Car Delivery ಕಾರು ಡೆಲಿವರಿ ವೇಳೆ ಎಡವಟ್ಟು, ಶೋ ರೂಂನಲ್ಲಿ ನಿಂತಿದ್ದ ಮಹಿಳೆ, ಕೂತಿದ್ದ ವ್ಯಕ್ತಿಗೆ ಡಿಕ್ಕಿ!

By Suvarna News  |  First Published Jan 27, 2022, 3:43 PM IST
  • ಕಾರು ಡೆಲಿವರಿ ವೇಳೆ ಹೆಚ್ಚಾಗುತ್ತಿದೆ ಅಪಘಾತ ಪ್ರಕರಣ
  • ಕಳೆದ ವಾರ ಮಹೀಂದ್ರ ಥಾರ್ ಇದೀಗ ಟಾಟಾ ಅಲ್ಟ್ರೋಜ್
  • ಶೋ ರೂಂ ಒಳಗೆ ಏಕಾಏಕಿ ಚಲಿಸಿದ ಕಾರು, ನಿಂತಿದ್ದ ಮಹಿಳೆಗೆ ಡಿಕ್ಕಿ

ನವದೆಹಲಿ(ಜ.27): ಶೂಂ ರೂಂನಲ್ಲಿ ಕಾರು ಡೆಲಿವರಿ(Car Delivery) ವೇಳೆ ಅಪಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಆಟೋಮ್ಯಾಟಿಕ್ ಕಾರಿನಿಂದ ಆಗಿರುವ ಎಡವಟ್ಟು, ಏನೋ ಪರೀಕ್ಷಿಸಲು ಹೋಗಿ ಏಕಾಕಿ ಚಲಿಸಿದ ಕಾರುಗಳಿಂದ ಭಾರಿ ಅನಾಹುತಗಳೇ ಸಂಭವಿಸಿದೆ. ಇದೀಗ ಟಾಟಾ ಮೋಟಾರ್ಸ್ ಶೋ ರೂಂನಲ್ಲಿ(Tata Motors) ಅಲ್ಟ್ರೋಜ್ ಕಾರು ಡೆಲಿವರಿ ವೇಳೆ ಎಡವಟ್ಟು(Accident) ನಡೆದಿದೆ. ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. 

ಟಾಟಾ ಶೋ ರೂಂನಲ್ಲಿ ಅಲ್ಟ್ರೋಜ್ ಗೋಲ್ಡ್ ಕಾರು(Tata Altroz Car) ಬುಕ್ ಮಾಡಿದ್ದ ಗ್ರಾಹಕರು ಖರೀದಿಗೆ ಆಗಮಿಸಿದ್ದಾರೆ. ಈ ವೇಳೆ ಶೋ ರೂಂ ಒಳಗೆ ನಿಲ್ಲಿಸಿದ್ದ ಅಲ್ಟ್ರೋಜ್ ಗೋಲ್ಡ್ ಕಾರನ್ನು ಗ್ರಾಹಕರು ಪರಿಕ್ಷಿಸಲು ಮುಂದಾಗಿದ್ದಾರೆ. ಕಾರು ಸ್ಟಾರ್ಟ್ ಮಾಡಿದ ಗ್ರಾಹಕರು(Customer) ಪರಿಕ್ಷಿಸುತ್ತಿದ್ದಂತೆ ಕಾರು ಏಕಾಏಕಿ ಮುಂದಕ್ಕೆ ಚಲಿಸಿದೆ. ಪರಿಣಾಮ ಮುಂಭಾಗದಲ್ಲಿದ್ದ ಯುವತಿ ಹಾಗೂ ಸೋಫಾದಲ್ಲಿ ಕುಳಿತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿದೆ.

Tap to resize

Latest Videos

undefined

Mahindra Thar ಕಾರು ಡೆಲಿವರಿ ವೇಳೆ ಗ್ರಾಹಕನ ಎಡವಟ್ಟು, ಶೋ ರೂಂ ಗಾಜು ಪುಡಿ ಪುಡಿ, ಅತೀ ದೊಡ್ಡ ದುರಂತದಿಂದ ಪಾರು!

