ದೇಶಿ ವಾಹನ ಉತ್ಪಾದಕ ಕಂಪನಿ ಮಹಿಂದ್ರಾ ಮತ್ತು ಮಹಿಂದ್ರಾ ಆಟೋ ಕ್ಷೇತ್ರದಲ್ಲಿ ಪ್ರಭಾವಿಯಾಗಿದೆ. ಈ ಕಂಪನಿಯ ಆಫ್ ರೋಡ್ ಎಸ್‌ಯುವಿ ಥಾರ್ ಬಹಳ ಜನಪ್ರಿಯವಾಗಿದೆ. ಕಳೆದ ವರ್ಷವಷ್ಟೇ ಹೊಸ ತಲೆಮಾರಿನ 3 ಡೋರ್ ಥಾರ್ ಬಿಡುಗಡೆ ಮಾಡಿದ್ದ ಕಂಪನಿ, 5 ಡೋರ್ ಥಾರ್ ಕೂಡ ಬರುವುದನ್ನು ಖಾತ್ರಿ ಪಡಿಸಿದೆ. ಆದರೆ, ಯಾವಾಗ ಬಿಡುಗಡೆಯಾಗಲಿದೆ?
ಆಫ್ ರೋಡ್ ಎಸ್‌ಯುವಿ ಥಾರ್, ಮಹಿಂದ್ರಾ ಕಂಪನಿಯ ಅತ್ಯಂತ ಜನಪ್ರಿಯ ವಾಹನವಾಗಿದೆ. 2020ರ ಅಕ್ಟೋಬರ್ 2ರಂದು ಹೊಸ ಮಾಡೆಲ್ ಬಿಡುಗಡೆಗೊಂಡ ಬಳಿಕ ಅದರ ಜನಪ್ರಿಯತೆ ಮತ್ತಷ್ಟು ಮೇಲಕ್ಕೇರಿದೆ. ಇದರ ಮಧ್ಯೆಯೇ 5 ಡೋರ್ ಥಾರ್ ಯಾವಾಗ ಬರಲಿದೆ ಎಂಬ ಪ್ರಶ್ನೆಯೂ ಇತ್ತು. ಈ ಪ್ರಶ್ನೆಗೆ ಕಂಪನಿ ಇದೀಗ ಉತ್ತರ ನೀಡಿದೆ. ಭಾರತದಲ್ಲಿ ಶೀಘ್ರವೇ 5 ಡೋರ್ ಥಾರ್ ಲಾಂಚ್ ಮಾಡುವ ಬಗ್ಗೆ ಹೇಳಿಕೊಂಡಿದೆ.
2021ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ವರದಿ ಬಿಡುಗಡೆಯ ಸಂದರ್ಭದಲ್ಲಿ ಆನ್‌ಲೈನ್ ಮೀಡಿಯಾ ಸಂವಾದದ ವೇಳೆ ಮಹಿಂದ್ರಾ ಕಂಪನಿಯು 5 ಡೋರ್ ಥಾರ್ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ. ಜೊತೆಗೆ 2026ರ ಹೊತ್ತಿಗೆ 9 ಹೊಸ ವಾಹನಗಳನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿಕೊಂಡಿದೆ. ಈ ಒಂಬತ್ತು ವಾಹನಗಳ ಪೈಕಿ 5 ಡೋರ್ ಮಹಿಂದ್ರಾ ಥಾರ್ ಕೂಡ ಒಂದಾಗಿದೆ.
undefined
ಭಾರತದಲ್ಲಿ 2021 ಮರ್ಸಿಡಿಸ್ ಜಿಎಲ್ಎ ಎಸ್‌ಯುವಿ ಲಾಂಚ್, ಆರಂಭಿಕ ಬೆಲೆ?
5 ಡೋರ್ ಥಾರ್ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಕಂಪನಿ ಖಚಿತವಾಗಿ ಹೇಳಿಲ್ಲ. ಆದರೂ 2023ರಿಂದ 2026ರ ನಡುವೆ ಈ ಥಾರ್ ಎಸ್‌ಯುವಿ ಬಿಡುಗಡೆಯಾಗಲಿದೆ ಎಂಬುದನ್ನು ಕಂಪನಿ ಖಚಿತಪಡಿಸಿದೆ. ಇಷ್ಟು ಮಾತ್ರವಲ್ಲದೇ ಹೊಸ ತಲೆಮಾರಿನ ಮಹಿಂದ್ರಾ ಬೊಲೆರೋ, ಬ್ಯಾಟರಿ ಆಧರಿತ ಎರಡು ವಾಹನಗಳು, ಹೊಸ ತಲೆಮಾರಿನ ಎಕ್ಸ್‌ಯುವಿ 300 ಮತ್ತು ಡಬ್ಲ್ಯೂ620 ಮತ್ತು ವಿ2021 ಕೋಡ್‌ನೇಮ್ ಇರುವ ವಾಹನಗಳು ರಸ್ತೆಗಿಳಿಯಲಿವೆ ಎಂದು ಕಂಪನಿ ಹೇಳಿಕೊಂಡಿದೆ.
