ಡಟ್ಸನ್ ಇಂಡಿಯಾ ತನ್ನೆಲ್ಲ ಕಾರುಗಳ ಖರೀದಿ ಮೇಲೆ ಜುಲೈ ತಿಂಗಳಲ್ಲಿ ವಿಶೇಷ ಬೆನೆಫಿಟ್ಸ್ ಪ್ರಕಟಿಸಿದೆ. ಈ ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಗರಿಷ್ಠ 40 ಸಾವಿರ ರೂಪಾಯಿವರೆಗೂ ಆಫರ್ ಸಿಗಲಿದೆ. ಕಂಪನಿಯ ರೆಡಿ ಗೋ, 5 ಸೀಟರ್ ಗೋ ಮತ್ತು 7 ಸೀಟರ್ ಗೋ ಪ್ಲಸ್ ಕಾರುಗಳಿಗೆ ಈ ಆಫರ್ ಅನ್ವಯವಾಗಲಿದೆ. ಹಾಗೆಯೇ ಜುಲೈ 30ವರೆಗೂ ಮಾತ್ರವೇ ಈ ಲಾಭ ಸಿಗಲಿದೆ.
ಭಾರತದ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಗ್ರಾಹಕ ವಲಯವನ್ನು ಸೃಷ್ಟಸಿಕೊಂಡಿರುವ ಜಪಾನ್ ಮೂಲದ ಡಟ್ಸನ್ ಕಂಪನಿಯು ಚಿಕ್ಕ ಕಾರಿನಿಂದ ಹಿಡಿದು ಪ್ರೀಮಿಯಂ ಸೆಗ್ಮೆಂಟ್‌ವರೆಗೂ ಅತ್ಯುತ್ತಮ ಕಾರುಗಳನ್ನು ಹೊಂದಿವೆ. ಭಾರತೀಯ ಮಾರುಕಟ್ಟೆಯಲ್ಲಿ ಡಟ್ಸನ್ ಕಂಪನಿ ಎಂಟ್ರಿ ಲೆವಲ್ ಕಾರ್, ರೆಡಿ ಗೋ ಹೆಚ್ಚು ಜನಪ್ರಿಯವಾಗಿದೆ. ಅಗ್ಗದ ಬೆಲೆಯಲ್ಲಿ ಗರಿಷ್ಠ ಫೀಚರ್‌ಗಳನ್ನು ಒಳಗೊಂಡಿರುವ ಕಾರುಗಳನ್ನು ನೀವು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.
ಡಟ್ಸನ್ ಇಂಡಿಯಾ, ತನ್ನ ಕಾರುಗಳ ಮಾರಾಟವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ಹೆಚ್ಚಿನ ಆಫರ್‌ಗಳನ್ನು ನೀಡುತ್ತಿದೆ. ನೀವೇನಾದರೂ ಡಟ್ಸನ್ ಇಂಡಿಯಾ ಕಂಪನಿಯ ಕಾರುಗಳನ್ನು ಖರೀದಿಸಲು ಯೋಜಿಸಿದ್ದರೆ, ಖರೀದಿಸಲು ಇದು ಸೂಕ್ತ ಕಾಲ ಎನ್ನಬಹುದು. ಕಂಪನಿಯು ತನ್ನ ಕಾರುಗಳ ಮೇಲೆ ಗರಿಷ್ಠ 40 ಸಾವಿರ ರೂಪಾಯಿವರೆಗೂ ಲಾಭಗಳನ್ನು ನೀಡುತ್ತಿದೆ.
undefined
ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಕಾರು ಬಿಡುಗಡೆ! ...
ಈ ತಿಂಗಳು ಮಾತ್ರವೇ ಅಲ್ಲವೇ ಕಳೆದ ಕೆಲವು ತಿಂಗಳಿಂದ ಡಟ್ಸನ್ ತನ್ನ ಎಲ್ಲ ಮಾದರಿಯ ಕಾರುಗಳ ಖರೀದಿ ಮೇಲೆ ಆಫರ್ ನೀಡುತ್ತಿದೆ. ಆ ಮೂಲಕ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಜುಲೈ ತಿಂಗಳಲ್ಲೂ ಆಫರ್ ನೀಡಲಾಗುತ್ತಿದ್ದು, ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.
ಡಟ್ಸನ್ ಇಂಡಿಯಾ ನೀಡುತ್ತಿರುವ ಆಫರ್‌ನಲ್ಲಿ ನಗದು ಲಾಭ, ವಿನಿಮಯ ಬೋನಸ್ ಮತ್ತು ಆನ್‌ಲೈನ್ ಬುಕ್ಕಿಂಗ್ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ವಿಶೇಷ ರಿಯಾಯ್ತಿಗಳು ಸೇರಿಕೊಂಡಿವೆ. ಈ ಎಲ್ಲ ಆಫರ್‌ಗಳು 2021 ಜುಲೈ 30ರವರೆಗೆ ಮಾತ್ರವೇ ಸಿಂಧುವಾಗಿರುತ್ತವೆ. ಹಾಗೆಯೇ, ಈ ಆಫರ್ ಮೊತ್ತವು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂಬುದನ್ನು ಖರೀದಿದಾರರ ಗಮನಿಸಬೇಕು.
