ವಿಶಿಷ್ಟ ವಿನ್ಯಾಸದೊಂದಿಗೆ ಏಕಕಾಲದಲ್ಲಿ 5ನೇ ತಲೆಮಾರಿನ "ಮಿನಿ ಕೂಪರ್ ಎಸ್, 3ನೇ ತಲೆಮಾರಿನ ಆಲ್ ಎಲೆಕ್ಟ್ರಿಕ್ ಮಿನಿ ಕಂಟ್ರಿಮ್ಯಾನ್ ಹಾಗೂ 8ನೇ ತಲೆಮಾರಿನ 5ನೇ ಸರಣಿಯ" 530Li M ಕಾರುಗಳನ್ನು ಅನಾವರಣಗೊಳಿಸಿದೆ.
ನಚಿಕೇತನ್.ಎನ್
ನವದೆಹಲಿ (ಜು.27): ಜರ್ಮನಿಯ ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯೂ ವಾಹನ ಪ್ರಿಯರಿಗಾಗಿ ಹೊಸ ಪೀಳಿಗೆಯ ಅಭಿರುಚಿಗೆ ತಕ್ಕಂತೆ ವಿಶೇಷ ತಂತ್ರಜ್ಞಾನ, ವಿಶಿಷ್ಟ ವಿನ್ಯಾಸದೊಂದಿಗೆ ಏಕಕಾಲದಲ್ಲಿ 5ನೇ ತಲೆಮಾರಿನ "ಮಿನಿ ಕೂಪರ್ ಎಸ್, 3ನೇ ತಲೆಮಾರಿನ ಆಲ್ ಎಲೆಕ್ಟ್ರಿಕ್ ಮಿನಿ ಕಂಟ್ರಿಮ್ಯಾನ್ ಹಾಗೂ 8ನೇ ತಲೆಮಾರಿನ 5ನೇ ಸರಣಿಯ" 530Li M ಕಾರುಗಳನ್ನು ಅನಾವರಣಗೊಳಿಸಿದೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ "ಸಿಇ04" ದ್ವಿಚಕ್ರ ವಾಹವನ್ನು ಬಿಡುಗಡೆಮಾಡಿದೆ. ನವದೆಹಲಿಯ ಅಂದಾಜ್ ಏರೋಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯೂಅಧ್ಯಕ್ಷ, ಸಿಇಒ ವಿಕ್ರಂ ಪವಾಹ್ (ಭಾರತ) ಅವರು ಬಿಎಂಡಬ್ಲ್ಯೂನ ವಿವಿಧ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಿದರು.
undefined
ಕಾರುಪ್ರಿಯರ ಕಣ್ಣುಕುಕ್ಕುವ ಮಿನಿಗಳು: ಮಿನಿ ಕಾರುಗಳು ಅತ್ಯಾಕರ್ಷಕ ಹಾಗೂ ವಿಶಿಷ್ಟ ವಿನ್ಯಾಸಗಳನ್ನು ಹೊಂದಿದ್ದು, (ಮೆಲ್ಟಿಂಗ್ ಸಿಲ್ವರ್, ಮಿಡ್‌ನೈಟ್ ಬ್ಲಾಕ್, ಬ್ರಿಟಿಷ್ ರೇಸಿಂಗ್ ಗ್ರೀನ್) ಸೇರಿದಂತೆ 10 ಬಗೆಯ ಆಕರ್ಷಕ ಬಣ್ಣಗಳಲ್ಲಿ ಮಿನಿ ಕೂಪರ್.ಎಸ್ ಲಭ್ಯವಿದ್ದರೇ, 9 ಬಗೆಯ ಬಣ್ಣಗಳಲ್ಲಿ ಮಿನಿ ಕಂಟ್ರಿಮ್ಯಾನ್ ಲಭ್ಯವಿದೆ. ಮಿನಿ ಕೂಪರ್.ಎಸ್ ಟ್ವಿನ್ ಪವರ್ ಟರ್ಬೊ ತಂತ್ರಜ್ಞಾನದೊಂದಿಗೆ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಇದು ಗಂಟೆಗೆ 242 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದರ ಎಕ್ಸ್ ಶೋರೋಂ ಬೆಲೆಯು 44,99,000 ರು.ಆಗಿದೆ.
