ಒಂದಲ್ಲ, ಎರಡಲ್ಲ, ಈ ನಟನ ಬಳಿ ಇದೆ ದುಬಾರಿ ಬೆಲೆಯ 3 ಪೋರ್ಶೆ ಕಾರು!

By Suvarna News  |  First Published Jul 21, 2023, 12:00 PM IST

ಸೆಲೆಬ್ರೆಟಿಗಳು ಸ್ಪೋರ್ಟ್ಸ್‌ಕಾರು, ಸೂಪರ್ ಕಾರು ಖರೀದಿಸುವುದು ಹೊಸದೇನಲ್ಲ.ಬಹುತೇಕ ಸಿನಿಮಾ ನಟ ನಟಿಯರು, ಉದ್ಯಮಿಗಳು ಪೋರ್ಶೆ ಕಾರು ಹೊಂದಿದ್ದಾರೆ. ಆದರೆ ಈ ಬಾಲಿವುಡ್ ನಟ ಬಳಿ ಒಂದಲ್ಲ, 3 ಪೋರ್ಶೆ ಕಾರು ಇದೆ. ಇದರ ಜೊತೆಗೆ ಇನ್ನು ಹಲವು ದುಬಾರಿ ಕಾರುಗಳಿವೆ. 
 


ಮುಂಬೈ(ಜು.21) ಕೋಟಿ ಕೋಟಿ ರೂಪಾಯಿ ಬೆಲೆಯ ಪೊರ್ಶೆ ಕಾರು ಭಾರತದ ರಸ್ತೆಗಳಿಗೆ ಹೊಸದಲ್ಲ. ಸ್ಯಾಂಡಲ್‌ವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಕೆಲ ನಟ ನಟಿಯರು ಪೋರ್ಶೆ ಕಾರಿನಲ್ಲಿ ಓಡಾಡುತ್ತಾರೆ. ಆದರೆ ಟೆಲಿವಿಷನ್ ನಟ, ಬಾಲಿವುಡ್ ಸಿನಿಮಾಗಳಲ್ಲೂ ಮೋಡಿ ಮಾಡಿ ಪ್ರತಿಭಾನ್ವಿತ ರಾಮ್ ಕಪೂರ್ ಬಳಿ ಒಂದಲ್ಲ, ಬರೋಬ್ಬರಿ 3 ಪೋರ್ಶೆ ಕಾರುಗಳಿವೆ. ರಾಮ್ ಕಪೂರ್‌ಗೆ ಪೋರ್ಶೆ ಅತ್ಯಂತ ನೆಚ್ಚಿನ ಕಾರು. ಹೀಗಾಗಿ ಇತ್ತೀಚೆಗೆ ರಾಮ್ ಕಪೂರ್, ತಮ್ಮ ಕಾರು ಕಲೆಕ್ಷನ್‌ಗೆ ಪೋರ್ಶೆ 992 ಟರ್ಬೋ ಎಸ್ ಕಾರು ಸೇರಿಸಿಕೊಂಡಿದ್ದಾರೆ.ಈ ಕಾರಿನ ಎಕ್ಸ್ ಶೋ ರೂಂ ಬೆಲೆ 3.6 ಕೋಟಿ ರೂಪಾಯಿ.

ಪೊರ್ಶೆ 992 ಟರ್ಬೋ ಎಸ್ ಕಾರು 911 ಕಾರು ಎಂದೇ ಜನಪ್ರಿಯವಾಗಿದೆ. ಇದು ಪೊರ್ಶೆಯ ಅತ್ಯಾಧುನಿಕ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ಕಾರು.ಈ ಕಾರನ್ನು ಇತ್ತೀಚೆಗೆ ರಾಮ್ ಕಪೂರ್ ತಮ್ಮ ಮನೆಗೆ ತಂದಿದ್ದಾರೆ. ನೀಲಿ ಸುಂದರಿಯನ್ನು ಮುಂಬೈನ ಬೀದಿಯಲ್ಲಿ ಚಲಾಯಿಸುತ್ತಾ ಮನೆಗೆ ಕರೆತಂದಿದ್ದಾರೆ. ಮುಂಬೈ ರಸ್ತೆಯಲ್ಲಿ ಪೋರ್ಶೆ ಹೊಸದಲ್ಲ. ಆದರೆ ರಾಮ್ ಕಪೂರ್ ಕಾರುಗಳು ಎಲ್ಲರ ಗಮನಸೆಲೆಯುತ್ತಿದೆ. ಕಾರಣ ರಾಮ್ ಕಪೂರ್ ಬಳಿ 3 ದುಬಾರಿ ಪೋರ್ಶೆ ಕಾರುಗಳು ಒಂದಕ್ಕಿಂತ ಒಂದು ಮಿಗಿಲಾಗಿದೆ.