ಯುವತಿ ಹಾಗೂ ಕುಳಿತಿದ್ದ ವ್ಯಕ್ತಿಗೆ ಸಣ್ಣ ಗಾಯಗಳಾಗಿವೆ. ಇತ್ತ ಸೋಫಾ ಹಾಗು ಕುರ್ಚಿ ಪುಡಿಯಾಗಿದೆ. ಆದರೆ ಟಾಟಾ ಅಲ್ಟ್ರೋಜ್ ಕಾರಿಗೆ ಯಾವುದೇ ಹಾನಿಯಾಗಿಲ್ಲ. ಮುಂಭಾಗದ ಬಂಪರ್ ಬಳಿ ಸ್ಕ್ರಾಚ್ ಮಾತ್ರ ಕಾಣಿಸಿಕೊಂಡಿದೆ. 5 ಸ್ಟಾರ್ ಸೇಫ್ಟಿ ಕಾರಾಗಿರುವ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ.

ಈ ಘಟನೆ ಯಾವ ಕಾರಣಕ್ಕೆ ನಡೆಯಿತು. ದಿಢೀರ್ ಕಾರು ಚಲಿಸಲು ಕಾರಣವೇನು? ಗ್ರಾಹಕರಿಗೆ ಹೊಸ ಕಾರಿನ ತಂತ್ರಜ್ಞಾನ ಫೀಚರ್ಸ್ ಕುರಿತ ಹೆಚ್ಚಿನ ಮಾಹಿತಿ ಇರಲಿಲ್ಲವೇ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಘಟನೆಯಿಂದ ಶೋ ರೂಂನಲ್ಲಿದ್ದ ಇತರ ಗ್ರಾಹಕರು ಹಾಗೂ ಸಿಬ್ಬಂದಿಗಳು ಬೆಚ್ಚಿ ಬಿದ್ದಿದ್ದಾರೆ. 

ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

ಇತ್ತೀಚೆಗೆ ಶೋ ರೂಂ ಒಳಗೆ ಕಾರು ಡೆಲಿವರಿ ವೇಳೆ, ಪರಿಶೀಲನೆ ವೇಳೆ ಎಡವಟ್ಟುಗಳು ಆಗುತ್ತಿರುವುದು ಹೆಚ್ಚಾಗುತ್ತಿದೆ. ಹೀಗಾಗಿ ಹಲವು ಶೋ ರೂಂ ಒಳಗೆ ಕಾರು ಪರಿಶೀಲನೆಗೆ ಅವಕಾಶವಿಲ್ಲ. ಟೆಸ್ಟ್ ಡ್ರೈವ್‌ಗೆ ಮಾತ್ರ ಅವಕಾಶವಿದೆ. ಇನ್ನು ಶೋ ರೂಂ ಒಳಗೆ ನಿಲ್ಲಿಸಿದ್ದ ಕಾರನ್ನು ಸ್ಟಾರ್ಟ್ ಮಾಡುವಂತಿಲ್ಲ ಎಂದು ನಿಯಮಗಳನ್ನೇ ತರಲಾಗಿದೆ. 

