ಆರಾಮದಾಯಕ ಪ್ರಯಾಣ, ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ತಂತ್ರಜ್ಞಾನ, ಕಾರ್ ಕೆನೆಕ್ಟ್ ಸೇರಿದಂತೆ ಅತೀ ಹೆಚ್ಚು ಫೀಚರ್ಸ್ ಒಳಗೊಂಡ ಮರ್ಸಿಡೀಸ್ ಬೆಂಝ್ ಕಾರು ಇದೀಗ ವಿಶೇಷ ಆಫರ್ ಘೋಷಿಸಿದೆ. ಹೊಸ ಆಫರ್‌ನೊಂದಿಗೆ 2021ರ ಹೊಸ ವರ್ಷವನ್ನು ಮರ್ಸಿಡೀಸ್ ಬೆಂಝ್ ಕಾರಿನೊಂದಿಗೆ ಸಂಭ್ರಮಿಸಲು ಇಲ್ಲಿವೆ 6 ಪ್ರಮುಖ ಕಾರಣಗಳು.
2020ನೇ ವರ್ಷದ ಅಂತ್ಯದಲ್ಲಿ ನಾವಿದ್ದೇವೆ. ಕೆಲ ದಿನಗಳಲ್ಲೇ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದ್ದೇವೆ. 2020ರ ವರ್ಷ ನಾವು ಹಲವು ಪಾಠಗಳನ್ನು ಕಲಿತಿದ್ದೇವೆ. ಜೊತೆಗೆ ಸಂಕಷ್ಟದಿಂದ ಮತ್ತೆ ಜೀವನ ಕಟ್ಟಿಕೊಳ್ಳುಲು ಚೈತನ್ಯ ನೀಡಿದ ವರ್ಷವಾಗಿದೆ. ಹಲವರು ಮನೆಯಿಂದ ಕೆಲಸ ಮಾಡುವ ಅವಕಾಶವನ್ನು ಸ್ವಾಗತಿಸಿದ್ದಾರೆ. ಈ ಮೂಲಕ ತಮ್ಮ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆದಿದ್ದಾರೆ. ಇದರಿಂದ ಹಲವರು ರಸ್ತೆಯಲ್ಲಿ ಸಂಚರಿಸುವ ಅಥವಾ ವಾರಾಂತ್ಯದಲ್ಲಿ ಪ್ರಯಾಣ ಮಾಡುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. 2020ನೇ ವರ್ಷ ಹಲವು ವಿಚಾರಗಳನ್ನು ಕಲಿಸಿದೆ. ದಿನವನ್ನು ಸಂತೋಷವಾಗಿ ಕಳೆಯುವುದು ಹಾಗೂ ಸಂತೋಷವನ್ನು ಮುಂದೂಡದಿರುವುದು ಪ್ರಮುಖವಾಗಿದೆ. ಸುರಕ್ಷತೆ, ರಕ್ಷಣೆ, ಆರೋಗ್ಯವನ್ನು ನೋಡುವ ದೃಷ್ಠಿಕೋನವನ್ನು ಬದಲಾಯಿಸಿದೆ. ಜೊತೆಗೆ ಜವಾಬ್ದಾರಿ ಎಂದರೇನು ಅನ್ನೋದನ್ನು ತಿಳಿಸಿದೆ. ಇದೀಗ 2021ನೇ ಹೊಸ ವರ್ಷ ಕೆಲ ದಿನಗಳಲ್ಲೇ ಬರಲಿದೆ. ಹೊಸ ವರ್ಷ ಎಲ್ಲರ ಬಾಳಲ್ಲಿ ಹೊಸ ಚೈತನ್ಯ, ಹೊಸಸ ಉಲ್ಲಾಸ, ಹೊಸ ಜೀವನಕ್ಕೆ ನಾಂದಿ ಹಾಡಲಿದೆ ಅನ್ನೋ ವಿಶ್ವಾಸದಲ್ಲಿದ್ದೇವೆ.
