ದುಬಾರಿ ರೇಂಜ್ ರೋವರ್, ಬೆಂಟ್ಲೇ ಬಿಟ್ಟು ಮಹೀಂದ್ರ ಥಾರ್ ಡ್ರೈವ್ ಮಾಡಿದ ಅಮಿತಾಬ್ ಬಚ್ಚನ್!

By Suvarna News  |  First Published Jul 11, 2023, 3:05 PM IST

ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ಬಳಿ ಕೋಟಿ ಕೋಟಿ ಬೆಲೆಬಾಳುವ ಐಷಾರಾಮಿ ಕಾರುಗಳಿವೆ. ಇನ್ನು ಅಮಿತಾಬ್ ಕರೆದುಹೋಗಲು ಚಾಲಕರೂ ಇದ್ದಾರೆ. ಆದರೆ ಅಮಿತಾಬ್ ಬಚ್ಚನ್ ತಮ್ಮ ನೆಚ್ಚಿನ ಮಹೀಂದ್ರ ಥಾರ್ ಕಾರನ್ನು ಖುದ್ದು ಡ್ರೈವ್ ಮಾಡಿ ಮನೆಗೆ ತೆರಳಿದ್ದಾರೆ. 


ಮುಂಬೈ(ಜು.11) ಮಹೀಂದ್ರ ಥಾರ್ ಕಾರಿಗೆ ಮಾರು ಹೋಗದವರು ಯಾರಿದ್ದಾರೆ? ಸೆಲೆಬ್ರೆಟಿಗಳು, ರಾಜಕಾರಣಿಗಳು ತಮ್ಮ ದುಬಾರಿ ಕಾರಿನ ಜೊತೆಗೆ ಮಹೀಂದ್ರ ಥಾರ್ ಕಾರಿನತ್ತ ಮೊರೆ ಹೋಗುತ್ತಿರುವುದು ಹೊಸದೇನಲ್ಲ. ಮಹೀಂದ್ರ ಕಾರಿನ ವಿನ್ಯಾಸ, ಪರ್ಫಾಮೆನ್ಸ್ ಸೇರಿದಂತೆ ಹಲವು ಕಾರಣಗಳಿಂದ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದೆ. ದಾರಿಯಲ್ಲಿ ಥಾರ್ ಕಾರು ಸಾಗುತ್ತಿದ್ದರೆ ಒಂದು ಬಾರಿ ನೋಡದೇ ಇರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಥಾರ್ ಮೋಡಿ ಮಾಡಿದೆ. ಈ ಥಾರ್ ಕಾರು ಮುಂಬೈನ ಬೀದಿಯಲ್ಲಿ ಸಾಗುತ್ತಿದ್ದರೆ ಅದರ ಹಿಂದೆ, ಸುತ್ತ ಮುತ್ತ ಜನವೋ ಜನ ಸೇರಿದ್ದರು. ಕಾರಣ ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ತಮ್ಮ ದುಬಾರಿ ಕಾರುಗಳನ್ನು ಬಿಟ್ಟು ಮಹೀಂದ್ರ ಥಾರ್ ಡ್ರೈವ್ ಮಾಡಿ ಮನೆಗೆ ತೆರಳಿದ್ದರು. 

ಅಮಿತಾಬ್ ಬಚ್ಚನ್ ತಮ್ಮ ರೇಂಜ್ ರೋವರ್ ಕಾರು ಬಿಟ್ಟು ಮಹೀಂದ್ರ ಥಾರ್ ಕಾರಿನಲ್ಲಿ ಮನೆಗೆ ಸಾಗಿದ್ದಾರೆ. ಖುದ್ದು ತಾವೇ ಡ್ರೈವ್ ಮಾಡಿದ್ದಾರೆ. ಇತ್ತ ರೇಂಜ್ ರೋವರ್ ಕಾರನ್ನು ಚಾಲಕ ಚಲಾಯಿಸಿದರೆ, ಅಮಿತಾಬ್ ಬಚ್ಚನ್ ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಮನೆಗೆ ತೆರಳಿದ್ದಾರೆ. ಮಹೀಂದ್ರ ಕಾರಿನ ಜೊತೆಗೆ ಅಮಿತಾಬ್ ಬಚ್ಚನ್ ನೋಡಲು ಅಭಿಮಾನಿಗಳು ಮುಗಿಬಿದ್ದರು.

