ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಹಲವು ರಾಜ್ಯಗಳು ಉತ್ತೇಜನಾಕಾರಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿಯನ್ನು ಒದಗಿಸುತ್ತವೆ. ಈ ಸಾಲಿಗೆ ಈಗ ಗೋವಾರ ಸರ್ಕಾರ ಕೂಡ ಸೇರಿದೆ. ಮುಂದಿನ ಐದು ವರ್ಷಗಳವರೆಗೆ ಗೋವಾ ಸರ್ಕಾರವು ಪ್ರತಿ ವರ್ಷ 25 ಕೋಟಿ ರೂ. ವೆಚ್ಚ ಮಾಡಲಿದೆ.
ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಅನೇಕ ರಾಜ್ಯಗಳು ಹಲವು ಉತ್ತೇಜನಾಕಾರಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೊಳಿಸುತ್ತಿವೆ. ಈಗ ಗೋವಾ ಕೂಡಾ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವು ಕ್ರಮಕೈಗೊಳ್ಳುತ್ತಿದೆ.
ಗೋವಾ ಇತ್ತೀಚೆಗೆ ಪ್ರಕಟಿಸಿರುವ ಕರಡುನೀತಿಯ ಪ್ರಕಾರ, ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷ 11,000 ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿಯನ್ನು ನೀಡಲಿದೆ. 2025ರ ಹೊತ್ತಿಗೆ ರಾಜ್ಯದಲ್ಲಿ ನೋಂದಣಿಯಾಗಲಿರುವ ಒಟ್ಟು ವಾಹನಗಳ ಪೈಕಿ ಶೇ.30ರಷ್ಟು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗುವಂತೆ ನೋಡಿಕೊಳ್ಳುವ ಗುರಿಯನ್ನು ಗೋವಾ ರಾಜ್ಯ ಹಾಕಿಕೊಂಡಿದೆ.
undefined
ಬೆಂಗಳೂರು ಬೀದಿಯಲ್ಲಿ ‘ಓಲಾ ಎಲೆಕ್ಟ್ರಿಕ್ ಸ್ಕೂಟರ್’, ಸವಾರಿ ಮಾಡಿದ್ದು ಯಾರು?
ಒಟ್ಟಾರೆ, 10000 ಎಲೆಕ್ಟ್ರಿಕ್ ದ್ವಿಚಕ್ರವಾಹನ, 500 ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಹಾಗೂ 500 ನಾಲ್ಕು ಚಕ್ರವಾಹನಗಳಿಗೆ ಸಬ್ಸಿಡಿ ನೀಡಲು ಗೋವಾ ಸರ್ಕಾರವು ಪ್ಲ್ಯಾನ್ ಮಾಡಿಕೊಂಡಿದೆ. ಇದಕ್ಕಾಗಿ ಸರ್ಕಾರವು ಪ್ರತಿ ವರ್ಷ 25 ಕೋಟಿ ರೂ. ಒದಗಿಸಲಿದೆ. ಇದಕ್ಕಿಂತ ಹೆಚ್ಚಿನ ಮೊತ್ತ ವೆಚ್ಚವಾಗದಂತೆ ಸರ್ಕಾರ ನೋಡಿಕೊಳ್ಳಲಿದೆ.
ಅಂದರೆ, ಪ್ರತಿ ವರ್ಷ ಗೋವಾ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗೆ 10 ಕೋಟಿ ರೂ, ಮೂರು ಚಕ್ರ ವಾಹನಗಳಿಗೆ 1 ಕೋಟಿ ರೂ ಮತ್ತು ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳಿಗೆ 14 ಕೋಟಿ ರೂಪಾಯಿಯಷ್ಟು ಸಬ್ಸಿಡಿಗಾಗಿ ವೆಚ್ಚ ಮಾಡಲಿದೆ ಎಂದು ಹಲವು ಸುದ್ದಿತಾಣಗಳು ವರದಿ ಮಾಡಿವೆ.
ಹೆದ್ದಾರಿಗಳಗುಂಟ 600 ಚಾರ್ಚಿಂಗ್ ಸ್ಟೇಷನ್ ಸ್ಥಾಪಿಸಲು ಪ್ಲ್ಯಾನ್
ಮೊದಲಿಗೆ ಬಂದವರಿಗೆ ಆದ್ಯತೆಯ ಮೇರೆಗೆ ಸಬ್ಸಿಡಿಯನ್ನು ಒದಗಿಸಲಾಗುತ್ತದೆ ಎಂದು ಗೋವಾ ಸರ್ಕಾರದ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಪ್ರತಿ ಎಲೆಕ್ಟ್ರಿಕ್ ದ್ವಿಚಕ್ರವಾಹನ ಮತ್ತು ತ್ರಿ ಚಕ್ರವಾಹನಕ್ಕೆ 30 ಸಾವಿರ ರೂ.ವರೆಗೆ ಉತ್ತೇಜನ ನೀಡಲಾಗುತ್ತದೆ. ಹಾಗೆಯೇ, ಎಲೆಕ್ಟ್ರಿಕ್ ನಾಲ್ಕು ಚಕ್ರಗಳ ವಾಹನ ಖರೀದಿ ಮೇಲೆ 1.5 ಲಕ್ಷ ರೂಪಾಯಿಯಷ್ಟು ಸಬ್ಸಿಡಿ ನೀಡಲಾಗುತ್ತದೆ. ಅರ್ಹ ವಾಹನಗಳಿಗೆ ಸಬ್ಸಿಡಿಯನ್ನು ಒಂದೇ ಕಂತಿನಲ್ಲಿ ನೀಡಲಾಗುವುದು. ಎಲೆಕ್ಟ್ರಿಕ್ ವಾಹನ ಖರೀದಿಸಿದ ಮಾಲೀಕರು ಆರ್‌ಸಿ ಮತ್ತು ಇನ್ಸೂರೆನ್ಸ್ ಸೇರಿದಂತೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಒದಗಿಸಬೇಕಾಗುತ್ತದೆ.
