ಭಾರತೀಯ ಮಾರುಕಟ್ಟೆಯಲ್ಲಿ 2019ರಲ್ಲಿ ಬಿಡುಗಡೆಯಾಗಿರುವ ರೆನೋ ಟ್ರೈಬರ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸೆವೆನ್ ಸೀಟರ್ ಈ ಎಂಪಿವಿ ಸುರಕ್ಷತೆ ಮತ್ತು ಫೀಚರ್‌ಗಳ ದೃಷ್ಟಿಯಿಂದಲೂ ಹೆಚ್ಚು ಗಮನ ಸೆಳೆಯುತ್ತದೆ. ಇದೀಗ ಗ್ಲೋಬಲ್ ಎನ್‌ಸಿಎಪಿ ಟ್ರೈಬರ್‌ಗೆ ಸೇಫ್ಟಿ ರೇಟಿಂಗ್ ಸ್ಟಾರ್ ನೀಡಿದೆ.
ಡಸ್ಟರ್, ಕ್ವಿಡ್ ಮ್ತತು ಕೈಗರ್, ಟ್ರೈಬರ್ ರೆನೋ ಕಂಪನಿಯ ಪ್ರಮುಖ ಕಾರ್ ಬ್ರ್ಯಾಂಡ್‌ಗಳು. ಭಾರತದ ಮಾರುಕಟ್ಟೆಯಲ್ಲಿ ಈ ಬ್ರ್ಯಾಂಡ್‌ಗಳ ಮೂಲಕ ಕಂಪನಿ ಜಬರ್ದಸ್ತ್ ಪಾಲನ್ನು ಹೊಂದಿದೆ. ಎಂಟ್ರಿ ಲೆವಲ್ ಕಾರು ಕ್ವಿಡ್‌ನಿಂದ ಹಿಡಿದು ಎಸ್‌ಯುವಿ ಡಸ್ಟರ್ ತನಕ ಎಲ್ಲ ಕಾರುಗಳು ಅತ್ಯಾಧುನಿಕ ಫೀಚರ್‌ಗಳಿಂದ ಹಿಡಿದು ಸುರಕ್ಷತೆಯವರೆಗೆ ಗಮನ ಸೆಳೆದಿವೆ. ಇದೀಗ ರೆನೋ ಟ್ರೈಬರ್ ಎಂಪಿವಿ ಕೂಡ ಸೇಫ್ಟಿ ರೇಟಿಂಗ್ ಪರೀಕ್ಷೆಗೊಳಪಟ್ಟಿದೆ. ಜತೆಗೆ, ಕಳೆದ 21 ತಿಂಗಳಲ್ಲಿ 75 ಸಾವಿರ ಟ್ರೈಬರ್ ಮಾರಾಟ ಕಂಡಿದೆ.
5 ಡೋರ್ ಮಹಿಂದ್ರಾ ಥಾರ್ ಪಕ್ಕಾ, ಆದರೆ ಯಾವಾಗ ಬಿಡುಗಡೆ?
undefined
ಗ್ಲೋಬಲ್ ಎನ್‌ಸಿಎಪಿ ಹಲವು ವಾಹನಗಳನ್ನು ಕ್ರ್ಯಾಶ್ ಟೆಸ್ಟಿಂಗ್ ನಡೆಸಿ, ಅವುಗಳಿಗೆ ಸೇಫ್ಟಿ ಶ್ರೇಯಾಂಕಗಳನ್ನು ನೀಡುವ ಕೆಲಸವನ್ನು ಮಾಡುತ್ತದೆ. ಅದೇ ರೀತಿ, ಏಳು ಸೀಟರ್ ಎಂಪಿವಿ ರೆನೋ ಟ್ರೈಬರ್ ಟೆಸ್ಟ್ ಮಾಡಿರುವ ಗ್ಲೋಬಲ್ ಎನ್‌ಸಿಪಿ ಅದಕ್ಕೆ ನಾಲ್ಕು ಸೇಫ್ಟಿ ರೇಟಿಂಗ್ ನೀಡಿದೆ.