ಕಂಪನಿಯ ಎಂಟ್ರಿ ಲೆವಲ್ ಕಾರ್ ರೆಡಿ ಗೋ ಖರೀದಿ ಮೇಲೆ ಗರಿಷ್ಠ 39,000 ರೂ.ವರೆಗೂ ಲಾಭ ದೊರೆಯಲಿದೆ. ಇದರಲ್ಲಿ 20,000 ರೂ.ವರೆಗೆ ನಗದು ಲಾಭ ಹಾಗೂ 15 ಸಾವಿರ ರೂಪಾಯಿವರೆಗೂ ಎಕ್ಸ್‌ಚೇಂಜ್ ಬೋನಸ್ ಸೇರಿಕೊಂಡಿದೆ.
ಹಬ್ಬದ ಸೀಸನ್‌ಗೆ ಮಾರುತಿಯ ಹೊಸ ತಲೆಮಾರಿನ ಸೆಲೆರಿಯೋ ಕಾರ್ ಬಿಡುಗಡೆ?
ಇದರ ಜೊತೆಗೆ ಡಟ್ಸನ್, ಆಯ್ದ ಕಾರ್ಪೊರೇಟ್ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಗರಿಷ್ಠ ನಾಲ್ಕು ಸಾವಿರ ರೂಪಾಯಿವರೆಗೂ ಲಾಭ ನೀಡುತ್ತಿದೆ. ಹಾಗೆಯೇ, ನೀವೇನಾದರೂ ರೆಡಿ ಗೋ ಆನ್ಲೈನ್ ಬುಕ್ಕಿಂಗ್ ಮಾಡಿದರೆ ಹೆಚ್ಚುವರಿಯಾಗಿ 5,000 ರೂ.ವರೆಗೂ ಲಾಭ ದೊರೆಯಲಿದೆ. ಆದರೆ, ನೀವು ಈ ಬಕ್ಕಿಂಗ್ ಅನ್ನು ಡಟ್ಸನ್ ಅಧಿಕೃತ ವೆಬ್‌ಸೈಟ್ ಮೂಲಕ ಮಾಡಿದರೆ ಮಾತ್ರ ಸಿಗಲಿದೆ.
ಇಷ್ಟು ಮಾತ್ರವಲ್ಲದೇ ವೈದ್ಯರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿ ಹೆಚ್ಚುವರಿ ವಿಶೇಷ ರಿಯಾಯ್ತಿ ಸಿಗಲಿದೆ. ಇದರ ಜೊತೆಗೆ ಡಟ್ಸನ್ ಇಂಡಿಯಾ ಕಂಪನಿಯು, ಮೂರು ತಿಂಗಳವರೆಗೆ ಇಎಂಐ ಹಾಲಿಡೇ ಘೋಷಣೆ ಮಾಡಿದೆ. ಅಂದರೆ, ನೀವು ಕಾರ್ ಖರೀದಿಸಿದ ಮೂರು ತಿಂಗಳ ಬಳಿಕ ಇಎಂಐ ಆರಂಭವಾಗಲಿದೆ. ಈ ಪ್ರಯೋಜನವು ರೆಡಿ ಗೋ ಖರೀದಿ ಮೇಲೆ ಸಿಗಲಿದೆ.
ಇನ್ನು ಡಟ್ಸನ್ ಗೋ 5 ಸೀಟರ್ ಹ್ಯಾಚ್‌ಬ್ಯಾಕ್ ಖರೀದಿ ಮೇಲೂ ಒಳ್ಳೆಯ ಲಾಭಗಳು ಗ್ರಾಹಕರಿಗೆ ಸಿಗಲಿದೆ. ಗರಿಷ್ಠ 40 ಸಾವಿರ ರೂಪಾಯಿ ರಿಯಾಯ್ತಿ ಇರಲಿದೆ. ಇದರಲ್ಲಿ ನಗದು ರಿಯಾಯ್ತಿ ಮತ್ತು ವಿನಿಮಯ ಬೆನೆಫಿಟ್ಸ್ ತಲಾ 20 ಸಾವಿರ ರೂಪಾಯಿ ಸಿಗಲಿದೆ. ಇನ್ನು ಡಟ್ಸನ್ ಗೋ ಪ್ಲಸ್ ಸೇವನ್ ಸೀಟರ್ ಎಂಪಿವಿ ಖರೀದಿ ಮೇಲೆ ಆಫರ್ ನೀಡಲಾಗುತ್ತಿದೆ.
ಹೆದ್ದಾರಿಗಳಗುಂಟ 600 ಚಾರ್ಚಿಂಗ್ ಸ್ಟೇಷನ್ ಸ್ಥಾಪಿಸಲು ಪ್ಲ್ಯಾನ್
ಡಟ್ಸನ್ ಗೋ ಪ್ಲಸ್ ಖರೀದಿ ಮೇಲೆ ಗ್ರಾಹಕರಿಗೆ ಗರಿಷ್ಠ 40 ಸಾವಿರ ಲಾಭ ದೊರೆಯಲಿದೆ. ಇದರಲ್ಲಿ 20 ಸಾವಿರ ರೂಪಾಯಿ ನಗದು ಲಾಭ ಮತ್ತು 20 ಸಾವಿರ ರೂಪಾಯಿ ಎಕ್ಸ್‌ಚೇಂಚ್ ಆಫರ್ ಸೇರಿಕೊಂಡಿದೆ. ಆದರೆ, ಎಕ್ಸ್‌ಚೇಂಜ್ ಆಫರ್ ಕೇವಲ ಎನ್ಐಸಿ ಸಕ್ರಿಯ ಡೀಲರ್‌ಶಿಪ್‌ಗಲ್ಲಿ ಸಿಗಲಿದೆ ಎಂಬುದನ್ನು ಖರೀದಿದಾರರು ಗಮನದಲ್ಲಿಟ್ಟುಕೊಳ್ಳಬೇಕು.