ಬೆಲೆ ಏರಿಕೆ ಮೊದಲು ಭರ್ಜರಿ ಡಿಸ್ಕೌಂಟ್ ಘೋಷಿಸಿದ ಟಾಟಾ, ಗರಿಷ್ಠ 3.5 ಲಕ್ಷ ರೂ ರಿಯಾಯಿತಿ

Published : Aug 21, 2026, 12:39 PM ISTUpdated : Aug 21, 2026, 12:41 PM IST
tata tiago

ಸಾರಾಂಶ

ಸೆಪ್ಟೆಂಬರ್ ತಿಂಗಳಿನಿಂದ ಟಾಟಾ ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಇದಕ್ಕೂ ಮೊದಲು ಟಾಟಾ ಮೋಟಾರ್ಸ್ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಗರಿಷ್ಠ 3.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ನವದೆಹಲಿ (ಆ.21) ಟಾಟಾ ಮೋಟಾರ್ಸ್ ಸೆಪ್ಟೆಂಬರ್ ತಿಂಗಳಿನಿಂದ ವಾಹನಗಳ ಬೆಲೆ ಏರಿಕೆ ಮಾಡುತ್ತಿದೆ. ಉತ್ಪಾದನಾ ವೆಚ್ಚಗಳ ಏರಿಕೆಯಿಂದ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲು ಮುಂದಾಗಿದೆ. ಅಧಿಕೃತ ಘೋಷಣೆ ಹೊರಬೀಳಬೇಕಿದೆ. ಇದಕ್ಕೂ ಮೊದಲು ಟಾಟಾ ಗ್ರಾಹಕರ ಕಾರು ನನಸು ಮಾಡಲು ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ವಿಶೇಷ ಅಂದರೆ ಇಂಧನ ಕಾರುಗಳು, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಕಾರುಗಳ ಮೇಲೆ ಡಿಸ್ಕೌಂಟ್ ನೀಡಿದೆ. ಈ ಭರ್ಜರಿ ಆಫರ್‌ನಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್, ಸ್ಕ್ರಾಪ್ ಸೇರಿದಂತೆ ಹಲವು ಬೋನಸ್ ಒಳಗೊಂಡಿದೆ. ಗರಿಷ್ಠ 3.5 ಲಕ್ಷ ರೂಪಾಯಿವರೆಗೆ ಆಫರ್ ನೀಡಲಾಗಿದೆ.

ಹ್ಯಾರಿಯರ್, ಸಫಾರಿ ಕಾರುಗಳ ಮೇಲಿನ ಆಫರ್

ಟಾಟಾ ಹ್ಯಾರಿಯರ್ ಸಪಾಱಿ ಡೀಸೆಲ್ ಹಾಗೂ ಐಸಿಇ ಇಂಧನ ಕಾರುಗಳ ಮೇಲೆ 10 ಸಾವಿರ ರೂಪಾಯಿ ನಗದು ಡಿಸ್ಕೌಂಟ್, 25,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, 35,000 ರೂಪಾಯಿ ಸ್ಕ್ರಾಪೇಜ್ ಬೋನಸ್ ನೀಡಲಾಗಿದೆ. ಇದೇ ವೇಳೆ ಹ್ಯಾರಿಯರ್ ಎಲೆಕ್ಟ್ರಿಕ್ ಕಾರಿನ ಮೇಲೆ ಭರ್ಜರಿ ಆಫರ್ ನೀಡಲಾಗಿದೆ ಫ್ರೀಂ ಸೇಲ್ ಮೂಲಕ ಖರದಿ ಮಾಡುವ ಗ್ರಾಹಕರಿಗೆ 1 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಈ ಪೈಕಿ 50 ಸಾವಿರ ರೂಪಾಯಿ ಎಕ್ಸ್‌ಚೇಂಜ್ ಬೋನಸ್, 75 ಸಾವಿರ ರೂಪಾಯಿ ಸ್ಕ್ರಾಪೇಜ್ ಆಫರ್ ಒಳಗೊಂಡಿದೆ. ಟಾಟಾ ಇವಿ ಗ್ರಾಹಕರಿಗೆ 1 ಲಕ್ಷ ರೂಪಾಯಿ ಲಾಯಲ್ಟಿ ಬೋನಸ್ ಸಿಗಲಿದೆ.