ಬ್ಯಾಟರಿಯು ವಾಹನದೊಂದಿಗೆ ಮಾರಾಟವಾಗದಿದ್ದಲ್ಲಿ 50 ಪ್ರತಿಶತದಷ್ಟು ಖರೀದಿ ಪ್ರೋತ್ಸಾಹವನ್ನು ವಾಹನ ಮಾಲೀಕರಿಗೆ ಒದಗಿಸಲಾಗುವುದು. ಸ್ವ್ಯಾಪ್ ಮಾಡಬಹುದಾದ ಬ್ಯಾಟರಿಯ ಬಳಕೆಗಾಗಿ ಅಂತಿಮ ಬಳಕೆದಾರರಿಂದ ಅಗತ್ಯವಿರುವ ಯಾವುದೇ ಠೇವಣಿಯ ವೆಚ್ಚವನ್ನು ಉಳಿದ ಶೇಕಡಾ 50 ರವರೆಗೆ ಎನರ್ಜಿ ಆಪರೇಟರ್‌ಗಳಿಗೆ ಒದಗಿಸಲಾಗುತ್ತದೆ ಎಂದು ಕರಡಿನಲ್ಲಿ ತಿಳಿಸಲಾಗಿದೆ.
ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ಲ್ಯಾನ್(ಎನ್ಇಎಂಪಿಪಿ) ಪ್ರಕಾರ 2020ರ ಹೊತ್ತಿಗೆ ದೇಶದಲ್ಲಿ 60ರಿಂದ 70 ಲಕ್ಷ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ರಸ್ತೆಗಿಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿತ್ತು. ಈ ಗುರಿಯನ್ನು ಈಡೇರಿಸಿಕೊಳ್ಳುವ ಸಲುವಾಗಿಯೇ ಸರ್ಕಾರವು ಫಾಸ್ಟರ್ ಅಡಾಪ್ಷನ್ ಮತ್ತು ಮೆನ್ಯುಫ್ಯಾಕ್ಚರಿಂಗ್ ಆಫ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್(ಎಫ್ಎಎಂಇ) ಯೋಜನೆಯನ್ನು ಕೇಂದ್ರ ಭಾರೀ ಕೈಗಾರಿಕೆ ಮತ್ತು ಭಾರತ ಸರ್ಕಾರ ಜಾರಿಗೆ ತಂದಿದೆ. 12 ಕೋಟಿ ಬ್ಯಾರೆಲ್ ತೈಲ, 40 ಲಕ್ಷ ಟನ್ ಇಂಗಾಡೈಆಕ್ಸೈಡ್ ಕಡಿಮೆ ಮಾಡುವುದು ಈ ಫೇಮ್ ಜಾರಿ ಹಿಂದಿನ ಉದ್ದೇಶವಾಗಿದೆ.
ಮತ್ತೊಂದು ಇವಿ ದ್ವಿಚಕ್ರವಾಹನ ಲಾಂಚ್; ಗ್ರಾವ್ಟನ್ ಕ್ವಾಂಟಾ ಬೆಲೆ 99,000 ರೂ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವುದಕ್ಕಾಗಿ ಕರ್ನಾಟಕ, ಒಡಿಶಾ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳ ತಮ್ಮ ನೀತಿಯನ್ನು ಪ್ರಕಟಿಸಿವೆ ಮತ್ತು ವಾಹನಗಳ ಖರೀದಿಗೆ ಸಬ್ಸಿಡಿಯನ್ನು ಒದಗಿಸುತ್ತಿವೆ. ಕೇಂದ್ರ ಸರ್ಕಾರವು ಅನೇಕ ಉತ್ತೇಜನಾಕಾರಿ ಕ್ರಮಗಳನ್ನು ಕೈಗೊಂಡಿವೆ. ಹೆಚ್ಚುತ್ತಿರುವ ತೈಲ ಬೇಡಿಕೆಯನ್ನು ಕುಗ್ಗಿಸಲು ಮತ್ತು ಪರಿಸರ ಸಂರಕ್ಷಣೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಅತ್ಯಗತ್ಯವಾಗಿದೆ.