ಡ್ರೈವರ್‌ಲೆಸ್ ಕಾರಲ್ಲಿ ಸೆಕ್ಸಾಸನ; ಮಿಲನೋತ್ಸವಕ್ಕೆ ರಹದಾರಿ

By Suvarna News  |  First Published May 15, 2020, 11:34 AM IST

ತಂತ್ರಜ್ಞಾನ ತುಂಬಾ ಬೆಳೆದಿದೆ. ಇದು ಮನುಷ್ಯನ ಮೂಲಭೂತ ವಸ್ತುವಂತೆಯೇ ಆಗಿದೆ. ಅದರಲ್ಲಿ ಈ ಸೆಕ್ಸ್ ಸಹ ಮತ್ತೊಂದು. ಹೀಗಾಗಿ ಈ ಎರಡೂ ಸೇರಿ ಕಾಕ್‌ಟೇಲ್‌ನಂತಾಗಿ ಇಡಿ ಸಮಾಜವನ್ನು ನಿದ್ದೆಗೆಡಿಸಲಿದೆ ಎಂಬುದು ವಿಜ್ಞಾನಿಗಳ ಆತಂಕ. ಇಲ್ಲಿ ವಿಷಯವೇನೆಂದರೆ ಡ್ರೈವರ್‌ಲೆಸ್ ಕಾರಿನೊಳಗೆ ಸೆಕ್ಸ್ ನಡೆಯುತ್ತಿದೆ, ಇದರಿಂದ ಕಾನೂನುಬಾಹಿರ, ಅನೈತಿಕ ಚಟುವಟಿಕೆ ಹೆಚ್ಚಳವಾಗುತ್ತದೆ ಎಂಬುದು ಆರೋಪ. ಆದರೆ, ಕಾರು ಸೆಕ್ಸ್‌ಗೆ ಪೂರಕವಾಗುವಂತೆ ಹೆಸರಾಂತ ಬಿಎಂಡಬ್ಲ್ಯೂ ಕಂಪನಿ ಕಳೆದ ವರ್ಷವೇ ಹೇಳಿಕೆ ಕೊಟ್ಟಿರುವುದು ಕಾರಿನಲ್ಲಿ “ಆ” ಘಳಿಗೆಯನ್ನು ಅನುಭವಿಸಬಹುದು ಎಂದು ಹಲವರು ಕನಸು ಕಾಣುತ್ತಿದ್ದಾರೆ. ಹಾಗಾದರೆ ಅದು ಏನು..? ಎತ್ತ ಎಂಬುದನ್ನು ನೋಡೋಣ.


ಚಲಿಸುವ ಕಾರಿನಲ್ಲೇ ಸೆಕ್ಸ್ ಮಾಡಿ ಅಪಘಾತವಾಗಿ ಮೃತಪಟ್ಟಿರುವ ಸುದ್ದಿ ಕೇಳಿದ್ದೇವೆ. ಆದರೆ, ಆ ಸಮಸ್ಯೆಯೇ ಇಲ್ಲದಂತೆ ಆರಾಮವಾಗಿ ಸೆಕ್ಸ್ ಮಾಡಲು ಅಟೋಮೊಬೈಲ್ ಉದ್ಯಮ ಮುಂದಾಗಿದ್ದು, ಡ್ರೈವರ್‌ಲೆಸ್ ಕಾರುಗಳಲ್ಲಿ ಸೆಕ್ಸ್ ಮಾಡಲು ಅನುಕೂಲವಾಗುವಂತೆಯೇ ವಿನ್ಯಾಸ ಮಾಡುವುದಾಗಿ ಖ್ಯಾತ ಅಟೊಮೊಬೈಲ್ ಕಂಪನಿಗಳೂ ಹೇಳಿಕೊಳ್ಳುತ್ತಿವೆ.