ಪಾಕಿಸ್ತಾನವು ಇತಿಹಾಸದಿಂದ ಯಾವುದೇ ಪಾಠಗಳನ್ನು ಕಲಿತಿಲ್ಲ: ಪ್ರಧಾನಿ ಮೋದಿ ಪ್ರಹಾರ
ಮಿನಿ ಮಾದರಿಯಲ್ಲಿ ಆಲ್ ಎಲೆಕ್ಟ್ರಿಕ್ ಕಂಟ್ರಿಮ್ಯಾನ್ ಕಾರು ಮೊದಲ ಬಾರಿಗೆ ಭಾರತಕ್ಕೆ ಪಾದಾರ್ಪಣೆ ಮಾಡಿದೆ. ಇದು 66.45kwh (ಕಿಲೋವ್ಯಾಟ್ ಅವರ್ಸ್) ಲಿಥಿಯಂ ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. ಕಾರನ್ನು ಕೇವಲ 29 ನಿಮಿಷಗಳಲ್ಲಿ 10 ರಿಂದ 80% ಚಾರ್ಜ್ ಮಾಡಬಹುದಾಗಿದೆ. ಇದು ಗಂಟೆಗೆ 170 ಕಿ.ಮೀ ವೇಗದಲ್ಲಿ ಚಲಿಸುತ್ತದೆ, ಇದರ ಎಕ್ಸ್ ಶೋ ರೋಂ ಬೆಲೆಯು 54.90.000 ಆಗಿದೆ.
ಬಿಎಂಡಬ್ಲ್ಯೂ 5 ಸೀರಿಸ್‌ನ 530LiM: ಇದು ಎಲ್ಲಾ ರೀತಿಯ ಐಷಾರಾಮಿ ಸೌಕರ್ಯ ಅಂಶಗಳನ್ನು ಒಳಗೊಂಡಿವೆ. ಕಾರು ಟ್ವಿನ್ ಪವರ್ ಟರ್ಬೊ ತಂತ್ರಜ್ಞಾನದ ಪೆಟ್ರೋಲ್ ಎಂಜಿನ್ ಚಾಲನೆಯಾಗಿದೆ. ಇದು ಗಂಟೆಗೆ 250 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದರ ಎಕ್ಸ್ ಶೋ ರೋಂ ಬೆಲೆಯು 72,90,000 ರು.ಆಗಿದೆ. 8 ಏರ್‌ಬ್ಯಾಗ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್(ಡಿಎಸ್‌ಸಿ), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಕಾರ್ನರ್ ಬ್ರೇಕ್ ಕಂಟ್ರೋಲ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಕಾರು ಒಳಗೊಂಡಿದೆ.
ಬಜೆಟ್ ಅನ್ಯಾಯ ಪ್ರಶ್ನಿಸದ ಬಿಜೆಪಿಯಿಂದ ಮುಡಾ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ ಕಿಡಿ
ಮೊದಲ ಎಲೆಕ್ಟ್ರಿಕ್ ಪ್ರೀಮಿಯಂ ಸ್ಕೂಟರ್: ಸಿಇ04 ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನವು ಭಾರತದಲ್ಲಿ ಮೊದಲ ಬಾರಿಗೆ ಪದಾರ್ಪಣೆ ಮಾಡಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ನಗರ ಜೀವನಕ್ಕೆ ಹೊಂದಿಕೊಳ್ಳುವ ರೀತಿ ಸ್ಕೂಟರ್‌ನನ್ನು ವಿನ್ಯಾಸ ಗೊಳಿಸಲಾಗಿದೆ. ಸ್ಕೂಟರ್ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. ಇದು 0 ಯಿಂದ 80% ಚಾರ್ಜ್ ಮಾಡಲು ಕೇವಲ 3 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ. ಇದು ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದರ ಎಕ್ಸ್ ಶೋ ರೋಂ ಬೆಲೆಯು 14,90,000 ಆಗಿದೆ. ಈ ಎಲ್ಲಾ ಕಾರು ಮತ್ತು ಸ್ಕೂಟರ್ ಸೆಪ್ಟೆಂಬರ್‌ನಿಂದ ಡೆಲಿವರಿಗೆ ಲಭ್ಯವಾಗಲಿವೆ. ಮಿನಿ ಕೂಪರ್ ಎಸ್ ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ಕಾರು ಡಿಸೆಂಬರ್‌ಗೆ ಭಾರತಕ್ಕೆ ಪ್ರವೇಶಿಸಲಿದೆ.