ಹೊಸ ವರ್ಷದಲ್ಲಿ ಹೊಸ ಖರೀದಿ ಸಾಮಾನ್ಯ. ವಿಶೇಷವಾಗಿ ಹೊಸ ವಾಹನ ಖರೀದಿ ಹೊಸ ಐಶ್ವರ್ಯ ತರಲಿದೆ ಅನ್ನೋ ಮಾತಿದೆ. ನೀವು ಹೊಸ ವರ್ಷವನ್ನು ಹೊಸ ಕಾರಿನೊಂದಿಗೆ ಆಚರಿಸಿಕೊಳ್ಳುಲು ಬಯಸಿದ್ದರೆ, ನೀವು ಹೆಚ್ಚು ಆಲೋಜನೆ ಮಾಡುವ ಅಗತ್ಯವಿಲ್ಲ. ಕಾರಣ, ನಿಮ್ಮ ಹೊಸ ವರ್ಷವನ್ನು ಮತ್ತಷ್ಟು ವಿಶೇಷವಾಗಿಸಲು ಮರ್ಸಿಡೀಸ್ ಬೆಂಝ್ ಭರ್ಜರಿ ಆಫರ್ ಘೋಷಿಸಿದೆ. ಜರ್ಮನ್ ಕಾರು ತಯಾರಕ ಕಂಪನಿ ಮರ್ಸಿಡೀಸ್ ಬೆಂಝ್ ಕಾರುಗಳ ಪೈಕಿ ಮರ್ಸಿಡೀಸ್ ಬೆಂಝ್ E ಕ್ಲಾಸ್ ಅತ್ಯುತ್ತಮ ಕಾರುಗಳ ಪೈಕಿ ಒಂದಾಗಿದೆ. ಗರಿಷ್ಠ ಸುರಕ್ಷತೆ, ಆಕರ್ಷಕ ವಿನ್ಯಾಸ, ಸ್ಟೆಬಿಲಿಟಿ, ಹೊಸತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಅತ್ಯುತ್ತಮವಾಗಿದೆ. ಇಂಟೆಲಿಜೆನ್ಸ್ ಹಾಗೂ ಸ್ಪೋರ್ಟೀವ್ ಲುಕ್ ಹೊಂದಿರುವ ಮಾಸ್ಟರ್‌ಪೀಸ್ ಕಾರಾಗಿದೆ.
undefined
2021ಕ್ಕೆ ನೀವು ಮರ್ಸಿಡೀಸ್ ಬೆಂಝ್ ಇ ಕ್ಲಾಸ್ ಕಾರು ಚಲಾಯಿಸಲೇಬೇಕು ಅನ್ನೋದಕ್ಕೆ ಇವೆ 6 ಕಾರಣ:
ದಕ್ಷ ಎಂಜಿನ್: ಮರ್ಸಿಡೀಸ್ ಬೆಂಝ್ E ಕ್ಲಾಸ್ ಕಾರು ಅತ್ಯುತ್ತಮ ಕಾರ್ಯಕ್ಷಮತೆಯ ಎಂಜಿನ್ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕಾರು ಕಡಿಮೆ ಇಂಧನ ಬಳಸಲಿದೆ. ನಗರ ಹಾಗೂ ಪಟ್ಣದಲ್ಲಿನ ಡ್ರೈವಿಂಗ್ ವೇಳೆ ಎಂಜಿನ್ ಕಾರ್ಯಕ್ಷಮತೆ ಹಾಗೂ ಕಾರಿನ ಫರ್ಮಾಮೆನ್ಸ್ ಉತ್ತಮವಾಗಿದೆ.
ಸುಗಮ ಸವಾರಿ: ಪ್ರಯಾಸವಿಲ್ಲದ ಪ್ರಯಾಣದ ಅನುಭವ, ಸುಗಮ ಸವಾರಿ ಸೇರಿದಂತೆ ಸರಿಸಾಟಿ ಇಲ್ಲದ ರೋಡ್ ಎಕ್ಸ್‌ಪೀರಿಯನ್ಸ್ ನೀಡುವದರಿಂದ ಮರ್ಸಿಡೀಸ್ ಬೆಂಝ್ ಗ್ರಾಹಕರ ಮೊಲ ಆಯ್ಕೆಯಾಗಿದೆ. ದೂರ ಪ್ರಯಾಣ ಹಾಗೂ ಹೆದ್ದಾರಿಗಳಲ್ಲಿ ಮರ್ಸಿಡೀಸ್ ಬೆಂಜ್ E ಕ್ಲಾಸ್ ಹೇಳಿಮಾಡಿಸಿದ ಕಾರಾಗಿದೆ. ಕಾರಿನ ನಾಲ್ಕು ಏರ್‌ಸಸ್ಪೆನ್ಶನ್‌ನಿಂದ ರಸ್ತೆಯಲ್ಲಿರುವ ಹಲವು ರೋಡ್ ಹಂಪ್‌ಗಳ ಪ್ರಯಾಸ ಪ್ರಯಾಣದಲ್ಲಿ ಆಗುವುದೇ ಇಲ್ಲ.
ಹೈ-ಟೆಕ್: ಇತ್ತೀಚಿನ ದಿನಗಳಲ್ಲಿ ಮರ್ಸಿಡೀಸ್ ಬೆಂಝ್ ಭಾರತದಲ್ಲಿ ಬಿಡುಗಡೆ ಮಾಡಿದ ಎಲ್ಲಾ ಕಾರುಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಇನ್ನು ಕೆನೆಕ್ಟಿವಿಟಿ, ಅಸಿಸ್ಟೆನ್ಸ್, ಆರಾಮದಾಯಕ ಪ್ರಯಾಣ ಸೇರಿದಂತೆ ಫೀಚರ್ಸ್‌ಗಳಲ್ಲೂ ಅಗ್ರಜನಾಗಿದೆ. ಇಂಟೆಲೆಜೆನ್ಸ್ ಡ್ರೈವ್ ಹಾಗೂ ಮರ್ಸಿಡೀಸ್ ಮಿ ಕನೆಕ್ಟ್ ಆ್ಯಪ್ ಮೂಲಕ ಕಾರು ವಿಭಾಗದಲ್ಲಿ ಮರ್ಸಿಡೀಸ್ ಬೆಂಝ್ ಹೊಸ ಅಧ್ಯಾಯ ಬರೆದಿದೆ.
