ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ, ಭಾರತಕ್ಕೆ ಯಾವಾಗ ಪ್ರವೇಶ?

By Suvarna NewsFirst Published Nov 25, 2020, 3:53 PM IST
Highlights

ಹೋಂಡಾ ಸಿಟಿ ಸೆಡಾನ್ ಕಾರು ಭಾರತೀಯ ಗ್ರಾಹಕರ ಬಹುಮೆಚ್ಚಿನ ಕಾರ್. ಆ ಕಾರು ನಿಮಗೆ ಹ್ಯಾಚ್‌ಬ್ಯಾಕ್ ಸ್ವರೂಪದಲ್ಲಿ ದೊರೆಯುವ ದಿನಗಳಲ್ಲಿ ದೂರವಿಲ್ಲ. ಯಾಕೆಂದರೆ, ಹೋಂಡಾ ಕಂಪನಿ ತನ್ನ ಈ ಸಿಟಿ ಹ್ಯಾಚ್‌ಬ್ಯಾಕ್ ಕಾರನ್ನು ಥೈಲ್ಯಾಂಡ್‌ನಲ್ಲಿ ಬಿಡುಗಡೆ ಮಾಡಿದ್ದು,  ಶೀಘ್ರವೇ ಭಾರತಕ್ಕೂ ಪ್ರವೇಶಿಸಬಹುದು.
 

ಅತ್ಯಂತ ಜನಪ್ರಿಯ ಸೆಡಾನ್ ಕಾರ್ ಹೋಂಡಾ ಸಿಟಿಯು ಪ್ರೀಮಿಯಂ ಹ್ಯಾಚ್‌ಬ್ಯಾಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿ ಬರುತ್ತಿತ್ತು ಅಲ್ಲವೇ? ಇದೀಗ ಆ ಗಳಿಗೆ ಕೂಡಿ ಬಂದಿದೆ, ಹೋಂಡಾ ಕಂಪನಿ ತನ್ನ ಜನಪ್ರಿಯ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಕಾರನ್ನು ಕೊನೆಗೂ ಅನಾವರಣ ಮಾಡಿದೆ! ಆದರೆ, ಈ ಕಾರು ಬಿಡುಗಡೆಯಾಗಿರುವುದು ಭಾರತದಲ್ಲಿ ಅಲ್ಲ, ಬದಲಿಗೆ ಥೈಲ್ಯಾಂಡ್‌ನಲ್ಲಿ.

ಹೌದು, ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಸೆಡಾನ್ ಭಾರಿ ಬೇಡಿಕೆಯಲ್ಲಿದೆ. ಇತ್ತೀಚೆಗಷ್ಟೇ ಅದರ ಹೊಸ ಆವೃತ್ತಿ ಕೂಡ ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಮಧ್ಯೆಯೇ ಕಂಪನಿ, ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಇತ್ತು. ಅದೀಗ ನಿಜವಾಗಿದೆ. 

ಸೇಫ್ಟಿ ರೇಟಿಂಗ್‌ನಲ್ಲಿ ಎಸ್ ಪ್ರೆಸ್ಸೋ ವಿಫಲಕ್ಕೆ ಕಾಲೆಳೆಯಿತಾ ಟಾಟಾ?

ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾಗಿರುವ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಭಾರತದ ಮಾರುಕಟ್ಟೆಯನ್ನು ಶೀಘ್ರವೇ ಪ್ರವೇಶಿಸಬಹುದು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಈ ಹ್ಯಾಚ್‌ಬ್ಯಾಕ್ ಗ್ರಾಹಕರಿಗೆ ಎಸ್‌ ಪ್ಲಸ್, ಎಸ್‌ವಿ ಮತ್ತು ಆರ್‌ಎಸ್ ವೆರಿಯಂಟ್‌ಗಳಲ್ಲಿ ದೊರೆಯಲಿದೆ. 

ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್‌ ಇಮೇಜ್‌ಗಳನ್ನು ಆಧರಿಸಿ ಹೇಳುವುದಾದರೆ ಈ ಕಾರು ಬಹುತೇಕ ಹೋಂಡಾ ಸಿಟಿ ಸೆಡಾನ್‌ ಕಾರ್ ರೀತಿಯಲ್ಲಿ ಕಾಣುತ್ತದೆ. ಆಫ್‌ಕೋರ್ಸ್ ಹಿಂಭಾಗವನ್ನು ಹೊರತುಪಡಿಸಿ. ಹ್ಯಾಚ್‌ಬ್ಯಾಕ್ ಸ್ಪೋರ್ಟಿಂಗ್ ವಿನ್ಯಾಸದಲ್ಲಿದ್ದು, ಗ್ರೀನ್‌ಹೌಸ್ ಏರಿಯಾ ಜಾಸ್ತಿ ಇದೆ. ಸ್ಪೋರ್ಟಿ ರಿಯರ್ ಬಂಪರ್, ಹೊಸ ಮಾದರಿ ಟೇಲ್ ಲ್ಯಾಂಪ್  ಸೇರಿದಂತೆ ಇನ್ನಿತರ ಫೀಚರ್‌ಗಳು ಆಕರ್ಷಕವಾಗಿವೆ. 