Tap to resize

Latest Videos

undefined

80 ವರ್ಷದ ಹುಟ್ಟುಹಬ್ಬಕ್ಕೆ 80ನೇ ಪೊರ್ಶೆ ಕಾರು ಖರೀದಿ; ಕಾರು ಕ್ರೇಜ್‌‌ಗೆ ಸರಿಸಾಟಿ ಇಲ್ಲ!

2021ರಲ್ಲಿ ರಾಮ್ ಕಪೂರ್ ಎಕ್ಸ್ ಶೋ ರೂಂ 2 ಕೋಟಿ ರೂಪಾಯಿ ಬೆಲೆ ಪೋರ್ಶೆ 911 ಕೆರೆರಾ ಎಸ್ ಕಾರು ಖರೀದಿಸಿದ್ದಾರೆ. ಇನ್ನು 2013ರಲ್ಲೇ ರಾಮ್ ಕಪೂರ್ ಪೋರ್ಶೆ 911 ಕ್ಯಾಬ್ರಿಯೊಲೆಟ್ ಕಾರು ಖರೀದಿಸಿದ್ದಾರೆ. ನೀಲಿ, ಕೆಂಪು ಹಾಗೂ ಕಪ್ಪು ಬಣ್ಣದ ಮೂರು ಪೋರ್ಶೆ ಕಾರಿನ ಮಾಲೀಕ ರಾಮ್ ಕಪೂರ್ ಮುಂಬೈನಲ್ಲಿ ಬಾರಿ ಸಂಚಲನ ಸೃಷ್ಟಿಸಿದ್ದಾರೆ. ಕಾರಣ ಒಂದೊಂದು ಪೊರ್ಶೆ ಕಾರನ್ನು ಸುಮ್ಮನೆ ಮನೆಯಲ್ಲಿ ನಿಲ್ಲಿಸಿದರೂ ಲಕ್ಷ ಲಕ್ಷ ರೂಪಾಯಿ ನಿರ್ವಹಣೆಗೆ ಖರ್ಚು ಮಾಡಬೇಕು. ಹೀಗಿರುವಾಗ ಮೂರು ಮೂರು ಪೋರ್ಶೆ ಕಾರು ಇಟ್ಟುಕೊಂಡಿರುವ ರಾಮ್ ಕುಮಾರ್ ಬಾಲಿವುಡ್ ಖ್ಯಾತ ನಟರನ್ನೇ ಚಕಿತಗೊಳಿಸಿದ್ದಾರೆ.

ಇತ್ತೀಚೆಗ ರಾಮ್ ಕಪೂರ್ ಖರೀದಿಸಿದ ಪೋರ್ಶೆ 922 ಟರ್ಬೋ ಎಸ್ ಕಾರು 560 PS ಪವರ್ ಹೊಂದಿದೆ. ಇದರ ಜೊತೆಗೆ ಸ್ಪೋರ್ಟ್ಸ್ ಕ್ರೋನೋ ಪ್ಯಾಕ್ ಕೂಡ ಲಭ್ಯವಿದೆ.ಹೀಗಾಗಿ ಕಾರಿನ ಪರ್ಫಾಮೆನ್ಸ್ ಊಹೆಗೂ ನಿಲುಕದ ರೀತಿಯಲ್ಲಿದೆ. 750 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 7 ಸ್ಪೀಡ್ ಡ್ಯುಯೆಲ್ ಕ್ಲಚ್ PDK ಟ್ರಾನ್ಸ್‌ಮಿಶನ್ ಹೊಂದಿರುವ ಪೊರ್ಶೆ 922 ಎಸ್ ಕಾರು, ಆಟೋಮ್ಯಾಟಿಕ್ ಸ್ಟಾರ್ಟ್ ಸ್ಟಾಪ್ ಫೀಚರ್ ಹೊಂದಿದೆ.

