23 ಕಿ.ಮೀ ಮೇಲೇಜ್, 5 ಸ್ಟಾರ್ ಸೇಫ್ಟಿ; ಇದು ಭಾರತದ ಕೈಗೆಟುಕುವ ದರದ ಡೀಸೆಲ್ ಕಾರು!

By Chethan Kumar  |  First Published Aug 9, 2024, 9:47 AM IST

ಇದು ಗರಿಷ್ಠ ಸುರಕ್ಷತೆ, 23 ಕಿಲೋಮೀಟರ್ ಮೈಲೇಜ್ ಜೊತೆಗೆ ಕೈಗೆಟುಕುವ ದರದಲ್ಲಿ ಲಭ್ಯವಿರುವ ಡೀಸೆಲ್ ಕಾರು. ಈ ಕಾರು ಡ್ರೈವ್ ಮಾಡಲು ಹಾಗೂ ಖರೀದಿಸಲು ಹೆಚ್ಚಿನ ಶ್ರಮವಿಲ್ಲ.


ಮುಂಬೈ(ಆ.09) ಭಾರತದ ಕಾರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಕಾರಿನಿಂದ ಹಿಡಿದು ಕೋಟಿ ಕೋಟಿ ಬೆಲಬಾಳುವ ದುಬಾರಿ ಕಾರುಗಳಿವೆ. ಈ ಪೈಕಿ ಸೇಫ್ಟಿ, ಮೈಲೇಜ್, ಅತ್ಯುತ್ತಮ ವಿನ್ಯಾಸ ಜೊತೆ ಕೈಗೆಟುಕುವ ಬೆಲೆಯ ಕಾರುಗಳ ಸಂಖ್ಯೆ ಕಡಿಮೆ. ಆದರೆ ಟಾಟಾ ಮೋಟಾರ್ಸ್ ಕಂಪನಿಯ ಟಾಟಾ ಅಲ್ಟ್ರೋಜ್ ಡೀಸೆಲ್ ಕಾರು ಈ ಎಲ್ಲಾ ಬೇಡಿಕೆಯನ್ನು ಪೂರೈಸುತ್ತಿದೆ. ಅತೀ ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಗರಿಷ್ಠ ಸುರಕ್ಷತೆ, ಅತ್ಯುತ್ತಮ ವಿನ್ಯಾಸ, ಆಧುನಿಕ ತಂತ್ರಜ್ಞಾನವನ್ನು ಈ ಕಾರು ಒಳಗೊಂಡಿದೆ. 

ಟಾಟಾ ಅಲ್ಟ್ರೋಜ್ ಕಾರಿನ ಬೆಲೆ 6.65 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಡೀಸೆಲ್ ಕಾರಿನ ಬೆಲೆ 8.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಟಾಟಾ ಅಲ್ಟ್ರೋಜ್ ಕಾರು 5 ಸ್ಟಾರ್ ಸುರಕ್ಷತೆ ಹೊಂದಿದೆ. ಒಂದು ಲೀಟರ್ ಡೀಸೆಲ್‌ನಲ್ಲಿ 23 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಎಲ್ಲಾ ಫೀಚರ್ಸ್‌ ಇರುವ ಕೈಗೆಟುಕುವ ದರದ ಏಕೈಕ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ಅಲ್ಟ್ರೋಜ್ ಪಾತ್ರವಾಗಿದೆ.

Tap to resize

Latest Videos

undefined

ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ SUV ಕಾರು ಯಾವುದು? ಮೊದಲೆರೆಡು ಸ್ಥಾನ ಟಾಟಾ ಪಾಲು!

ಟಾಟಾ ಅಲ್ಟ್ರೋಜ್ ಕಾರಿನಲ್ಲಿ ಹಲವು ಫೀಚರ್ಸ್ ಲಭ್ಯವಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಫೀಚರ್ ಕೂಡ ಲಭ್ಯವಿದೆ. ಕ್ಯಾಬಿನ್ ಒಳಗೆ ಲೈಟಿಂಗ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಇತರ ಟಾಪ್ ಎಂಡ್ ಕಾರಿನಲ್ಲಿರುವ ಫೀಚರ್ಸ್ ಈ ಕಾರಿನಲ್ಲಿದೆ. ಸನ್‌ರೂಫ್, ಡ್ರೈವರ್ ಸೀಟನ್ನು ಸುಲಭವಾಗಿ ಅಡ್ಜಸ್ಟ್ ಮಾಡಿಕೊಳ್ಳಲು ಅವಕಾಶವಿದೆ. ಪಂವರ್ ವಿಂಡೋ, ಆರಾಮ ಪ್ರಯಾಣಕ್ಕೆ ಲೆಥರ್ ಸೀಟ್, ಪವರ್ ವಿಂಡೋ, ಫಾಗ್ ಲೈಟ್ಸ್, ಡಿಫಾಗರ್, ಆಟೋಮ್ಯಾಟಿಗ್ ರೈನ್ ಸೆನ್ಸಿಂಗ್ ವೈಪರ್, ಅಲೋಯ್ ವೀಲ್ ಸೇರಿದಂತೆ ಹತ್ತು ಹಲವು ಫೀಚರ್ಸ್ ಈ ಕಾರಿನಲ್ಲಿದೆ.

 ಡೀಸೆಲ್ ಅಲ್ಟ್ರೋಡ್ ಕಾರು1.5 ಲೀಟರ್ ಎಂಜಿನ್ ಹೊಂದಿದೆ. ಡೀಸೆಲ್ ಕಾರು 200 ಎನಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಲಭ್ಯವಿದೆ.  ಗ್ಲೋಬಲ್ ಎನ್‌ಕ್ಯಾಪ್ ಕ್ರಾಶ್ ಟೆಸ್ಟ್‌ನಲ್ಲಿ ಅಲ್ಟ್ರೋಜ್ ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ  ಮುಂಭಾಗದಲ್ಲಿ ಎರಡು ಏರ್‌‌ಬ್ಯಾಗ್, ಚೈಲ್ಡ್ ಸೀಟ್, ಆಟೋ ಪಾರ್ಕ್ ಲಾಕ್, ಪಾರ್ಕಿಂಗ್ ಸೆನ್ಸಾರ್ , ಎಬಿಎಸ್ ಸೇರದಂತೆ ಹಲವು ಅತ್ಯಾಧುನಿಕ ಬ್ರೇಕಿಂಗ್ ಫೀಚರ್ಸ್ ಲಭ್ಯವಿದೆ 

ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಟಾಟಾ, SUV ಕಾರುಗಳಿಗೆ 1.4 ಲಕ್ಷ ರೂ ವರೆಗೆ ರಿಯಾಯಿತಿ!
 

click me!