ಹೋಂಡಾ ಸಿಟಿ ಕಾರಿನ ಒಳಾಂಗಣವೂ ಮಸ್ತ್ ಆಗಿದೆ. ಇದರಲ್ಲಿ ಎಂಟು ಇಂಚಿನ ಸ್ಪರ್ಶಸಂವೇದಿಯ ಇನ್ಫೋನೈಮೆಂಟ್ ಸ್ಕ್ರೀನ್ ಇರಲಿದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಗೆ ಇದು ಸಪೋರ್ಟ್ ಮಾಡುತ್ತದೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹ್ಯಾಚ್‌ಬ್ಯಾಕ್‌ ಕಾರಿನಲ್ಲಿ ಜಪಾನ್ ಮೂಲದ ಕಾರು ತಯಾರಿಕಾ ಕಂಪನಿ ಹೋಂಡಾ ಒದಗಿಸಿದೆ.

Renault Kiger: ಕಿಗರ್ ಶೋಕಾರ್ ಪ್ರದರ್ಶಿದ ರೆನಾಲ್ಟ್, ಭಾರತದಲ್ಲಿ ಶೀಘ್ರವೇ ಬಿಡುಗಡೆ 

ಇನ್ನು ಪ್ರಯಾಣಿಕರ ಸುರಕ್ಷಿತೆಯ ದೃಷ್ಟಿಯಿಂದ ಈ ಹ್ಯಾಚ್‌ಬ್ಯಾಕ್‌ ಕಾರಿನಲ್ಲಿ ಒಟ್ಟು ಆರು ಏರ್‌ ಬ್ಯಾಗ್‌ಗಳನ್ನು ಕೊಡಲಾಗಿದೆ. ಸ್ಪೀಡ್ ಸೆನ್ಸಿಂಗ್ ಲಾಕ್, ಎಮರ್ಜೆನ್ಸಿ ಸಿಗ್ನಲ್ ಸಿಸ್ಟಮ್, ಕಾರ್ನರಿಂಗ್ ವೆಹಿಕಲ್ ಸ್ಟೆಬಿಲಿಟಿ ನೆರವು ಸೇರಿದಂತೆ ಬ್ಯಾಲೆನ್ಸ್ ಕಂಟ್ರೋಲ್ ಸಿಸ್ಟಮ್ ಫೀಚರ್‌ ಸೇರಿದಂತೆ ಆಧುನಿಕ ಕಾರುಗಳು ಹೊಂದಿರುಬಹುದಾದ ಎಲ್ಲ ಸಂಗತಿಗಳು ಇದರಲ್ಲಿವೆ ಎನ್ನಲಾಗುತ್ತಿದೆ.

ಈಗ ಸದ್ಯ ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾಗಿರುವ ಈ ಹ್ಯಾಚ್‌ಬ್ಯಾಕ್‌ನಲ್ಲಿ 1.0 ಲೀಟರ್ ವಿಟಿಇಸಿ ಟರ್ಬೋಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಇದು ಗರಿಷ್ಠ 120 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. 173 ಎನ್ಎಂ ಗರಿಷ್ಠ ಟಾರ್ಕ್ ಕೂಡ ಇದೆ. ಇನ್ನು ಟ್ರಾನ್ಷಮಿಷನ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ನಿಮಗೆ ಸಿಕ್ಸ್ ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಮತ್ತು ಸಿವಿಟಿ ಮಾದರಿಯಲ್ಲಿ ದೊರೆಯುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.

ಹೋಂಡಾ ಕಾರ್ಸ್ ಇಂಡಿಯಾ  ಸೆಪ್ಟೆಂಬರ್‌ನಲ್ಲಿ  ಫೋರ್ತ್ ಜನರೇಷನ್‌ನ ಹೋಂಡಾ ಸಿಟಿಯ ಎರಡು ಪೆಟ್ರೋಲ್ ವೆರಿಯೆಂಟ್ ಕಾರುಗಳನ್ನು ಬಿಡುಗಡೆ ಮಾಡಿತ್ತು. ಈ ಕಾರುಗಳ ಬೆಲೆ 9.29 ಲಕ್ಷ ರೂಪಾಯಿಂದ ಆರಂಭವಾಗುತ್ತದೆ. ಇದೇ ವೇಳೆ, ಹೋಂಡಾ ಸಿಟಿ ಸೆಡಾನ್‌ನ ಎಲ್ಲಾ ಹೊಸ 5ನೇ ಜನರೇಷನ್ ವರ್ಷನ್‌ನ್ನು ಕಂಪನಿ ಕಳೆದ ಜುಲೈನಲ್ಲಿ ಬಿಡುಗೆ ಮಾಡಿದ್ದನ್ನು ನಾವಿಲ್ಲ ಸ್ಮರಿಸಬಹುದು. 

ಭಾರತದಲ್ಲಿ KTM250 ಬೈಕ್ ಬಿಡುಗಡೆ, ಬೆಲೆ 2.48 ಲಕ್ಷ ರೂಪಾಯಿ

click me!