ರೆಡ್ ಹಾಟ್ ಜೀಪ್ ಮೆರಿಡಿಯನ್ ಖರೀದಿಸಿದ ಉರ್ಫಿ ಜಾವೆದ್, ಈ ಕಾರಿನಲ್ಲಿದೆ ಹಲವು ವಿಶೇಷತೆ!

By Suvarna NewsFirst Published Mar 10, 2023, 3:39 PM IST
Highlights

ಪ್ರತಿ ದಿನ ಚಿತ್ರ ವಿಚಿತ್ರ ಡ್ರೆಸ್ ಮೂಲಕ ಭಾರಿ ಸಂಚಲನ ಸೃಷ್ಟಿಸುತ್ತಿರುವ ಮಾಡೆಲ್ ಉರ್ಫಿ ಜಾವೆದ್, ಕೆಂಪು ಬಣ್ಣದ ಜೀಪ್ ಮೆರಿಡಿಯನ್ SUV ಖರೀದಿಸಿದ್ದಾರೆ. ಜೀಪ್ ಖರೀದಿಗೆ ಉರ್ಫಿ ರೆಡ್ ಹಾಟ್ ಡ್ರೆಸ್ ಮೂಲಕ ಹಾಜರಾಗಿ ಎಲ್ಲರ ಗಮನಸೆಳೆದಿದ್ದಾರೆ. ಉರ್ಫಿ ಖರೀದಿಸಿದ ಜೀಪ್ ಮೆರಿಡಿಯನ್ ಉರ್ಫಿಯಷ್ಟೇ ಹಾಟ್ ಆಗಿದೆ. ಇಷ್ಟೇ ಅಲ್ಲ ಕಾರಿನಲ್ಲಿದೆ ಹಲವು ವಿಶೇಷತೆ?

ಮುಂಬೈ(ಮಾ.10): ಫ್ಯಾಶನ್ ಜಗತ್ತಿನಲ್ಲಿ ಉರ್ಫಿ ಜಾವೆದ್ ಹೆಸರು ಭಾರಿ ಸದ್ದು ಮಾಡುತ್ತಿದೆ. ಉರ್ಫಿ ಡ್ರೆಸ್ ಹಾಗೂ ಥೀಮ್ ಫ್ಯಾಶನ್ ಲೋಕವನ್ನೇ ಅಚ್ಚರಿಗೊಳಿಸುತ್ತಿದೆ. ಯಾವ ಅವತಾರದಲ್ಲಿ ಉರ್ಫಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಕುತೂಹಲ. ಇದೀಗ ಉರ್ಫಿ ಜಾವೇದ್ ಎರೆಡೆರಡು ಅಚ್ಚರಿ ನೀಡಿದ್ದಾರೆ. ಒಂದು ಉರ್ಫಿ ರೆಡ್ ಹಾಟ್ ಡ್ರೆಸ್ ಮೂಲಕ ಕಾಣಿಸಿಕೊಂಡಿದ್ದಾರೆ. ಈ ಕೌತುಕ ಕಣ್ತುಂಬಿಕೊಳ್ಳುವ ಮೊದಲೇ ಉರ್ಫಿ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಉರ್ಫಿ ಜಾವೆದ್ ವೆಲ್ವೆಟ್ ಕೆಂಪು ಬಣ್ಣದ ಜೀಪ್ ಮೆರಿಡಿಯನ್ SUV ಕಾರು ಖರೀದಿಸಿದ್ದಾರೆ. 7 ಸೀಟರ್ ಜೀಪ್ ಮೆರಿಡಿಯನ್ ಕಾರು ಖರೀದಿಸಿಲು ಉರ್ಫಿ ವೆಲ್ವೆಟ್ ಹಾಟ್ ರೆಡ್ ಕಲರ್ ಡ್ರೆಸ್‌ನಲ್ಲಿ ಆಗಮಿಸಿದ್ದರು. ಇದು ಎಲ್ಲರ ಗಮನಸೆಳೆದಿದೆ.  

ಉರ್ಫಿ ಜಾವೆದ್ ಖರೀದಿಸಿದ ಜೀಪ್ ಮೆರಿಡಿಯನ್ 7 ಸೀಟರ್ SUV ಕಾರಿನ ಬೆಲೆ 30.10 ಲಕ್ಷ ರೂಪಾಯಿಯಿಂದ ಗರಿಷ್ಠ 37.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಉರ್ಫಿ ಟಾಪ್ ಮಾಡೆಲ್ ಜೀಪ್ ಮೆರೆಡಿಯನ್ ಕಾರು ಖರೀಸಿದ್ದಾರೆ. ಇದರ ಆನ್ ರೋಡ್ ಬೆಲೆ ಸರಿಸುಮಾರು 45 ಲಕ್ಷ ರೂಪಾಯಿ. ಉರ್ಫಿ ಜಾವೆದ್ ಖರೀದಿಸಿದ ನೂತನ ಕಾರು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. 

