ಬೆಂಗಳೂರು(ಅ.29) : ಸ್ಕೋಡಾ ಇಂಡಿಯಾಗೆ(Skoda) ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹೊಸ ಹೊಸ ಕಾರುಗಳ ಬಿಡುಗಡೆ ಮೂಲಕ ದೇಶದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಸ್ಕೋಡಾ ಸಜ್ಜಾಗಿದೆ. ಕುಶಾಕ್ SUV ಕಾರು ಬಿಡುಗಡೆಯ ನಂತರ, ಸ್ಕೋಡಾ ಈ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಗೆ ತನ್ನ ಉತ್ಪನ್ನ ಪ್ರಚಾರದಲ್ಲಿ ಎರಡನೇ ಹಂತದ ಕಾರು ಅನಾವರಣಗೊಳಿಸಲು ಸಜ್ಜಾಗಿದೆ. ಜೆಕ್ ಕಾರು ತಯಾರಕ ಕಂಪನಿಯ ಇತ್ತೀಚಿನ ಮಾದರಿ ಸ್ಲಾವಿಯಾ(Slavia), ಸೆಡಾನ್ ಶ್ರೇಣಿಗಳನ್ನು ಪೂರ್ಣಗೊಳಿಸುತ್ತದೆ ಮತ್ತು ಬ್ರ್ಯಾಂಡ್‌ಗೆ ಪೂರಕವಾದ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ಮಧ್ಯಮ ಗಾತ್ರದ ಪ್ರೀಮಿಯಂ ಸೆಡಾನ್ ಅನ್ನು ಎರಡು ಶಕ್ತಿಶಾಲಿ ಮತ್ತು ಪರಿಣಾಮಕಾರಿ ಟಿಎಸ್ಐ ಎಂಜಿನ್‌ಗಳ ಆಯ್ಕೆಯೊಂದಿಗೆ ನೀಡಲಾಗುವುದು. ಜೊತೆಗೆ ಆರು ಏರ್‌ಬ್ಯಾಗ್‌ಗಳು ಮತ್ತು ಹಲವಾರು ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು ಒಳಗೊಂಡಿರುವ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಕೋಡಾ ಆಟೋ(Skoda Auto) ನೇತೃತ್ವದ ಇಂಡಿಯಾ 2.0 ಯೋಜನೆಯಲ್ಲಿ ವೋಕ್ಸ್‌ವ್ಯಾಗನ್ ಗ್ರೂಪ್ ಒಂದು ಬಿಲಿಯನ್ ಯುರೋಗಳನ್ನು ಹೂಡಿಕೆ ಮಾಡುತ್ತಿದೆ.
ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಲಿಮಿಡೆಡ್ ಎಡಿಷನ್ ಬಿಡುಗಡೆ; ಬೆಲೆ 11.99 ಲಕ್ಷ ರೂ!
ನಮ್ಮ ಕಾಂಪ್ಯಾಕ್ಟ್ ಎಸ್‌ಯುವಿ ಕುಶಾಕ್‌ನ(Kushaq) ಯಶಸ್ವಿ ಬಿಡುಗಡೆಯ ನಂತರ, ನಾವು ಈಗ ಈ ಇತ್ತೀಚಿನ ಮಾದರಿಯಾದ ಸ್ಕೋಡಾ ಸ್ಲಾವಿಯಾಗೆ ಸಿದ್ಧವಾಗುತ್ತಿದ್ದೇವೆ. ಈ ಮಧ್ಯಮ ಗಾತ್ರದ ಪ್ರೀಮಿಯಂ ಸೆಡಾನ್ ಭಾರತದಲ್ಲಿನ ಹೊಸ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಸ್ಕೋಡಾ ಆಟೋವನ್ನು ಭಾರತದಲ್ಲಿ ಪ್ರಮುಖ ಯುರೋಪಿಯನ್ ಕಾರು ತಯಾರಕ ಕಂಪನಿಯನ್ನಾಗಿ ಅಭಿವೃದ್ಧಿಪಡಿಸುವ ನಮ್ಮ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವತ್ತ ನಾವು ಮುಂದಿನ ಹೆಜ್ಜೆಯನ್ನು ಇಡುತ್ತಿದ್ದೇವೆ ಎಂದು ಸ್ಕೋಡಾ ಆಟೋ ಸಿಇಒ ಥಾಮಸ್ ಶಾಫರ್ ಹೇಳಿದರು.