ಸೆಕ್ಸ್ ಅನ್ನೋ ಪದ ಕಿವಿಗೆ ಬಿದ್ದರೆ ಸಾಕು ಒಮ್ಮೆ ಎಲ್ಲರಿಗೂ ಕಿವಿ ನೆಟ್ಟಗಾಗುತ್ತದೆ. ಹಾಗಂತ ಈ ಪದ ಎಲ್ಲೆಡೆ ಬಳಸುವಷ್ಟು "ಮುಕ್ತ"ವಾಗಿಲ್ಲ. ಅದರಲ್ಲೂ 120 ಕೋಟಿ ಜನಸಂಖ್ಯೆ ದಾಟಿದ ಭಾರತೀಯರಲ್ಲಿ ಇದಕ್ಕೊಂದು ಚೌಕಟ್ಟು ಇದೆ. ಮಡಿವಂತಿಕೆಯೂ ಇದೆ. ಇನ್ನು ಕೆಲವರಲ್ಲಿ ಅತೀವ ಆಸಕ್ತಿ ಇದ್ದರೂ ಅಪ್ಪಟ್ಟ ಮರ್ಯಾದಸ್ತ ಎಂದು ತೋರಿಸಿಕೊಳ್ಳುವವರೂ ಇದ್ದಾರೆ. ಆದರೆ ಕೆಲವೇ ಕೆಲವರು ನಿರ್ಭೀತಿಯಿಂದ ಮುಕ್ತವಾಗಿ ಮಾತನಾಡುತ್ತಾರೆ. ಇನ್ನು ಇದನ್ನು ಎಲ್ಲೆಂದರಲ್ಲಿ ಮಾಡುವುದು ಅಂದರೆ ದೂರದ ಮಾತೇ ಸರಿ. ಆದರೆ, ತುಂಬಾ ಮುಂದುವರಿದ ದೇಶಗಳಲ್ಲಿ ಎಲ್ಲವೂ ಖುಲ್ಲಂಖುಲ್ಲ. ಅದೊಂದು ದೈನಂದಿನ ಭಾಗವಷ್ಟೇ, ಮತ್ತವರ ಆಯ್ಕೆಯೂ ಆಗಿರುತ್ತದೆ. ಇದೇ ಈಗ ಬಹುತೇಕ ಕಡೆ ಮಾರ್ಕೆಟಿಂಗ್‌ನ ಸರಕಾಗಿದೆ. ಹೀಗಾಗಿ ಕೆಲವು ಕಡೆ ಕಾರಿನಲ್ಲಿ ಮಿಲನೋತ್ಸವ ನಡೆದರೆ, ಮತ್ತೆ ಕೆಲವು ಕಡೆ ಸಿದ್ಧತೆಗಳು ನಡೆಯುತ್ತಿವೆ. ಅದೂ ಜನಸಂಚಾರವುಳ್ಳ ಮುಖ್ಯ ರಸ್ತೆಗಳಲ್ಲಿ ಚಲಿಸುತ್ತಿರುವ ಕಾರಿನಲ್ಲೇ ಅಂದರೆ ಹೇಗಿರಬೇಡ!!?? ಹಾಗಾದರೆ ಏನಿದು ಕಾರ್ ಸೆಕ್ಸ್ ಎಂಬುದನ್ನು ನೋಡೋಣವೇ? 

ಇದನ್ನು ಓದಿ: ಜೀಪ್ ಬೇಕಿದ್ರೆ ಶೋರೂಂ ಬೇಡ, ಆನ್ ಲೈನ್ ಗೆ ಹೋಗಿ ಎಂದ ಫಿಯಟ್!

ಡ್ರೈವರ್‌ಲೆಸ್ ಕಾರೇ “ಅದಕ್ಕೆ” ಪ್ಲಸ್!
ಇಲ್ಲಿ ಚಲಿಸುತ್ತಿರುವ ಕಾರೆಂದರೆ ಮಾಮೂಲಿ ನಾವು ಓಡಿಸುವ ಕಾರುಗಳಲ್ಲೇ ಎಂದು ಹೌಹಾರಬೇಡಿ. ಅಲ್ಲಿ ಡ್ರೈವರ್ ಇರುತ್ತಾನೆ, ಅದು ಹೇಗೆ ಅಷ್ಟು ಖುಲ್ಲಂಖುಲ್ಲವಾಗಿ ಸೆಕ್ಸ್ ಮಾಡಿಕೊಳ್ಳಬಹುದು ಎಂಬ ಪ್ರಶ್ನೆಯೂ ಮೂಡಬಹುದು. ಇಲ್ಲೇ ಇರುವುದು ಅಸಲಿ ಸೆಕ್ಸ್ ಕಹಾನಿ. ಈ ಹೊಸ ಚಿಂತನೆ ಅಳವಡಿಕೆಯಾಗುತ್ತಿರುವುದು ಸೆಲ್ಫ್ ಡ್ರೈವಿಂಗ್ (ಅಟೋ ಡ್ರೈವಿಂಗ್, ಡ್ರೈವರ್‌ಲೆಸ್) ಕಾರುಗಳಲ್ಲಿ ಮಾತ್ರ. ಹೀಗೆ ಚಾಲಕನೇ ಇಲ್ಲದ ಕಾರಿನಲ್ಲಿ ಏನು ಮಾಡಿದರೇನು? ಯಾರಿಗೆ ತಾನೇ ಗೊತ್ತಾಗುತ್ತೆ ಹೇಳಿ, ಆ ಕಾರಿನಲ್ಲಿದ್ದವರಿಗೆ ಬಿಟ್ಟು. ಅವರ ಡೆಸ್ಟಿನೇಷನ್ ಬರೋದರೊಳಗೆ “ಆ” ಕೆಲಸವನ್ನು ಮುಗಿಸಿಕೊಳ್ಳಬೇಕಿದೆ. ಆದರೆ, ಇದಕ್ಕೆ ಅಪಸ್ವರಗಳೂ ಕೇಳಿಬರುತ್ತಿದ್ದು, ವೇಶ್ಯಾವಾಟಿಕೆಗೆ ರಹದಾರಿ ಎಂದೇ ಹೇಳಲಾಗುತ್ತಿದೆ. 

