1100 ಕಿ.ಮೀ ಮೈಲೇಜ್, ಭಾರತದ JSW ನಿಂದ ಜೆಟೂರ್ ಪ್ಲಗ್ ಇನ್ ಹೈಬ್ರಿಡ್ ಕಾರು ಡಿ.3ಕ್ಕೆ ಅನಾವರಣ

Published : Oct 11, 2026, 04:42 PM IST
JSW to Unveil Jetour SUV in India on December 3

ಸಾರಾಂಶ

ಭಾರತದ JSW ಮೋಟಾರ್ ಇದೀಗ ಹೊಸ ಜೆಟೂರ್ ಟಿ2 ಕಾರು ಅನಾವರಣ ಮಾಡುತ್ತಿದೆ. ಇದು ಪ್ಲಗ್ ಇನ್ ಹೈಬ್ರಿಡ್ ಕಾರಾಗಿದೆ. ಹೀಗಾಗಿ ಬರೋಬ್ಬರಿ 1,100 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಾರಿನ ಬೆಲೆ ಸೇರಿ ಇತರ ವಿಶೇಷತೆ ಏನು

ನವದೆಹಲಿ (ಅ.11) ಸ್ಟೀಲ್ ಕಂಪನಿ ಮೂಲಕ ಭಾರತದಲ್ಲಿ ಜನಪ್ರಿಯವಾಗಿರುವ JSW ಇದೀಗ ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿದೆ. ಡಿಸೆಂಬರ್ 3ರಂದು ಭಾರತದಲ್ಲಿ JSW ಜೆಟೂರ್ ಟಿ2 ಕಾರು ಅನಾವರಣ ಮಾಡುತ್ತಿದೆ. ಇದು ಪ್ಲಗ್ ಇನ್ ಹೈಬ್ರಿಡ್ ಕಾರು. ಈ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಕಾರ್ಯನಿರ್ವಹಿಸುತ್ತಿದೆ. ಬರೋಬ್ಬರಿ 1,100 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಈ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ.

5 ಸೀಟಿಂಗ್ ಸಾಮರ್ಥ್ಯ ಎಸ್‌ಯುವಿ ಕಾರು

JSW ಕಾಂಬಾಕ್ಟ್ ಕಾರು ಎಸ್‌ಯುವಿ ಮಾದರಿಯಾಗಿದೆ. 5 ಸೀಟಿಂಗ್ ಸಾಮರ್ಥ್ಯ ಹೊಂದಿದೆ. ಅತ್ಯಂತ ಆಕರ್ಷಕ ಕಾರು ಇದಾಗಿದ್ದು, ಮೇಲ್ನೋಟಕ್ಕೆ ಹಮ್ಮರ್ ಫೀಲ್ ನೀಡಲಿದೆ. ಆದರೆ ಹಮ್ಮರ್‌ಗಿಂತ ಭಿನ್ನ ವಿನ್ಯಾಸ, ಶೈಲಿ ಹೊಂದಿರುವ ಟಿ2 ಕಾರು ಛತ್ರಪತಿ ಸಂಭಾಜಿನಗರದಲ್ಲಿ ಜೋಡಣೆಯಾಗಿ ಉತ್ಪಾದನೆಯಾಗಲಿದೆ. ಬಾಕ್ಸಿಸಿಲ್ಹೌಟ್ ಶೈಲಿಯ ಟಿ2 ಕಾರು ಇದೀಗ ತೀವ್ರ ಕುತೂಹಲ ಕೆರಳಿಸಿದೆ. ದೀಪಾವಳಿಗೆ ಹೊಸ ಕಾರು ಬಿಡುಗಡೆ ಮಾಡಲು JSW ಪ್ಲಾನ್ ಮಾಡಿಕೊಂಡಿತ್ತು. ಆದರೆ ಕೊಂಚ ವಿಳಂಬವಾಗಿ ಬಿಡುಗಡೆಯಾಗುತ್ತಿದೆ. ಹಬ್ಬದ ಸೀಸನ್ ಬದಲು ಡಿಸೆಂಬರ್ 3ರಂದು ಈ ಕಾರು ಅನಾವಣರಗೊಳ್ಳಲಿದೆ.

