
ನವದೆಹಲಿ (ಅ.12) ಭಾರತದಲ್ಲಿ ಟೋಯೋಟಾ ಹಾಗೂ ಮಾರುತಿ ಸುಜುಕಿ ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಈಗಾಗಲೇ ಹಲವು ಕಾರುಗಳನ್ನು ಬಿಡುಗಡೆ ಮಾಡಿದೆ. ಟೋಯೋಟಾ ಇನ್ನೋವಾ ಕಾರು ಮಾರುತಿ ಇನ್‌ವಿಕ್ಟೋ ರೂಪದಲ್ಲಿ, ಮಾರುತಿ ಸಜುಕಿ ಎರ್ಟಿಗಾ ಕಾರು ಟೋಯೋಟಾ ರುಮಿಯೋ ಕಾರಾಗಿ ಬಿಡುಗಡೆಯಾಗಿದೆ. ಈ ಪೈಕಿ ಮಾರುತಿ ಬಲೆನೋ ಕಾರು ಟೋಯೋಟಾ ಗ್ಲಾಂಜಾ ರೂಪದಲ್ಲಿ ಭಾರಿ ಯಶಸ್ಸು ಕಂಡಿದೆ. ಇತ್ತೀಚಗೆ ಮಾರುತಿ ಬೆಲನೋ ಫೇಸ್‌ಲಿಫ್ಟ್ ಬಿಡುಗಡೆಯಾಗಿದೆ. ಇದೀಗ ಟೋಯೋಟಾ ಗ್ಲಾಂಜಾ ಫೇಸ್‌ಲಿಫ್ಟ್ ಬಿಡುಗಡೆಯಾಗುತ್ತಿದೆ. ಈದರೆ ಈ ಬಾರಿ ಗ್ಲಾಂಜಾ ಭಾರಿ ಬದಲಾವಣೆಯೊಂದಿಗೆ ಬಿಡುಗಡೆಯಾಗುತ್ತಿದೆ.
ವಿನ್ಯಾಸದಲ್ಲಿ ಗ್ಲಾಂಜಾ ಭಾರಿ ಬದಲಾವಣೆ ಮಾಡಲಾಗಿದೆ. ಗ್ರಿಲ್, ವಿನ್ಯಾಸ, ಹೆಡ್‌ಲ್ಯಾಂಪ್ಸ್, ಟೇಲ್ ಲೈಟ್ಸ್ ಸೇರಿದಂತೆ ಹಲವು ಬದಲಾವಣೆಯೊಂದಿಗೆ ಗ್ಲಾಂಜಾ ಸಂಪೂರ್ಣ ಹೊಸತನದಲ್ಲಿ ಬಿಡುಗಡೆಯಾಗುತ್ತಿದೆ. ಎಂಜಿನ್ ಹಾಗೂ ಪರ್ಫಾಮೆನ್ಸ್‌ನಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ ವಿನ್ಯಾಸ ಹಾಗೂ ಫೀಚರ್ಸ್‌ನಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಹೊಸ ಬಂಪರ್ ಕಾರಿನಲ್ಲಿ ಬಳಸಲಾಗಿದೆ. ಇದು ಕಾರಿನ ಲುಕ್ ಮತ್ತಷ್ಟು ಆಕರ್ಷಕವಾಗಿಸಿದೆ.
ಹೊಸ ಗ್ಲಾಂಜಾ ಕಾರಿನ ಇಂಟಿರಿಯರ್‌ನಲ್ಲೂ ಹೆಚ್ಚಿನ ಬದಲಾವಣೆ ಮಾಡಿಲ್ಲ. ಆದರೆ ಸ್ಟೀರಿಂಗ್ ವ್ಹೀಲ್ ಹಾಗೂ ಇಂಟಿಯರ್ ಕಲರ್ ಬದಲಾವಣೆಯಾಗುತ್ತಿದೆ. ವಿಶೇಷ ಅಂದರೆ ಬಲೆನೋ ಫೇಸ್‌ಲಿಫ್ಟ್ ಕಾರಿನಂತೆ ಗ್ಲಾಂಜಾ ಫೇಸ್‌ಲಿಫ್ಟ್ ಕಾರಿನಲ್ಲೂ ಅಡಾಸ್ ತಂತ್ರಜ್ಞಾನ ಬಳಸಲಾಗಿದೆ. ವೆಂಟಿಲೇಟೆಡ್ ಸೀಟು, 360 ಡಿಗ್ರಿ ಕ್ಯಾಮೆರಾ, ಹೆಡ್ ಅಪ್ ಡಿಸ್‌ಪ್ಲೇ ಸೇರಿದಂತೆ ಹಲವು ಹೊಸ ಫೀಚರ್ಸ್ ಈ ಕಾರಿನಲ್ಲಿ ನೀಡಲಾಗಿದೆ.
ಟೋಯಟಾ ಗ್ಲಾಂಜಾ ಫೇಸ್‌ಲಿಫ್ಟ್ ಕಾರು 1.2 ಲೀಟರ್ , ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇನ್ನು ಮ್ಯಾನ್ಯುಯೆಲ್ ಹಾಗೂ ಎಎಂಟಿ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.ಸಿಎನ್‌ಜಿ ವೇರಿ್ಯೆಂಟ್‌ನಲ್ಲೂ ಹೊಸ ಗ್ಲಾಂಜಾ ಫೇಸ್‌ಲಿಫ್ಟ್ ಲಭ್ಯವಿದೆ.
ಹೊಸ ಟೋಯೋಟಾ ಗ್ಲಾಂಜಾ ಫೇಸ್‌ಲಿಫ್ಟ್ ಕಾರು ಅಕ್ಟೋಬರ್ 14 ರಂದು ಬಿಡುಗಡೆಯಾಗಲಿದೆ. ಸದ್ಯ ಕಾರಿನ ಬೆಲೆ ಬಹಿರಂಗವಾಗಿಲ್ಲ. ಅಕ್ಟೋಬರ್ 14ರಂದು ಬೆಲೆ ಘೋಷಣೆಯಾಗಲಿದೆ. ಹೊಸ ಫೀಚರ್, ಹೊಸ ವಿನ್ಯಾಸದ ಕಾರಿನ ಬೆಲೆ ಮಾರುತಿ ಬಲೆನೋ ಫೇಸ್‌ಲಿಫ್ಟ್‌ಗಿಂತ ಕೊಂಚ ಹೆಚ್ಚಿರಲಿದೆ.