Renault Kiger: ಕಿಗರ್ ಶೋಕಾರ್ ಪ್ರದರ್ಶಿದ ರೆನಾಲ್ಟ್, ಭಾರತದಲ್ಲಿ ಶೀಘ್ರವೇ ಬಿಡುಗಡೆ

By Suvarna NewsFirst Published Nov 19, 2020, 5:20 PM IST
Highlights

ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರು ಸೆಗ್ಮೆಂಟ್‌ನಲ್ಲಿ ಪೈಪೋಟಿ ನೀಡಲು ರೆನಾಲ್ಟ್ ತನ್ನ ಕಿಗರ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡಲಿದೆ. ಇದೀಗ ಕಂಪನಿ ಕ ಶೋಕಾರ್ ವರ್ಷನ್ ಕಿಗರ್ ಕಾರನ್ನು ಪ್ರದರ್ಶಿಸಿದ್ದು, ಭಾರತೀಯ ಮಾರುಕಟ್ಟೆಯ ಮೂಲಕವೇ ವಿಶ್ವಕ್ಕೆ ಪರಿಚಯಿಸಲಿದೆ.
 

ಎಂಟ್ರಿ ಲೇವಲ್ ಕಾರು ಕ್ವಿಡ್ ಮತ್ತು ಎಸ್‌ಯುವಿ ಡಸ್ಟರ್ ಮೂಲಕ  ಭಾರತೀಯ ರಸ್ತೆಗಳಲ್ಲಿ ಧೂಳೆಬ್ಬಿಸಿರುವ ರೆನಾಲ್ಟ್ ಕಂಪನಿ ಇದೀಗ ಸಬ್ ಕಾಂಪಾಕ್ಟ್ ಎಸ್‌ಯುವಿ ಕಿಗರ್ ಮೂಲಕ ಮತ್ತೆ ಜಾದೂ ಮಾಡಲು ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಸಬ್ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಭಾರೀ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲೇ ಬಹುತೇಕ ಕಂಪನಿಗಳು ಈ ವಿಭಾಗದ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ರೆನಾಲ್ಟ್ ಕೂಡ ಈಗ ಕಿಗರ್ ಮೂಲಕ ಆ ಗ್ರಾಹಕರ ಮೇಲೆ ಕಣ್ಣಿಟ್ಟಿದೆ. 

ಬಿಡುಗಡೆಯಾದ ತಿಂಗಳಲ್ಲೇ ಥಾರ್‌ಗೆ 20000 ಬುಕ್ಕಿಂಗ್!

ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ರಸ್ತೆಗಿಳಿಯಲಿರುವ ಕಿಗರ್, ಮಾರುತಿ ಸುಜುಕಿಯ ವಿಟಾರಾ ಬ್ರೆಜಾ, ಹುಂಡೈನ ವೆನ್ಯು, ಮಹೀಂದ್ರಾ ಕಂಪನಿಯ ಮಹೀಂದ್ರಾ ಎಕ್ಸ್‌ಯುವಿ300, ಇತ್ತೀಚೆಗೆ ಬಿಡುಗೆಡಯಾಗಿರುವ ಕಿಯಾ ಸೋನೆಟ್, ಟೊಯೋಟಾ ಕಂಪನಿಯ ಅರ್ಬನ್ ಕ್ರೂಸರ್ ಮತ್ತು ಇನ್ನೇನು ಬಿಡುಗಡೆ ಕಾಣಲಿರುವ ನಿಸ್ಸಾನ್ ಮ್ಯಾಗ್ನೇಟ್ ಕಾರುಗಳಿಗೆ ಪೈಪೋಟಿ ನೀಡಲಿದೆ. 

ರೆನಾಲ್ಟ್ ಸದ್ಯ ಕ್ವಿಡ್, ಟ್ರೈಬರ್ ಮತ್ತು ಡಸ್ಟರ್  ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ ಮತ್ತು ಆಯಾ ಸೆಗ್ಮೆಂಟ್‌ಗಳಲ್ಲಿ ಮಾರಾಟದ ಯಶಸ್ಸು ಕಂಡಿದೆ. ಆದರೆ, ಈ ಸಬ್ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಬಿಡುಗಡೆಯಾಗಲಿರುವ ಕಿಗರ್ ಮೇಲೆ ಹೆಚ್ಚಿನ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಯಾಕೆಂದರೆ, ಈ ಸೆಗ್ಮೆಂಟ್‌ನಲ್ಲಿರುವ ತೀವ್ರ ಪೈಪೋಟಿಯೇ ಅದಕ್ಕೆ ಕಾರಣ. ಹೊಸ ಕಿಗರ್‌ನಲ್ಲಿ ಬ್ರ್ಯಾಂಡ್ ನ್ಯೂ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತು ಕ್ಯಾಬಿನ್ ವಿಶಾಲವಾಗಿರಲಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. 

