Maruti Suzuki: ಬಹು ನಿರೀಕ್ಷಿತ ಹೊಸ ತಲೆಮಾರಿನ Celerio ಬುಕಿಂಗ್ ಪ್ರಾರಂಭ!

Suvarna News   | Asianet News
Published : Nov 02, 2021, 02:51 PM ISTUpdated : Nov 02, 2021, 02:55 PM IST
Maruti Suzuki: ಬಹು ನಿರೀಕ್ಷಿತ  ಹೊಸ ತಲೆಮಾರಿನ   Celerio ಬುಕಿಂಗ್ ಪ್ರಾರಂಭ!

ಸಾರಾಂಶ

*ಭಾರತದಲ್ಲೇ ಹೆಚ್ಚು ಇಂಧನ ದಕ್ಷ ಪೆಟ್ರೋಲ್ ಕಾರು *ರೋಮಾಂಚಕ ಮತ್ತು ಸೊಗಸಾದ ವಿನ್ಯಾಸ ಹೊಂದಿರುವ ಸೆಲೆರಿಯೊ *Next-Gen KSeries ಎಂಜಿನ್‌ ಅಳವಡಿಕೆ!

ಭಾರತದ ರಸ್ತೆಗಳಲ್ಲಿ ಮಾರುತಿ ಸುಜುಕಿಯ ಹೆಚ್ಚಿನ ವಾಹನಗಳನ್ನು ನೀವು ಕಾಣಬಹುದು. ಮಧ್ಯಮ ವರ್ಗದವರ ಕಾರು ಕೊಳ್ಳುವ ಕನಸು ನನಸು ಮಾಡಿದ ಹೆಚ್ಚುಗಾರಿಕೆಯನ್ನು ಹೊಂದಿರುವ ಮಾರುತಿ ಸುಜುಕಿ ಕಂಪನಿ, ಕಾಲ ಕಾಲಕ್ಕೆ ಗ್ರಾಹಕರ ಬೇಡಿಕೆ ಹಾಗೂ ಪರಿಸರ ನಿಯಮಗಳಿಗೆ ಅನುಗುಣವಾಗಿ ತನ್ನ ಕಾರುಗಳನ್ನು ಉತ್ಪಾದಿಸುತ್ತಾ ಬಂದಿದೆ. ಈಗಲೂ ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಪಾರಮ್ಯ ಹೊಂದಿದೆ.

ನಿಮ್ಮ ಕಾರ್ ನಿರ್ವಹಣೆ ದುಬಾರಿಯಾಗಬಾರದು ಎಂದಿದ್ದರೆ ಈ ಟಿಪ್ಸ್ ಪಾಲಿಸಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited) ಮಂಗಳವಾರ (ನ.2) ತನ್ನ ಬಹು ನಿರೀಕ್ಷಿತ  ಪೆಟ್ರೋಲ್ ಕಾರ್ ಸೆಲೆರಿಯೊಗೆ (Celerio) ಬುಕಿಂಗ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಕೋವಿಡ್-19 ರ ನಂತರದ ಪರಿಸ್ಥಿತಿಯಿಂದ‌ ಕಡಿಮೆಯಾಗಿದ್ದ ತನ್ನ ವಹಿವಾಟನ್ನು ಸೆಲೆರಿಯೊ ಮಾರಾಟದ ಮೂಲಕ ವ್ಯಾಪಾರ  ಹೆಚ್ಚಿಸುವ ಗುರಿಯನ್ನು ಹೊಂದಿದೆ ಮಾರುತಿ ಸುಜುಕಿ. ಯುವ ಖರೀದಿದಾರರ ಬೇಡಿಕೆಗಳನ್ನು ಪೂರೈಸಲು ಮಾರುತಿ ಸುಜುಕಿ, ಈ  ಹೊಸ ತಲೆಮಾರಿನ  ಕಾರನ್ನು ವಿನ್ಯಾಸ ಮಾಡಿದೆ. ಹೊಸ ಸೆಲೆರಿಯೊವನ್ನು 'ಭಾರತದಲ್ಲೇ ಹೆಚ್ಚು ಇಂಧನ ದಕ್ಷ ಪೆಟ್ರೋಲ್ ಕಾರು' ಎಂದು ಕಂಪನಿ ಹೇಳಿದೆ.

"ಸೆಲೆರಿಯೊ ಪ್ರಾರಂಭಿಸಿದಾಗಿನಿಂದ, ತನ್ನ ವಿಶಿಷ್ಟ ಶೈಲಿ ಮತ್ತು ಆಟೋ ಗೇರ್ ಶಿಫ್ಟ್ (Auto Gear Shift) ತಂತ್ರಜ್ಞಾನದೊಂದಿಗೆ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿತ್ತು , ದೇಶದಲ್ಲಿ 2 ಪೆಡಲ್ ತಂತ್ರಜ್ಞಾನ (2 Pedal technology) ವಿಸ್ತರಿಸಲು ಇದು ಸಹಾಯವಾಗಿತ್ತು. ಬ್ರ್ಯಾಂಡ್ ಸೆಲೆರಿಯೊ ಅಂದಿನಿಂದ ಹೊಸ ಯುಗದ ತಂತ್ರಜ್ಞಾನ, ಆಧುನಿಕ ವಿನ್ಯಾಸ ಮತ್ತು ಪ್ರಾಯೋಗಿಕತೆಗಾಗಿ ಹೆಸರುವಾಸಿಯಾಗಿದೆ" ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ (Shashank Srivastava) ಹೇಳಿದ್ದಾರೆ.