ಶೋ ರೂಂ ಒಳಗೆ ಪರಿಶೀಲನೆ, ಪರೀಕ್ಷೆ ವೇಳೆ ಇದೇ ರೀತಿ ಹಲವು ಘಟನೆಗಳು ನಡೆದಿದೆ. ಕಳೆದ ವಾರ ಬೆಂಗಳೂರಿನ ಮಹೀಂದ್ರ ಡೀಲರ್‌ಶಿಪ್ ಬಳಿ ಎಡವಟ್ಟು ಸಂಭವಿಸಿತ್ತು. ಮೊದಲ ಮಹಡಿಯಲ್ಲಿದ್ದ ಮಹೀಂದ್ರ ಶೋ ರೂಂನಲ್ಲಿ ಮಹೀಂದ್ರ ಥಾರ್ ಪರೀಕ್ಷಿಸುತ್ತಿದ್ದ ವೇಳೆ ಗ್ರಾಹಕರು ಮಾಡಿದ ಎಡವಟ್ಟಿನಿಂದ ಅತೀ ದೊಡ್ಡ ದುರಂತದಿಂದ ಕೂದಲೆಳೆಯುವ ಅಂತರದಲ್ಲಿ ಪಾರಾಗಿದ್ದರು. ಗ್ರಾಹಕರು ಮಹೀಂದ್ರ ಥಾರ್ ಕಾರು ಪರಿಶೀಲಿ ಕಾರು ಸ್ಟಾರ್ಟ್ ಮಾಡಿದ್ದಾರೆ, ದಿಢೀರ್ ಕಾರು ಮುಂದಕ್ಕೆ ಚಲಿಸಿದೆ. ಮೊದಲ ಮಹಡಿಯಲ್ಲಿದ್ದ ಕಾರು ಶೋ ರೂಂ ಗಾಜು ಪುಡಿ ಮಾಡಿದೆ. ಮುಂಭಾದ ಎರಡು ಚಕ್ರಗಳು ಫ್ಲೋರ್‌ನಿಂದ ಹೊರಕ್ಕೆ ಬಂದಿದೆ. ಆದರೆ ಕಾರಿನ ಅಡಿ ಭಾಗ ಫ್ಲೋರ್‌ಗೆ ತಾಗಿದ ಕಾರಣ ಹಾಗೂ ಬ್ರೇಕ್ ಅಪ್ಲೈ ಮಾಡಿದ ಕಾರಣ ಥಾರ್ ಮೊದಲ ಮಹಡಿಯಿಂದ ಕೆಳಕ್ಕೆ ಬೀಳದೆ ಅಲ್ಲೆ ಸಿಲುಕಿತು. ಜೆಸಿಬಿ ಕರೆಸಿ ಹಲವರ ನೆರವಿನಿಂದ ಥಾರ್ ಜೀಪನ್ನು ಹಿಂದಕ್ಕೆ ಎಳೆಯಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಆದರೆ ಶೋ ರೂಂ ಮುಂಭಾಗದ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ. ಇನ್ನು ಥಾರ್ ಜೀಪ್‌ಗೆ ಸಣ್ಣ ಸ್ಕ್ರಾಚ್‌ ಹಾಗೂ ಮುಂಭಾಗದ ಬಂಪರ್ ಹಾನಿಯಾಗಿದೆ.

ಕೆಲ ವರ್ಷಗಳ ಹಿಂದೆ ಹ್ಯುಂಡೈ ಶೋ ರೂಂಗೆ ತೆರಳಿದೆ ಮಹಿಳೆ ತಮ್ಮ ಮಾನ್ಯುಯೆಲ್ ಕಾರು ಎಕ್ಸ್‌ಚೇಂಜ್ ಮಾಡಿ ಆಟೋಮ್ಯಾಟಿಕ್ ಕಾರು ಖರೀದಿಸಿದ್ದಾರೆ. ಮಾನ್ಯುಯೆಲ್ ಗೇರ್ ಹೊಂದಿದ ಕಾರಿನ ಬದಲು ಆಟೋಮ್ಯಾಟಿಕ್ ಕಾರು ಪರಿಶೀಲಿಸಿದ ಮಹಿಳೆ ಬ್ರೇಕ್, ಎಕ್ಸಲರೇಟರ್ ಗೊಂದಲಕ್ಕೆ ಸಿಲುಕಿದ್ದಾರೆ. ಪರಿಣಾಮ ಕಾರು ಸ್ಟಾರ್ಟ್ ಮಾಡಿದ ತಕ್ಷಣವೇ ಮುಂದಕ್ಕೆ ಚಲಿಸಿದೆ. ಕಾರು ಶೋ ರೂಂನ ಗಾಜು ಒಡೆದೆ ನೆಲಕ್ಕೆ ಜಿಗಿದ ಕಾರು ಮುಂಭಾಗದಲ್ಲಿ ನಿಲ್ಲಿಸಿದ್ದ ಹಲವು ಹೊಸ ಕಾರುಗಳಿಗೆ ಗುದ್ದಿದೆ. 

ಈ ರೀತಿಯ ಹಲವು ಘಟನೆಗಳು ಶೋರೂಂನಲ್ಲಿ ನಡೆದಿದೆ. ಹೀಗಾಗಿ ಇದೀಗ ಹೆಚ್ಚಿನ ಶೋ ರೂಂಗಳ ಒಳಗೆ ಕಾರು ಪರೀಕ್ಷೆಗೆ ಅವಕಾಶ ನೀಡುವುದಿಲ್ಲ. 

click me!