ಅನಂತಪುರಂ(ಫೆ.05): ಬಹುನಿರೀಕ್ಷಿತ ಕಿಯಾ ಕ್ಯಾರೆನ್ಸ್ MPV ಕಾರಿನ ಬಿಡುಗಡೆ ದಿನಾಂಕ ಬಹಿರಂಗಗೊಂಡಿದೆ. ಫೆಬ್ರವರಿ 15 ರಂದು ನೂತನ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಡಿಸೆಂಬರ್ ತಿಂಗಳಲ್ಲಿ ಕಿಯಾ ಕ್ಯಾರೆನ್ಸ್ (Kia Carens)ಭಾರತದಲ್ಲಿ ಅನಾವರಣಗೊಂಡಿತ್ತು. ಜನವರಿಯಿಂದ ಬುಕಿಂಗ್(Booking) ಆರಂಭಗೊಂಡಿತ್ತು. ಇದೀಗ ಫೆ.15ರಂದು ಕಿಯಾ ಕ್ಯಾರೆನ್ಸ್ ಬಿಡುಗಡೆಯಾಗಲಿದೆ.
ಕಿಯಾ ಕ್ಯಾರೆನ್ಸ್ 6 ಸೀಟು ಹಾಗೂ 7 ಸೀಟರ್ ಆಯ್ಕೆ ಲಭ್ಯವಿದೆ. ಆಂಧ್ರಪ್ರದೇಶದ ಅನಂತಪುರಂನಲ್ಲಿರುವ ಅತೀ ದೊಡ್ಡ ಹಾಗೂ ಅತ್ಯಾದುನಿಕ ಸುಸಜ್ಜಿತ ಉತ್ಪಾದನಾ ಘಟಕದಲ್ಲಿ ಕಾರು(Car) ಉತ್ಪಾದನೆಯಾಗುತ್ತಿದೆ. ಹ್ಯುಂಡೈ ಅಲ್ಕಜರ್ ಹಾಗೂ ಟಾಟಾ ಸಫಾರಿ(Tata Safari) ಕಾರಿನ ಪ್ರತಿಸ್ಪರ್ಧಿಯಾಗಿರುವ ನೂತನ ಕಾರು ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯವಾಗಲಿದೆ.
kia carens ಫೆಬ್ರವರಿಯಲ್ಲಿ ಕಿಯಾ ಕ್ಯಾರೆನ್ಸ್ ಬಿಡುಗಡೆ, 25 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ MPV ಕಾರು!
ಕಿಯಾ ಕ್ಯಾರೆನ್ಸ್ ಕಾರು ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್, 1.4 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ 113 bhp ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಆಯ್ಕೆಯಲ್ಲಿ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಇನ್ನು 1.4 ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಕಾರು 138 bhp ಪವರ್ ಹಾಗೂ 242 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಆಯ್ಕೆಯಲ್ಲಿ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 7 ಸ್ಪೀಡ್ DCT ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ. ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ ಕಾರು 113 bhp ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.
Kia Carens ಭಾರತದಲ್ಲಿ ಹೊಸ ದಾಖಲೆ, ಮೊದಲ ದಿನ 7,738 ಕಾರು ಬುಕ್!
ಕಿಯಾ ಕ್ಯಾರೆನ್ಸ್ ಅತ್ಯಾಧುನಿಕ ಫೀಚರ್ಸ್ ಹೊಂದಿದೆ. 10.25 ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಎಸಿ, ಫ್ರಂಟ್ ವೆಂಟಿಲೇಟೆಡ್ ಸೀಟ್ಸ ಸನ್‌ರೂಫ್, ಹಲವು ಡ್ರೈವಿಂಗ್ ಮೊಡ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಕಿಯಾ ಕ್ಯಾರೆನ್ಸ್ ಕಾರಿನ ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಕೂಡ ಲಭ್ಯವಿದೆ. 5 ಏರ್‌ಬ್ಯಾಗ್ಸ್, ABS, EBD, ಹಿಲ್‌ಸ್ಟಾರ್ಟ್ ಕಂಟ್ರೋಲ್, ಡೌನ್‌ಹಿಲ್ ಬ್ರೇಕ್ ಕಂಟ್ರೋಲ್, ವಾಹನ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್, ಹೈಲೈನ್ ಟೈಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿವರ್ಸ್ ಪಾರ್ಕಿಂಕ್ ಸೆನ್ಸಾರ್, ನಾಲ್ಕು ಡಿಸ್ಕ್ ಬ್ರೇಕ್, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಇನ್ನು ಟಾಪ್ ವೇರಿಯೆಂಟ್ ಕಾರು ರೈನ್ ಸೆನ್ಸಿಂಗ್ ವೈಪರ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಹಾಗೂ ರಿವರ್ಸ್ ಕ್ಯಾಮರಾ ಹೊಂದಿದೆ.
25,000 ರೂಪಾಯಿ ನೀಡಿ ಕಾರು ಬುಕ್ ಮಾಡಿ:
ಕಿಯಾ ಕ್ಯಾರೆನ್ಸ್ ಕಾರಿನ ಬುಕಿಂಗ್ ಜನವರಿ 14 ರಿಂದ ಆರಂಭಗೊಂಡಿದೆ. ಕಿಯಾ ಕ್ಯಾರೆನ್ಸ್ ಕಾರನ್ನು 25,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು.
Kia Price Hike ಕರೆನ್ಸ್ ಕಾರು ಬಿಡುಗಡೆಗೂ ಮುನ್ನವೇ ಗ್ರಾಹಕರಿಗೆ ಶಾಕ್ ನೀಡಿದ ಕಿಯಾ!
ಕಿಯಾ ಕ್ಯಾರೆನ್ಸ್ ಬೆಲೆ:
ಅಲ್ಕಝರ್ ಹಾಗೂ ಸಫಾರಿ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಕಿಯಾ ಕ್ಯಾರೆನ್ಸ್ ಆಕರ್ಷಕ ಬೆಲೆಯಲ್ಲಿ ಲಭ್ಯವಾಗಲಿದೆ. ಸದ್ಯ ಬೆಲೆ ಬಹಿರಂಗವಾಗಿಲ್ಲ. ಆದರೆ ಕಿಯಾ ಕ್ಯಾರೆನ್ಸ್ ಬೆಲೆ 14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಇದು ಇತರ ಪ್ರತಿಸ್ಪರ್ಧಿಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.