ಇಲ್ಲಿ 2 ರಿಂದ 3 ಲಕ್ಷ ರೂಪಾಯಿಗೆ ಸಿಗುತ್ತೆ ಬಳಸಿದ ಬೆಂಜ್, ಆಡಿ, BMW ಕಾರು!

By Chethan KumarFirst Published Aug 13, 2024, 12:53 PM IST
Highlights

ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬಾರಿ ಬೇಡಿಕೆ ಇದೆ. ಇದೀಗ ಬಳಸಿದ ಕಾರು ಖರೀದಿಸಲು ಇಚ್ಚಿಸುವರಿಗೆ ಸದವಕಾಶ ಬಂದಿದೆ. ಇಲ್ಲಿ ಕೇವಲ 2 ರಿಂದ 3 ಲಕ್ಷ ರೂಪಾಯಿಗೆ ಮರ್ಸಿಡೀಸ್ ಬೆಂಜ್, ಆಡಿ, BMW ಸೇರಿದಂತೆ ಐಷಾರಾಮಿ ಕಾರುಗಳು ಲಭ್ಯವಿದೆ.

ನವದೆಹಲಿ(ಆ.13) ಭಾರತದಲ್ಲಿ ಹೊಸ ಕಾರುಗಳ ಜೊತೆಗೆ ಬಳಸಿದ ಕಾರು ಮಾರುಟಕಟ್ಟೆಯಲ್ಲೂ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಅಧಿಕೃತ ಕಾರು ಕಂಪನಿಗಳೇ ಬಳಸಿದ ಕಾರುಗಳ ಮಾರಾಟ ಮಾಡುತ್ತಿದೆ. ಜನರು ತಮ್ಮ ನೆಟ್ಟಿನ ಕಾರನ್ನು ಕಡಿಮೆ ಬೆಲೆಯಲ್ಲಿ ಖರಿದಿಸಲು ಸಾಧ್ಯವಾಗುತ್ತಿದೆ. ಇಲ್ಲಿ ಕೇವಲ 2 ರಿಂದ 3 ಲಕ್ಷ ರೂಪಾಯಿಗೆ ಐಷಾರಾಮಿ ಕಾರುಗಳು ಲಭ್ಯವಿದೆ. ಜನರು ಇಲ್ಲಿ ಕಾರು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಹೌದು, ದೆಹಲಿ ಪೊಲೀಸ್ ಕಾರು ಹರಾಜು ಭಾರತದಲ್ಲಿ ಅತ್ಯಂತ ಜನಪ್ರಿಯ. ಇದೀಗ ದೆಹಲಿ ಪೊಲೀಸರ ಕಾರು ಹರಾಜಿನಲ್ಲಿ ಪಾಲ್ಗೊಳ್ಳಲು ಬಹುತೇಕರು ಸಜ್ಜಾಗಿದ್ದಾರೆ.  

ಹಲವು ಬಳಸಿದ ಕಾರು ಮಾರಾಟದ ಡೀಲರ್ಸ್, ಕಾರು ಖರೀದಿಸಲು ಇಚ್ಚಿಸುವ ವ್ಯಕ್ತಿಗಳು ದೆಹಲಿ ಕಾರು ಹರಾಜಿನ ಮೇಲೆ ಕಣ್ಣಿಟ್ಟಿದ್ದಾರೆ. ದೂರಿನಿಂದ ಬಾಕಿಯಾಗಿರುವ ಕಾರು, ಜಪ್ತಿ ಮಾಡಿರುವ ಕಾರುಗಳು, ಅಪರಾಧ ಪ್ರಕರಣಗಳಲ್ಲಿ ಜಪ್ತಿಯಾಗಿರುವ ಕಾರುಗಳನ್ನು ಪೊಲೀಸರು ಹರಾಜು ಹಾಕುತ್ತಾರೆ. ಇದು ಬಹುತೇಕ ಎಲ್ಲಾ ರಾಜ್ಯಗಳಲ್ಲೂ ನಡೆಯುತ್ತೆದೆ. ಆದರೆ ದೆಹಲಿಯಲ್ಲಿ ಕೆಲ ವಿಶೇಷತೆಗಳಿವೆ. ದೆಹಲಿಯ ಹರಾಜಿನಲ್ಲಿ ಅತೀ ಕಡಿಮೆ ಬೆಲೆಗೆ ಕಾರುಗಳು ಲಭ್ಯವಾಗುತ್ತದೆ.

