*ಎಂಜಿ ಆಸ್ಟರ್‌ಗೆ ನಿರೀಕ್ಷೆಗೂ ಮೀರಿ ಬುಕಿಂಗ್
*ಸೆಮಿ ಕಂಡಕ್ಟರ್ ಕೊರತೆಯಿಂದ ಡೆಲಿವರಿ ವಿಳಂಬ
*ಜನತೆಗೆ ಕಂಪನಿಯ ಸ್ಪಷ್ಟನೆ
Auto Desk(ಫೆ.04): ಎಂಜಿ ಮೋಟಾರ್ಸ್ (MG Motors) ಇಂಡಿಯಾ ಭಾರತದಲ್ಲಿ ಬಿಡುಗಡೆಗೊಳಿಸಿದ್ದ ಎಂಜಿ ಹೆಕ್ಟರ್ (MG hegtor) ಭಾರಿ ಬೇಡಿಕೆ ಪಡೆದುಕೊಂಡ ನಂತರ ಕಂಪನಿ, ಪರಿಚಯಿಸಿದ್ದ ತನ್ನ ಎರಡನೇ ಎಸ್ಯುವಿ (SUV) ಎಂಜಿ ಆಸ್ಟರ್ಗೆ ಕೂಡ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು. ಹೆಚ್ಚಿನ ಜನರು ಅದರ ಬುಕಿಂಗ್ ಆರಂಭವಾದ ಕೂಡಲೇ ಆಸ್ಟರ್ಗಾಗಿ ಬುಕ್ ಮಾಡಿದ್ದರು. ಆದರೆ, ಆಟೊಮೊಬೈಲ್ ವಲಯವನ್ನು ಕಾಡುತ್ತಿರುವ ಸೆಮಿ ಕಂಡಕ್ಟರ್ (Semi conductor) ಕೊರತೆಯ ಹಿನ್ನೆಲೆಯಲ್ಲಿ ಎಂಜಿ ಆಸ್ಟರ್ ಡೆಲಿವರಿ ವಿಳಂಬವಾಗುತ್ತಿದೆ. ಇದರಿಂದ ಜನರು ಗೊಂದಲಕ್ಕೀಡಾಗಿದ್ದು, ಆಕ್ರೋಶಗಳನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಇದು 2021 ರ ಕೊನೆಯಲ್ಲಿ ದೇಶದಲ್ಲಿ ಬಿಡುಗಡೆಯಾದ ಅತ್ಯುತ್ತಮ ಉತ್ಪನ್ನವಾಗಿದೆ. ಮೊದಲ ಹಂತದಲ್ಲಿಯೇ 5,000 ಆಸ್ಟರ್ SUV ಗಳು ಬುಕ್ ಆಗಿದ್ದವು. ಇದನ್ನು ಪೂರೈಸಲು ಕಂಪನಿ ಪರದಾಡಬೇಖಾಯಿತು. ಜಾಗತಿಕ ಸೆಮಿ ಕಂಡಕ್ಟರ್ ಕೊರತೆಯಿಂದ ಆಸ್ಟರ್ ಉತ್ಪಾದನೆ ವಿಳಂಬವಾಗುತ್ತಿತ್ತು. ಇದರಿಂದ ಡೆಲಿವರಿ ಕೂಡ ನಿಗದಿತ ಸಮಯಕ್ಕೆ ನೀಡಲಾಗುತ್ತಿರಲಿಲ್ಲ. ಆದರೂ, ಕಂಪನಿ ಮೊದಲ ಹಂತದ ಬಹುತೇಕ ವಿತರಣೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದೆ. ಎಂಜಿ ಮೋಟಾರ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಗೌರವ್ ಗುಪ್ತಾ, ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕಂಪನಿಯು ಈಗ ಆಸ್ಟರ್ ವಾಹನಗಳನ್ನು ಆದ್ಯತೆ ಮೇರೆಗೆ ವೇಯ್ಟಿಂಗ್ ಲಿಸ್ಟ್ನಲ್ಲಿರುವವ ಗ್ರಾಹಕರಿಗೆ ತಲುಪಿಸಲು ಕಂಪನಿ ಮುಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
undefined
Auto Sales: 2021ರಲ್ಲಿ 40,273 ಎಂಜಿ ಮೋಟಾರ್ಸ್ ವಾಹನಗಳ ಮಾರಾಟ!
"ಸೆಮಿಕಂಡಕ್ಟರ್ಗಳು ಮತ್ತು ಚಿಪ್ಗಳ ಜಾಗತಿಕ ಕೊರತೆಯಿಂದಾಗಿ ವಿತರಣಾ ವೇಳಾಪಟ್ಟಿಯಲ್ಲಿನ ವಿಳಂಬ ಮತ್ತು ಬದಲಾವಣೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಬೇಕು " ಎಂದು ಅವರು ಆಸ್ಟರ್ ಗ್ರಾಹಕರಿಗೆ ಮುಕ್ತ ಪತ್ರದಲ್ಲಿ ಬರೆದಿದ್ದಾರೆ. ಆಸ್ಟರ್ ಅನ್ನು ಬುಕ್ ಮಾಡಿದ ಗ್ರಾಹಕರು MG ಡೀಲರ್ಶಿಪ್ ಅಥವಾ ‘ಮೈ ಎಂಜಿ’ ಅಪ್ಲಿಕೇಶನ್ನಲ್ಲಿ ತಾತ್ಕಾಲಿಕ ಡೆಲಿವರಿ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
MG ಆಸ್ಟರ್ ಎಸ್ಯುವಿ ನಾಲ್ಕು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. - ಸ್ಟೈಲ್, ಸೂಪರ್, ಸ್ಮಾರ್ಟ್ ಮತ್ತು ಶಾರ್ಪ್. ಸ್ಟೈಲ್ ಮತ್ತು ಸೂಪರ್ ರೂಪಾಂತರಗಳು ಬ್ರ್ಯಾಂಡ್ನ ನಿರೀಕ್ಷೆಗಳನ್ನು ಮೀರಿದ ಬೇಡಿಕೆಗಳನ್ನು ಸ್ವೀಕರಿಸಿವೆ ಎಂದು ವಾಹನ ತಯಾರಕರು ತಿಳಿಸಿದ್ದಾರೆ. ಎಂಜಿ ಅಪ್ಲಿಕೇಶನ್, ವೆಬ್ಸೈಟ್ ಅಥವಾ ಅಧಿಕೃತ ಡೀಲರ್ಶಿಪ್ಗಳಿಗೆ ಕರೆ ಮಾಡುವ ಮೂಲಕ ವಿತರಣೆಯ ಸ್ಥಿತಿಯನ್ನು ಪರಿಶೀಲಿಸಬಹುದು . ಸಮಸ್ಯೆಯನ್ನು ಪರಿಹರಿಸಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಎಂದು ವಾಹನ ತಯಾರಕರು ಒತ್ತಿ ಹೇಳಿದರು.
ಮಧ್ಯಮ ಗಾತ್ರದ ಆಸ್ಟರ್ ಎಸ್ಯುವಿ ಹ್ಯುಂಡೈ ಕ್ರೇಟಾ, ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್, ಮಹೀಂದ್ರ XUV700, ವೋಕ್ಸ್ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ಗೆ ಪ್ರತಿಸ್ಪರ್ಧಿಯಾಗಿದೆ. ಇದು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳು ಮತ್ತು ಮೂರು ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಬರುತ್ತದೆ.
ಇದು 1498 ಸಿಸಿ ಎಂಜಿನ್, 138.08 ಬಿಎಚ್ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎಂಜಿ ಆಸ್ಟರ್ನ ಬೆಲೆ. 9.98 ಲಕ್ಷ ರೂ. ಮತ್ತು 17.72 ಲಕ್ಷ ರೂ.ಗಳಷ್ಟಿದೆ. ಇದರ ಇಂಟೀರಿಯರ್ನಲ್ಲಿ ಟಚ್ ಸ್ಕ್ರೀನ್ ಉತ್ತಮವಾಗಿ ಕಾಣುತ್ತದೆ ಮತ್ತು ಅಚ್ಚುಕಟ್ಟಾಗಿ ವಿನ್ಯಾಸ ಹೊಂದಿದೆ. ಜೊತೆಗೆ ಇದು ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ಪ್ಲೇ ಅನ್ನು ಒಳಗೊಂಡಿದೆ. . ಮೂರು ಸಿಲಿಂಡರ್ನ ಇಂಜಿನ್, 0 ರಿಂದ 100 ಕಿಮೀ ವೇಗವನ್ನು ಕೇವಲ 11 ಸೆಕೆಂಡುಗಳ ವೇಗ ಹೆಚ್ಚಿಸಬಲ್ಲದು.