ಹಬ್ಬಕ್ಕೆ ಟಾಟಾ ಹ್ಯಾರಿಯರ್ ಸ್ಪೆಷಲ್ ಎಡಿಷನ್ ಕ್ಯಾಮೋ ಬಿಡುಗಡೆ, 16.50 ಲಕ್ಷ ರೂ.ನಿಂದ ಆರಂಭ

ಭಾರತದ ಮೂಲಕವೇ ಗ್ಲೋಬಲ್ ಲಾಂಚ್
ಭಾರತದ ಮಾರುಕಟ್ಟೆಯಲ್ಲಿ ಮೊದಲಿಗೆ ಬಿಡುಗಡೆಗೊಳ್ಳಲಿರುವ ಈ ಕಿಗರ್ ನಂತರ ಜಗತ್ತಿನ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ರೆನಾಲ್ಟ್ ಇಂಡಿಯಾ ಆಪರೇಷನ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವೆಂಕರಾಮ್ ಮಮಿಲ್ಲಪಳ್ಳೆ ಅವರು, ರೆನಾಲ್ಟ್ ಕಿಗರ್ ಗ್ಲೋಬಲ್ ಲಾಂಚ್ ಭಾರತೀಯ ಮಾರುಕಟ್ಟೆಯ ಮೂಲಕ ನಡೆಯಲಿದೆ ಎಂದು ಹೇಳಲು ಖುಷಿಯಾಗುತ್ತದೆ. ಭಾರತದ ಮಾರುಕಟ್ಟೆಯಲ್ಲಿ ಕಾರು ಬಿಡುಗಡೆಯಾದ ಬಳಿಕ ಜಗತ್ತಿನ ಇತರ ಮಾರುಕಟ್ಟೆಯಲ್ಲೂ ಬಿಡುಗಡೆ ಕಾಣಲಿದೆ. ಕ್ವಿಡ್, ಟ್ರೈಬರ್ ಮತ್ತು ಡಸ್ಟರ್ ಬಳಿಕ ಭಾರತೀಯ ಮಾರುಕಟ್ಟೆಯ ಮೂಲಕವೇ ಜಗತ್ತಿಗೆ ಪರಿಚಯವಾಗುತ್ತಿರುವ ರೆನಾಲ್ಟ್ ಕಂಪನಿಯ ಮೂರನೇ ಕಾರು ಕಿಗರ್ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಕಾರಿನ ವಿಶೇಷತೆಗಳೇನು?
ರೆನಾಲ್ಟ್‌ನ ಕಿಗರ್ ಸಬ್ ಕಾಂಪಾಕ್ಟ್ ಎಸ್‌ಯುವಿ ಹೊಸ ಮಾದರಿಯ ಟರ್ಬೋ ಎಂಜಿನ್ ಇರಲಿದೆ ಮತ್ತು 1.0 ಲೀಟರ್ ಮೂರು ಸಿಲಿಂಡರ್ ಟರ್ಬೋ ಪೆಟ್ರೋಲ್ ಯುನಿಟ್‌ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಮಾರಾಟಕ್ಕೆ ಸಿದ್ಧವಾಗುವ ಹೊತ್ತಿಗೆ ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸಿಮಿಷನ್‌ನಲ್ಲಿ ದೊರೆಯುವ ಸಾಧ್ಯತೆ ಇದೆ. ಕಂಪನಿ ಕಾರಿನ ಒಳಾಂಗಣದ ಯಾವುದೇ ಪಟಗಳನ್ನು ಈವರೆಗೂ  ಹಂಚಿಕೊಂಡಿಲ್ಲ. ಡಿಜಿಟಲ್ ಕ್ಲಸ್ಟರ್ ಮತ್ತು ಸೆಂಟ್ರಲ್ ಕಾನ್ಸೋಲ್ ಇರಬಹುದು ಎಂದು ಅಂದಾಜಿಲಾಗುತ್ತಿದೆ. 

ಕ್ರ್ಯಾಶ್‌ ಟೆಸ್ಟಿಂಗ್: ಕಿಯಾ ಸೆಲ್ತೋಸ್‌ಗೆ 3 ಸ್ಟಾರ್, ಎಸ್ ಪ್ರೆಸ್ಸೋ ಕಾರಿಗೆ?

ಮುಂದಿನ ವರ್ಷ ಬಿಡುಗಡೆಯಾಗಲಿರುವ ರೆನಾಲ್ಟ್ ಕಿಗರ್ ಕಾರಿನ ಬೆಲೆಯ ಬಗ್ಗೆ ಕಂಪನಿ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ, ಬೇಸಿಕ್ ಮಾಡೆಲ್ ಕಾರಿನ ಬೆಲೆ 5.5 ಲಕ್ಷ ರೂಪಾಯಿ(ಎಕ್ಸ್ ಶೋರೋಮ್) ಇರಬಹುದು ಎನ್ನಲಾಗುತ್ತಿದೆ. ಈ ಕಾರನ್ನು ಭಾರತದಲ್ಲೇ ಸ್ಥಳೀಯವಾಗಿ ನಿರ್ಮಾಣ ಮಾಡಲಾಗುತ್ತಿದೆ. ತಮಿಳುನಾಡಿನ ಒರ್ಗಾಡಮ್‌ನಲ್ಲಿರುವ ರೆನಾಲ್ಟ್-ನಿಸ್ಸಾನ್ ಜಂಟಿ ಘಟಕದಲ್ಲಿ ಈ ಕಾರು ನಿರ್ಮಾಣವಾಗಲಿದೆ.

click me!