Tap to resize

Latest Videos

ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಖರೀದಿಸಿದ ನಟ ರಮೇಶ್ ಅರವಿಂದ್, ಈ ಕಾರಿನಲ್ಲಿದೆ ಹಲವು ವಿಶೇಷತೆ!

ಹಲವು ಸೆಲೆಬ್ರೆಟಿಗಳು ಮಹೀಂದ್ರ ಥಾರ್ ಕಾರು ಖರೀದಿಸಿದ್ದಾರೆ. ಕೋಟಿ ರೂಪಾಯಿ ಬೆಲೆಯ ಔಷಾರಾಮಿ ಕಾರಿನ ಜೊತೆಗೆ ಮಹೀಂದ್ರ ಥಾರ್ ಕಾರನ್ನು ಚಲಾಯಿಸುತ್ತಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೂಡ ಮಹೀಂದ್ರ ಥಾರ್ ಕಾರು ಖರೀದಿಸಿ ಡ್ರೈವ್ ಮಾಡಿದ್ದಾರೆ. ಬಳಿಕ ಕಾರಿನ ಗುಣಗಾನ ಮಾಡಿದ್ದರು. 

ಅಮಿತಾಬ್ ಬಚ್ಚನ್ ಮಾತ್ರವಲ್ಲ, ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಥಾರ್ ಕಾರಿನ ಡ್ರೈವ್ ಅನುಭವ ಸವಿದಿದ್ದಾರೆ. ಮಹೀಂದ್ರ ಥಾರ್ ಕಾರಿನ ಆರಂಭಿಕ 10.55 ಲಕ್ಷ ರೂಪಾಯಿ(ಎಕ್ಸ್ ಶೋ ರೂ) ಟಾಪ್ ಮಾಡೆಲ್ ಬೆಲೆ 21.21 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 4WD ಎಂಜಿನ್ ಹೊಂದಿರುವ ಆಫ್ ರೋಡ್ ಸೇರಿದಂತೆ ಯಾವುದೇ ರಸ್ತೆಗೂ ಹೇಳಿ ಮಾಡಿಸಿದ ಕಾರು. ಇನ್ನು ಹೆದ್ದಾರಿ, ಟ್ರಾಫಿಕ್ ತುಂಬಿದ ನಗರದಲ್ಲೂ ಮಹೀಂದ್ರ ಥಾರ್ ಚಾಲನೆ ಸುಲಭ. ಈ ಕಾರನ್ನು ಅಮಿತಾಬ್ ಬಚ್ಚನ್ ಡ್ರೈವ್ ಮಾಡುವ ಮೂಲಕ ಇದೀಗ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ರೆಡ್ ಹಾಟ್ ಜೀಪ್ ಮೆರಿಡಿಯನ್ ಖರೀದಿಸಿದ ಉರ್ಫಿ ಜಾವೆದ್, ಈ ಕಾರಿನಲ್ಲಿದೆ ಹಲವು ವಿಶೇಷತೆ!

ಅಮಿತಾಬ್ ಬಚ್ಚನ್ ಬಳಿ ಐಷಾರಾಮಿ ಕಾರುಗಳಿವೆ. ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ, ಬೆಂಟ್ಲೆ ಕಾಂಟಿನೆಂಟಲ್ ಜಿಟಿ, ಮರ್ಸಿಡಿಸ್ ಮೆಬ್ಯಾಚ್ ಎಸ್ ಕ್ಲಾಸ್, ಮರ್ಸಿಡಿಸ್ ಬೆಂಚ್ ವಿ ಕ್ಲಾಸ್, ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್, ಲೆಕ್ಸಸ್ LX 470, ಮರ್ಸಿಡಿಸ್ ಬೆಂತ್ GLS ಸೇರಿದಂತೆ ಹಲವು ಐಷರಾಮಿ ಕಾರುಗಳಿವೆ. ಆದರೆ ಇದೇ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಥಾರ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. 

click me!