ರೆನೋ ಕಂಪನಿಯ ಈ ಏಳು ಸೀಟರ್‌ಗಳ ಎಂಪಿವಿ ವಾಹನವನ್ನು ಭಾರತದಲ್ಲಿ ಕಳೆದ ವರ್ಷ ಲಾಂಚ್ ಮಾಡಲಾಗಿತ್ತು. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅಡಲ್ಟ್ ಅಕ್ಯುಪಂಟ್ಸ್(ಹಿರಿಯರು) ವಿಭಾಗದಲ್ಲಿ ನಾಲ್ಕು ಮತ್ತು ಚೈಲ್ಡ್ ಅಕ್ಯುಪಂಟ್ಸ್(ಮಕ್ಕಳ) ವಿಭಾಗದಲ್ಲಿ ಮೂರು ಸೇಫ್ಟಿ ಸ್ಟಾರ್‌ಗಳನ್ನು ಪಡೆದುಕೊಂಡಿದೆ.
The ’s safety has been certified by Global NCAP, letting you drive your loved ones with total peace of mind. pic.twitter.com/04kLiExlMs
— Renault India (@RenaultIndia)
ಈ ರೆನೋ ಕಂಪನಿಯ ಎಂಟ್ರಿ ಲೆವಲ್ ಎಂಪಿವಿ ಟ್ರೈಬರ್‌ನಲ್ಲಿ ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್, ಎಬಿಎಸ್, ಸೀಟ್‌ಬೆಲ್ಟ್ ರಿಮೈಂಡರ್‌ನಂಥ ಫೀಚರ್‌ಗಳು ಸ್ಟ್ಯಾಂಡರ್ಡ್ ಲೆವಲ್‌ನಲ್ಲಿ ಬರುತ್ತವೆ. ಕಂಪನಿಯ ಈ ಹಿಂದಿನ ಕಾರುಗಳ ಸೇಫ್ಟಿ ರೇಟಿಂಗ್‌ಗೆ ಹೋಲಿಸಿದರೆ ಈ ಟ್ರೈಬರ್ ರೇಟಿಂಗ್ ಪಡೆದುಕೊಂಡಿರುವುದು ಹೆಚ್ಚು ಸುಧಾರಣೆ ಕಾಣಬಹುದಾಗಿದೆ.
2016ರಲ್ಲಿ ಕ್ವಿಡ್‌ಗೆ ನಡೆಸಲಾದ ಪರೀಕ್ಷೆಗೆ ಹೋಲಿಸಿದರೆ ರೆನೋ ಕಂಪನಿಯ ಟ್ರೈಬರ್‌ನಲ್ಲಿ ಮುಂಬದಿಯಲ್ಲಿ ಕುಳಿತುಕೊಳ್ಳುವ ಹಿರಿಯರ ಪ್ರಯಾಣಿಕರ ಸೇಫ್ಟಿ ವಿಷಯದಲ್ಲಿ ಗಮನಾರ್ಹ ಎನ್ನುವ ರೀತಿಯಲ್ಲಿ ಸುರಕ್ಷತೆಯನ್ನು ಹೆಚ್ಚಿಸಿದೆ. ಇದೇ ರೀತಿಯ ಸುರಕ್ಷತೆಯ ಮಟ್ಟವನ್ನು ಕಾಯ್ದುಕೊಳ್ಳುವಂತೆ ರೆನೋವನ್ನು ಉತ್ತೇಜಿಸುತ್ತಿದ್ದೇವೆ. ಆ ಮೂಲಕ ಕನಿಷ್ಠ 5 ಸ್ಟಾರ್ ಸೇಫ್ಟಿ ಶ್ರೇಯಾಂಕ ಪಡೆಯಬೇಕು ಎಂದು ಗ್ಲೋಬಲ್ ಎನ್‌ಸಿಎಪಿ ಹೇಳಿಕೊಂಡಿದೆ.