ಆರಾಮಾದಾಯಕ ಹಾಗೂ ಹೆಚ್ಚು ಸ್ಥಳವಕಾಶದ ಕ್ಯಾಬಿನ್: ಡ್ರೈವರ್ ಹಾಗೂ ಪ್ರಯಾಣಿಕರಿಗೆ ಹೆಚ್ಚು ಸ್ಥಳವಕಾಶ ನೀಡುವ ಮೂಲಕ ಮರ್ಸಿಡೀಸ್ ಬೆಂಝ್ ಇ ಕ್ಲಾಸ್ ಕಾರು ಸುಖಕರ ಹಾಗೂ ಆನಂದಾಯಕ ಪ್ರಯಾಣದ ಅನುಭವ ನೀಡಲಿದೆ. ಹೊಸ ಸೀಟಿಂಗ್ ಪರಿಕಲ್ಪನೆ, ಹಿಂಭಾಗದ ಸೀಟ್, ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ವೈಡ್‌ಸ್ಕ್ರೀನ್ ಕಾಕ್‌ಪಿಟ್, ಹಿಂಭಾಗದಲ್ಲಿ ವೈಯರ್‌ಲೆಸ್ ಚಾರ್ಜಿಂಗ್ ಹಾಗೂ ರೇರ್ ಟಚ್ ಸ್ಕ್ರೀನ್ ಫೀಚರ್ಸ್ ಒಳಗೊಂಡಿದೆ.
ಗರಿಷ್ಠ ಸುರಕ್ಷತೆಯ ಮರ್ಸಿಡೀಸ್ ಬೆಂಝ್: ಮರ್ಸಿಡೀಸ್ ಬೆಂಝ್ ಕಾರುಗಳ ಪೈಕಿ ಇ ಕ್ಲಾಸ್ ಗರಿಷ್ಠ ಸುರಕ್ಷತೆ ಒದಗಿಸುವ ಕಾರಾಗಿದೆ. ಅತ್ಯಾಧುನಿಕ ಸೇಫ್ಟಿ ಸಿಸ್ಟಮ್, ಸಕ್ರೀಯ ಬ್ರೇಕ್ ಅಸಿಸ್ಟ್ ಹೊಂದಿದೆ. ಆಕ್ಟೀವ್ ಬಾನೆಟ್‌ನೊಂದಿಗೆ ಪಾದಚಾರಿಗಳ ರಕ್ಷಣೆ ಮತ್ತು PRE-SAFE ಸುರಕ್ಷತಾ ಪರಿಕಲ್ಪನೆ ಹೊಂದಿದೆ.
ಆಕರ್ಷಕ ಹಾಗೂ ವಿಶೇಷ ಬೆಲೆ: ಸುರಕ್ಷತೆ, ಫೀಚರ್ಸ್, ತಂತ್ರಜ್ಞಾನ, ಆರಾಮದಾಯಕ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಮರ್ಸಿಡೀಸ್ ಬೆಂಝ್ ಇ ಕ್ಲಾಸ್ ಕಾರಿಗಿಂತ ಉತ್ತಮವಾದ ಕಾರು ಮತ್ತೊಂದಿಲ್ಲ. ಇದೀಗ ಮರ್ಸಿಡೀಸ್ ಬೆಂಝ್ ವಿಶೇಷ ಕೂಡುಗೆ ಘೋಷಿಸಿದೆ. ವಿಶೇಷ ಆಫರ್ ಮೂಲಕ ಪ್ರತಿ ತಿಂಗಳ ಕಂತು 49,555 ರೂಪಾಯಿ(EMI) ಮೂಲಕ ಹೊಚ್ಚ ಹೊಸ ಕಾರು ಖರೀದಿ ಸಾಧ್ಯವಿದೆ. 3 ವರ್ಷದಲ್ಲಿ ಹೊಸ ಸ್ಟಾರ್ ಅಪ್‌ಗ್ರೇಡ್ ಕೂಡ ಮಾಡಿಕೊಳ್ಳಬಹುದು. ಇ ಕ್ಲಾಸ್ ಕಾರು ಖರೀದಿಸುವುದಾದರೆ ಒಂದು ವರ್ಷದ ವಿಮೆ ಉಚಿತವಾಗಿ ಪಡೆಯಲಿದ್ದೀರಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: