ಈ ತಿಂಗಳು ಎಂಟು ಕಾರು ಲಾಂಚ್! ಆ ಕಾರುಗಳು ಯಾವವು?

By Suvarna NewsFirst Published Nov 1, 2021, 5:22 PM IST
Highlights

ಮಾರುತಿ ಸೆಲೆರಿಯೋ (Maruti Celerio)ಯಿಂದ ಹಿಡಿದು ಐಷಾರಾಮಿ ಬೆಂಜ್ (Mecedes Benz), ಎಲೆಕ್ಟ್ರಿಕ್ ಕಾರುಗಳು ಈ ದೀಪಾವಳಿ ಹಬ್ಬಕ್ಕೆ ಅಂದರೆ, ನವೆಂಬರ್ ತಿಂಗಳಲ್ಲಿ ಲಾಂಚ್ ಆಗಲಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕರಲ್ಲೂ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಈಗಾಗಲೇ ಹಲವು ಕಂಪನಿಗಳು ತಮ್ಮ ಕಾರು ಲಾಂಚ್ ದಿನಾಂಕವನ್ನು ಖಚಿತಪಡಿಸಿವೆ.

ಭಾರತದಲ್ಲಿ ದೀಪಾವಳಿ ಬಹುದೊಡ್ಡ ಹಬ್ಬ. ಹಾಗಾಗಿ, ಸಾಕಷ್ಟು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಈ ಹಬ್ಬಕ್ಕೆ ಬಿಡುಗಡೆ ಮಾಡುತ್ತವೆ. ಗ್ರಾಹಕರಿಂದ ಖರೀದಿಯೂ ಜೋರಾಗಿರುತ್ತದೆ. ಇದಕ್ಕೆ ಆಟೊಮೋಬೈಲ್ ಕಂಪನಿಗಳು ಕೂಡ ಹೊರತಾಗಿಲ್ಲ. ಈ ಹಬ್ಬಕ್ಕೆ ಅಂದರೆ, ನವೆಂರ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ 8 ಕಾರುಗಳು ಲಾಂಚ್ ಆಗಲಿವೆ.

ಬಜೆಟ್ ಕಾರಿನಿಂದ ಹಿಡಿದು ಪ್ರೀಮಿಯಂವರೆಗಿನ ಕಾರುಗಳು, ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ. ಹೊಸ ತಲೆಮಾರಿನ ಮಾರುತಿ ಸೆಲೆರಿಯೋ (2021 Maruti Celerio), ಆಡಿ ಕ್ಯೂ5 (2021 Audi Q5), ಸ್ಕೋಡಾ ಸಾಲ್ವಿಯಾ (Skoda Slavia), ಮರ್ಸಿಡೇಸ್ ಬೆಂಜ್ ಎಎಂಜಿ ಎ45 ಎಸ್( Mercedes-Benz AMG A45 S), ಪೋರ್ಶೆ ಟೈಕಾನ್ ಇವಿ(Porsche Taycan EV), ಪೋರ್ಶೆ ಮ್ಯಾಕನ್  (Porsche Macan), ಮಿನಿ ಕೂಪರ್ ಎಸ್ಇ (MINI Cooper SE) ಹಾಗೂ ವೋಕ್ಸ್ ವ್ಯಾಗನ್ ಟೈಗನ್ (volkswagen taigun) ಕಾರುಗಳು ಬಿಡುಗಡೆಯಾಗಲಿವೆ.

ಸದ್ದಿಲ್ಲದೇ ಬಿಡುಗಡೆಯಾದ 2021 ಜಾಗ್ವಾರ್ ಎಕ್ಸ್ ಎಫ್ !

ಹೊಸ ತಲೆಮಾರಿನ ಸೆಲೆರಿಯೋ
ಮಾರುತಿ ಕಂಪನಿಯ ಹೊಸ ತಲೆಮಾರಿನ ಸೆಲೆರಿಯೋ ಈ ಹಬ್ಬಕ್ಕೆ ಲಾಂಚ್ ಆಗಲಿದೆ. ಫೇಸ್‌ಲಿಫ್ಟ್ ಮಾಡಲಾಗಿರುವ ಈ ಕಾರಿನ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ನವೆಂಬರ್ ತಿಂಗಳಲ್ಲಿ ಲಾಂಚ್ ಆಗಲಿರುವ ಈ ಕಾರ್ ಹೊಸ ವಿನ್ಯಾಸ, ಹೊಸ ಎಂಜಿನ್ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಲಿದೆ ಎನ್ನಲಾಗಿದೆ. ಈ ಹೊಸ ಸೆಲೆರಿಯೋ ಹುಂಡೈ ಸ್ಯಾಂಟ್ರೋ, ಟಾಟಾ ಟಿಯಾಗೋ, ಡಸ್ಟನ್ ಗೋ ಕಾರುಗಳಿಗೆ ಪೈಪೋಟಿ ನೀಡಲಿದೆ. 

ಆಡಿ ಕ್ಯೂ5 - 2021 Audi Q5
ಭಾರತೀಯ ಮಾರುಕಟ್ಟೆಗೆ ಆಡಿ ಕ್ಯೂ5 ಎಸ್‌ಯುವಿ ಮರಳಿ ಪ್ರವೇಶಿಸಲಿದೆ. ಬಿಎಸ್ 6 ನಿಯಮಗಳೊಂದಿಗೆ ಪೆಟ್ರೋಲ್ ಎಂಜಿನ್, ಹೊಸ ವಿನ್ಯಾಸ ಮತ್ತು ಹೊಸ ಫೀಚರ್‌ಗಳೊಂದಿಗೆ 2021ರ ಆಡಿ ಕ್ಯೂ5 ಭಾರತೀಯ ಮಾರುಕಟ್ಟೆಗೆ ಮರಳಿ ಲಾಂಚ್ ಆಗಲಿದೆ.  BMW X3, Mercedes GLC, Volvo XC60 ಎಸ್‌ಯುವಿಗಳಿಗೆ ಈ ಆಡಿ ಕ್ಯೂ5 ಕಾರ್ ಸಖತ್ ಪೈಪೋಟಿ ನೀಡುವ ಸಾಧ್ಯತೆ ಇದೆ. ಈ ಕಾರಿನಲ್ಲಿ ನೀವು 2.0 ಲೀಟರ್ 45 TFSI ಪೆಟ್ರೋಲ್ ಎಂಜಿನ್ ಅನ್ನು ನೋಡಬಹುದು.

ಮರ್ಸಿಡೆಸ್  ಬೆಂಜ್ AMG A45 S
ಭಾರತೀಯ ಮಾರುಕಟ್ಟೆಗೆ ಮರ್ಸಿಡೆಸ್ ಬೆಂಜ್ ಇಂಡಿಯಾ ಕಂಪನಿಯು ನವೆಂಬರ್ 17ರಂದು AMG A45 S ಕಾರನ್ನು ಲಾಂಚ್ ಮಾಡಲಿದೆ. 2.0 ಲೀಟರ್, ನಾಲ್ಕು ಸಿಲಿಂಡರ್ ಹಾಗೂ ಟರ್ಬೋಚಾರ್ಜ್ಡ್ ಎಂಜಿನ್ ಇರಲಿದೆ.

ಥಾರ್ ಪೂರ್ತಿ ಬಚ್ಚನ್ ಸಿನಿಮಾಗಳ ಡೈಲಾಗ್, ಡ್ಯಾಶ್‌ಬೋರ್ಡ್ ಮೇಲೆ ಅಮಿತಾಭ್ ಆಟೋಗ್ರಾಫ್

ಪೋರ್ಶೆ Taycan EV
ಈ ಪೋರ್ಶೆ Taycan EV ಈ ಮೊದಲೇ ಲಾಂಚ್ ಆಗಬೇಕಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದಿಂದ ಸಾಧ್ಯವಾಗಿರಲಿಲ್ಲ. ಇದೀಗ ಕಂಪನಿಯು ಈ ನವೆಂಬರ್ 12ರಂದು ಈ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಭಾರತದಲ್ಲಿ ಈ ಎಲೆಕ್ಟ್ರಿಕ್ ಕಾರು ಎರಡು ವೆರಿಯೆಂಟ್‌ಗಳಲ್ಲಿ ದೊರೆಯಲಿದೆ. ಅದು ಟರ್ಬೋ ಮತ್ತು ಟರ್ಬೋ ಎಸ್ ವೆರಿಯೆಂಟ್‌ಗಳಲ್ಲಿ ಸಿಗಲಿದೆ. 



ಪೋರ್ಶೆ Macan
ಪೋರ್ಶೆ ಕಂಪನಿಯ ಮತ್ತೊಂದು ಎಸ್‌ಯುವಿ ಇದು. ಪೋರ್ಶೆ Macan ಎಸ್‌ಯುವಿ  2.0 ಲೀಟರ್, ನಾಲ್ಕು ಸಿಲೆಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದೆ. ಸೆವೆನ್ ಸ್ಪೀಡ್ DCT ಟ್ರಾನ್ಸಿಮಿಷನ್ ಇದೆ. ಕಂಪನಿಯು ಇದರಲ್ಲೇ 2.9 ವಿ6 ಎಂಜನ್ ಹೊಂದಿರುವ ಮತ್ತೊಂದು ವೆರಿಯೆಂಟ್ ಕೂಡ ಲಾಂಚ್ ಮಾಡುವ ಸಾಧ್ಯತೆ ಇದೆ. 

ಮಿನಿ ಕೂಪರ್ SE
ಬಿಎಂಡಬ್ಲೂ ತನ್ನ ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್‌ಇ ಕಾರನ್ನು ಭಾರತೀಯ ಮಾರುಕಟ್ಟೆಗೆ ಈ ತಿಂಗಳವೇ ಲಾಂಚ್ ಮಾಡಲಿದೆ. ಈಗಾಗಲೇ ಈ ಕಾರಿಗೆ ಬುಕ್ಕಿಂಗ್ ಆರಂಭಿಸಲಾಗಿದೆ. ಒಂದು ಲಕ್ಷ ರೂ. ಕೊಟ್ಟು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಮೂರು ಬಾಗಿಲುಗಳನ್ನು ಹೊಂದಿರುವ ಈ ಕಾರ್ ಅನ್ನು ಚಾರ್ಜ್ ಮಾಡಿದರೆ 270 ಕಿ.ಮೀ.ವರೆಗೂ ಓಡಬಹುದು.

ಮಾರುತಿಯಿಂದ ಬಲೆನೋ ಆಧರಿತ SUV: ಇದು ಪಂಚ್‌ನ ಪ್ರತಿಸ್ಪರ್ಧಿ

click me!