ಈಗ ಭಾರತೀಯ ರಸ್ತೆಗಳಲ್ಲಿ ಓಡುತ್ತಿರುವ ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ಕಂಪನಿಯ 2020 ಅಕ್ಟೋಬರ್‌ನಲ್ಲಿ ಲಾಂಚ್ ಮಾಡಿತ್ತು. ಈ ಆಫ್‌ರೋಡ್ ಎಸ್‌ಯುವಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಲ್ಲಿ ಈ ಥಾರ್‌ಗೆ ನಾಲ್ಕು ಸ್ಟಾರ್‌ಗಳು ಸಿಕ್ಕಿವೆ. ಜೊತೆಗೆ ಈ ಎಸ್‌ಯುವಿ ಹೊಸ ಹೊಸ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ.
ಫೈವ್ ಡೋರ್ ಥಾರ್ ಎಸ್‌ಯುವಿಯಲ್ಲಿ 3 ಡೋರ್ ಥಾರ್‌ನಲ್ಲಿರುವ ಎಂಜಿನ್ ಅನ್ನು ನಿರೀಕ್ಷಿಸಬಹುದಾಗಿದೆ. ಈಗಿರುವ ಥಾರ್‌ನಲ್ಲಿ 2.0 ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 2.2 ಲೀ. ಟರ್ಬೋ ಚಾರ್ಜ್ಡ್ ಡಿಸೇಲ್ ಎಂಜಿನ್ ನೀಡಲಾಗುತ್ತದೆ. ಈ ಎರಡೂ ಎಂಜಿನ್‌ಗಳಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸಿಮಷಿನ್ ಇದೆ.
ಭಾರತದ ಮಾರುಕಟ್ಟೆಗೆ ಬ್ರಿಟನ್‌ನ ಎಲೆಕ್ಟ್ರಿಕ್ ಬೈಕ್
2021 ಹಣಕಾಸು ವರ್ಷದ 4ನೇ ತ್ರೈಮಾಸಿಕ ವರದಿ
ಆಟೋ, ತಂತ್ರಜ್ಞಾನ ಸೇರಿದಂತ ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಹಿಂದ್ರಾ ಮತ್ತು ಮಹಿಂದ್ರಾ ಕಂಪನಿಯ 2021ರ ಹಣಕಾಸಿನ ನಾಲ್ಕನೇ ತ್ರೈಮಾಸಿಕದ ವರದಿ ಬಹಿರಂಗವಾಗಿದೆ. ಕಂಪನಿಯ ಈ ನಾಲ್ಕನೇ ತ್ರೈಮಾಸಿಕದಲ್ಲಿ ಅತ್ಯುತ್ತಮ ಸಾಧನೆ ತೋರಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ 32,55 ಕೋಟಿ ರೂ.ನಷ್ಟ ತೋರಿಸಿದ್ದ ಕಂಪನಿ ಇದೀಗ ಚೇತರಿಸಿಕೊಂಡು 163 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ. ಇದೇ ವೇಳೆ, ಕಂಪನಿಯು ಶೇ.48ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ 9006 ಕೋಟಿ ರೂ. ಬೆಳವಣಿಗೆ ದಾಖಲಿಸಿದ್ದು ಈಗ ಅದು 13,338 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಆಟೋ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯನ್ನು ಕಂಡಿರುವ ಕಂಪನಿ 2026 ಹೊತ್ತಿಗೆ ಪ್ರಯಾಣಿಕ ಮತ್ತು ಕಮರ್ಷಿಯಲ್ ವಾಹನಗಳ ವಿಭಾಗದಲ್ಲಿ 23 ಹೊಸ ವಾಹನಗಳನ್ನು ಪರಿಚಯಿಸಲಿದೆ ಮತ್ತು ಇದಕ್ಕೆ ಹೆಚ್ಚುವರಿಯಾಗಿ 27 ಟ್ರಾಕ್ಟರ್ ಮಾಡೆಲ್‌ಗಳೂ ಇರಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಲಾಭ ದಾಖಲಿಸಿದ ಮಹಿಂದ್ರಾ, 2026ರ ಹೊತ್ತಿಗೆ 23 ಹೊಸ ವಾಹನ
ಮುಂಬೈ ಮೂಲದ ಮಹಿಂದ್ರಾ ಕಂಪನಿಯು ಈ ಹೊಸ ಮಾಡೆಲ್‌ಗಳ ಲಾಂಚ್ ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ವಾಹನಗಳ ಅಪ್‌ಗ್ರೇಡ್‌ಗಾಗಿ ಲಾಂಚ್‌ಗಾಗಿ 12,000 ಕೋಟಿ ರೂ. ವ್ಯಯಿಸಲಿದೆ. ಹಾಗೆಯೇ 5000 ಕೋಟಿ ರೂಪಾಯಿಯನ್ನು ಕಂಪನಿಯ ಇತರೆಡೆ ಹೂಡಿಕೆ ಮಾಡಲಿದೆ.