5.99 ಲಕ್ಷ ರೂಪಾಯಿಗೆ ಹ್ಯುಂಡೈ ಎಕ್ಸ್‌ಟರ್ SUV ಕಾರು ಬಿಡುಗಡೆ, ಟಾಟಾ ಪಂಚ್‌ಗೆ ಪೈಪೋಟಿ!

By Suvarna News  |  First Published Jul 10, 2023, 1:55 PM IST

ಹ್ಯುಂಡೈ ಹೊಚ್ಚ ಹೊಸ ಮೈಕ್ರೋ ಎಸ್‌ಯುವಿ ಎಕ್ಸ್‌ಟರ್ ಕಾರು ಬಿಡುಗಡೆ ಮಾಡಿದೆ. ಟಾಟಾ ಪಂಚ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಈ ಹ್ಯುಂಡೈ ಎಕ್ಸ್‌ಟರ್ ಆರಂಭಿಕ ಬೆಲೆ 5.99 ಲಕ್ಷ ರೂಪಾಯಿ. ಕೈಗೆಟುಕುವ ಬೆಲೆಗೆ ಅತ್ಯುತ್ತಮ ಕಾರು ಬಿಡುಗಡೆ ಮಾಡಿದ ಬೆನ್ನಲ್ಲೇ ಭಾರಿ ಬೇಡಿಕೆ ವ್ಯಕ್ತವಾಗಿದೆ.


ನವದೆಹಲಿ(ಜು.10) ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಟಾಟಾ ಪಂಚ್ ಕಾರು ಬಿಡುಗಡೆ ಬಳಿ ಮೈಕ್ರೋ ಎಸ್‌ಯುವಿ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೀಗ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ಎಕ್ಸ್‌ಟರ್ ಕಾರು ಬಿಡುಗಡೆಯಾಗಿದೆ. ಇದು ಮಿನಿ ಎಸ್‌ಯುವಿ ಕಾರು. ನೂತನ ಕಾರಿನ ಬೆಲೆ 5.99 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಬೆಲೆ 9.31 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹ್ಯುಂಡೈನ ಕೈಗೆಟುಕವ ದರ ಎಸ್‌ಯುವಿ ಅನ್ನೋ ಹೆಗ್ಗಳಿಕೆಗೆ ನೂತನ ಕಾರು ಪಾತ್ರವಾಗಿದೆ.

ಮೈಕ್ರೋ ಎಸ್‌ಯುವಿ ಅತ್ಯುತ್ತಮ ಕಾರುಗಳ ಪೈಕಿ ಹ್ಯುಂಡೈ ಎಕ್ಸ್‌ಟರ್ ಅತೀ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರಣ ಟಾಟಾ ಪಂಚ್  ಆರಂಭಿಕ ಬೆಲೆ 6 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ), ಇನ್ನು ಸಿಟ್ರೋನ್ ಸಿ3 ಕಾರಿನ ಬೆಲೆ 6.16 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ ಹ್ಯುಂಡೈ ಎಕ್ಸ್‌ಟರ್ ಬೆಲೆ 5.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

Latest Videos

undefined

25 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹ್ಯುಂಡೈ ವರ್ನಾ, ಐಷಾರಾಮಿ ಕಾರಿಗೆ ಪೈಪೋಟಿ!

ಹ್ಯುಂಡೈ ಎಕ್ಸ್‌ಟರ್ ವೇರಿಯೆಂಟ್ ಹಾಗೂ ಬೆಲೆ
ಹ್ಯುಂಡೈ ಎಕ್ಸ್‌ಟರ್ EX (ಮಾನ್ಯುಯೆಲ್) : 5,99,900 ರೂಪಾಯಿ(ಎಕ್ಸ್ ಶೋ ರೂಂ)
ಹ್ಯುಂಡೈ ಎಕ್ಸ್‌ಟರ್ S(ಮಾನ್ಯುಯೆಲ್) : 7,26,990 ರೂಪಾಯಿ(ಎಕ್ಸ್ ಶೋ ರೂಂ)
ಹ್ಯುಂಡೈ ಎಕ್ಸ್‌ಟರ್ SX(ಮಾನ್ಯುಯೆಲ್) : 7,99,990 ರೂಪಾಯಿ(ಎಕ್ಸ್ ಶೋ ರೂಂ)
ಹ್ಯುಂಡೈ ಎಕ್ಸ್‌ಟರ್SX(O)(ಮಾನ್ಯುಯೆಲ್) : 8,63,990 ರೂಪಾಯಿ(ಎಕ್ಸ್ ಶೋ ರೂಂ)
ಹ್ಯುಂಡೈ ಎಕ್ಸ್‌ಟರ್ SX(O) ಕನೆಕ್ಟ್(ಮಾನ್ಯುಯೆಲ್): 9,31,990  ರೂಪಾಯಿ(ಎಕ್ಸ್ ಶೋ ರೂಂ)