ಹೇಗಿರಲಿದೆ ವಿನ್ಯಾಸ?
ಈಗಂತೂ ಕಾರು ಉದ್ಯಮವು ಅಟೊಮೊಬೈಲ್ ಲೋಕದಲ್ಲಿ ತತ್ತರಿಸಿ ಹೋಗಿದೆ. ಹೀಗಾಗಿ ಕಾರಿನೊಳಗೆ ಸೆಕ್ಸ್ ಮಾಡೋದಿಕ್ಕೆ ಅನುಕೂಲವಾಗಲೆಂದೇ ಆಸನಗಳನ್ನು ವಿನ್ಯಾಸ ಮಾಡಲಾಗುತ್ತಿದೆ. ಜೊತೆಗೆ ಇಲ್ಲಿ ರಸ್ತೆಯಲ್ಲಿ ಏನು ನಡೆಯುತ್ತಿದೆ? ಕಾರಿಗೆ ಯಾರಾದರೂ ಅಡ್ಡಲಾಗಿ ಬಂದರೇ? ಈ ಟ್ರಾಫಿಕ್‌ನಲ್ಲಿ ಹೇಗೆ ಓಡಿಸಬೇಕು? ಕ್ಲೆಚ್ ಹಿಡಿಯಬೇಕೋ, ಬ್ರೇಕ್ ಬಿಡಬೇಕೋ? ಇಲ್ಲವೇ ಎಕ್ಸಲೇಟರ್ ಒತ್ತಬೇಕೋ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಹಾಗಾಗಿ ಕಾರಿನೊಳಗಿದ್ದವರು ಏನು ಮಾಡಬೇಕೆಂಬಷ್ಟನ್ನೇ ಯೋಚಿಸಿದರೆ ಸಾಕು. 

ಇದನ್ನು ಓದಿ: ಪ್ರೀಮಿಯರ್ ಪದ್ಮಿನಿಯ ಎಕ್ಸ್‌ಪೈರಿ ಡೇಟ್ ಮುಗೀತು; ಕಣ್ಮರೆಯಾಗುತ್ತಿದ್ದಾಳೆ ಸುಂದರಿ!

ಆದರೆ, ಇಲ್ಲಿ ಉಳಿದ ವಿನ್ಯಾಸ ಹೇಗಿರಲಿದೆ ಎಂಬುದು ಮಾತ್ರ ಗೊತ್ತಾಗಿಲ್ಲ. ಟ್ರಾಫಿಕ್ ಸಮಸ್ಯೆ ನಿವಾರಣೆ, ಅಪಘಾತ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಚಿಂತನೆಯಲ್ಲಿ ಹುಟ್ಟಿಕೊಂಡ ಡ್ರೈವರ್‌ಲೆಸ್ ಕಾರು ಈಗ ನಾನಾ ಸ್ವರೂಪಗಳಿಗೆ, ಉದ್ದಿಮೆಗಳಿಗೆ ದಾರಿ ಮಾಡಿಕೊಟ್ಟರೂ, ಚಾಲಕರ ಉದ್ಯೋಗಕ್ಕೆ ಕುತ್ತು, ಅನೈತಿಕ ಚಟುವಟಿಕೆಗೆ ರಹದಾರಿ ಮಾಡಿಕೊಡಲಿದೆ ಎಂಬ ಅಪಖ್ಯಾತಿಯನ್ನೂ ಹೊರಬೇಕಿದೆ. ಈ ಕಾರಣಕ್ಕೇ ಭಾರತಕ್ಕೆ ಇನ್ನೂ ಡ್ರೈವರ್‌ಲೆಸ್ ಕಾರಿಗೆ ಅನುಮತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಇದು ಯಾವ ರೂಪ ತೆಗೆದುಕೊಳ್ಳಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.