ಹೊಸ ಸ್ಕೋಡಾ ಸ್ಲಾವಿಯಾದೊಂದಿಗೆ, ನಾವು ಇಂಡಿಯಾ 2.0 ಯೋಜನೆಯಡಿಯಲ್ಲಿ ನಮ್ಮ ಮಾಡೆಲ್ ಅಭಿಯಾನವನ್ನು ಮುಂದುವರಿಸುತ್ತಿದ್ದೇವೆ. ದೃಢವಾದ ನಿರ್ಮಾಣ, ಸುರಕ್ಷತೆ, ಉತ್ತಮ ಗುಣಮಟ್ಟ ಮತ್ತು ಹಣಕ್ಕೆ ಉತ್ತಮ ಮೌಲ್ಯದಿಂದಾಗಿ ಭಾರತೀಯ ಗ್ರಾಹಕರಿಂದ ಹೆಚ್ಚು ಮೆಚ್ಚುಗೆ ಪಡೆದಿರುವ ಕುಶಾಕ್‌ಗೆ ಪೂರಕವಾಗಿ, ಸ್ಲಾವಿಯಾ ಈ ಎಲ್ಲಾ ಅಂಶಗಳನ್ನು ಒದಗಿಸುತ್ತದೆ ಮತ್ತು ಈ ವಿಭಾಗದಲ್ಲಿ ವಿನ್ಯಾಸ ಮತ್ತು ಕಾರ್ಯಕ್ಷಮತೆಗಾಗಿ ಹೊಸ ಮಾನದಂಡಗಳನ್ನು ನಿಗದಿಸುತ್ತದೆ. ಭಾರತ ಮತ್ತು ವಿಶ್ವಕ್ಕಾಗಿ ಭಾರತದಲ್ಲಿ ನಿರ್ಮಿಸಲಾಗಿರುವ ನಮ್ಮ ಇತ್ತೀಚಿನ ಮಾಡೆಲ್, ಜಾಗತಿಕ ತಂಡದ ಸಹಯೋಗದೊಂದಿಗೆ ಅದರ ಅಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡಿದ ನಮ್ಮ ಸ್ಥಳೀಯ ಎಂಜಿನಿಯರ್‌ಗಳ ಕೌಶಲ್ಯ ಮತ್ತು ಪರಿಣತಿಯನ್ನು ವಿವರಿಸುತ್ತದೆ ಎಂದು ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಗುರುಪ್ರತಾಪ್ ಬೋಪರಾಯ್ ಹೇಳಿದ್ದಾರೆ.
ಭಾರತದಲ್ಲಿ ಸ್ಕೋಡಾ ಕುಶಾಕ್ SUV ಕಾರು ಬಿಡುಗಡೆ; ಬುಕಿಂಗ್ ಆರಂಭ!
ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಝಾಕ್ ಹೋಲಿಸ್ ಹೇಳುವಂತೆ "ನಮ್ಮ ಹೊಸ ಸ್ಲಾವಿಯಾದೊಂದಿಗೆ, ನಾವು ಅತ್ಯುತ್ತಮವಾದ ವಿನ್ಯಾಸ, ನಿರ್ಮಾಣ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಡ್ರೈವಿಂಗ್ ಡೈನಾಮಿಕ್ಸ್ ಅನ್ನು ನೀಡುವ ವೈಶಿಷ್ಟ್ಯ ಒಳಗೊಂಡ ವಾಹನವನ್ನು ಪ್ರಾರಂಭಿಸುತ್ತಿದ್ದೇವೆ. ಮಧ್ಯಮ ಗಾತ್ರದ ಪ್ರೀಮಿಯಂ ಸೆಡಾನ್‌ನ ಪ್ರಯೋಜನಗಳನ್ನು ಸ್ಕೋಡಾದ ಭಾವನಾತ್ಮಕ ವಿನ್ಯಾಸ ಭಾಷೆ, ಆಧುನಿಕ ತಂತ್ರಜ್ಞಾನ ಮತ್ತು ಅತ್ಯಾಧುನಿಕ ನೆರವು ವ್ಯವಸ್ಥೆಗಳೊಂದಿಗೆ ಸ್ಲಾವಿಯಾ ಅನ್ನು ಸಂಯೋಜಿಸುತ್ತದೆ.
ಹೊಚ್ಚಹೊಸ ಸ್ಕೋಡಾ ಸ್ಲಾವಿಯಾ: ಇಂಡಿಯಾ 2.0 ಉತ್ಪನ್ನ ಪ್ರಚಾರದ ಮುಂದಿನ ಮಾದರಿ
› ಭಾರತಕ್ಕೆ ನಿರ್ದಿಷ್ಟವಾದ ಎಮ್‌ಕ್ಯೂಬಿ-ಎ0-ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಸ್ಕೋಡಾದ ಎರಡನೇ ಮಾಡೆಲ್
› ಎರಡು ಶಕ್ತಿಶಾಲಿ ಮತ್ತು ಪರಿಣಾಮಕಾರಿ ಟಿಎಸ್ಐ ಎಂಜಿನ್‌ಗಳ ಆಯ್ಕೆ
› ಆರು ಏರ್‌ಬ್ಯಾಗ್‌ಗಳು ಮತ್ತು ಸಹಾಯ ವ್ಯವಸ್ಥೆಗಳ ಅನುಕೂಲ
› ವೋಕ್ಸ್‌ವ್ಯಾಗನ್ ಗ್ರೂಪ್ ಸ್ಕೋಡಾ ಆಟೋ ನೇತೃತ್ವದ ಇಂಡಿಯಾ 2.0 ಯೋಜನೆಯಲ್ಲಿ ಒಂದು ಬಿಲಿಯನ್ ಯುರೋಗಳನ್ನು ಹೂಡಿಕೆ ಮಾಡುತ್ತಿದೆ.