ಭಾರತದಲ್ಲೇ ಉತ್ಪಾದನೆಗೊಂಡ ಹೊಸ BMW X1 ಲಾಂಗ್ ವ್ಹೀಲ್‌ಬೇಸ್ ಕಾರು ಬಿಡುಗಡೆ, ಏನಿದರ ವಿಶೇಷತೆ?

Published : Aug 21, 2026, 02:53 PM IST
New BMW X1 Long Wheelbase Rolls Out

ಸಾರಾಂಶ

BMW ಇದೀಗ X1 ಲಾಂಗ್ ವೀಲ್ ಬೇಸ್ ಕಾರು ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ ಎಷ್ಟು? ಕಾರಿನಲ್ಲಿರುವ ವಿಶೇಷತೆ ಏನು? ಆರಾಮದಾಯಕ ಪ್ರಯಾಣಕ್ಕೆ ಯಾಕೆ ಈ ಕಾರು ಮುಖ್ಯ. ಹೊಸ BMW X1 ಲಾಂಗ್ ವ್ಹೀಲ್‌ಬೇಸ್ ಕಾರಿನ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು (ಆ.21) BMW ಗ್ರೂಪ್ ಇಂಡಿಯಾ ಜನಪ್ರಿಯ ಐಷಾರಾಮಿ SUV ಮಾದರಿಯಾದ ಹೊಸ BMW X1 ಲಾಂಗ್ ವೀಲ್‌ಬೇಸ್ (LWB) ಬಿಡುಗಡೆ ಮಾಡಿದೆ. ವಿಶಾಲವಾದ ಇಂಟಿರೀಯರ್, ಅತ್ಯಾಧುನಿಕ ಡಿಜಿಟಲ್ ಟೆಕ್ ಹಾಗೂ ಉತ್ತಮ ಡ್ರೈವಿಂಗ್ ಅನುಭವದೊಂದಿಗೆ ಈ ಹೊಸ ಮಾದರಿ ಭಾರತೀಯ ಮಾರುಕಟ್ಟೆಗೆ ಬಂದಿದೆ. ಹೊಸ BMW X1 LWB ಕಾರಿನ ಆರಂಭಿಕ ಎಕ್ಸ್‌ಶೋರೂಂ ಬೆಲೆ 49.90 ಲಕ್ಷ ರೂಪಾಯಿ.ಚೆನ್ನೈನ BMW ಗ್ರೂಪ್ ಪ್ಲಾಂಟ್‌ನಲ್ಲಿ ಸ್ಥಳೀಯವಾಗಿ ಪೆಟ್ರೋಲ್ ಮಾದರಿಯಲ್ಲಿ ಉತ್ಪಾದಿಸಲಾಗುತ್ತಿದ್ದು, ಇಂದಿನಿಂದ ದೇಶಾದ್ಯಂತ BMW ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್‌ಗೆ ಲಭ್ಯವಿದೆ.

ಆರಾಮದಾಯಕ ಪ್ರಯಾಣಕ್ಕೆ BMW X1

4,616 ಮಿ.ಮೀ. ಉದ್ದ, 2,104 ಮಿ.ಮೀ. ಅಗಲ, 1,641 ಮಿ.ಮೀ. ಎತ್ತರ ಹಾಗೂ 2,800 ಮಿ.ಮೀ. ವೀಲ್‌ಬೇಸ್ ಹೊಂದಿರುವ ಈ SUV ತನ್ನ ಸೆಗ್‌ಮೆಂಟ್‌ನಲ್ಲಿಯೇ ಅತ್ಯಂತ ಉದ್ದದ ಮಾದರಿಗಳಲ್ಲಿ ಒಂದಾಗಿದೆ. ಹೆಚ್ಚುವರಿ ವೀಲ್‌ಬೇಸ್‌ನಿಂದ ಹಿಂಭಾಗದ ಪ್ರಯಾಣಿಕರಿಗೆ 150 ಮಿ.ಮೀ. ಹೆಚ್ಚುವರಿ ಲೆಗ್‌ರೂಮ್ ಮತ್ತು 109 ಮಿ.ಮೀ. ಹೆಚ್ಚುವರಿ ಹೆಡ್‌ರೂಮ್ ದೊರೆಯಲಿದೆ.