ಕೌತುಕ ಸೃಷ್ಟಿಸಿದ ಬಿಎಂಡಬ್ಲ್ಯೂ
ಕಾರು ಉದ್ದಿಮೆಯಲ್ಲೇ ಶ್ರೀಮಂತರ ಕಾರು ಎಂಬ ಹಣೆಪಟ್ಟಿ ಹೊತ್ತಿರುವ ಬಿಎಂಡಬ್ಲ್ಯೂ ಮುಂಬರುವ 2022ರಲ್ಲಿ ಹೊಸ ಕಾರನ್ನು ಲಾಂಚ್ ಮಾಡುವುದಾಗಿ 2019ರಲ್ಲೇ ಹೇಳಿಕೊಂಡಿತ್ತು. iNext SUV ಕಾರನ್ನು ಅನಾವರಣಗೊಳಿಸಲಿದ್ದು, ಇದು ಅಟೋನಮಿಯ ಲೆವೆಲ್ 4 ಕಾರಾಗಿರಲಿದೆ ಎಂದು ಹೇಳಿಕೊಂಡಿತ್ತು. ಈ ವೇಳೆ ಕಾರಿನ ವಿನ್ಯಾಸದ ಬಗ್ಗೆ ಹೇಳಿಕೊಳ್ಳುವಾಗ “ಆಸನ” ಬಹಳ ವಿಸ್ತಾರವಾಗಿರಲಿದೆ. ಆ ಮಾದರಿಯಲ್ಲಿ ವಿನ್ಯಾಸ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿತ್ತು. ಇಲ್ಲಿ ಸೀಟ್ ವ್ಯಾಪ್ತಿಯನ್ನು ಹೆಚ್ಚಿಸುವುದು ಯಾಕೆ? ಇದರ ಹಿಂದೆ “ಸೆಕ್ಸ್” ಪರಿಕಲ್ಪನೆ ಅಡಗಿದೆಯೇ ಎಂಬ ಚರ್ಚೆಗಳು ತಜ್ಞ ವಲಯದಲ್ಲಿ ಹುಟ್ಟಿಕೊಂಡಿದೆ. 

ಇದನ್ನು ಓದಿ: ಸೋಷಿಯಲ್ ಡಿಸ್ಟೆನ್ಸಿಂಗ್‌ನಿಂದ ಹೆಚ್ಚಾಗಲಿದೆಯೇ ಕಾರು ಖರೀದಿ?

ಕಾನೂನುಸಹಿತವೋ, ರಹಿತವೋ..?
ಈಗಾಗಲೇ ಅಮೆರಿಕದಂತಹ ದೇಶಗಳಲ್ಲಿ ಶೇ.60ಕ್ಕಿಂತ ಹೆಚ್ಚು ಮಂದಿ ಕಾರಿನಲ್ಲೇ ಸೆಕ್ಸ್ ಮಾಡಿಕೊಳ್ಳುತ್ತಾರೆಂದು ಅಧ್ಯಯನ ಹೇಳಿದೆ. ಇನ್ನು ಈ ಅಟೋನಮಸ್ (ಚಾಲಕರಹಿತ) ವಾಹನಗಳಲ್ಲಿ ಕೇಳಬೇಕೇ? ಹೀಗಾಗಿ ಈ ಹೊಸ ಆಯ್ಕೆ ವೇಶ್ಯಾವಾಟಿಕೆಯಂತಹ ಚಟುವಟಿಕೆಗೂ ಉತ್ತೇಜನ ಕೊಡಬಹುದು. ಬಹಳಷ್ಟು ದೇಶಗಳಲ್ಲಿ ಕಾನೂನು ಒಪ್ಪಿತವಾಗಿದ್ದರೆ, ಇನ್ನು ಹಲವು ಕಡೆ ಕಾನೂನಿಗೆ ವಿರುದ್ಧವಾಗಿವೆ. ಆದರೆ, ಇಂಥ ಕಾರುಗಳು ಬಂದರೆ ಸೆಕ್ಸ್ ಚಟುವಟಿಕೆಯ ತಡೆ ಹೇಗೆ ಎಂಬುದು ಕುತೂಹಲಕರ ಪ್ರಶ್ನೆಯಾಗಿದೆ.

click me!