ಮಾರುತಿಯಿಂದ ಬಲೆನೋ ಆಧರಿತ SUV: ಇದು ಪಂಚ್‌ನ ಪ್ರತಿಸ್ಪರ್ಧಿ

“ನಗರ ಪ್ರದೇಶದ, ಪ್ರಗತಿಪರ ಮತ್ತು ಮಹತ್ವಾಕಾಂಕ್ಷೆಯ ಗ್ರಾಹಕರು, ತಮ್ಮ ವ್ಯಕ್ತಿತ್ವದಣುಗುಣವಾಗಿ ವಿಶಿಷ್ಟ ವಿನ್ಯಾಸಗಳನ್ನು ಹೊಂದಿರುವ  ಉತ್ಪನ್ನಗಳನ್ನು ಖರೀದಿಸುತ್ತಾರೆ.  ಹೊಸ ಆವೃತ್ತಿಯ ಸೆಲೆರಿಯೊ ಹೊಸ ಮಾದರಿಯ ಪೆಟ್ರೋಲ್ ಎಂಜಿನ್ (Petrol Engine), ರೋಮಾಂಚಕ ಮತ್ತು ಸೊಗಸಾದ ವಿನ್ಯಾಸ ಜತಗೆ ಇತರ ವೈಶಿಷ್ಟ್ಯಗಳ ಹೊಂದಿದ್ದು ಆಲ್-ರೌಂಡರ್‌ ಕಾರ್ (All Rounder) ಆಗಿದೆ. ಆಲ್-ನ್ಯೂ ಸೆಲೆರಿಯೊ ಮತ್ತೊಮ್ಮೆ ಕಾರುಗಳ  ಕಾಂಪ್ಯಾಕ್ಟ್ ವಿಭಾಗಕ್ಕೆ‌ (compact segment) ಶಕ್ತಿ ತುಂಬುತ್ತದೆ ಎಂಬ ವಿಶ್ವಾಸ ನಮಗಿದೆ" ಎಂದು ಮಾರುತಿ ಸುಜುಕಿ ಇಂಡಿಯಾ  ಹೇಳಿದೆ.

ಕುಶಾಕ್ ಬೆನ್ನಲ್ಲೇ ಸ್ಕೋಡಾ ಸ್ಲಾವಿಯಾ ಸೆಡಾನ್ ಕಾರು ಬಿಡುಗಡೆ ಸಜ್ಜು!

"Next-Gen KSeries ಎಂಜಿನ್‌, ಡ್ಯೂಲ್‌ ಜೆಟ್ (Duel Jet), ಡ್ಯೂಲ್ ವಿವಿಟಿ ಎಂಜಿನ್ (Duel VVT Engine) ಹಾಗೂ ಇಂಧನ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ Idle Start-Stop ಟೆಕ್ನಾಲೊಜಿ ಬಳಸಲಾಗಿದೆ. ಆಲ್-ನ್ಯೂ ಸೆಲೆರಿಯೊ ಭಾರತದಲ್ಲೇ ಹೆಚ್ಚು ಇಂಧನ ದಕ್ಷ ಪೆಟ್ರೋಲ್ ಕಾರು ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮುಖ್ಯ ತಾಂತ್ರಿಕ ಅಧಿಕಾರಿ (ಎಂಜಿನಿಯರಿಂಗ್) ಸಿವಿ ರಾಮನ್ (CV Raman) ಹೇಳಿದ್ದಾರೆ.

ಹೊಸ ಸೆಲೆರಿಯೊ ಡೈನಾಮಿಕ್ ಕ್ಯಾರೆಕ್ಟರ್ಸ್‌ (Dynamic Character) ಗಳೊಂದಿಗೆ 3D ಆರ್ಗೆನಿಕ್‌ ಸ್ಕಲ್ಪ್‌ಟೆಡ್ (organic sculpted) ವಿನ್ಯಾಸದೊಂದಿಗೆ ಬರುತ್ತದೆ. ಮುಂಭಾಗವು  ಚೂಪಾದ ಕ್ರೋಮ್‌ನೊಂದಿಗೆ ಹೊಸ ರೇಡಿಯಂಟ್ ಗ್ರಿಲ್ (Radiant Grill) ಅನ್ನು ಹೊಂದಿದೆ. ಸೆಮಿಕಂಡಕ್ಟರ್ ಕೊರತೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಮಾರುತಿಯ ಉತ್ಪಾದನೆಯು ಗಮನಾರ್ಹವಾಗಿ ಕಡಿಮೆಯಾಗಿದೆ.  ಆದರೆ ಈಗ ಹೊಸ ವಾಹನಗಳ ಬೇಡಿಕೆ ಹೆಚ್ಚಿದೆ ಮತ್ತು ಈ ನಿಟ್ಟಿನಲ್ಲಿ ಕಾರುಗಳ ವಿತರಣಾ ಅವಧಿಯು ವಿಳಂಬವಾಗದಂತೆ  ನೋಡಿಕೊಳ್ಳಲು ತನ್ನ ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಲಿದೆ ಎಂದು ಕಂಪನಿ ತಿಳಿಸಿದೆ. 

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