ಹ್ಯುಂಡೈ ಎಕ್ಸ್‌ಟರ್ ಆಟೋಮ್ಯಾಟಿಕ್ ವೇರಿಯೆಂಟ್ ಕಾರಿನ ಬೆಲೆ 7,96,980 ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದರೆ, CNG ವೇರಿಯೆಂಟ್ ಬೆಲೆ  8,23,990 ರೂಪಾಯಿ(ಎಕ್ಸ್ ಶೋರೂಂ)ಆರಂಭಗೊಳ್ಳುತ್ತದೆ. 

ಹ್ಯುಂಡೈ ಎಕ್ಸ್‌ಟರ್ ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್ ಹೊಂದಿದೆ. ವಿಶೇಷವಾಗಿ ಹೆಚ್ ಶೇಪ್ ಡೇ ಟೈಮ್ ರನ್ನಿಂಗ್ ಲೈಟ್ಸ್, LEDs ಪ್ರಾಜೆಕ್ಟರ್ ಸೇರಿದಂತೆ ಹಲವು ಹೊಸತನಗಳ ಡಿಸೈನ್ ಇಲ್ಲಿದೆ. ಅತ್ಯಾಕರ್ಷ ಡಿಸೈನ್ ಹೊಂದಿರುವ ನೂತನ ಎಕ್ಸ್‌ಟರ್ ನೋಟದಲ್ಲಿ ಮೈಕ್ರೋಗಿಂತ ದೊಡ್ಡ ಗಾತ್ರದಲ್ಲಿ ಕಾಣಿಸುತ್ತಿದೆ. ಸಣ್ಣ ಕಾರಾಗಿದ್ದರೂ ಇದರಲ್ಲಿ ಅತ್ಯುತ್ತಮ ಸ್ಥಳಾವಕಾಶವಿದೆ.

 

ಮಿಡ್-ಸೈಜ್ ಎಸ್ ಯುವಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ!

1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ನೂತನ ಕಾರು, 5 ಸ್ಪೀಡ್ ಮಾನ್ಯುಯೆಲ್, ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹಾಗೂ ಸಿಎನ್‌ಜಿ ವೇರಿಯೆಂಟ್ ಆಯ್ಕೆಯೂ ಲಭ್ಯವಿದೆ. ನೂನತ ಕಾರು 81.86BHP ಪವರ್ ಹಾಗೂ 113.8 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಪರ್ಫಾಮೆನ್ಸ್, ಪಿಕ್‌ಅಪ್ ಕೂಡ ಉತ್ತಮವಾಗಿದೆ. ಸಿಎನ್‌ಜಿ ವೇರಿಯೆಂಟ್ ಕಾರು 68 BHP ಪವರ್ ಹಾಗೂ 95.2 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಹ್ಯುಂಡೈ ಪೆಟ್ರೋಲ್ ಮ್ಯಾನ್ಯುಯೆಲ್ ಎಂಜಿನ್  ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 19.4 ಕಿ.ಮೀ ಮೈಲೇಜ್ ನೀಡಲಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು 19.2 ಕಿಲೋಮೀಟರ್ ಹಾಗೂ ಸಿಎನ್‌ಜಿ ವೇರಿಯೆಂಟ್ ಕಾರು 27.1 ಕಿಲೋಮೀಟರ್ ಮೈಲೇಜ್ ನೀಡಲಿದೆ. 

ಹ್ಯುಂಡೈ ಎಕ್ಸ್‌ಟರ್ ಕಾರು ನೇರವಾಗಿ ಟಾಟಾ ಪಂಚ್ ಪ್ರತಿಸ್ಪರ್ಧಿಯಾಗಿದೆ. ಇದರ ಜೊತೆಗೆ ನಿಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.

click me!