Latest Videos

ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ SUV ಕಾರು ಯಾವುದು? ಮೊದಲೆರೆಡು ಸ್ಥಾನ ಟಾಟಾ ಪಾಲು!

ಈ ಕಾರುಗಳು ಡ್ಯಾಮೇಜ್ ಅಥವಾ ನಿಲ್ಲಿಸಿದ ಕಾರಣ ಕೆಟ್ಟು ಹೋಗಿರುವ ಸಾಧ್ಯತೆಗಳು ಹೆಚ್ಚು. ಈ ಕಾರುಗಳನ್ನು ಖರೀದಿಸಿದರೆ ಮತ್ತೆ ರಿಪೇರಿಯ ಅಗತ್ಯವಿದೆ. ಅಧಿಕತೃ ಮೆಕಾನಿಕ್‌ಗಳನ್ನು ಬಳಸಿಕೊಂಡು ಹಲವರು ಇಲ್ಲಿ ಕಾರು ಖರೀದಿಸುತ್ತಾರೆ. ಮೆಕಾನಿಕ್‌ಗಳು ಕಾರು ಪರಿಶೀಲಿಸಿದ ಬಳಿಕ ಬಹುತೇಕರು ಕಾರುಗಳನ್ನು ಖರೀದಿಸುತ್ತಾರೆ. ಕಾರಿನ ಕಂಡೀಷನ್ ನೋಡಿ ಪೊಲೀಸರು ಬೆಲೆ ನಿಗಧಿಪಡಿಸುತ್ತಾರೆ.

ಈ ಹರಾಜಿನಲ್ಲಿ ಖರೀದಿಸುವ ಕಾರುಗಳಿಗೆ ಯಾವುದೇ ವಾರೆಂಟಿ ಇರುವುದಿಲ್ಲ. ಹೀಗಾಗಿ ಖರೀದಿಸುವವರು ತಮ್ಮದೇ ರಿಸ್ಕ್ ಮೂಲಕ ಖರೀದಿಸಬೇಕು. ಅತೀ ಕಡಿಮೆ ಬೆಲೆಗೆ ಕಾರುಗಳು ಲಭ್ಯವಾಗುತ್ತದೆ. ಕೇವಲ ಐಷಾರಾಮಿ ಕಾರುಗಳು ಮಾತ್ರವಲ್ಲ, ಇತರು ಬ್ರಾಂಡ್ ಕಾರುಗಳು ಇಲ್ಲಿ ಲಭ್ಯವಾಗುತ್ತದೆ. ಕೆಲ ಕಾರುಗಳ ಬೆಲೆ 3 ಲಕ್ಷಕ್ಕಿಂತ ಹೆಚ್ಚಾಗಿರುವ ಸಾಧ್ಯತೆಯೂ ಇದೆ. ದೆಹಲಿ ಪೊಲೀಸರ ಕಾರು ಹರಾಜಿನ ದಿನಾಂಕ ಶೀಘ್ರದದಲ್ಲೇ ಬಹಿರಂಗವಾಗಲಿದೆ. 

ಹಲವು ವಿಶೇಷತೆ, ಕೈಗೆಟುಕುವ ದರದ ಧೋನಿ ಎಡಿಶನ್ SUV ಲಾಂಚ್, ಕೇವಲ 100 ಕಾರು ಮಾತ್ರ ಲಭ್ಯ!

ಕಾರುಗಳ ಖರೀದಿಸಿದ ಬಳಿಕ ಮಾಲೀಕರ ಹೆಸರಿಗೆ ರಿಜಿಸ್ಟ್ರೇಶನ್ ಪ್ರಕ್ರಿಯೆ ಮಾಡಿಸಬೇಕು. ನಿಗದಿತ ಮೊತ್ತ ಪಾವತಿಸಿ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕು. ದೇಶದ ಮೂಲೆ ಮೂಲೆಗಳಿಂದ ದೆಹಲಿ ಪೊಲೀಸ್ ಕಾರು ಹರಾಜಿಗೆ ಆಗಮಿಸಿ ಕಡಿಮೆ ಬೆಲೆಗೆ ಕಾರುಗಳನ್ನು ಖರೀದಿಸುತ್ತಾರೆ.
 

click me!