ಈ ಕಾರು 100 km/h ವೇಗವನ್ನು ಕೇವಲ 3.1 ಸಕೆಂಡ್‌ನಲ್ಲಿ ತಲುಪಲಿದೆ. ಈ ಕಾರಿನ ಗರಿಷ್ಟ ವೇಗ 318 ಕಿಲೋಮೀಟರ್ ಪ್ರತಿಗಂಟೆಗೆ. 20 ಇಂಚಿನ ಅಲೋಯ್ ವೀಲ್ ಬಳಸಲಾಗಿದೆ. ಇದರ ಜೊತೆಗೆ ಸುರಕ್ಷತಾ ಫೀಚರ್ಸ್ ಸೇರಿದಂತೆ ಇತರ ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿ ಲಭ್ಯವಿದೆ. LED ಹೆಡ್‌ಲ್ಯಾಂಪ್ಸ್, 4 ಪಾಯಿಂಟ್ ಡೇ ಟಮ್ ರನ್ನಿಂಗ್ ಲೈಟ್ಸ್ ಈ ಕಾರಿನಲ್ಲಿದೆ. 2021ರಲ್ಲಿ ರಾಮ್ ಕಪೂರ್ ಖರೀದಿಸಿದ ಪೋರ್ಶೆ  911ಕ್ಯಾರೆರಾ S ಕಾರು 450 PS ಪವರ್ ಹಾಗೂ 530 Nm ಪೀಕ್ ಟಾರ್ಕ್ ಹೊಂದಿದೆ. 

ದುಬಾರಿ ಪೊರ್ಶೆ 911 ಕ್ಯಾರೆರಾ S ಕಾರು ಖರೀದಿಸಿದ ನಟ ಫಹದ್ ಫಾಸಿಲ್, ನಾಜ್ರಿಯಾ !

ರಾಮ್ ಕುಮಾರ್ ಬಳಿ ಕೇವಲ ಪೋರ್ಶೆ ಕಾರು ಮಾತ್ರ ಎಂದುಕೊಳ್ಳಬೇಡಿ. ಕಾರು ಕಲೆಕ್ಷನ್‌ನಲ್ಲಿ ರಾಮ್ ಕುಮಾರ್ ದಿಗ್ಗಜ ನಟ ನಟಿಯರನ್ನೇ ಮೀರಿಸುತ್ತಾರೆ. 4.5 ಕೋಟಿ ರೂಪಾಯಿ ಎಕ್ಸ್ ಶೋ ರೂಂ ಬೆಲೆಯ ಫೆರಾರಿ ಪೋರ್ಟೋಫಿನೋ  M ಕಾರು ರಾಮ್ ಕಪೂರ್ ಕಾರು ಪಾರ್ಕಿಂಗ್‌ನಲ್ಲಿದೆ. ಇಷ್ಟೇ ಅಲ್ಲ ಇತ್ತೀಚೆಗೆ ರೇಂಜ್ ರೋವರ್ ಕಾರು ಕೂಡ ಖರೀದಿಸಿದ್ದಾರೆ. ಇನ್ನು 2016ರಲ್ಲಿ BMW X5 ಕಾರನ್ನು ಖರೀದಿಸಿದ್ದಾರೆ. ಇನ್ನು 2020ರಲ್ಲಿ ರಾಮ್ ಕಪೂರ್ ಮರ್ಸಿಡಿಸ್ ಬೆಂಜ್ AMG G63 SUV ಕಾರು ಖರೀದಿಸಿದ್ದಾರೆ. 
 

click me!