ಗ್ರೇಟರ್ ನೋಯ್ಡಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಲಿದೆಯಾ ಹೋಂಡಾ?

By Suvarna News  |  First Published Dec 19, 2020, 11:07 AM IST

ಸುಮಾರು ಎರಡು ದಶಕಗಳಲ್ಲಿ ಕಾಲ ಗ್ರೇಟರ್ ನೋಯ್ಡಾ ಘಟಕದಲ್ಲಿ ಕಾರು ಉತ್ಪಾದಿಸುತ್ತಿದ್ದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಕಾರ್ಯಾಚರಣೆ ನಿಲ್ಲಿಸಲು ಮುಂದಾದ್ದು, ರಾಜಸ್ಥಾನದ ತಪುಕರಾ ಘಟಕ್ಕೆ ಸ್ಥಳಾಂತರವಾಗಲಿದೆ ಎನ್ನಲಾಗಿದೆ. ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.


ಪ್ರೀಮಿಯಂ ಹಾಗೂ ಮಧ್ಯಮ ಬಜೆಟ್ ಕಾರುಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೋಂಡಾ ಕಂಪನಿ, ತನ್ನ ಗ್ರೇಟರ್ ನೋಯ್ಡಾ ಘಟಕವನ್ನು ಮುಚ್ಚ ನಿರ್ಧಾರವನ್ನು ಕೈಗೊಂಡಿದೆ. ಇಲ್ಲಿನ ಸಂಪೂರ್ಣ ಉತ್ಪಾದನ ಘಟಕವು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಪುಕರಾ ಘಟಕಕ್ಕೆ ವರ್ಗಾವಣೆಯಾಗಲಿದೆ ಎನ್ನಲಾಗುತ್ತಿದೆ.

ಇಟಿ ಆಟೋ ವರದಿಯ ಪ್ರಕಾರ, 2020ರ  ಡಿಸೆಂಬರ್ ತಿಂಗಳ ಅವಧಿಯಲ್ಲಿ ನೋಯ್ಡಾ ಘಟಕದಲ್ಲಿ ಯಾವುದೇ ಉತ್ಪಾದನೆಯಾಗಿಲ್ಲ. ಕಳೆದ ತಿಂಗಳವರೆಗೂ ಈ ಘಟಕದಲ್ಲಿ ಹೋಂಡಾ ಸಿಟಿ ಸೆಡಾನ್, ಸಿಆರ್-ವಿ ಎಸ್‌ಯುವಿ, ಸಿವಿಕ್ ಸೆಡಾನ್‌ನಂಥ ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು. ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ  ಹೇಳಿಕೆಯನ್ನು ಈವರೆಗೂ ನೀಡಿಲ್ಲ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

Latest Videos

undefined

ವರ್ಷಾಂತ್ಯದ ಆಫರ್‌: ಕ್ವಿಡ್, ಟ್ರೈಬರ್, ಡಸ್ಟರ್ ಖರೀದಿಸಿದ್ರೆ 70,000 ರೂ.ವರೆಗೂ ಲಾಭ!

ಗ್ರೇಟರ್ ನೋಯ್ಡಾ ಘಟಕದಲ್ಲಿ ಸುಮಾರು ಎರಡು ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತದ್ದರು. ಆದರೆ, ಪರ್ಮನೆಂಟ್ ಉದ್ಯೋಗಿಗಳ ಸಂಖ್ಯೆ ಸಾವಿರದಷ್ಟಿತ್ತು. ಈ ಪೈಕಿ ಹೆಚ್ಚಿನವರು ವಿಆರ್‌ಎಸ್ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಇದೇ ವೇಳೆ, ಕಂಪನಿಯ ಕಾರ್ಪೋರೇಟ್ ಕಚೇರಿ ಮತ್ತು ಆರ್ ಆಂಡ್ ಡಿ ಡಿಪಾರ್ಟ್‌ಮೆಂಟ್ ಗ್ರೇಟರ್ ನೋಯ್ಡಾದಿಂದಲೇ ಕಾರ್ಯನಿರ್ವಹಿಸಲಿದೆ.

1997ರಲ್ಲಿ ಸ್ಥಾಪನೆ
ಗ್ರೇಟರ್ ನೋಯ್ಡಾದಲ್ಲಿ ಘಟಕವನ್ನು ಹೋಂಡಾ ಕಂಪನಿ 1997ರಲ್ಲಿ ಆರಂಭಿಸಿತ್ತು. ಜಪಾನ್ ಮೂಲದ ಈ ಕಂಪನಿಯ ದೇಶದಲ್ಲಿನ ಮೊದಲ ಉತ್ಪಾದನಾ ಘಟಕವಿದು. ವರ್ಷಕ್ಕೆ ಮೊವತ್ತು ಸಾವಿರ ವಾಹನಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಬಳಿಕ ಈ ಸಾಮರ್ಥ್ಯವನ್ನು 50 ಸಾವಿರಕ್ಕೆ ಏರಿಸಲಾಯಿತು. 2008ರ ಬಳಿಕ ಉತ್ಪಾದನಾ ಸಾಮಾರ್ಥ್ಯವನ್ನು ಒಂದು ಲಕ್ಷದವರೆಗೂ ಹೆಚ್ಚಿಸಲಾಯಿತು. ರಾಜಸ್ಥಾನದ ತಪುಕರಾ ಘಟಕದಲ್ಲಿ ವರ್ಷಕ್ಕೆ 1.80 ಲಕ್ಷ ಯುನಿಟ್ಸ್ ಉತ್ಪಾದನೆ ಮಾಡಲಾಗುತ್ತದೆ.

2021 ಕೆಟಿಎಂ 125 ಡ್ಯೂಕ್ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ತಿಂಗಳಿಗೆ ಸಾವಿರಾರು ಕಾರು
ಈ ವರ್ಷ ಹೋಂಡಾ ಉತ್ಪಾದಿಸಿದ ತಿಂಗಳಿಗೆ 10 ಸಾವಿರ ಕಾರುಗಳ ಪೈಕಿ ಅರ್ಧದಷ್ಟು ಕಾರುಗಳು ಈ ಗ್ರೇಟರ್ ನೋಯ್ಡಾ ಘಟಕದಲ್ಲಿ ತಯಾರಾಗುತ್ತಿದ್ದವು. ಕಂಪನಿಯ ಅಮೇಜ್ ಮತ್ತು ಸಿಟಿ ಸೆಡಾನ್ ಕಾರುಗಳು ಸಿಕ್ಕಾಪಟ್ಟೆ ಮಾರಾಟವಾಗುತ್ತಿವೆ. ತಿಂಗಳಿಗೆ ನಾಲ್ಕು ಸಾವಿರದಿಂದ 5000ವರೆಗೂ ಮಾರಾಟವಾಗುತ್ತವೆ.

5000 ರೂ. ಕೊಟ್ಟು ಹೊಸ ಏಪ್ರಿಲಿಯಾ ಎಸ್ಆರ್‌ಎಕ್ಸ್ ಬುಕ್ ಮಾಡಿ

ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿ ಶೇ.54.67ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2020ರ ನವೆಂಬರ್‌ನಲ್ಲಿ 9990 ಯನಿಟ್ಸ್ ಮಾರಾಟ ಮಾಡಿದರೆ, ಕಳೆದ ವರ್ಷ ಇದೇ ಅವಧಿಯಲ್ಲಿ  6,456 ಕಾರುಗಳನ್ನು ಉತ್ಪಾದಿಸಲಾಗಿತ್ತು.

click me!