 

ಸ್ವಿಮ್‌ ಸೂಟ್‌ಗೆ ಡೈನಿಂಗ್ ಟೇಬಲ್‌ ಕವರ್ ಸುತ್ತಿಕೊಂಡು ರಸ್ತೆಗಿಳಿದ ನಟಿ ಉರ್ಫಿ ಫೋಟೋ ವೈರಲ್

ಉರ್ಫಿ ಜಾವೆದ್ ಜೀಪ್ ಬ್ರ್ಯಾಂಡ್ ಖರೀದಿಸುತ್ತಿರುವುದು ಇದೇ ಮೊದಲಲ್ಲ. 2022ರಲ್ಲಿ ಉರ್ಫಿ ಜೀಪ್ ಕಂಪಾಸ್ ಕಾರು ಖರೀದಿಸಿದ್ದಾರೆ. ನೀಲಿ ಬಣ್ಣದ ಕಾರು ಇದಾಗಿತ್ತು. ಇದೀಗ ಉರ್ಫಿ ಕಂಪಾಸ್ ಕಾರು ಎಕ್ಸ್‌ಚೇಂಜ್ ಮಾಡಿ ಮೆರಿಡಿಯನ್ ಖರೀದಿಸಿದ್ದಾರೋ ಅಥವಾ ಹೊಸದಾಗಿ ಖರೀಸಿದ್ದಾರೋ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಜೀಪ್ ಮೆರಿಡಿಯನ್ ಕಾರು ಟೋಯೋಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಉರ್ಫಿ ನೂತನ ಕಾರು ಹಲವು ಫೀಚರ್ಸ್ ಹೊಂದಿದೆ. ಅತೀ ದೊಡ್ಡ ಸನ್‌ರೂಫ್ ಸೌಲಭ್ಯ, ಪ್ಲೋಟಿಂಗ್ ಟೈಪ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮೇಟೆಡ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಸೀಟ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಕಾರಿನಲ್ಲಿರುವ ಫೀಚರ್ಸ್ ಈ ಕಾರಿನಲ್ಲಿದೆ. 

LED ಹೆಡ್‌ಲ್ಯಾಂಪ್ಸ್, LED ಡಿಆರ್‌ಎಲ್, ಜೀಪ್ ಬ್ರ್ಯಾಂಡ್ ಸಿಗ್ನೇಚರ್ ಗ್ರಿಲ್ ಹೊಂದಿದೆ. ಬದಿಯಿಂದ ನೋಡಿದೆ ಕಂಪಾಸ್ ಲುಕ್ ಹೊಂದಿದೆ. ಆದರೆ ಕಂಪಾಸ್ ಕಾರಿಗಿಂತ ದೊಡ್ಡದಾಗಿದೆ. ಟೈಲ್ ಲ್ಯಾಂಪ್ ಕೂಡ LED ಹೊಂದಿದೆ. ಆದರೆ ಸ್ಟೈಲೀಶ್ ಲುಕ್ ಹೊಂದಿದೆ. ಲೋಡೆಡ್ ಫೀಚರ್ಸ್, ಕ್ಯಾಬಿನ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಕಂಪಾಸ್ ಕಾರಿನಲ್ಲಿರುವ ಫೀಚರ್ಸ್ ಈ ಕಾರಿನಲ್ಲಿದೆ.

ಹುಷಾರಮ್ಮ ಚುಚ್ಚತ್ತೆ; ಉರ್ಫಿಯ ಹೊಸ ಅವತಾರ ಕಂಡು ಹೌಹಾರಿದ ನೆಟ್ಟಿಗರಿಂದ ಸಖತ್ ಟ್ರೋ

ಜೀಪ್ ಮೆರಿಡಿಯನ್ ಕಾರು 2.0 ಲೀಟರ್ ಟರ್ಬೋಚಾರ್ಜ್ ಡೀಸೆಲ್ ಎಂಜಿನ್ ಹೊಂದಿದೆ. ಜೀಪ್ ಮೆರಿಡಿಯನ್ ಕಾರಿನಲ್ಲಿ ಕೇವಲ ಡೀಸೆಲ್ ವೇರಿಯೆಂಟ್ ಮಾತ್ರ ಲಭ್ಯವಿದೆ. ಇದರಲ್ಲಿ ಪೆಟ್ರೋಲ್ ವೆರಿಯೆಂಟ್ ಕಾರು ಲಭ್ಯವಿಲ್ಲ.  170 Ps ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಟ್ರಾನ್ಸ್‌ಮಿಶನ್‌ನಲ್ಲಿ 6 ಸ್ಪೀಡ್ ಮಾನ್ಯುಯೆಲ್ ಹಾಗೂ 9 ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ. 

ಭಾರತದಲ್ಲಿ ಜೀಪ್ ಬ್ರ್ಯಾಂಡ್ ಕಂಪನಿ ಜೀಪ್ ಕಂಪಾಸ್, ಜೀಪ್ ಮೆರಿಡಿಯನ್, ಜೀಪ್ ರಾಂಗ್ಲರ್ ಹಾಗೂ ಜೀಪ್ ಗ್ರ್ಯಾಂಡ್ ಚೀರೋಕಿ ಕಾರು ಮಾರಾಟ ಮಾಡುತ್ತಿದೆ. ಫೆಬ್ರವರಿ ತಿಂಗಳಲ್ಲಿ 719 ಕಾರುಗಳನ್ನು ಮಾರಾಟ ಮಾಡುವ ಮೂಲಕಪ್ರಗತಿ ಸಾಧಿಸಿದೆ. ಇದರಲ್ಲಿ ಜೀಪ್ ಕಂಪಾಸ್ ಹಾಗೂ ಜೀಪ್ ಮೆರಿಡಿಯನ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

click me!