ಹೊಚ್ಚ ಹೊಸ ಹೋಂಡಾ ಎಲವೇಟ್ SUV ಬುಕಿಂಗ್ ಆರಂಭ, 21 ಸಾವಿರ ರೂಗೆ ಮನೆಗೆ ತನ್ನಿ ಅತ್ಯುತ್ತಮ ಕಾರು!

By Suvarna News  |  First Published Jul 9, 2023, 7:18 PM IST

ಹೋಂಡಾ ಹೊಸ ವಿನ್ಯಾಸ ಹಾಗೂ ಹೊಸ ಪರ್ಫಾಮೆನ್ಸ್ ಎಸ್‌ಯುವಿ ಕಾರು ಎಲವೇಟ್ ಬುಕಿಂಗ್ ಆರಂಭಿಸಿದೆ. ಇದು ಮಿಡ್ ಸೈಜ್ SUV ಆಗಿದ್ದು, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸೇರಿದಂತೆ ಹಲವು ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ನೂತನ ಕಾರನ್ನು ಕೇವಲ 21,000 ರೂಪಾಯಿ ನೀಡಿ ಬುಕ್ ಮಾಡಿಕೊಳ್ಳಬಹುದು.


ನವದೆಹಲಿ(ಜು.09) ಭಾರತದಲ್ಲಿ ಎಸ್‌ಯುವಿ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲಾ ಆಟೋಮೊಬೈಲ್ ಕಂಪನಿಗಳು ಹೊಸ ಹೊಸ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹೊಂದಿರು ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ, ಕಿಯಾ ಸೆಲ್ಟೋಸ್ ಸೇರಿದಂತೆ ಮಿಡ್ ಸೈಜ್ ಎಸ್‌ಯುವಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಹೋಂಡಾ ಹೊಚ್ಚ ಹೊಸ ಎಲವೇಟ್ ಕಾರು ಅನಾವರಣ ಮಾಡಿದೆ. ನೂತನ ಕಾರಿನ ಬುಕಿಂಗ್ ಕೂಡ ಆರಂಭಗೊಂಡಿದೆ. ಹೋಂಡಾ ಎಲವೇಟ್ ಎಸ್‌ಯುವಿ ಕಾರನ್ನು ಬುಕ್ ಮಾಡಲು 21,000 ರೂಪಾಯಿ ಸಾಕು. 

ಭಾರತದಲ್ಲಿ ಹೋಂಡಾ ಎಲವೇಟ್ ಕಾರು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅದೇ ತಿಂಗಳಿನಿಂದ ಬುಕಿಂಗ್ ಮಾಡಿದ ಗ್ರಾಹಕರಿಗೆ ಕಾರು ವಿತರಣೆ ಆರಂಭಗೊಳ್ಳಲಿದೆ. ನೂತನ ಹೋಂಡಾ ಎಲವೇಟ್ ಕಾರು i-VTEC DOHC 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 121PS ಪವರ್ ಹಾಗೂ 145Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 7 ಸ್ಪೀಡ್ CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರಿನಲ್ಲಿ SV, V, VX ಹಾಗೂ ZX ಎಂಬ ನಾಲ್ಕು ವೇರಿಯೆಂಟ್ ಲಭ್ಯವಿದ್ದರೆ, ಆಟೋಮ್ಯಾಟಿಕ್ ಕಾರಿನಲ್ಲಿ V, VX ಹಾಗೂ  ZX ವೇರಿಯೆಂಟ್‌ನಲ್ಲಿ ಲಭ್ಯವಿದೆ.

Latest Videos

undefined

Honda Cars India: 20 ಲಕ್ಷ ವಾಹನ ಉತ್ಪಾದನೆ: ಮೈಲಿಗಲ್ಲು ಸಾಧಿಸಿದ ಹೋಂಡಾ ಇಂಡಿಯಾ

ಹೊಚ್ಚ ಹೊಸ ಹೋಂಡಾ ಎಲವೇಟ್ ಎಸ್‌ಯುವಿ ಕಾರಿನ ಬೆಲೆ 10.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಅಂದಾಜಿಸಲಾಗಿದೆ. ಗರಿಷ್ಠ 18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಹೋಂಡಾ ಎಲವೇಟ್ ಕಾರು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ, ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗನ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. 

ಹೋಂಡಾ ಎಲವೇಟ್ ಫುಲ್ LED ಪ್ರೊಜೆಕ್ಟರ್ ಲ್ಯಾಂಪ್ಸ್ ಹೊಂದಿದೆ. LED DRLs, ಎಲ್‌ಇಡಿ ಟರ್ನ್ ಇಂಡಿಕೇಟರ್, LED ಟೈಲ್‌ಲ್ಯಾಂಪ್ಸ್, 17 ಇಂಚಿನ ಡ್ಯುಯೆಲ್ ಟೋನ್ ಡೈಮಂಡ್ಕಟ್ ಅಲೋಯ್ ವ್ಹೀಲ್, ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಹಲವು ಫೀಚರ್ಸ್ ಸೇರಿದೆ. 7 ಇಂಚಿನ HD  TFT ಇನ್ಸುಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ IPS HD ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೈಯರ್‌ಲೆಸ್ ಚಾರ್ಜರ್, 458 ಲೀಟರ್ ಬೂಟ್ ಸ್ಪೇಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. 

New City e:HEV ಭಾರತದ ಮೊದಲ ಹೈಬ್ರಿಡ್ ಎಲೆಕ್ಟ್ರಿಕ್ ಹೋಂಡಾ ನ್ಯೂ ಸಿಟಿ e:HEV ಕಾರು ಬಿಡುಗಡೆ!

ಸುರಕ್ಷತಾ ಫೀಚರ್ಸ್‌ಗೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ. ಹೋಂಡಾ ಎಲವೇಟ್ ಕಾರು  ADAS ಟೆಕ್ನಾಲಜಿ ಹೊಂದಿದೆ. ಇನ್ನು 6 ಏರ್‌ಬ್ಯಾಗ್,  ಲೇನ್ ವಾಚ್ ಕ್ಯಾಮೆರಾ, ಸ್ಟೆಬಿಲಿಟಿ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಎಲ್ಟಿ ಆ್ಯಂಗಲ್ ರೇರ್ ವಿವ್ಯೂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಕಡ್ಡಾಯ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.  

click me!