3 ಕೋಟಿ ಮೊತ್ತದ ಮರ್ಸಿಡಿಸ್ ಮೆಬ್ಯಾಕ್ ಖರೀದಿಸಿದ ನಟಿ ನೀತೂ ಕಪೂರ್, ಪುತ್ರ ರಣಬೀರ್ ಬಳಿ ಇಲ್ಲ ಈ ಕಾರು!

By Suvarna News  |  First Published Mar 10, 2023, 4:21 PM IST

ನಟಿ ನೀತೂ ಕಪೂರ್ ಹೊಚ್ಚ ಹೊಸ ಮರ್ಸಿಡಿಸ್ ಬಂಜ್ ಮೆಬ್ಯಾಕ್ ಕಾರು ಖರೀದಿಸಿದ್ದಾರೆ. ಇದರ ಬೆಲೆ 3 ಕೋಟಿ ರೂಪಾಯಿ. ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳ ಬಳಿ ಈ ಕಾರಿದೆ. ಈ ದುಬಾರಿ ಹಾಗೂ ಐಷಾರಾಮಿ ಕಾರಿನ ವಿಶೇಷತೆ ಏನು? 


ಮುಂಬೈ(ಮಾ.10): ಬಾಲಿವುಡ್‌ನ ಕಪೂರ್ ಫ್ಯಾಮಿಲಿಗೆ ಮತ್ತೊಬ್ಬ ಅತಿಥಿ ಸೇರಿಕೊಂಡಿದ್ದಾರೆ. ಹೌದು, ನಟಿ ನೀತೂ ಕಪೂರ್ ಹೊಚ್ಚ ಹೊಸ ಮರ್ಸಿಡಿಸ್ ಮೆಬ್ಯಾಕ್ GLS 600 ಕಾರು ಖರೀದಿಸಿದ್ದಾರೆ. ಇದು ಅತೀ ದುಬಾರಿ ಹಾಗೂ ಐಷಾರಾಮಿ SUV ಕಾರು. ಈ ಕಾರಿನ ಬೆಲೆ 3 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಕಾರು ಖರೀದಿಸಿದ ಸಂತವನ್ನು ನೀತೂ ಕಪೂರ್ ಹಂಚಿಕೊಂಡಿದ್ದಾರೆ. ಇತ್ತ ಮರ್ಸಿಡಿಸ್ ಡೀಲರ್ ನೀತೂ ಕಪೂರ್ ಕಾರು ಡೆಲಿವರಿ ಪಡೆದುಕೊಳ್ಳುತ್ತಿರುವ ಪೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳಾದ ಅರ್ಜುನ್ ಕಪೂರ್, ರಣವೀರ್ ಸಿಂಗ್, ಆಯುಷ್ಮಾನ್ ಖುರಾನ್ ಸೇರಿದಂತೆ ಹಲವರು ಬಳಿ ಈ ಕಾರಿದೆ.

ನೀತೂ ಕಪೂರ್ ಮೊನೊಟೆನ್ ಶೇಡ್ ಕಲರ್ ಕಾರು ಖರೀದಿಸಿದ್ದಾರೆ. ಅತ್ಯಂತ ಆಕರ್ಷಕ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಕಾರು ಇದಾಗಿದೆ. ನೀತೂ ಕಪೂರ್ ಹೊಸ ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಕಾರಿನ ಜೊತೆಗಿನ ಫೋಟೋ ಹಾಗೂ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tap to resize

Latest Videos

undefined

ರೆಡ್ ಹಾಟ್ ಜೀಪ್ ಮೆರಿಡಿಯನ್ ಖರೀದಿಸಿದ ಉರ್ಫಿ ಜಾವೆದ್, ಈ ಕಾರಿನಲ್ಲಿದೆ ಹಲವು ವಿಶೇಷತೆ!

ಮರ್ಸಿಡಿಸ್ ಬೆಂಜ್ ಮೆಬ್ಯಾಕ್ GLS 600 ಕಾರು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಾರಾಗಿದೆ.  ಪ್ರಯಾಣ ಹಾಗೂ ಡ್ರೈವಿಂಗ್ ಮಾಡಲು ಇದು ಅತ್ಯಂತ ಆರಾಮದಾಯಕ ಹಾಗೂ ಸುಖಕರ ಕಾರಾಗಿದೆ. ಹೀಗಾಗಿಯೇ SUV ಐಷಾರಾಮಿ ಕಾರುಗಳ ಪೈಕಿ ಮರ್ಸಿಡಿಸ್ ಮೇಬ್ಯಾಕ್ ಅತ್ಯುತ್ತಮ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಕಾರಿನಲ್ಲಿ ವೆಂಟಿಲೇಟೆಡ್ ಮಸಾಜ್ ಸೀಟ್ ಹೊಂದಿದೆ. ಇದರಿಂದ ಪ್ರಯಾಣಿಕರು ಮಸಾಜ್ ಸೌಲಭ್ಯವನ್ನೂ ಪಡೆದುಕೊಳ್ಳಬಹುದು.  ಎಲೆಕ್ಟ್ರಾನಿಕ್ ಸ್ಲೈಡಿಂಗ್ ಪನೋರಮಿಕ್ ಸನ್‌ರೂಫ್, 12.3 ಇಂಟಿನ ಡ್ಯುಯೆಲ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಇನ್ನು ಕಾರಿನೊಳಗೆ ಹಲವು ಮೂಡ್ ಲೈಟಿಂಗ್ ಫೀಚರ್ಸ್ ಹೊಂದಿದೆ.

 

 

ಮರ್ಸಿಡಿಸ್ ಬೆಂಜ್ ಮೆಬ್ಯಾಕ್ GLS 600 ಕಾರು 4.0 ಲೀಟರ್ V8 ಪೆಟ್ರೋಲ್ ಮೋಟಾರ್ ಎಂಜಿನ್ ಹೊಂದಿದೆ. ಅತ್ಯಂತ ಬಲಿಷ್ಠ ಎಂಜಿನ್ ಹೊಂದಿರುವ ಮೆಬ್ಯಾಕ್  550bhp ಪವರ್ ಹಾಗೂ 730nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.ಕೇವಲ 4.9 ಸೆಕೆಂಡ್‌ನಲ್ಲಿ 0-100 ಕಿ.ಮೀ ವೇಗ ಪಡೆದುಕೊಳ್ಳಲಿದೆ. 

ಮಹೀಂದ್ರ ಎಲೆಕ್ಟ್ರಿಕ್ ರಿಕ್ಷಾ ರೈಡ್ ಮಾಡಿದ ಬಿಲ್ ಗೇಟ್ಸ್, ಆಟೋ ಶ್ರೀಮಂತನ ಜಾಲಿ ಸವಾರಿ!

2022ರಲ್ಲಿ ನೀತೂ ಕಪೂರ್ ಜಗ್ ಜಗ್ ಜಿಯೋ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅನಿಲ್ ಕಪೂರ್ ಜೊತೆಗೆ ಕಾಣಿಸಿಕೊಂಡ ನೀತೂ ಕಪೂರ್ ಇದೀಗ ಇನ್ನೂ ತೆರಕಾಣಬೇಕಿರುವ ಲೆಟರ್ ತೋ ಮಿಸ್ಟರ್ ಖನ್ನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 
 
 

click me!