ಟ್ರೈಬರ್‌ನಲ್ಲಿ ಡ್ರೈವರ್‌ನ ಎದೆ ಮತ್ತು ಕೋ ಪ್ಯಾಸೆಂಜರ್‌ನ ಕುತ್ತಿಗೆ ಮತ್ತು ತಲೆಗೆ ಉತ್ತಮ ರಕ್ಷಣೆ ದೊರೆಯುತ್ತದೆ. ಆದರೆ, ಕಾರಿನ ಒಟ್ಟು ಬಾಡಿಶೆಲ್ ಮಾತ್ರ ಸ್ಥಿರತೆಯನ್ನ ಹೊಂದಿಲ್ಲ ಎಂದು ಗ್ಲೋಬಲ್ ಎನ್‌ಸಿಎಪಿ ತನ್ನ ವರದಿಯಲ್ಲಿ ತಿಳಿಸಿದೆ.
ಲಾಭ ದಾಖಲಿಸಿದ ಮಹಿಂದ್ರಾ, 2026ರ ಹೊತ್ತಿಗೆ 23 ಹೊಸ ವಾಹನ
ಭಾರತದಲ್ಲಿ ಮಾರಾಟವಾಗುವ ಜನಪ್ರಿಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ಅನ್ನು ಗ್ಲೋಬಲ್ ಎನ್‌ಸಿಎಪಿ ಸಕ್ರಿಯವಾಗಿ ನಡೆಸುತ್ತದೆ. ಈ ಮೂಲಕ ಕಾರು ಉತ್ಪಾದಕ ಕಂಪನಿಗಳು ಸೇಫರ್ ಕಾರುಗಳನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಟಾಟಾ ಅಲ್ಟ್ರೋಜ್, ಟಾಟಾ ಟಿಯಾಗೋ, ಟಾಟಾ ನೆಕ್ಸಾನ್, ವೋಕ್ಸ್‌ವ್ಯಾಗನ್ ಪೋಲೋ, ಮಾರುತಿ ಸುಜುಕಿ ವಿಟಾರಾ ಬ್ರೆಜ್ ಮತ್ತಿತರು ಕಾರುಗಳು ನಾಲ್ಕು ಮತ್ತು ಅದಕ್ಕಿಂತ ಹೆಚ್ಚಿನ ಸ್ಟಾರ್‌ಗಳನ್ನು ಸಂಪಾದಿಸಿವೆ.
2019ರ ಆಗಸ್ಟ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಟ್ರೈಬರ್ ಈವರೆಗೆ 75 ಸಾವಿರ ಮಾರಾಟ ಕಂಡಿದೆ. ರೆನೋ ಟ್ರೈಬರ್‌ನಲ್ಲಿರುವ ಎಂಜಿನ್ ಕ್ವಿಡ್‌ನ 1.0 ಎಂಜಿನ್ ಅಪ್‌ಗ್ರೆಡೆಡ್, ಮೂರು ಸಿಲೆಂಡರ್ ಎಂಜಿನ್ ಆಗಿದೆ. ಈ ಎಂಜಿನ್ 72 ಬಿಎಚ್‌ಪಿ ಮತ್ತು 96 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡರ್ ಮ್ಯಾನುವಲ್ ಗಿಯರ್ ಬಾಕ್ಸ್‌ನೊಂದಿಗೆ ಬರುತ್ತದೆ. ಕಂಪನಿಯು ಟ್ರೈಬರ್‌ಗೆ 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ಆವೃತ್ತಿಗಳನ್ನು ಪರಿಚಯಿಸುವ ಸಾಧ್ಯತೆ ಇದೆ.
ಭಾರತದಲ್ಲಿ 2021 ಮರ್ಸಿಡಿಸ್ ಜಿಎಲ್ಎ ಎಸ್‌ಯುವಿ ಲಾಂಚ್, ಆರಂಭಿಕ ಬೆಲೆ?