾನ್ ಮಾಡ್ತಿದ್ರೆ ನಿಮ್ಮಗೊಂದು ಖುಷಿ ಸುದ್ದಿ ಇದೆ. Hyundai ಕಂಪನಿಯ ಹೊಸ SUV Bayon ಬುಕ್ಕಿಂಗ್‌ ಶುರುವಾಗಿದೆ. ಆಕರ್ಷಕ ಡಿಸೈನ್, ಪ್ರೀಮಿಯಂ ಇಂಟೀರಿಯರ್, 12.3 ಇಂಚಿನ ಎರಡು ಸ್ಕ್ರೀನ್ಗಳು ಮತ್ತು ಜನರೇಟಿವ್ ಎಐ ವಾಯ್ಸ್ ಅಸಿಸ್ಟೆಂಟ್ನಂತಹ ಹೈಟೆಕ್ ಫೀಚರ್ಗಳೊಂದಿಗೆ ಈ ಕಾರು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ.

ಹ್ಯುಂಡೈ ಬೇಯಾನ್

ಹ್ಯುಂಡೈ ಬೇಯಾನ್ ಅನ್ನು ವೆನ್ಯು ಮತ್ತು ಕ್ರೆಟಾ ನಡುವಿನ ಸ್ಥಾನದಲ್ಲಿ ಪರಿಚಯಿಸಲಾಗುತ್ತಿದೆ. ಮಾರುತಿ ವಿಕ್ಟೋರಿಸ್ ಸೇರಿದಂತೆ ಇತರ SUVಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಕಂಪನಿಯ ಮಾಹಿತಿ ಪ್ರಕಾರ, ಈ ಕಾರಿನ ಬುಕ್ಕಿಂಗ್ ಆರಂಭವಾಗಿದ್ದು, ಅಧಿಕೃತ ವೆಬ್ಸೈಟ್ ಅಥವಾ ಡೀಲರ್ಶಿಪ್ ಮೂಲಕ 11 ಸಾವಿರ ಪಾವತಿಸಿ ಬುಕ್ ಮಾಡಬಹುದು. ಅಕ್ಟೋಬರ್ 26ರಂದು ಮಾರಾಟಕ್ಕೆ ಕಾರ್ ಬಿಡುಗಡೆ ಮಾಡೋದಾಗಿ ಕಂಪನಿ ತಿಳಿಸಿದೆ.

ಹ್ಯುಂಡೈ ಬೇಯಾನ್ ಡಿಸೈನ್ ಹೇಗಿದೆ?

ಹ್ಯುಂಡೈ ಬೇಯಾನ್, ಕ್ರೆಟಾಗಿಂತ ಚಿಕ್ಕದಾಗಿದ್ದು ವೆನ್ಯುಗಿಂತ ದೊಡ್ಡದಾಗಿರುವ SUV ಆಗಿರಲಿದೆ. ಇದರ ಡಿಸೈನ್ನಲ್ಲಿ ಕಂಪನಿಯ ಹೊಸ 'Art of Steel' ಥೀಮ್ ಬಳಸಲಾಗಿದೆ. ನೋಡಲು ಹ್ಯುಂಡೈ ಟಕ್ಸನ್ ಕಾರಿನ ಡಿಸೈನ್ನ ಕೆಲವು ಅಂಶಗಳನ್ನು ಹೋಲುತ್ತದೆ. ಮುಂಭಾಗದಲ್ಲಿ ಸ್ಪ್ಲಿಟ್ ಹೆಡ್ಲ್ಯಾಂಪ್ ಸೆಟಪ್ ನೀಡಲಾಗಿದೆ. ಬಾನೆಟ್ನ ಮುಂಭಾಗದಲ್ಲಿ ತೆಳುವಾದ ಕಪ್ಪು ಪಟ್ಟಿಯೊಂದಿಗೆ ಎಲ್‌ ಇಡಿ ಡಿಆರ್‌ ಎಲ್ ಲೈಟ್ಗಳಿವೆ. ಬಂಪರ್ನಲ್ಲಿ ಕಪ್ಪು ಮತ್ತು ಸಿಲ್ವರ್ ಬಣ್ಣದ ಕ್ಲ್ಯಾಡಿಂಗ್ ನೀಡಲಾಗಿದ್ದು, ಕಾರಿಗೆ ಸ್ಟೈಲಿಶ್ ಲುಕ್ ಸಿಗುತ್ತದೆ.

ಸೈಡ್ನಿಂದ ನೋಡಿದಾಗ ಹೊರಚಾಚಿದ ವೀಲ್ ಆರ್ಚ್ಗಳು, ಶಾರ್ಪ್ ಬಾಡಿ ಲೈನ್ಗಳು ಮತ್ತು ಪೆಟಲ್ ವಿನ್ಯಾಸದ ಅಲಾಯ್ ವೀಲ್ಗಳು ಗಮನ ಸೆಳೆಯುತ್ತವೆ. ಕಿಟಕಿಗಳ ಸುತ್ತಲೂ ಪಿಯಾನೋ ಬ್ಲ್ಯಾಕ್ ಫಿನಿಶ್ ನೀಡಲಾಗಿದೆ. ಹಿಂಭಾಗದಲ್ಲಿ ಹೊಸ ಟೈಲ್ಲ್ಯಾಂಪ್ಗಳು, ರೂಫ್ ಸ್ಪಾಯ್ಲರ್ ಮತ್ತು ಕಪ್ಪು-ಸಿಲ್ವರ್ ಫಿನಿಶ್ನ ರಿಯರ್ ಬಂಪರ್ ಸಿಗುತ್ತದೆ. ಟೈಲ್ಗೇಟ್ನ ಮಧ್ಯಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಬೇಯಾನ್ ಎಂದು ಬರೆಯಲಾಗಿದೆ.

ಹೈಟೆಕ್ ಇಂಟೀರಿಯರ್ ಮತ್ತು ಡ್ಯುಯಲ್ ಸ್ಕ್ರೀನ್

ಹ್ಯುಂಡೈ ಬೇಯಾನ್ ಒಳಭಾಗದಲ್ಲಿ ಪ್ರೀಮಿಯಂ ಅನುಭವ ನೀಡುವಂತಹ ವಿನ್ಯಾಸ ಹೊಂದಿದೆ. ಇದರ ಪ್ರಮುಖ ಆಕರ್ಷಣೆ 12.3 ಇಂಚಿನ ಎರಡು ಸ್ಕ್ರೀನ್ಗಳಿವೆ. ಒಂದು ಸ್ಕ್ರೀನ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಮತ್ತೊಂದು ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ಗಾಗಿ ನೀಡಲಾಗಿದೆ. AC ಮತ್ತು ಕ್ಲೈಮೇಟ್ ಕಂಟ್ರೋಲ್ಗಾಗಿ ಪ್ರತ್ಯೇಕ ಬಟನ್ಗಳು ಹಾಗೂ ಡಿಸ್ಪ್ಲೇಗಳಿವೆ. ಸ್ಟೀರಿಂಗ್ ವೀಲ್ನಲ್ಲಿಯೂ ಹಲವು ಕಂಟ್ರೋಲ್ಗಳನ್ನು ನೀಡಲಾಗಿದೆ. ಡ್ರೈವಿಂಗ್ ಮೋಡ್ ಆಯ್ಕೆ ಮಾಡಲು ಪ್ರತ್ಯೇಕ ಕಂಟ್ರೋಲ್ ಸಿಗುತ್ತದೆ.

Generative AI ವಾಯ್ಸ್ ಅಸಿಸ್ಟೆಂಟ್

ಹ್ಯುಂಡೈ ಬೇಯಾನ್ ನ ಮತ್ತೊಂದು ಪ್ರಮುಖ ಫೀಚರ್ Generative AI ಆಧಾರಿತ ವಾಯ್ಸ್ ಅಸಿಸ್ಟೆಂಟ್. ಕಂಪನಿಯ ಹೇಳಿಕೆಯ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಾರಿನಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. ಈ ಸಿಸ್ಟಮ್ ಮೂಲಕ ಚಾಲಕರು ಕಾರಿನೊಂದಿಗೆ ಸಾಮಾನ್ಯವಾಗಿ ಮಾತನಾಡುವ ರೀತಿಯಲ್ಲಿ ಸಂವಹನ ನಡೆಸಬಹುದು. ಪ್ರತಿ ಬಾರಿಯೂ ನಿರ್ದಿಷ್ಟ ಕಮಾಂಡ್ಗಳನ್ನು ಹೇಳುವ ಅಗತ್ಯವಿಲ್ಲ. ಸಹಜವಾದ ಮಾತಿನ ಶೈಲಿಯಲ್ಲಿ ಕೇಳುವ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಉತ್ತರ ನೀಡುವ ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿರಲಿದೆ ಎಂದು ಕಂಪನಿ ತಿಳಿಸಿದೆ. ಇದರ ಜೊತೆಗೆ Bluelink ಕನೆಕ್ಟೆಡ್ ಕಾರ್ ಟೆಕ್ನಾಲಜಿಯೂ ಸಿಗಲಿದೆ. ಇದರಲ್ಲಿ 70ಕ್ಕೂ ಹೆಚ್ಚು ಫೀಚರ್ಗಳು ಇರಲಿವೆ ಎಂದು ಕಂಪನಿ ಹೇಳಿದೆ.

OTA ಸಾಫ್ಟ್ವೇರ್ ಅಪ್ಡೇಟ್ಗಳು, ಇನ್ಬಿಲ್ಟ್ ನ್ಯಾವಿಗೇಷನ್, ಸ್ಪ್ಲಿಟ್ ಸ್ಕ್ರೀನ್ ಮತ್ತು ಸ್ಮಾರ್ಟ್ಫೋನ್ನಂತಹ ಕ್ವಿಕ್ ಕಂಟ್ರೋಲ್ಗಳು ಪ್ರಮುಖ ಫೀಚರ್ಗಳಾಗಿವೆ. 10 ಭಾರತೀಯ ಪ್ರಾದೇಶಿಕ ಭಾಷೆಗಳು ಸೇರಿದಂತೆ ಒಟ್ಟು 12 ಭಾಷೆಗಳಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ.

ಎಂಜಿನ್ ಮತ್ತು ಮೈಲೇಜ್ ಎಷ್ಟಿರಬಹುದು?

ಹ್ಯುಂಡೈ ಬೇಯಾನ್ ನಲ್ಲಿ 1.5 ಲೀಟರ್, ನಾಲ್ಕು ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಆದರೆ ಕಾರಿನ ಅಧಿಕೃತ ಮೈಲೇಜ್ ವಿವರಗಳನ್ನು ಇಲ್ಲಿ ನೀಡಲಾಗಿಲ್ಲ. ಸದ್ಯಕ್ಕೆ CNG ಆವೃತ್ತಿಯನ್ನು ಪರಿಚಯಿಸುವ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ.

ಹ್ಯುಂಡೈ ಬೇಯಾನ್ ಬೆಲೆ ಎಷ್ಟು?

ಹ್ಯುಂಡೈ ಬೇಯಾನ್ ನ ಅಧಿಕೃತ ಬೆಲೆ ಬಿಡುಗಡೆಯ ಸಮಯದಲ್ಲಿ ಪ್ರಕಟವಾಗಲಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಈ SUVಯ ಆರಂಭಿಕ ಬೆಲೆ 8.5 ಲಕ್ಷದ ಆಸುಪಾಸಿನಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಇದು ಅಧಿಕೃತ ಬೆಲೆಯಲ್ಲ.

PREV
Read more Articles on
click me!

Recommended Stories

ಮಾರುತಿ ಬಲೆನೋಗಿಂತ ಭಾರಿ ಭಿನ್ನ, ಟೋಯೋಟಾ ಗ್ಲಾಂಜಾ ಫೇಸ್‌ಲಿಫ್ಟ್ ಕಾರಿನಲ್ಲಿದೆ ಹಲವು ಅಚ್ಚರಿ
1100 ಕಿ.ಮೀ ಮೈಲೇಜ್, ಭಾರತದ JSW ನಿಂದ ಜೆಟೂರ್ ಪ್ಲಗ್ ಇನ್ ಹೈಬ್ರಿಡ್ ಕಾರು ಡಿ.3ಕ್ಕೆ ಅನಾವರಣ