ಕಾರಿನ ಮೈಲೇಜ್

JSW ಟಿ2 ಕಾರು 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹಾಗೂ 18.4 kWh ಬ್ಯಾಟರಿ ಪ್ಯಾಕ್ ಹಾಗೂ ಎರಡು ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. 360 ಹೆಚ್‌ಪಿ ಪವರ್ ಹಾಗೂ 610 ಎನ್ಎಂ ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಪ್ಲಗ್ ಇನ್ ಹೈಬ್ರಿಡ್ ಕಾರು ಇದಾಗಿರುವ ಕಾರಣ ಎಲೆಕ್ಟ್ರಿಕ್ ಮೋಟಾರು ಮೂಲಕ ಈ ಕಾರು 90 ಕಿಲೋಮೀಟರ್ ಮೈಲೇಜ್ ನೀಡಲಿದೆ. ಫುಲ್ ಟ್ಯಾಂಕ್ ಪೆಟ್ರೋಲ್‌ನಲ್ಲಿ ಒಟ್ಟು 1,100 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಅಡಾಸ್ ಲೆವೆಲ್ 2 ತಂತ್ರಜ್ಞಾನ

JSW ಮೋಟಾರ್ ಜೆಟೂರ್ ಟಿ2 ಕಾರಿನಲ್ಲಿ ಅಡಾಸ್ ಲೆವೆಲ್ 2 ತಂತ್ರಜ್ಞಾನ ಬಳಸಲಾಗಿದೆ. 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹೊಂದಿದೆ. ಇನ್ನು 15.6 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಮ್ ಇದರಲ್ಲಿದೆ. 4 ಸ್ಪೋಕ್ ಸ್ಟೀರಿಂಗ್ ವ್ಹೀಲ್ ಜೊತೆ JSW ಬ್ಯಾಡ್ಜ್ ಇರಲಿದೆ. ಕಾರಿನಲ್ಲಿ 12 ಸೋನಿ ಸ್ಪೀಕರ್ ನೀಡಲಾಗಿದೆ. ವೆಂಟಿಲೇಟೆಡ್ ಸೀಟು ನೀಡಲಾಗಿದೆ. ಇನ್ನು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ ನೀಡಲಾಗಿದೆ.

ಕಾರಿನ ಬೆಲೆ

ಸದ್ಯ ಎಲ್ಲ ಚಿತ್ತ JSW ಮೋಟಾರ್ ಜೆಟೂರ್ ಟಿ2 ಕಾರಿನ ಬೆಲೆ ಕುರಿತು ಕುತೂಹಲ ಹೆಚ್ಚಾಗಿದೆ. ಸದ್ಯ JSW ಮೋಟಾರ್ ಕಾರಿನ ಬೆಲೆ ಬಹಿರಂಗಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ 40 ರಿಂದ 50 ಲಕ್ಷ ರೂಪಾಯಿ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಟೋಯಾಟಾ ಫಾರ್ಚುನರ್, ಕಿಯಾ ಸೊರೆಂಟೋ ಸೇರಿದಂತೆ ಪ್ರಮುಖ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

PREV
Read more Articles on
click me!

Recommended Stories

ಜನ 80000 EV ಖರೀದಿಸಿದರು, ಈಗ ಅದೇ ಎಲೆಕ್ಟ್ರಿಕ್ ಕಾರು ಹೊಸ ಅವತಾರದಲ್ಲಿ ಎಂಟ್ರಿ! ಇತರೆ ಕಂಪನಿಗಳು ಶೇಕ್
ಚಲಿಸುತ್ತಿದ್ದ Tata Sierra ಕಾರಿನ ಮೇಲೆಯೇ ಬಿದ್ದ ಭಾರಿ ಕಂಟೇನರ್: ನಜ್ಜುಗುಜ್ಜಾದರೂ ಗಟ್ಟಿಯಾಗಿ ನಿಂತ ಟಾಟಾ ಕಾರು