ಟಾಟಾ ಕರ್ವ್ ಹಾಗೂ ನೆಕ್ಸಾನ್ ರಿಯಾಯಿತಿ

ಟಾಟಾದ ಅತ್ಯಂತ ಆಕರ್ಷಕ ಕರ್ವ್ ಕಾರಿ ಮೇಲೆ ಆಫರ್ ನೀಡಲಾಗಿದೆ. ಕರ್ವ್ ಎಲೆಕ್ಟ್ಿಕ್ ಕಾರಿನ ಮೇಲೆ ಗರಿಷ್ಠ 3.5 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದೇ ವೇಳೆ ನೆಕ್ಸಾನ್ ಇಂಧನ ಕಾರು ಹಾಗೂ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳ ಮೇಲೂ ಡಿಸ್ಕೌಂಟ್ ನೀಡಲಾಗಿದೆ.

ಟಾಟಾ ಟಿಯಾಗೋ ಹಾಗೂ ಟಿಗೋರ್ ಆಫರ್

ಟಾಟಾ ಕಾರುಗಳ ಪೈಕಿ ಅತೀ ಕಡಿಮೆ ಬೆಲೆಯಲ್ಲಿ ಹಾಗೂ ಎಂಟ್ರಿ ಲೆವೆಲ್ ಕಾರುಗಳಾಗಿ ಗುರುತಿಸಿಕೊಂಡಿರುವ ಟಾಟಾ ಟಿಯಾಗೋ ಹಾಗೂ ಟಿಗೋರ್ ಕಾರಿನ ಮೇಲೂ ಡಿಸ್ಕೌಂಟ್ ನೀಡಲಾಗಿದೆ. 15,000 ರೂಪಾಯಿ ನಗದು ಡಿಸ್ಕೌಂಟ್, 10 ಸಾವಿರ ಎಕ್ಸ್‌ಚೇಂಜ್ ಬೋನಸ್ ಹಾಗೂ 15,000 ರೂಪಾಯಿ ಸ್ಕ್ರಾಪೇಜ್ ಬೋನಸ್ ನೀಡಲಾಗಿದೆ, ಟಿಯಾಗೋ ಇವಿಗೆ 1.45 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗಲಿದೆ.

ವಿಶೇಷ ಸೂಚನೆ: ಈ ವಿಶೇಷ ಆಫರ್ ಶೋ ರೂಂ ಅಥವಾ ಡೀಲರ್ ಬಳಿ ಇರುವ ಸ್ಟಾಕ್ ಕಾರುಗಳು, ಉತ್ಪಾದನಾ ವರ್ಷ, ಎಂಜಿನ್ ಮಾದರಿ ಆಧರಿಸಿ ನೀಡಲಾಗುತ್ತದೆ. ಹೀಗಾಗಿ ಹತ್ತಿರದ ಡೀಲರ್ ಅಥವಾ ಶೋ ರೂಂ ಸಂಪರ್ಕಿಸಿ ಆಫರ್ ಕುರಿತು ಮಾಹಿತಿ ಖಚಿತಪಡಿಸಿ. ಆಫರ್ ರಾಜ್ಯದಿಂದ ರಾಜ್ಯಕ್ಕೆ ನಗರದಿಂದ ನಗರಕ್ಕೆ ವ್ಯತ್ಯಾಸಗೊಳ್ಳುವ ಸಾಧ್ಯತೆ ಇದೆ.

PREV
Read more Articles on
click me!

Recommended Stories

Hyundai Price Hike: ಹ್ಯುಂಡೈ ಕಾರ್ ಬೆಲೆ ಮತ್ತೆ ಏರಿಕೆ! ಯಾವ ಮಾಡೆಲ್‌ಗೆ ಎಷ್ಟು ಬೆಲೆ ಏರಿಕೆ?
Cars: 6 ಏರ್‌ಬ್ಯಾಗ್‌, ಭರ್ಜರಿ ಮೈಲೇಜ್‌, ಆಟೋಮ್ಯಾಟಿಕ್ ಗೇರ್‌ಬಾಕ್ಸ್‌! ಆದರೆ ಇದರ ಬೆಲೆ ಕೇಳಿದ್ರೆ ನೀವು ನಂಬಲ್ಲ!