ಹೊಸ ಕಾರಿನ ವಿಶೇಷತೆ ಏನು

ಹೊಸ X1 LWB ನಲ್ಲಿ ಅಡಾಪ್ಟಿವ್ LED ಹೆಡ್‌ಲೈಟ್‌ಗಳು, 18 ಇಂಚಿನ M ಲೈಟ್ ಅಲಾಯ್ ವೀಲ್‌ಗಳು, ಪನೋರಮಿಕ್ ಸನ್‌ರೂಫ್, ವೈಡ್‌ಸ್ಕ್ರೀನ್ ಕರ್ವ್ಡ್ ಡಿಸ್‌ಪ್ಲೇ, BMW ಆಪರೇಟಿಂಗ್ ಸಿಸ್ಟಮ್ 9 ಮತ್ತು 12 ಸ್ಪೀಕರ್‌ಗಳ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ಪ್ರೀಮಿಯಂ ವೈಶಿಷ್ಟ್ಯಗಳಿವೆ. 1.5 ಲೀಟರ್ BMW ಟ್ವಿನ್‌ಪವರ್ ಟರ್ಬೊ ಪೆಟ್ರೋಲ್ ಎಂಜಿನ್ 156 hp ಶಕ್ತಿ ಮತ್ತು 230 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಉತ್ತಮ ನಿಯಂತ್ರಣ ಮತ್ತು ಕಂಫರ್ಟ್ ಡ್ರೈವಿಂಗ್ ಅನುಭವ ನೀಡುತ್ತದೆ.

BMW ಡಿಜಿಟಲ್ ಕೀ ಪ್ಲಸ್, ಕಂಫರ್ಟ್ ಆಕ್ಸೆಸ್ 2.0, MyBMW ಆ್ಯಪ್ ಹಾಗೂ NFC ಆಧಾರಿತ ಕೀ ಸೌಲಭ್ಯಗಳು ಬಳಕೆದಾರರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತವೆ. ಪಾರ್ಕಿಂಗ್ ಅಸಿಸ್ಟೆಂಟ್, ರಿಯರ್ ವ್ಯೂ ಕ್ಯಾಮೆರಾ ಮತ್ತು 360 ಡಿಗ್ರಿ ಸರೌಂಡ್ ವ್ಯೂ ಹೊಂದಿರುವ ಪಾರ್ಕಿಂಗ್ ಅಸಿಸ್ಟೆಂಟ್ ಪ್ಲಸ್ ಸುರಕ್ಷತೆ ಮತ್ತು ಪಾರ್ಕಿಂಗ್ ಅನುಭವವನ್ನು ಮತ್ತಷ್ಟು ಸುಲಭಗೊಳಿಸುತ್ತದೆ.ಹೊಸ BMW X1 LWB ನೈಟ್‌ಡಸ್ಕ್ ಬ್ಲೂ, ಸ್ಕೈಸ್ಕ್ರೇಪರ್ ಗ್ರೇ, ಕಾರ್ಬನ್ ಬ್ಲ್ಯಾಕ್ ಮತ್ತು ಮಿನರಲ್ ವೈಟ್ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

BMW X1 ಭಾರತದಲ್ಲಿ ಅತ್ಯಂತ ಯಶಸ್ವಿ ಐಷಾರಾಮಿ SUVಗಳಲ್ಲಿ ಒಂದಾಗಿದೆ. ಹೊಸ ಲಾಂಗ್ ವೀಲ್‌ಬೇಸ್ ಮಾದರಿಯು ಹೆಚ್ಚಿನ ಸ್ಥಳಾವಕಾಶ, ಸೌಕರ್ಯ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯೊಂದಿಗೆ ಗ್ರಾಹಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು BMW ಗ್ರೂಪ್ ಇಂಡಿಯಾ ಅಧ್ಯಕ್ಷ ಹಾಗೂ ಸಿಇಒ ಹರ್ದೀಪ್ ಸಿಂಗ್ ಬ್ರಾರ್ ಹೇಳಿದ್ದಾರೆ.

PREV
Read more Articles on
click me!

Recommended Stories

ಚಲಿಸುತ್ತಿರುವ ಕಾರಿನ ಕಿಟಕಿಯಿಂದ ಬಿಳಿ ಬಟ್ಟೆ ಹೊರಗೆ ಹಾಕಿದ್ರೆ ಏನರ್ಥ? ಈ ಸಿಗ್ನಲ್ ಗೊತ್ತಿಲ್ಲದಿದ್ದರೆ ಅಪಾಯ
ಬೆಲೆ ಏರಿಕೆ ಮೊದಲು ಭರ್ಜರಿ ಡಿಸ್ಕೌಂಟ್ ಘೋಷಿಸಿದ ಟಾಟಾ, ಗರಿಷ್ಠ 3.5 ಲಕ್ಷ ರೂ ರಿಯಾಯಿತಿ